ಆಪಲ್ ಒಡೆಯನ ಮನೆಗೆ ಕನ್ನ ಹಾಕಿ ಸಿಕ್ಕಿಬಿದ್ದ

ಆಪಲ್ ನ ಸಹ ಸಂಸ್ಥಾಪಕ, ದಿವಂಗತ ಸ್ಟೀವ್ ಜಾಬ್ಸ್ ನಿಮಗೆಲ್ಲಾ ಗೊತ್ತೇ ಇದೆ.ಆಪಲ್ ನ ಪ್ರತಿಯೊಂದು ಫೇಮಸ್ ಉತ್ಪನ್ನದ ಹಿಂದೆಯೂ ಆತನ ಶ್ರಮವಿದ್ದು,ಜಾಬ್ಸ ಇಲ್ಲದಿದ್ದರೆ ಆಪಲ್ ಇಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇರಲಿಲ್ಲ ಎಂಬುದು ಆಪಲ್ ನ ವೈರಿಗಳೂ ಒಪ್ಪಿಕೊಳ್ಳುವ ಮಾತು.
ಇಂತಹ ಸ್ಟೀವ್ ಜಾಬ್ಸ್ ನ ಮನೆಯಲ್ಲಿ ಕಳ್ಳತನ ಆಗಿರುವ ಸುದ್ದಿ ಪಾಲೋ ಆಲ್ಟೊ ದಿಂದ ವರದಿಯಾಗಿದೆ.35 ವರ್ಷದ ಮೆಕ್ ಫಾರ್ಲಿನ್ ಎಂಬಾತನೇ ಈ ಕಳ್ಳತನ ಮಾಡಿದ್ದು, ಅಕ್ಕ ಪಕ್ಕದ ಜನ ಜಾಬ್ಸ್ ರ ಮನೆಯ ಕಳ್ಳತನದ ಬಗ್ಗೆ ಸಿಕ್ಕಾಪಟ್ಟೆ ಫೋನ್ ಮಾಡಿ ತಲೆ ತಿಂದ ಪರಿಣಾಮ ತತ್ ಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಆಗಸ್ಟ್ 2 ರಂದು ಕಳ್ಳನನ್ನು ಬಂಧಿಸಲು ಯಶಸ್ವುಯಾಗಿದ್ದಾರೆ.
ಅಚ್ಚರಿಯ ವಿಷಯವೇನೆಂದರೆ ಕಳ್ಳನಿಗೆ ತಾನು ಕನ್ನ ಹಾಕಿದ್ದು ಸ್ಟೀವ್ ಜಾಬ್ಸ ನ ಮನೆಗೇ ಅಂತಾ ಗೊತ್ತೇ ಇರಲಿಲ್ಲವಂತೆ. ಆತ ಸ್ಟೀವ್ ಜಾಬ್ಸ್ ನ ಮನೆಗೆ ನುಗ್ಗಿ ಸುಮಾರು 60 ಸಾವಿರ ಡಾಲರ್ ಮೌಲ್ಯದ ಕಂಪ್ಯೂಟರ್ ಹಾಗು ಖಾಸಗೀ ವಸ್ತುಗಳನ್ನು ಕದ್ದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ದೊಡ್ಡವರ ಮನೆಯಲ್ಲಿ ಕಳ್ಳತನ ಮಾಡಿದ ತಪ್ಪಿಗೆ ಬೇಲ್ ಗೆ ಕಾಸು ಕೂಡಾ ಇರದ ಆತ ಈಗ 8 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
ಪಾಪ ಸತ್ತು ಸ್ವರ್ಗ(?) ಸೇರಿರುವ ಸ್ಟೀವ್ ಜಾಬ್ಸ್ ನ ಮನೆ ಅಂತ ಮೊದಲೇ ಗೊತ್ತಾಗಿದ್ದರೆ ಆ ಕಳ್ಳ ಕನ್ನ ಹಾಕುತ್ತಿರಲಿಲ್ಲವೇನೋ?


Click it and Unblock the Notifications








