ಸರ್ದಾರ್‌ ಪಟೇಲ್‌ ಏಕತಾ ಪ್ರತಿಮೆ..! ಇಂಜಿನಿಯರಿಂಗ್‌ ಲೋಕದ ಅದ್ಭುತ..!

|

ಅಕ್ಟೋಬರ್‌ 31ರ ಏಕತಾ ದಿನಕ್ಕೆ ಇಡೀ ದೇಶ ಮತ್ತು ಇಂಜಿನಿಯರಿಂಗ್‌ ಲೋಕ ಕಾತುರದಿಂದ ಕಾಯುತ್ತಿದೆ. ಏಕೆಂದರೆ, ನಾಳೆ ವಿಶ್ವವೇ ಬೆರಗಾಗುವಂತಹ ಸಾಧನೆಯನ್ನು ಭಾರತ ಮಾಡಲಿದ್ದು, ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಿರುವ 'ಏಕತಾ ಪ್ರತಿಮೆ' (statue of unity) ಉದ್ಘಾಟನೆಯಾಗಲಿದೆ.

ಹೌದು, ಇಂಜಿನಿಯರಿಂಗ್‌ ಲೋಕದ ಅದ್ಭುತವಾಗಿರುವ 182 ಮೀಟರ್ ಎತ್ತರದ ಏಕತಾ ಪ್ರತಿಮೆಯನ್ನು ನಾಳೆ ಅಂದರೆ ಪಟೇಲರ 143ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಏಕತಾ ಪ್ರತಿಮೆಯನ್ನು ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಕಂಪೆನಿ ನಿರ್ಮಿಸಿದ್ದು, ವಿಶ್ವದ ಅತಿ ಎತ್ತರದ ಪ್ರತಿಮೆಗೆ ಶಿಲ್ಪಿ ರಾಮ್ ವಾನ್ಜಿ ಸುತಾರ್ ವಿನ್ಯಾಸ ರೂಪಿಸಿದ್ದಾರೆ.

ಸರ್ದಾರ್‌ ಪಟೇಲ್‌ ಏಕತಾ ಪ್ರತಿಮೆ..! ಇಂಜಿನಿಯರಿಂಗ್‌ ಲೋಕದ ಅದ್ಭುತ..!

ವಿಶ್ವದ ಎಲ್ಲಾ ಪ್ರತಿಮೆಗಳಿಗಿಂತಲೂ ಎತ್ತರವಾಗಿರುವ ಏಕತಾ ಪ್ರತಿಮೆ ಇಂಜಿನಿಯರಿಂಗ್‌ ಲೋಕದ ಅದ್ಭುತವಾಗಿದ್ದು, ಏನೇಲ್ಲಾ ಅದ್ಭುತಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಂಡರೆ ಏಕತಾ ಪ್ರತಿಮೆ ಇನ್ನಷ್ಟು ಎತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೈಸರ್ಗಿಕವೆಂಬಂತೆ ವಿನ್ಯಾಸ

ನೈಸರ್ಗಿಕವೆಂಬಂತೆ ವಿನ್ಯಾಸ

182 ಮೀಟರ್‌ ಎತ್ತರದ ಏಕತಾ ಪ್ರತಿಮೆಯನ್ನು ನೈಸರ್ಗಿಕ ಚಿತ್ರಣವೆಂಬಂತೆ ರೂಪಿಸಲಾಗಿದ್ದು, ಸರ್ದಾರ್‌ ವಲ್ಲಭ ಬಾಯ್‌ ಪಟೇಲ್ ಅವರ ನಡೆಯುತ್ತಿರುವ ಶೈಲಿಯೊಂದಿಗೆ ವಿಶಿಷ್ಟವಾದ ವಿನ್ಯಾಸದಲ್ಲಿ ಏಕತಾ ಪ್ರತಿಮೆಯನ್ನು L&T ರೂಪಿಸಿದೆ.

ನಕ್ಷತ್ರ ಆಕಾರದಲ್ಲಿ ವಿನ್ಯಾಸ

ನಕ್ಷತ್ರ ಆಕಾರದಲ್ಲಿ ವಿನ್ಯಾಸ

ಏಕತಾ ಪ್ರತಿಮೆ ನಕ್ಷತ್ರ ಆಕಾರ ಹಾಗೂ ಜಿಯೋಮೆಟ್ರಿಕ್‌ ವಿನ್ಯಾಸದ ಭದ್ರ ತಳವನ್ನು ಹೊಂದಿದ್ದು, ಸಂಪೂರ್ಣ ಸಾಧು ಹಿಲ್‌ನ್ನು ಆವರಿಸಿದೆ. ಏಕತಾ ಪ್ರತಿಮೆ ವಿಶಿಷ್ಟವಾಗಿದ್ದು, ಅಗಲದಿಂದ ಎತ್ತರದವರೆಗೂ ತೆಳ್ಳಗಿನ ಅನುಪಾತವನ್ನು ಹೊಂದಿದೆ. ಅದಲ್ಲದೇ, ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ನಿಯಮಗಳಿಗಿಂತ ಹೆಚ್ಚು ನಿಖರವಾಗಿದ್ದು, ಇಂಜಿನಿಯರಿಂಗ್‌ ವಿಶೇಷತೆ ಎಂದು ಪರಿಗಣಿಸಲಾಗಿದೆ.

ಎರಡು ಲಂಭ ಕೋರ್‌ಗಳು

ಎರಡು ಲಂಭ ಕೋರ್‌ಗಳು

ಏಕತಾ ಪ್ರತಿಮೆ ಎರಡು ಲಂಭ ಆಕಾರದಲ್ಲಿ ಕೋರ್‌ಗಳನ್ನು ಹೊಂದಿದ್ದು, ಎರಡು ಸಹ ಅತಿ ವೇಗದ ಪ್ರಯಾಣಿಕರ ಎಲಿವೇಟರ್‌ನ್ನು ಒಳಗೊಂಡಿವೆ. ಅದಲ್ಲದೇ, ಈ ಎರಡು ಕೋರ್‌ಗಳು ಉಕ್ಕಿನ ಪ್ರತಿಮೆಗೆ ಬೆಂಬಲವಾಗಿದ್ದು, 6,500 ಕಂಚಿನ ಫಲಕಗಳನ್ನು ಒಳಗೊಂಡಿದೆ.

ಬಿಗ್‌ ಗ್ಯಾಲರಿ

ಬಿಗ್‌ ಗ್ಯಾಲರಿ

ಏಕತಾ ಪ್ರತಿಮೆಯ 135 ಮೀ. ಎತ್ತರದಲ್ಲಿ ಅಂದರೆ, ಸರ್ದಾರ್‌ ಪಟೇಲ್‌ ಪ್ರತಿಮೆಯ ಎದೆಯ ಭಾಗದಲ್ಲಿ ದೊಡ್ಡ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಈ ಗ್ಯಾಲರಿಯಲ್ಲಿ ಒಂದೇ ಬಾರಿಗೆ 200 ಪ್ರವಾಸಿಗರು ನಿಂತು ಆಣೆಕಟ್ಟಿನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಇಂಜಿನಿಯರಿಂಗ್‌ ಕೌಶಲ್ಯಕ್ಕೆ ಒಂದು ಸೆಲ್ಯೂಟ್‌ ಹೇಳಲೇಬೇಕು.

ಬಿರುಗಾಳಿ, ಭೂಕಂಪಕ್ಕೆ ಜಗ್ಗದ ಏಕತಾ ಪ್ರತಿಮೆ

ಬಿರುಗಾಳಿ, ಭೂಕಂಪಕ್ಕೆ ಜಗ್ಗದ ಏಕತಾ ಪ್ರತಿಮೆ

ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಗೆ ಗಾಳಿ ಮತ್ತು ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಹಾನಿಯುಂಟು ಮಾಡಬಹುದು ಎಂದು ಎಲ್ಲರೂ ತಿಳಿದಿರಬಹುದು. ಆದರೆ, ವಿನ್ಯಾಸಗಾರರು ಯಾವುದಕ್ಕೂ ಜಗ್ಗದ ಪ್ರತಿಮೆಯನ್ನು ರೂಪಿಸಲು ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ನರ್ಮದಾ ನದಿಯಲ್ಲಿ ಗಾಳಿಯ ವೇಗದ ಪ್ರಮಾಣ ಪ್ರತಿ ಸೆಕೆಂಡಿಗೆ 39 ಮೀಟರ್ (ಗಂಟೆಗೆ 130 ಕಿ.ಮೀ) ಇದ್ದು, ಪ್ರತಿಮೆಗೆ ಯಾವುದೇ ಹಾನಿ ಆಗಬಾರದೆಂದು ಪ್ರತಿ ಸೆಕೆಂಡಿಗೆ 50 ಮೀ. (ಗಂಟೆಗೆ 180 ಕಿ.ಮೀ) ವರೆಗೆ ಗಾಳಿಯ ವೇಗವನ್ನು ಪ್ರತಿರೋಧಿಸಲು ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ.

ಏಕತೆಗೆ ಭದ್ರತೆಯ ವಿನ್ಯಾಸ

ಏಕತೆಗೆ ಭದ್ರತೆಯ ವಿನ್ಯಾಸ

ಎತ್ತರದ ಪ್ರತಿಮೆಯು ಯಾವುದೇ ಹಾನಿಗೊಳಗಾಗದಂತೆ ತಡೆಯಲು 250 ಟನ್‌ ತೂಕದ ಎರಡು ಟ್ಯೂನ್ಡ್‌ ಮಾಸ್‌ ಡ್ಯಾಂಪರ್ಸ್‌ ಬಳಸಲಾಗಿದ್ದು, ಅದಲ್ಲದೇ ನಾಲ್ಕು ಮೂಲೆಗಳಲ್ಲಿ ಬೇಸ್‌ ಕ್ರಾಪ್ಟ್‌ ನೆಲಕ್ಕೆ ಬೇರೂರಿದ್ದು, 10 ಕಿ.ಮೀ. ನಿಂದ 12 ಕಿ.ಮೀ ಒಳಗಡೆ 6.5ರ ತೀವ್ರತೆಯಲ್ಲಿ ಭೂಕಂಪವಾದರೂ ಪ್ರತಿರೋಧ ಒಡ್ಡಬಲ್ಲ ವಿನ್ಯಾಸವನ್ನು ರೂಪಿಸಲಾಗಿದೆ.

ಪಟೇಲರ ನಡೆಯುವ ಶೈಲಿ

ಪಟೇಲರ ನಡೆಯುವ ಶೈಲಿ

ಏಕತಾ ಪ್ರತಿಮೆಯಲ್ಲಿ ಸರ್ದಾರ್‌ ಪಟೇಲ್‌ರ ಕಾಲುಗಳು ಧೋತಿಯಿಂದ ಆವೃತ್ತವಾಗಿವೆ. ಮತ್ತು ಪಾದಗಳಲ್ಲಿ ಚಪ್ಪಲಿಗಳಿದ್ದು, ನಡೆಯುತ್ತಿರುವ ವಿನ್ಯಾಸವನ್ನು ಹೊಂದಿದೆ. ಇದರ ಅರ್ಥ ಪ್ರತಿಮೆಯು ತಳದಲ್ಲಿ ಅತ್ಯಂತ ತೆಳುವಾಗಿರುತ್ತದೆ. ಆದರೆ, ಈ ನಿಯಮ ಬೇರೆ ಎತ್ತರದ ಪ್ರತಿಮೆಗಳಲ್ಲಿ ವಿರುದ್ಧವಾಗಿದ್ದು, ತಳವೂ ಗಟ್ಟಿಯಾಗಿರುತ್ತದೆ. ಅದಲ್ಲದೇ ನಡೆಯುವ ಭಂಗಿಯು ಎರಡು ಕಾಲುಗಳ ಮಧ್ಯೆ 6.4 ಮೀಟರ್ ಅಂತರವನ್ನು ಸೃಷ್ಟಿಸಿ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ರೂಪಿಸಲಾಗಿದೆ.

ಮುಖ ರೂಪಿಸುವಲ್ಲಿ ದೊಡ್ಡ ಸವಾಲು

ಮುಖ ರೂಪಿಸುವಲ್ಲಿ ದೊಡ್ಡ ಸವಾಲು

ಪ್ರತಿಮೆಯ ನೋಟವು ಮತ್ತೊಂದು ಸವಾಲನ್ನು ರೂಪಿಸಿತ್ತು. ಏಕತಾ ಪ್ರತಿಮೆಯಲ್ಲಿ ಪಟೇಲರ ಮುಖವು ಪ್ರಮುಖ ಅಂಶವಾಗಿದ್ದರಿಂದ, ಸರ್ದಾರ್ ಮುಖಕ್ಕೆ ಸಾಧ್ಯವಾದಷ್ಟು ಹತ್ತಿರವಾಗಬೇಕಾದ ಮುಖದ ವೈಶಿಷ್ಟ್ಯಗಳನ್ನು ಎರಕ ಹೊಯ್ಯುವಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ. ಶಿಲ್ಪಿ ರಾಮ್ ಸೂತಾರ್‌ಅವರ ಮೂಲ ವಿನ್ಯಾಸದ ಪ್ರಕಾರ, ಪ್ರತಿಮೆಯು ನಿಲುವಿನ ಭಂಗಿಯ ಮುಖಭಾವವನ್ನು ಹೊಂದಿದೆ. ಪಟೇಲ್‌ರ ತಲೆಯ ಎತ್ತರ ಹಾಗೂ ಕೈಗಳು ಹಿಡಿದುಕೊಂಡಿರುವ ಭಗೆಯು ಶಕ್ತಿ ಮತ್ತು ಉತ್ಸಾಹದ ಭಾವನೆಗಳನ್ನು ಹೊರಹಾಕುವಂತೆ ರೂಪಿಸಲಾಗಿದೆ. ಅದಲ್ಲದೇ, ಏಕತಾ ಪ್ರತಿಮೆಯಲ್ಲಿ ಎಡಗಾಲು ಮುಂದೆ ಇರುವುದರಿಂದ ಸರ್ದಾರ್ ಸರೋವರ ಅಣೆಕಟ್ಟಿನ ಕಡೆಗೆ ನಡೆದಂತಾಗುತ್ತಿದ್ದು, ಪ್ರತಿಮೆ ನೀರಿನಲ್ಲಿ ನಡೆಯುತ್ತಿದೆಯೆಂದು ಎನಿಸುತ್ತದೆ.

ಮತ್ತೇನಿದೆ..?

ಮತ್ತೇನಿದೆ..?

ಇಂಜಿನಿಯರಿಂಗ್‌ ಲೋಕದ ಅದ್ಭುತವಾಗಿರುವ ಏಕತಾ ಪ್ರತಿಮೆ ಕೇವಲ ಪ್ರತಿಮೆಯಿಂದ ಗಮನ ಸೆಳೆಯದೇ ಅನೇಕ ಅಂಶಗಳನ್ನು ಒಳಗೊಂಡಿದೆ. ಕೆಳಗಡೆ ಸರ್ದಾರ್‌ ಪಟೇಲರ ಜೀವನ ಮತ್ತು ಸಾಧನೆಯನ್ನು ಪ್ರವಾಸಿಗರಿಗೆ ತಿಳಿಸಲು ಪ್ರದರ್ಶನ ಕೇಂದ್ರವಿದೆ. ಮುಖ್ಯ ರಸ್ತೆಯಿಂದ ಸಾಧು ಹಿಲ್‌ಗೆ ಸಂಪರ್ಕ ಕಲ್ಪಿಸಲು ವಿಶೇಷ ವಿನ್ಯಾಸವುಳ್ಳ 320 ಮೀ. ಅಂತರದ ಸೇತುವೆಯನ್ನು ಹೊಂದಿದ್ದು, ಮೆಮೊರಿಯಲ್‌ ಮತ್ತು ವೀಕ್ಷಕರ ಕೇಂದ್ರವಿದೆ. 4 ಲೈನ್‌ನ ರಸ್ತೆ, ಆಡಳಿತ ಸಂಕೀರ್ಣ, 3 ಸ್ಟಾರ್ ಹೊಟೇಲ್‌, ಕಾನ್ಫರೆನ್ಸ್‌ ಸೆಂಟರ್‌ಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ,

ಏನೇಲ್ಲಾ ಬಳಸಲಾಗಿದೆ..?

ಏನೇಲ್ಲಾ ಬಳಸಲಾಗಿದೆ..?

ರಸ್ತೆಯಿಂದ 182 ಮೀ. ಹಾಗೂ ನದಿಯಿಂದ 208.5 ಮೀ ಎತ್ತರ ಹೊಂದಿರುವ ಏಕತಾ ಪ್ರತಿಮೆಯನ್ನು ಸೃಷ್ಟಿಸಲು 210,000 ಕ್ಯೂಬಿಕ್‌ ಮೀಟರ್‌ ಸಿಮೆಂಟ್‌, 18,500 ಟನ್‌ ಬಲವರ್ಧಿತ ಉಕ್ಕು, 6,500 ಟನ್‌ ರಚನಾತ್ಮಕ ಉಕ್ಕು, 1,700 ಟನ್ ಕಂಚು ಮತ್ತು 565 ಮ್ಯಾಕ್ರೋ ಮತ್ತು 6,000 ಮೈಕ್ರೋ ಪ್ಯಾನೆಲ್‌ಗಳನ್ನು ಹೊಂದಿರುವ 1,850 ಟನ್‌ಗಳಷ್ಟು ಕಂಚಿನ ಹೊದಿಕೆಯನ್ನು ಬಳಸಲಾಗಿದೆ.

ಕೃಪೆ: ಏಕತಾ ಪ್ರತಿಮೆಯ ರೇಖಾ ಚಿತ್ರಗಳು - ದೇಶ್‌ಗುಜರಾತ್‌

Best Mobiles in India

English summary
Statue of unity: miracle of engineering. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X