ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್...ಚೆನ್ನೈ ವಿದ್ಯಾರ್ಥಿಗಳಿಂದ ವಿನ್ಯಾಸ..!

  ನಿಮಗೆ ಗೊತ್ತಾ, ಡಾಕ್ಟರ್ ಗಳು ಹೇಳುವಂತೆ, ಅಪಘಾತವಾದಾಗ ಒಂದು ವೇಳೆ ಗಾಯಾಳುಗಳಿಗೆ ಸರಿಯಾದ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆತಂದರೆ ಅದೆಷ್ಟೊ ಗಾಯಾಳುಗಳನ್ನು ಬದುಕಿಸಬಹುದಂತೆ. ಆದರೆ ದುರದೃಷ್ಟವಶಾತ್ ನಮ್ಮಲ್ಲಿ ಹಾಗಾಗುತ್ತಿಲ್ಲ. ಈಗ ಅದಕ್ಕೊಂದು ಪರಿಹಾರ ಸಿಕ್ಕಿದೆ ಅದುವೇ ಹಾರಾಡೋ ಪ್ರಥಮ ಚಿಕಿತ್ಸಾ ಪೆಟ್ಟಿಗೆ..!

  ಐಟಿ ಲೋಕವನ್ನು ಆಳುತ್ತಿದ್ದಾರೆ ಭಾರತೀಯ ಸಂಜಾತ ಸಿಇಒಗಳು..!

  ಚೆನೈನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಥಮಾ ಚಿಕಿತ್ಸಾ ಪೆಟ್ಟಿಗೆಯನ್ನು ಹೊತ್ತು ಹಾರುವ ಡ್ರೋನ್ ಕಂಡು ಹಿಡಿದಿದ್ದಾರೆ. ಇದು ಆಂಬುಲೆನ್ಸ್ ಗಳು ಅಪಘಾತ ವಲಯಕ್ಕೆ ತಲುಪುವ ಮುನ್ನವೇ ಆ ಸ್ಥಳಕ್ಕೆ ತಲುಪಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ನೆರವಾಗುತ್ತದೆ. ಒಂದು ಅಂದಾಜು ಲೆಕ್ಕಾಚಾರದ ಪ್ರಕಾರ, ತಮಿಳುನಾಡಿನಲ್ಲಿ ಆಕ್ಸಿಡೆಂಡ್ ಆಗಿರುವ ಸ್ಥಳವನ್ನು ಆಂಬುಲೆನ್ಸ್ ಗಳು ತಲುಪಲು 13 ರಿಂದ 15 ನಿಮಿಷ ಬೇಕಾಗುತ್ತದೆ. ನಗರ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ನಿಧಾನವಾದರೆ, ಹಳ್ಳಿಗಳಲ್ಲಿ ರಸ್ತೆಗಳ ಅವ್ಯವಸ್ಥೆ ಕಾರಣವಾಗುತ್ತದೆ.

  ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್..!

  ಮಾರ್ಚ್ 11 ರಂದು ನಡೆದ ಕುರಂಗಿಣಿ ಬೆಂಕಿ ಅವಘಡದಂತಹ ಪ್ರಕರಣದಲ್ಲಿ 23 ಜನ ಟ್ರಕ್ಕರ್ ಗಳು ಕಾಡ್ಗಿಜ್ಜಿಗೆ ಬಲಿಯಾದರು. ಇಂತಹ ಸಂದರ್ಬದಲ್ಲಿ ಆಂಬುಲೆನ್ಸ್ ಗಲು ಆ ಪ್ರದೇಶವನ್ನು ರಸ್ತೆ ಮುಖಾಂತರ ತಲುಪುವುದು ಅಷ್ಟು ಸುಲಭದ ವಿಷಯವಲ್ಲ. ಹಾಗಾಗಿ ನಾವು ಈ unmanned aerial vehicle (UAV) ಯನ್ನು ಡಿಸೈನ್ ಮಾಡಿದ್ದೇವೆ ಎಂದು ಹೇಳುತ್ತಾರೆ ಸೈಂಟ್ ಪೀಟರ್ ಇನ್ಸಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆ, ಅವದಿಯ ವಿದ್ಯಾರ್ಥಿಗಳು.

  ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್..!

  ಜಿಪಿಎಸ್ ಮುಖಾಂತರ ಈ ಡ್ರಾನ್ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸುತ್ತಾರೆ ಇದನ್ನು ಡಿಸೈನ್ ಮಾಡಿದ ಗುಂಪಿನ ಸದಸ್ಯರಲ್ಲಿ ಒಬ್ಬರಾದ ಪರ್ವೀಝ್ ಭಾಷಂ. ಎಂಟು ಕೆಜಿ ತೂಗುವ ಪ್ರಥಮ ಚಿಕಿತ್ಸಾ ಪೆಟ್ಟಗೆಯನ್ನು ಈ ಡ್ರೋನ್ 70kmph ನಂತೆ ಚಲಿಸುವ ಸಾಮರ್ಥ್ಯ ಹೊಂದಿದೆ.. ಮೂರು 3 ಕಿಲೋಮೀಟರ್ ವರೆಗೆ ರಿಮೋಟ್ ಕಂಟ್ರೋಲ್ ಮೂಲಕ ಕಂಟ್ರೋಲ್ ಮಾಡಬಹುದಂತೆ. ಸದ್ಯ ಈ ಸದಸ್ಯರ ಗುಂಪು ಇನ್ನಷ್ಟು ದೂರ ರಿಮೋಟ್ ಕಂಟ್ರೋಲ್ ಮೂಲಕ ಕಂಟ್ರೋಲ್ ಮಾಡುವುದು ಹೇಗೆ ಎಂಬ ಬಗ್ಗೆ ಕೆಲಸ ಮಾಡುತ್ತಿದೆ ಎಂದು ತಿಳಿಸುತ್ತಾರೆ ಪ್ರೊಜೆಕ್ಟ್ ನ ಸಲಹೆಗಾರರಾಗಿರುವ ಎಂ.ಯುವರಾಜ್ ಅವರು.
  ಅಪಘಾತ ಸ್ಥಳಕ್ಕೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊತ್ತು ಬರಲಿದೆ ಡ್ರೋನ್..!

  ಅಪಘಾತ ವಲಯದಲ್ಲಿ ಡಾಕ್ಟರ್ ಅಥವಾ ಮೆಡಿಕಲ್ ಸಪೋರ್ಟ್ ಸಿಗದ ಪ್ರದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಡಿಸೈನ್ ಮಾಡಲಾಗಿದೆ. “ ಈ ಡ್ರೋನ್ ನಲ್ಲಿ ಅಪಘಾತವಾದಾಗ, ಗಾಯಗಳಾದಾಗ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬ ಕೆಲವು ಪ್ರಾಥಮಿಕ ವಿಡಿಯೋಗಳನ್ನು ಒಳಗೊಂಡ ಸಂವಾದಾತ್ಮಕ ಡಿಸ್ಲ್ಪೇಗಳನ್ನು ಕೂಡ ಒಳಗೊಂಡಿದೆ “ಎಂದು ತಿಳಿಸುತ್ತಾರೆ ಇನ್ನೊಬ್ಬ ಸದಸ್ಯ ಎಸ್. ಸಾಮ್ರಾಜ್ .. ಬದುಕಿ ಉಳಿದವರು ಅಥವಾ ದಾರಿಹೋಕರು ಇದರ ನೆರವು ಪಡೆದು, ಸರಿಯಾದ ಆಯ್ಕೆ ಪಡೆದು ಮಾರ್ಗದರ್ಶನದ ಮೂಲಕ ಪ್ರಥಮ ಚಿಕಿತ್ಸೆಯನ್ನು ಗಾಯಾಳುಗಳಿಗೆ ನೀಡಬಹುದು.

  How to use WhatsApp in Kannada - GIZBOT KANNADA
  ಮುಂಬರುವ ಸ್ವಯಂಚಾಲಿತ ಡ್ರೋನ್ ನ ಆವೃತ್ತಿಯು ಹಕ್ಕಿಗಳು, ಕೀಟಗಳು ಮತ್ತು ವಾಯುಗಾಮಿ ವಸ್ತುಗಳನ್ನು ಘರ್ಷಣೆ ಮಾಡುವುದನ್ನು ತಪ್ಪಿಸುವಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

  English summary
  Students design drone to carry first-aid kit to accident spots. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more