ಜಗದ್ವಿಖ್ಯಾತ ಹಾಕಿಂಗ್ 'ವ್ಹೀಲ್ ಚೇರ್' ಮಾರಾಟವಾಗಿದ್ದು 2,82,19,363 ರೂ.ಗೆ!!

|

ಸರ್‌ ಐಸಾಕ್ ನ್ಯೂಟನ್‌ ಮತ್ತು ಅಲ್ಬರ್ಟ್‌ ಐನ್‌ಸ್ಟೀನ್ ನಂತರ ಜಗತ್ತು ಕಂಡ ಅತ್ಯಂತ ಅಸಾಮಾನ್ಯ ವಿಜ್ಞಾನಿ ಎಂದು ಪರಿಗಣಿಸಲಾಗಿದ್ದ ಸ್ಟೀಫನ್‌ ಹಾಕಿಂಗ್ ಅವರ ಕಾಲಘಟ್ಟ ಮುಗಿದುಹೋಯಿತು. ಆದರೆ, ಜಗತ್ತು ಕಂಡ ಮೇಧಾವಿ ಸ್ಟೀಫನ್‌ ಹಾಕಿಂಗ್ ಅವರ ವ್ಹೀಲ್ ಚೇರ್ 2,82,19,363 ರೂಪಾಯಿಗಳಿಗೆ ಮಾರಾಟವಾಗಿ ಮತ್ತೆ ಅವರ ನೆನಪನ್ನು ತಂದುಕೊಟ್ಟಿದೆ.

ಹೌದು, ದೈಹಿಕ ನ್ಯೂನತೆಯ ನಡುವೆಯೂ ತನ್ನ ಅಸಾಮಾನ್ಯ ಜ್ಞಾನದಿಂದ ಜಗದ್ವಿಖ್ಯಾತರಾಗಿದ್ದ ಖಭೌತವಿಜ್ಞಾನಿ ಸ್ಟೀಫನ್‌ ಹಾಕಿಂಗ್ ಅವರು ತಮ್ಮ 76 ವಯಸ್ಸಿನಲ್ಲಿ ಇದೇ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು. ಇದಾದ ನಂತರ ಅವರು ಬಳಸುತ್ತಿದ್ದ ವಸ್ತುಗಳನ್ನು ಹರಾಜು ಹಾಕಲಾಗಿದ್ದು, ಅವರ ವ್ಹೀಲ್ ಚೇರ್ ಒಂದೇ 2.82 ಕೋಟಿಗೆ ಮಾರಾಟವಾಗಿದೆ.

ಜಗದ್ವಿಖ್ಯಾತ ಹಾಕಿಂಗ್ 'ವ್ಹೀಲ್ ಚೇರ್' ಮಾರಾಟವಾಗಿದ್ದು 2,82,19,363 ರೂ.ಗೆ!!

ಆನ್‌ಲೈನ್‌ ಹರಾಜು ಪ್ರಕ್ರಿಯೆಯಲ್ಲಿ ವ್ಹೀಲ್ ಚೇರ್ 2.82 ಕೋಟಿಗೆ ಮಾರಾಟವಾದರೆ, ಅವರು ಬರೆದಿದ್ದ 117 ಪುಟಗಳ ಪ್ರಬಂಧ 'ಪ್ರಾಪರ್ಟಿಸ್ ಆಫ್ ಎಕ್ಸ್‌ಪಾಂಡಿಂಗ್ ಯೂನಿವರ್ಸ' ಅನ್ನು ಒಟ್ಟು 5,50,04,242 ರೂಪಾಯಿಗೆ ಕೊಂಡುಕೊಳ್ಳಲಾಗಿದೆ. ಒಟ್ಟು 9 ದಿನಗಳ ಹರಾಜು ಪ್ರಕ್ರಿಯೆಯಲ್ಲಿ ವಿಜ್ಞಾನಿಯ ಹಸ್ತ ಪ್ರತಿಗಳು ಸೇರಿದಂತೆ ಎಲ್ಲಾ ಪರಿಕರಗಳನ್ನು ಮಾರಾಟ ಮಾಡಲಾಗಿದೆ.

ವಿಜ್ಞಾನದ ಒಗಟುಗಳಿಗೆ ಲೆಕ್ಕಾಚಾರಗಳನ್ನು ಹಾಕದೆ, ಪ್ರಯೋಗಗಳನ್ನು ಮಾಡದೆ ಉತ್ತರ ನೀಡುವ ವಿಶಿಷ್ಟ ಶಕ್ತಿ ಒಲಿದಿದ್ದ ಸ್ಟೀಫನ್ ಹಾಕಿಂಗ್ ಇಂದು ಅವರ ವಿಚಾರಧಾರೆಗಳಿಂದಲೇ ನಮ್ಮ ನೆನಪಿನಲ್ಲಿ ಉಳಿದಿದ್ದಾರೆ. ಹಾಗಾದರೆ, ವಿಶ್ವ ಕಂಡ ಶ್ರೇಷ್ಠ ವಿಜ್ಞಾನಿಗಳ ಮೊದಲಿನ ಸಾಲಿನಲ್ಲಿ ನಿಲ್ಲುವ ಸ್ಟೀಫನ್‌ ಹಾಕಿಂಗ್ ಅವರ ಜೀವನ ಹೇಗಿತ್ತು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮರೆಯಲಾಗದ ಹಾಕಿಂಗ್!

ಮರೆಯಲಾಗದ ಹಾಕಿಂಗ್!

ಜಗತ್ತು ಸೃಷ್ಟಿಯಾಗಿದ್ದು ಹೇಗೆ, ಜಗತ್ತಿನ ರಚನೆ ಹೇಗಿದೆ. ಹೀಗೆ ಹತ್ತು ಹಲವು ಭೌತ ವಿಜ್ಞಾನದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ ವಿಖ್ಯಾತ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ ಅವರು ನಮ್ಮಿಂದ ದೂರವಾಗಿರಬಹುದು. ಆದರೆ, ಅವರು ಹತ್ತು ಹಲವು ಭೌತ ವಿಜ್ಞಾನದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ ಅವರ ಸಂಶೋಧನೆಗಳು, ಅವರ ವಿಚಾರಧಾರೆಗಳು ನಮ್ಮನ್ನು ಈಗಲೂ ಅವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿವೆ.

ಹಾಕಿಂಗ್ ಜನನ !

ಹಾಕಿಂಗ್ ಜನನ !

1942ರ ಜನವರಿ 8ರಂದು ಸ್ಟೀಫನ್ ವಿಲಿಯಂ ಹಾಕಿಂಗ್ ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು. ಹಾಕಿಂಗ್ ತಂದೆ ಜೀವಶಾಸ್ತ್ರ ವಿಜ್ಞಾನಿಯಾಗಿದ್ದರು. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅಬ್ಬರ ಜೋರಾಗಿದ್ದ ಆ ಸಮಯದಲ್ಲಿ ಬಾಂಬ್ ದಾಳಿಗೆ ಬೆದರಿ ಹಾಕಿಂಗ್ ಕುಟುಂಬ ಲಂಡನ್ ಅನ್ನು ತೊರೆಯಿತು. ಮುಂದೆ ಸೈಂಟ್ ಆಲ್ಬಾನ್ಸ್ ನಲ್ಲಿ ತಮ್ಮ ಪ್ರೌಢಾವಸ್ಥೆಯನ್ನು ಹಾಕಿಂಗ್ ಅವರು ಕಳೆದರು.

ಹಾಕಿಂಗ್ ವಿಧ್ಯಾಭ್ಯಾಸ!

ಹಾಕಿಂಗ್ ವಿಧ್ಯಾಭ್ಯಾಸ!

ತಮ್ಮ ಪ್ರೌಢಾವಸ್ಥೆಯನ್ನು ಮುಗಿಸಿದ ಹಾಕಿಂಗ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮುಂದಿನ ಓದಿಗಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೇರಿಕೊಂಡರು. ಸ್ನಾತಕೋತ್ತರ ಅಧ್ಯಯನಕ್ಕೆ ಕಾಸ್ಮಾಲಜಿ ವಿಷಯವನ್ನು ಆಯ್ಕೆ ಮಾಡಿಕೊಂಡು ಕೇಂಬ್ರಿಡ್ಜ್ ವಿವಿಯಲ್ಲಿ ಅಭ್ಯಾಸ ಮಾಡಿದರು. ಇದೇ ವೇಳೆಯಲ್ಲಿ ಅವರ ಜೀವನ ಬಹುದೊಡ್ಡ ತಿರುವು ಪಡೆದುಕೊಂಡಿತು.

 ವಿಚಿತ್ರ ರೋಗಕ್ಕೆ ತುತ್ತಾದರು!

ವಿಚಿತ್ರ ರೋಗಕ್ಕೆ ತುತ್ತಾದರು!

ವ್ಹೀಲ್ ಚೇರ್ ಮೇಲೆ ಕುಳಿತ ಸ್ಟೀಫನ್ ಹಾಕಿಂಗ್ ಅವರನ್ನು ನೋಡಿದವರು, ಹುಟ್ಟಿನಿಂದಲೇ ಹಾಕಿಂಗ್ ಹೀಗಿದ್ದಾರೆ ಎಂದು ತಿಳಿಯುತ್ತಾರೆ. ನಿಮಗೆ ಗೊತ್ತಾ? ಆತ ಸ್ನಾತಕೋತ್ತರ ಮಾಡುವ ವೇಳೆ ಕುದುರೆ ಸವಾರಿ ಮಾಡುವಷ್ಟು ಗಟ್ಟಿಮುಟ್ಟಾಗಿದ್ದರು. ಆದರೆ, ಆ ಸಮಯದಲ್ಲಿ ಅವರಿಗೆ ಕಾಣಿಸಿಕೊಂಡ ‘ಮೋಟರ್ ನ್ಯೂರಾನ್' ಎಂಬ ಖಾಯಿಲೆ ಅವರ ಬದುಕನ್ನು ಕಿತ್ತುಕೊಂಡಿತು.

ಏನಿದು ‘ಮೋಟರ್ ನ್ಯೂರಾನ್’?

ಏನಿದು ‘ಮೋಟರ್ ನ್ಯೂರಾನ್’?

‘ಮೋಟರ್ ನ್ಯೂರಾನ್' ಎಂಬುದು ಕೋಟಿಯಲ್ಲಿ ಒಬ್ಬರಿಗೆ ಅಪರೂಪಕ್ಕೆ ಬರುವ ಖಾಯಿಲೆ ಎಂದರೆ ಅದು ಎಂತಹ ಖಾಯಿಲೆ ಎಂದು ನೀವು ಊಹೆ ಮಾಡಬಹುದು. ಮಾನವನ ನರನಾಡಿಗಳನ್ನು ನಿಯಂತ್ರಿಸುವ ಕೇಂದ್ರ ನರಮಂಡಲ ಕೊಂಚ ಕೊಂಚವಾಗಿಯೇ ತನ್ನ ವ್ಯಾಪ್ತಿಯ ಕಾರ್ಯವನ್ನು ಸ್ಥಗಿತಗೊಳಿಸುತ್ತಾ ಸಾಗುವ ರೋಗವೇ ಈ ನ್ಯೂರಾನ್ ಖಾಯಿಲೆ.!

 ಮೂವರು ಮಕ್ಕಳನ್ನು ಪಡೆದರು!

ಮೂವರು ಮಕ್ಕಳನ್ನು ಪಡೆದರು!

ನ್ಯೂರಾನ್ ಖಾಯಿಲೆ ಇದೆ ಎಂದು ವೈದ್ಯರು ಹೇಳಿಮೂರು ವರ್ಷಗಳ ಗಡುವು ನೀಡಿದರು. ಆದರೆ, ಮೂರು ವರ್ಷಗಳ ಗಡುವು ದಾಟಿದರೂ ಹಾಕಿಂಗ್ ಗೆ ಏನೂ ಆಗಲಿಲ್ಲ ಏಕೆಂದರೆ, ವೈದ್ಯರು ಅಂದುಕೊಂಡಿದ್ದಕ್ಕಿಂತ ನಿಧಾನಕ್ಕೆ ರೋಗ ಹರಡಲು ಆರಂಭಿಸಿತ್ತು. ಅಷ್ಟೊತ್ತಿಗಾಗಲೇ ಜೇನ್ ಜತೆ ಮದುವೆಯಾಗಿದ್ದ ಸ್ಟೀಫನ್ ಹಾಕಿಂಗ್ ಅವರು ಮೂವರು ಮಕ್ಕಳನ್ನು ಸಹ ಪಡೆದಿದ್ದರು.

‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’

‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’

ಜೇನ್ ಜತೆ ಹಾಕಿಂಗ್ ಮೂರು ಮಕ್ಕಳನ್ನು ಪಡೆದರು. ಆದರೆ ಅಷ್ಟೊತ್ತಿಗಾಗಲೇ ಅವರು ಹಾಸಿಗೆ ಹಿಡಿಯಲು ಸಜ್ಜಾಗಿದ್ದರು. 1988ರ ಹೊತ್ತಿಗೆ ಮಾತನಾಡಲು ಮಾತ್ರ ಹಾಕಿಂಗ್ ಗೆ ಸಾಧ್ಯವಿತ್ತು. ಇದರ ನಡುವೆಯೇ ಅವರು ತಮ್ಮ ಜನಪ್ರಿಯ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್' ಬರೆದು ಮುಗಿಸಿದರು. ಆಗ ಈ ಪುಸ್ತಕದ ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾದವು.

ಸಿದ್ಧ ಸೂತ್ರಗಳ ಜಗತ್ತು!

ಸಿದ್ಧ ಸೂತ್ರಗಳ ಜಗತ್ತು!

ಕಬ್ಬಿಣದ ಕಡಲೆಯಾಗಿರುವ ವಿಜ್ಞಾನದ ವಿವರಣೆಗಳನ್ನು ಸರಳವಾಗಿ ಹೇಳುವ ಕಲೆ ಅವರಿಗೆ ಒಲಿದಿತ್ತು. ಈ ಭೂಮಿ, ನಕ್ಷತ್ರ, ಜಗತ್ತು ಸಿದ್ಧ ಸೂತ್ರಗಳ ಪ್ರಕಾರವೇ ರಚನೆಯಾಗಿದೆ ಎಂದು ಹಾಕಿಂಗ್ ಕುಂತ ಕುರ್ಚಿಯಲ್ಲೇ ಹೇಳಿದಾದ ವಿಶ್ವವೇ ಅವರತ್ತ ತಿರುಗಿ ನೋಡಿದರು. ಆದರೆ, ಕೊನೆಯವರೆಗೂ ಬ್ರಹ್ಮಾಂಡ ಏಕೆ ಮತ್ತು ಹೇಗೆ ಉಗಮವಾಗಿದೆ ಎಂಬ ಪ್ರಶ್ನೆ ಅವರನ್ನು ಕಾಡಿತ್ತು.

ಗಣಿತ ಪ್ರಾಧ್ಯಾಪಕರಾಗಿ ಸೇವೆ!

ಗಣಿತ ಪ್ರಾಧ್ಯಾಪಕರಾಗಿ ಸೇವೆ!

ಹಾಕಿಂಗ್ ಪಾರ್ಶವಾಯ ಪೀಡಿತರಾಗಿದ್ದರೂ ಕೇಂಬ್ರಿಡ್ಜ್ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಮುಂದುವರಿದಿದ್ದರು. ಬರುಬರುತ್ತಾ ಹೆಚ್ಚೆಚ್ಚು ದೈಹಿಕ ನ್ಯೂನ್ಯತೆ ಒಳಗಾದರು. ಎಷ್ಟೇಂದರೆ, ಅವರ ಧ್ವನಿಪೆಟ್ಟಿಗೆಯಿಂದ ಶಬ್ದವೂ ಹೊರಬರುತ್ತಿರಲಿಲ್ಲ. ಅದಕ್ಕಾಗಿ ಗಂಟಲಿಗೆ ಧ್ವನಿವರ್ಧಕವನ್ನು ಜೋಡಿಸಿದ್ದರು. ಕೊನೆಯಕಾಲದಲ್ಲಿ ಅವರ ಮಾತನ್ನು ಕೇಳಲು ಕಂಪ್ಯೂಟರ್ ಸಹಾಯ ಬೇಕಾಯಿತು.

ಬೇಜಾರೇ ಆಗಲಿಲ್ಲ ಅವರು!

ಬೇಜಾರೇ ಆಗಲಿಲ್ಲ ಅವರು!

ಜೀವನ ಪರ್ಯಂತ ವ್ಹೀಲ್ ಚೇರ್ ಮೇಲೆ ಕುಳಿತು ಸಹ ಹಾಕಿಂಗ್ ಎಂದೂ ಬೇಜಾರು ಮಾಡಿಕೊಳ್ಳಲಿಲ್ಲ. ಬದಲಾಗಿ, ತಾವು ರೋಗಕ್ಕೆ ಒಳಗಾಗಿದ್ದರಿಂದ ತಮಗೆ ಲಾಭವಾಗಿದೆ ಎಂದು ಹಾಕಿಂಗ್ ನಂಬಿಕೊಂಡಿದ್ದರು. ತಮಗೆ ಖಾಯಿಲೆ ಬರುವ ಮೊದಲು ಜೀವನ ವೈರಾಗ್ಯ ಮೂಡಿಸಿತ್ತು ಎಂದು ಅವರು ಹೇಳುತ್ತಿದ್ದರು ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗಬಹುದು.

ವಿಚ್ಛೇದನ ಪಡೆದುಕೊಂಡರು.

ವಿಚ್ಛೇದನ ಪಡೆದುಕೊಂಡರು.

ಇಂತಹ ವಿಜ್ಞಾನಿ ಸಹ ತನ್ನನ್ನು ನೋಡಿಕೊಳ್ಳುತ್ತಿದ್ದ ದಾದಿಗಾಗಿ 20 ವರ್ಷಗಳ ಜೊತೆಗಿದ್ದ ಹೆಂಡತಿ ಜೇನ್ ಅನ್ನು ಬಿಟ್ಟರು. ಮುಂದೆ 1995ರಲ್ಲಿ ಹಾಕಿಂಗ್ ನರ್ಸ್ ಒಬ್ಬರನ್ನು ಮದುವೆಯಾದರು. ಇದಾದ ನಂತರವೂ ಆಕರ್ಷಕ ಕುಟುಂಬ ಮತ್ತು ಯಶಸ್ವಿ ಜೀವನ ಸಾಗಿಸಲು ನ್ಯೂರಾನ್ ಖಾಯಿಲೆಯಿಂದ ತೊಂದರೆಯಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದು ವಿಚಿತ್ರವೇ ಸರಿ.

ಭವಿಷ್ಯವನ್ನು ಹೇಳಿದ್ದಾರೆ.!

ಭವಿಷ್ಯವನ್ನು ಹೇಳಿದ್ದಾರೆ.!

ಇನ್ನು 30 ವರ್ಷಗಳಲ್ಲಿ ಮನುಷ್ಯ ಚಂದ್ರನ ಮೇಲೆ ವಾಸ್ತವ್ಯ ಹೂಡಬಹುದು. 50 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಸರಾಗವಾಗಿ ಹೋಗಿ ಬರಬಹುದು. ಕ್ವಾಂಟಂ ಮೆಕಾನಿಕ್ಸ್ ಸಮರ್ಪಕವಾಗಿ ಬಳಸಿಕೊಂಡಲ್ಲಿ ನೀವು ಈಗ ಮುದುಕರಾಗಿದ್ದರೆ ನಿಮ್ಮ ಯೌವ್ವನದ ದಿನಗಳಿಗೊಮ್ಮೆ ಹೋಗಿ ಬರಬಹುದು ಎಂಬ ಹಲವು ಭವಿಷ್ಯಗಳನ್ನು ಸಹ ಹಾಕಿಂಗ್ ಅವರು ನುಡಿದಿದ್ದಾರೆ

ಆಯ್ದ ಪ್ರಸಿದ್ಧ ಹೇಳಿಕೆಗಳು ಇಲ್ಲಿವೆ.

ಆಯ್ದ ಪ್ರಸಿದ್ಧ ಹೇಳಿಕೆಗಳು ಇಲ್ಲಿವೆ.

1) ಈ ಭೂಮಿ ಮತ್ತು ಮನಕುಲ ಸದಾ ಜಾಗತಿಕ ತಾಪಮಾನ, ಅಣ್ವಸ್ತ್ರಗಳು, ಕೃತಕ ಬುದ್ಧಿಮತ್ತೆ, ಅಪಾಯಕಾರಿ ರೋಗಾಣುವಿನಂತಹ ಆತಂಕಗಳನ್ನು ಎದುರಿಸುತ್ತಲೇ ಬದುಕುತ್ತಿವೆ.

2) ನಾನು ಸಾವಿನ ಬಗ್ಗೆ ಹೆದರುವುದಿಲ್ಲ, ಆದರೆ ನಾನು ಸಾಯುವದಕ್ಕೂ ಸಹ ಇಚ್ಚಿಸುವುದಿಲ್ಲ. ಅದಕ್ಕೂ ಮೊದಲು ನಾನು ಮಾಡಲು ಬಯಸುತ್ತೇನೆ.

3) ನನ್ನ ಗುರಿ ತುಂಬಾ ಸರಳ. ನಾನು ಬ್ರಹ್ಮಾಂಡವನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಅಷ್ಟೇ. ಬ್ರಹ್ಮಾಂಡ ಏಕೆ ಮತ್ತು ಹೇಗೆ ಉಗಮವಾಗಿದೆ ಎಂದು ನಾನು ತಿಳಿದುಕೊಳ್ಳಬೇಕಿದೆ.

4) ಪುರಾತನ ಕಾಲದ ಕೃತಕ ಬುದ್ಧಿಮತ್ತೆಯಿಂದಲೇ ನಾವು ಅಸ್ತಿತ್ವ ಕಂಡುಕೊಂಡಿದ್ದೇವೆ. ಆದರೆ, ಹೊಸ ಕೃತಕ ಬುದ್ಧಿಮತ್ತೆಯು ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗಲಿದೆ

5) 21ನೇ ವರ್ಷದಲ್ಲಿ ರೋಗ ಕಾಡಲು ಆರಂಭಿಸಿದಾಗ ನನ್ನ ಎಲ್ಲ ನಿರೀಕ್ಷೆಗಳು ಪಾತಾಳಕ್ಕೆ ಕುಸಿದವು. ಅಲ್ಲಿಂದ ಮುಂದೆ ದೊರೆತಿದ್ದೆಲ್ಲ ಬೋನಸ್

6) ಬಾಹ್ಯಾಕಾಶ ಪ್ರವೇಶಿಸದಿದ್ದರೆ ಮಾನವ ಕುಲಕ್ಕೆ ಭವಿಷ್ಯ ಇಲ್ಲ.

Most Read Articles
Best Mobiles in India

English summary
The motorized chair, used by Hawking after he was paralyzed with motor neuron disease, raised 296,750 pounds in a Christie's online auction. It had been expected to fetch up to 15,000 pounds.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more