TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಪ್ರಪಂಚದಲ್ಲಿ ಪ್ರತಿಯೊಬ್ಬರೂ ವಯಕ್ತಿಕ ಹೆಲಿಕಾಪ್ಟರ್ ಹೊಂದಿ, ಹಾರುವ ಅನುಭವವನ್ನು ಎಲ್ಲರೂ ಪಡೆಯುತ್ತಾರೆ ಎಂಬುದು ಕಾಲ್ಪನಿಕ ವಿಜ್ಞಾನದ ಪರಿಕಲ್ಪನೆ ಅಷ್ಟೇ. ಆದರೆ ಇಂದು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡವು ಆ ಕಲ್ಪನೆಯನ್ನೇ ಆಧಾರವಾಗಿಟ್ಟುಕೊಂಡು ಕೇವಲ ಒಬ್ಬರು ಪೈಲಟ್ ಆಗಿ ರೈಡ್ ಮಾಡುವಂತಹ ಹೆಲಿಕಾಪ್ಟರ್ ಕಂಡುಹಿಡಿದಿದ್ದಾರೆ. ಹಾಗಾದರೆ ಈ ಟೆಕ್ನಾಲಜಿಯ ವಿಶೇಷತೆ ಏನು ಎಂಬುದು ಎಲ್ಲರಿಗೂ ಆಶ್ಚರ್ಯವಾಗುವಂತದ್ದು. ನಿಮಗೂ ಹೆಲಿಕಾಪ್ಟರ್‌ನಲ್ಲಿ ಹಾರುವ ಆಸೆ ಇದ್ದರೇ ಈ ಲೇಖನ ಓದಿ.
ಓದಿರಿ: 1 ಚಮಚ ಸಕ್ಕರೆಯಿಂದ ವಿದ್ಯುತ್ ಉತ್ಪಾದಿಸಿದ ಬಾಲಕ
ಬ್ಯಾಟರಿ ಆಧಾರಿತ ಹೆಲಿಕಾಪ್ಟರ್
ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡವೊಂದು 24 ಪ್ರೊಪೆಲ್ಲರ್‌ನ ವಯಕ್ತಿಕ ಹೆಲಿಕಾಪ್ಟರ್ ನಿರ್ಮಿಸಿದ್ದಾರೆ.
ಹೆಲಿಕಾಪ್ಟರ್‌ನ ವಿಶೇಷತೆ
ಈ ಹೆಲಿಕಾಪ್ಟರ್ ನಿರ್ಮಾಣ ಮಾಡಲು 1 ವರ್ಷ ಕಾಲಾವಕಾಶ ತೆಗೆದುಕೊಂಡಿದ್ದು, ಇದು ಪ್ರೋಟೋಟೈಪ್ ಕೆಪೇಬಲ್ ಹೊಂದಿದ್ದು, ಕೇವಲ 70 ಕೆಜಿ ತೂಕದ ಒಬ್ಬ ಪೈಲಟ್‌ನನ್ನು ಎತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಹೆಲಿಕಾಪ್ಟರ್‌ನ ವಿಶೇಷತೆ
ಹೆಲಿಕಾಪ್ಟರ್ ಅನ್ನು ಕೇವಲ ವಿಶ್ವವಿದ್ಯಾನಿಲಯದ ಫ್ರಾಗ್‌ವರ್ಕ್ ಅಡಿಯಲ್ಲಿ ರಚಿಸಿದ್ದು, ಉತ್ತಮ ವಾತಾವರಣದಲ್ಲಿ ಇದನ್ನು ರೈಡ್ ಮಾಡುವ ಮೂಲಕ ಅನುಭವ ಪಡೆದುಕೊಳ್ಳಬಹುದಾಗಿದೆ.
ಕಾಲ್ಪನಿಕ ವಿಜ್ಞಾನದ ಪರಿಕಲ್ಪನೆ
ಪ್ರತಿಯೊಬ್ಬರು ಸ್ವಂತ ಹೆಲಿಕಾಪ್ಟರ್ ಹೊಂದುವ ಕಾಲ್ಪನಿಕ ವಿಜ್ಞಾನದ ಪರಿಕಲ್ಪನೆಯಲ್ಲಿ ಇದನ್ನು ನಿರ್ಮಿಸಿದ್ದು, ಪ್ರತಿಯೊಬ್ಬರು ಹೆಲಿಕಾಪ್ಟರ್‌ನಲ್ಲಿ ಹಾರುವ ಕನಸು ನನಸು ಮಾಡುವ ರೀತಿಯಲ್ಲಿದೆ ಎಂದು ಈ ಹೆಲಿಕಾಪ್ಟರ್ ಯೋಜನೆಯ ಮೇಲ್ವಿಚಾರಕರಾದ ಜಾರ್ಜ್ ವೇಲ್ ಹೇಳಿದ್ದಾರೆ.
ಹೆಲಿಕಾಪ್ಟರ್ ವಿಶೇಷತೆ
ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿರುವ ಟೀಮ್ ಮೊದಲು 1-6 ಸ್ಕೇಲ್ ಪ್ರೋಟೋಟೈಪ್ ಪರೀಕ್ಷಿಸಿ ನಂತರದಲ್ಲಿ ಸಂಪೂರ್ಣ ಸ್ಕೇಲ್ ಕಾಪ್ಟರ್ ಕೆಲಸ ನಿರ್ವಹಿಸಿದ್ದಾರೆ.
ಸ್ನೊಸ್ಟಾರ್ಮ್ ಹೆಲಿಕಾಪ್ಟರ್ ನಿರ್ಮಾಣ
ಕಡಿಮೆ ತೂಕದ ಅಲ್ಯೂಮಿನಿಯಮ್ ಮತ್ತು ಕಾರ್ಬನ್ ಫೈಬರ್ ನಿಂದ ನಿರ್ಮಿಸಲಾಗಿದ್ದು, ಟೆಲ್ಫಾನ್ ರೋಪ್ ಬಳಸಿಕೊಳ್ಳಲಾಗಿದೆ. ಇದು 24 ಮೋಟಾರ್‌ಗಳಿಗೆ ಸಹಾಯಕವಾಗುತ್ತದೆ.
ಸ್ಮೊಸ್ಟಾರ್ಮ್ ಹೆಲಿಕಾಪ್ಟರ್
ಪೈಲಟ್ ಕೂರುವ ಸ್ಥಳವು 5 ಕೇಂದ್ರಗಳಿಂದ ಸುರಕ್ಷತೆ ಹೊಂದಿದ್ದು, 6 ಕುಶನ್ ಕಾಲುಗಳ ಲ್ಯಾಂಡಿಂಗ್ ವ್ಯವಸ್ಥೆ ಹೊಂದಿದೆ.
ಆಧುನಿಕ ಬ್ಯಾಟರಿ ಬಳಕೆ
ಇತ್ತೀಚಿನ ಮೋಟಾರ್ ಮತ್ತು ಬ್ಯಾಟರಿ ತಂತ್ರಜ್ಞಾನವು ಈ ರೀತಿಯ ಬ್ಯಾಟರಿ ಆಧಾರಿತ ಹೆಲಿಕಾಪ್ಟರ್ ಅಭಿವೃದ್ದಿಗೊಳಿಸಲು ಸಹಾಯವಾಗಿದೆ ಎಂದು ವಿಶ್ವವಿದ್ಯಾನಿಲಯದ ಪ್ರೊಫೇಸರ್ ಹೇಳಿದ್ದಾರೆ. ಅಲ್ಲದೇ ಇದರ ಪೈಲಟ್ ಆಕಸ್ಮಿಕವಾಗಿ ನಿಯಂತ್ರಣ ಕಳೆದುಕೊಂಡರೆ ಗ್ರೌಂಡ್ ಸ್ವಿಚ್ ನೇರವಾಗಿ ಹೆಲಿಕಾಪ್ಟರ್ ಅನ್ನು ಭೂಮಿಗೆ ಸುರಕ್ಷಿತವಾಗಿ ಲ್ಯಾಂಡ್ ಮಾಡುತ್ತದೆ ಎನ್ನಲಾಗಿದೆ.