ಕೇವಲ 1,500 ರೂ.ಗೆ ಟಿವಿಗೆ ಮೊಬೈಲ್ ಕನೆಕ್ಟ್ ಮಾಡುವ 'ಡಾಂಗಲ್'!!
ದೂರದಿಂದಲೇ ಸ್ಮಾರ್ಟ್‌ಫೋನ್ ಹಿಡಿದು ಟಿವಿಯನ್ನು ಬಳಸುವಂತೆ ಅತ್ಯಾಧುನಿಕ ತಂತ್ರಜ್ಞಾನವಿರುವ ಸ್ಮಾರ್ಟ್‌ಟಿವಿಗಳು ಇತ್ತೀಚಿಗೆ ಕಾಲಿಡುತ್ತಿವೆ. ಆದರೆ, ಕೆಲವೇ ತಿಂಗಳ ಹಿಂದೆ ನೀವು ಟಿವಿ ಖರೀದಿಸಿ ಅದು ಪರಿಪೂರ್ಣ ಸ್ಮಾರ್ಟ್‌ಟಿವಿ ಆಗಿರದಿದ್ದರೆ ಏನು ಮಾಡುತ್ತೀರಾ.? ಏಕೆಂದರೆ, ವೈಫೈ ಸಪೋರ್ಟ್ ಇಲ್ಲದೇ ದೂರದಿಂದಲೇ ನಿಮ್ಮ ಟಿವಿ ನಿಯಂತ್ರಿಸಲು ಸಾಧ್ಯವಾಗದು ಅಲ್ಲವೇ.!
ಆದರೆ, ಚಿಂತಿಸಬೇಡಿ. ಪ್ರತಿ ಸಲವೂ ಫೈಲುಗಳ ನಕಲಿಯನ್ನು ಟಿವಿಗೆ ಯುಎಸ್‌ಬಿ ಕನೆಕ್ಟ್ ಮಾಡದಂತೆ ನೇರವಾಗಿ ಮೊಬೈಲ್ ಕನೆಕ್ಟ್ ಮಾಡಲು ವೈಫೈ ಡಾಂಗಲ್ ಒಂದು ಕೇವಲ 1,500 ರೂ.ಗೆ ಲಭ್ಯವಿದೆ. ನಿಮ್ಮದು ಸಂಪೂರ್ಣ ಸ್ಮಾರ್ಟ್‌ಟಿವಿ ಆಗಿರದಿದ್ದರೂ ಸಹ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ದೂರದಿಂದಲೇ ಸಂಪರ್ಕಿಸಬಹುದಾದ ಆಯ್ಕೆಯನ್ನು ಈ ಡಾಂಗಲ್ ನೀಡಲಿದೆ.

ಯುಎಸ್‌ಬಿ ಡ್ರೈವ್ ಅನ್ನು ಟಿ.ವಿ.ಯಲ್ಲಿರುವ ಯುಎಸ್‌ಬಿ ಕಿಂಡಿಗೆ ಚುಚ್ಚಿ ಅಲ್ಲಿಂದ ಪ್ಲೇ ಮಾಡುವ ವಿಧಾನಕ್ಕೆ ಈ ಕೇವಲ 1,500 ರೂ.ಗೆ ಟಿವಿಗೆ ಮೊಬೈಲ್ ಕನೆಕ್ಟ್ ಮಾಡುವ ವೈಫೈ ಡಾಂಗಲ್ ಸಹಕಾರಿಯಾಗಲಿದೆ. ಹಾಗಾದರೆ, ಆ ವೈಫೈ ಡಾಂಗಲ್ ಯಾವುದು?, ಆ ಡಾಂಗಲ್ ವಿಶೇಷತೆಗಳೇನು?, ಖರೀದಿಗೆ ಅದು ಬೆಸ್ಟ್ ಏಕೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100
ಟಿ.ವಿ.ಯಲ್ಲಿ ಎಚ್‌ಡಿಎಂಐ ಕಿಂಡಿ ಇದೆ ಆದರೆ ಅದರಲ್ಲಿ ವೈಫೈ ಆಯ್ಕೆ ಇಲ್ಲವೆಂದಾದಲ್ಲಿ ಯುಎಸ್‌ಬಿಗೆ ಜೋಡಿಸುವ ವೈಫೈ ಡಾಂಗಲ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅಂತಹ ಒಂದು ಡಾಂಗಲ್ ಈ ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100 (Zebronics ZEB-CAST100)

ಹೇಗಿದೆ ಟಿವಿ ವೈಫೈ ಡಾಂಗಲ್?
ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100 ನೋಡಲು ಗೂಗಲ್ ಕ್ರೋಮ್‌ಕಾಸ್ಟ್‌ನಂತಿದೆ ಎಂದು ಹೇಳಬಹುದು. ಚಾರ್ಜ್ ಮಾಡಿ ಬಳಕೆ ಮಾಡಬಹುದಾದ ಈ ಡಾಂಗಲ್ ಇದಾಗಿದ್ದು, ವೈಫೈ ಮೂಲಕ ಟಿವಿಯನ್ನು ಸಂಪರ್ಕಗೊಳಿಸುವಲ್ಲಿ ಅತ್ಯುತ್ತಮ ಗ್ಯಾಜೆಟ್ ಆಗಿದೆ.

ಟಿವಿ ವೈಫೈ ಡಾಂಗಲ್ ಬಳಕೆ ಹೇಗೆ?
ಮನೆಯಲ್ಲಿ ವೈಫೈ ಜಾಲ ಇದ್ದರೆ ಒಳ್ಳೆಯದು. ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಂಡು ಸೂಕ್ತ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತದೆ. ನಂತರ ನಿಮ್ಮ ಫೋನ್ ಸಂಪರ್ಕವನ್ನು ಪಡೆಯುವ ಈ ಡಿವೈಸ್ ಟಿವಿಯಲ್ಲಿ ನಿಮ್ಮ ಮೊಬೈಲ್ ಪರದೆ ಮೂಡುವಂತೆ ಮಾಡುತ್ತದೆ.

ಆಪ್ ಬಳಕೆ ಮಾಡಬೇಕು
ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಳ್ಳಲು ನೀವು ಈ ಡಿವೈಸ್‌ಗೆ ಸಂಪರ್ಕವಿರುವ ಆಪ್ ಅನ್ನು ಸ್ಮಾರ್ಟ್‌ಫೋನಿಗೆ ಅಳವಡಿಸಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಒಎಸ್‌ಗಳಿಗೂ ಸೂಕ್ತವಾದ 'EZMira' ಆಪ್ ಇದಕ್ಕಾಗಿ ಲಭ್ಯವಿದೆ.

ಝೆಡ್ಇಬಿ-ಕಾಸ್ಟ್ 100 ಮಿತಿ ಏನು?
ನಿಮ್ಮ ಟಿವಿಯಲ್ಲಿರುವ ಯುಎಸ್‌ಬಿಗೆ ಝೆಡ್ಇಬಿ-ಕಾಸ್ಟ್ 100 ಡಿವೈಸ್ ಜೋಡಿಸಿದರೆ ಅದರ ಶಕ್ತಿ ಸಾಕಾಗುವುದಿಲ್ಲ. ಹಾಗಾಗಿ. ಈ ಸಾಧನಕ್ಕೆ ವಿದ್ಯುತ್ ಸರಬರಾಜು ಮಾಡಬೇಕು. ಆದರೆ ಅವರು ಯುಎಸ್‌ಬಿ ಚಾರ್ಜರ್ ನೀಡಿಲ್ಲ ಎನ್ನುವುದು ಈ ಡಿವೈಸ್‌ನ ಮಿತಿ ಎನ್ನಬಹುದು.


Click it and Unblock the Notifications








