ನೈಕಿಯಿಂದ ಟೆನ್ಷನ್ ಕಡಿಮೆ ಮಾಡುವ ಹೈ-ಟೆಕ್ ಕೈ ಬ್ಯಾಂಡ್

Posted By: Staff
ನೈಕಿಯಿಂದ ಟೆನ್ಷನ್ ಕಡಿಮೆ ಮಾಡುವ ಹೈ-ಟೆಕ್ ಕೈ ಬ್ಯಾಂಡ್

 

ವಿಶ್ವ ದರ್ಜೆಯ ಕ್ರೀಡಾ ಉತ್ಪನ್ನಗಳ ಮಾರಾಟಗಾರ ನೈಕಿ, ಒತ್ತಡದಲ್ಲಿ ಕೆಲಸ ಮಾಡುವವರು ಹಾಗು ದಿನನಿತ್ಯ ವ್ಯಾಯಾಮ ಮತ್ತು ಡಯೆಟ್ ಮಾಡುವರಿಗಾಗಿ ಹೇಳಿ ಮಾಡಿಸಿದಂಥ ಕೈ ಬ್ಯಾಂಡ್ ಆವಿಷ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕೈಗೆ ಧರಿಸಿದರೆ ಸಾಕು, ವಾಚ್ ನಂತೆ ದಿನದ ಸಮಯ, ನೀವು ಎಷ್ಟು ಕ್ಯಾಲರಿ ಕಳೆದಿದ್ದೀರ, ಎಷ್ಟು ಹೆಜ್ಜೆ ನಡೆದಿದ್ದೀರ ಎಂಬ ಮಾಹಿತಿಯ ಜೊತೆಗೆ ನೈಕಿ ಫ್ಯುಯಲ್ ಎಂಬ ಹೊಸ ಅಳತೆ ಮಾಪಕ ನಿಮ್ಮ ದಿನದ ಎಲ್ಲ ಚಟುವಟಿಕೆಯ ಮಾಹಿತಿ ದಾಖಲಿಸಿ 20 ಎಲ್. ಈ. ಡಿ ಲೈಟ್ ಡಿಸ್ಪ್ಲೇ ಲೈಟ್ ಮೂಲಕ ನೀವೆಷ್ಟು ಆಕ್ಟಿವ್ ಇದ್ದೀರ ಎಂಬುದನ್ನು ತೋರಿಸುತ್ತದೆ.

ಗೇಮ್ ನಂತೆಯೇ ಗುರಿ ನಿರ್ಧರಿಸಿಕೊಂಡು ಎಷ್ಟು ಕ್ಯಾಲರಿ ಕಳೆಯಬೇಕು ಎಂದು ಸೆಟ್ ಕೂಡ ಮಾಡಿಕೊಳ್ಳಬಹುದು. ವಾಟರ್ ಪ್ರೂಫ್ ಆದ್ದರಿಂದ ಬ್ಯಾಂಡ್ ಹಾಕಿಕೊಂಡು ನೀವು ಸ್ನಾನ ಮಾಡಿದರೂ, ಮಳೆಯಲ್ಲಿ ಡಾನ್ಸ್ ಮಾಡಿದರೂ ಹಾನಿಯಾಗುವುದಿಲ್ಲ.

ಇದಷ್ಟೇ ಅಲ್ಲದೆ, ಯು.ಎಸ್.ಬಿ ನಿಂದ ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ ಗೆ ಜೋಡಿಸಿ ಬ್ಯಾಂಡ್ ನಲ್ಲಿ ದಾಖಲಾದ ಎಲ್ಲ್ಲ ಮಾಹಿತಿಯನ್ನ ವರ್ಗಾಯಿಸಿ ವಿಶ್ಲೇಷಣೆ ಮಾಡಬಹುದು. ಬ್ಲೂ ಟೂತ್ ಸೌಲಭ್ಯ ಇರುವುದರಿಂದ ನಿಮ್ಮ ಬ್ಯಾಂಡ್ ಅನ್ನು ನಿಯಂತ್ರಿಸಬಹುದು ಕೂಡ.

ಈಗಲೇ ಬುಕ್ ಮಾಡಿದರೆ ನಿಮಗೆ ಫೆಬ್ರುವರಿ 22ರ ವೇಳೆಗೆ ಲಭ್ಯವಾಗಲಿದೆ. ಇದರ ಬೆಲೆ, ಸರಿಸುಮಾರು 7500 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot