ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಐಐಟಿ ವಿದ್ಯಾರ್ಥಿಗಳ ಸಂಶೋಧನೆ..!

|

ಭವಿಷ್ಯದ ಇಂದನವನ್ನು ಹುಡುಕುವಲ್ಲಿ ಹೆಚ್ಚಿನ ಪ್ರಮಾಣದ ಸಂಶೋಧನೆಗಳು ನಡೆಯುತ್ತಿದೆ. ಇದೇ ಮಾದರಿಯಲ್ಲಿ ದೇಶಿಯ ಮೂಲ ವಿದ್ಯಾರ್ಥಿಗಳು ಹುಟ್ಟಿಹಾಕಿರುವ ಲಾಗ್ 9 ಎನ್ನು ಸ್ಟ್ರಾಟಪ್ ವೊಂದು ವಿದೇಶದ ಮೂಲದ ವಿಜ್ಞಾನಿಗಳಿಗೂ ನಡುಕ ಹುಟ್ಟಿಸುವ ಮಾದರಿಯಲ್ಲಿ ನೀರು ಮತ್ತು ಅಲ್ಯೂಮಿನಿಯಮ್ ನಿಂದ ಓಡುವಂತಹ ಕಾರೊಂದನ್ನು ಅಭಿವೃದ್ಧಿ ಪಡಿಸಿದ್ದು, ಇದು ಜಾಗತಿಕವಾಗಿ ಸಾಕಷ್ಟು ಸುದ್ದಿಯಾಗಿದೆ. ಮುಂದೆ ನೀರು ಹಾಕಿ ಗಾಡಿ ಓಡಿಸಬಹುದು ಎಂಬುದು ಸತ್ಯವಾಗಲಿದೆ.

ಕೇವಲ ನೀರು ಹಾಗೂ ಕೆಲವು ಮಾದರಿಯ ಅಲ್ಯೂಮಿನಿಯಮ್ ಪ್ಲೆಟ್ ಗಳನ್ನು ಬಳಕೆ ಮಾಡಿಕೊಂಡು ಶಕ್ತಿಯನ್ನು ಉತ್ಪಾದಿಸಿ ಚಾಲು ಆಗುವ ಕಾರನ್ನು ಅಭಿವೃದ್ಧಿ ಮಾಡಲಿದೆ ಎಂದು ಲಾಗ್ 9 ಸ್ಟ್ರಾಟಪ್ ಸಿಇಓ ತಿಳಿಸಿದ್ದು, ಈಗಾಗಲೇ ಜಾಗತಿಕವಾಗಿ ಹಲವು ಕಂಪನಿಗಳು ಇವರ ಹೊಸ ಮಾದರಿಯ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ.

ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಐಐಟಿ ವಿದ್ಯಾರ್ಥಿಗಳ ಸಂಶೋಧನೆ..!

ಈ ಹೊಸದಾಗಿ ನೀರಿನಲ್ಲಿ ಓಡುವ ಕಾರನ್ನು ಅಭಿವೃದ್ಧಿ ಪಡಿಸಿರುವ ಸುದ್ದಿಯೂ ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಸದ್ಯ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ ಕೇಲವ ಒಂದು ಲೀಟರ್ ನೀರಿಂದ ಈ ಕಾರು ಸುಮಾರು 300 ಕಿ ಮಿ ಓಡಲಿದೆ ಎನ್ನಲಾಗಿದೆ. ಪೆಟ್ರೋಲ್ ಇಲ್ಲವೇ ಡಿಸೇಲ್ ಬಳಕೆ ಮಾಡಿಕೊಂಡರು ಸಹ ಇಷ್ಟು ಪ್ರಮಾಣದ ಮೇಲೆಜ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಈ ಹೊಸ ಮಾದರಿಯ ತಂತ್ರಜ್ಞಾನಕ್ಕೆ ಎಲ್ಲರು ತಲೆ ಭಾಗುತ್ತಿದ್ದಾರೆ. ಇದು ವಾಹನ ಮಾರುಕಟ್ಟೆಯ ಇತಿಹಾಸವನ್ನು ಬದಲಾವಣೆ ಮಾಡಲಿದೆ ಎನ್ನುವ ಮಾತು ಉದ್ಯಮದಿಂದ ಕೇಳಿ ಬಂದಿದೆ.
ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಐಐಟಿ ವಿದ್ಯಾರ್ಥಿಗಳ ಸಂಶೋಧನೆ..!

ಈಗಾಗಲೇ ಹಲವು ಬಾರಿ ಈ ಮಾದರಿಯಲ್ಲಿ ನೀರನ್ನು ಹಾಕಿ ಓಡಿಸುವ ಗಾಡಿಗಳನ್ನು ಅಭಿವೃದ್ದಿ ಮಾಡಲಾಗಿತ್ತು, ಆದರೆ ಅವುಗಳು ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಹೊಂದುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ನೀರಿನೊಂದಿಗೆ ಅಲ್ಯೂಮಿನಿಯಮ್ ಸೇರಿಕೊಂಡಿರುವ ಹಿನ್ನಲೆಯಲ್ಲಿ ಹೊಸ ಮಾದರಿಯಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿಯೂ ಉತ್ಪಾದನೆಗೆ ಸಾಧ್ಯವಾಗಲಿದೆ.

ಭಾರತೀಯ ಈ ಹೊಸ ಸಾಧನೆಗೆ ವಿಶ್ವವೇ ತಲೆಭಾಗಿದ್ದು, ವಾಹನ ವಲಯದಲ್ಲಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ಇದಲ್ಲದೇ ಹೆಚ್ಚಿನ ಕಂಪನಿಗಳು ಈ ಹೊಸ ತಂತ್ರಜ್ಞಾನವನ್ನು ಪಡೆಯಲು ಮುಂದಾಗಿದೆ. ಇದರಿಂದಾಗಿ ಪೆಟ್ರೋಲ್ ಇಲ್ಲವೇ ನೀರಿನಲ್ಲಿ ಓಡುವ ಕಾರುಗಳು ಬೇಗನೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

Best Mobiles in India

English summary
Students Create A Car Which Runs On Water, Aluminium; Can This Beat Petrol Woes?. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X