ಸೆ.27 ಕ್ಕೆ ಸ್ಟೀವ್‌ ಜಾಬ್ಸ್‌ ಮೇಣದ ಪ್ರತಿಮೆ ಅನಾವರಣ

Posted By: Staff
ಸೆ.27 ಕ್ಕೆ ಸ್ಟೀವ್‌ ಜಾಬ್ಸ್‌ ಮೇಣದ ಪ್ರತಿಮೆ ಅನಾವರಣ

ನ್ಯೂಯಾರ್ಕ್‌ನಲ್ಲಿ ಮೈಕ್ರೋಸಾಪ್ಟ್‌ನ ಸಿಇಓ ಬಿಲ್‌ ಗೇಟ್ಸ್‌ರ ಮೇಣದ ಪುತ್ತಳಿಕೆಯ ಅನಾವರಣದ ಬಳಿಕ ಇದೀಗ ಆಪಲ್‌ ಸಂಸ್ಥೆಯ ಸ್ಥಾಪಕ ಸ್ಟೀವ್‌ ಜಾಬ್ಸ್‌ರ ಮೇಣದ ಪ್ರತಿಮೆಯನ್ನು ಮುಂದಿನ ವಾರ ಹಾಂಕಾಂಗ್‌ನಲ್ಲಿನ ಮೇಡಂ ಟ್ಯೂಸ್ಸಾಡ್ಸ್‌ ವಸ್ತುಸಂಗ್ರಹಾಲಯದಲ್ಲಿ ಅನಾವರಣ ಗೊಳಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಸ್ಟೀವ್‌ಜಾಬ್ಸ್‌ ಸಾವಿನ ವರ್ಷಾಚರಣೆಯ ದಿನವಾದ ಸೆಪ್ಟಂಬರ್‌ 27 ರಂದೇ ಅವರ ಪುತ್ತಳಿಕೆ ಅನಾವರಣ ಗೊಳಿಸಲು ಯೋಜನೆ ರೂಪಿಸಲಾಗಿದೆ.

ಆಪಲ್‌ ಸಂಸ್ಥೆ ನಿರ್ಮಿಸಿದ ಸ್ಟೀವ್‌ ಜಾಬ್ಸ್‌ರ ಮೇಣದ ಪ್ರತಿಮೆ ನಿರ್ಮಿಸಲು ಬರೊಬ್ಬರಿ 1,05,02,715 ಕೋಟಿ ರೂಪಾಯಿ ಖರ್ಚಾಗಿದ್ದು 2006 ರಲ್ಲಿ ಫಾರ್ಚ್ಯೂನ್‌ ನಿಯತಕಾಲಿಕೆಯ ಮುಖಪುಟಕ್ಕೆ ತೆಗೆಸಲಾದ ಫೋಟೂ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಳ್ಳಿಯ ಲೂನರ್‌ ಕನ್ನಡಕ ಧರಿಸಿರುವ ಸ್ಟೀವ್‌ ಜಾಬ್ಸ್‌ ಅವರ ಟ್ರೇಡ್‌ ಮಾರ್ಕ್‌ ಆದಂತಹ ಕಪ್ಪು ಬಣ್ಣದ ಟರ್ಟಲ್‌ ನೆಕ್‌ ಟಿ ಶರ್ಟ್‌ ಹಾಗೂ ಲಿವಿ 501 ಜೀನ್ಸ್‌ ಧರಿಸಿದ್ದಾರೆ. ಅಂದಹಾಗೆ ಈ ಫೋಟೊ ಸ್ಟೀವ್‌ ಜಾಬ್ಸ್‌ರ ನೆಚ್ಚಿನ ಫೋಟೊ ಎಂಬುದು ವಿಶೇಷ.

ಸ್ಟೀವ್‌ರ ಪುತ್ತಳಿಕೆ ನಿರ್ಮಾಣಕ್ಕಾಗಿ ಕಲಾವಿದರುಗಳ ತಂಡ ಮೂರು ತಿಂಗಳುಗಳಿಂದ ಶ್ರಮವಹಿಸಿದೆ. ಅಂದಹಾಗೆ ಸ್ಟೀವ್‌ ಜಾಬ್ಸ್‌ರ ಕೇಶ ವಿನ್ಯಾಸ ನಿರ್ಮಿಸಲು ಹೆಚ್ಚು ಸಮಯ ಹಿಡಿಯಿತಂತೆ. ಪುತ್ತಳಿಕೆಯನ್ನು ಸೆಪ್ಟೆಂಬರ್‌ 26 ರ ವರೆಗೂ ಹಾಂಕಾಂಗ್‌ನಲ್ಲಿಯೇ ಇರಿಸಿ ನಂತರ ಶಾಂಗ್ಹಾಯ್‌ನಲ್ಲಿನ ಮೇಡಂ ಟ್ಯೂಸೆಡ್‌ಗೆ ರವಾನಿಸಲಾಗುವುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot