ಭವಿಷ್ಯದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಮನೆಯಲ್ಲೇ ಕುಳಿತು ಬರೆಯಿರಿ!

|

ಸ್ಪರ್ಧಾತ್ಮಕ ಪರೀಕ್ಷೆಗಳಾಗಿರುವ ಐಐಟಿ-ಜೆಇಇ,ಸಿಎಟಿ ಸೇರಿದಂತೆ ಇತರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಇನ್ನು ಮುಂದೆ ಭವಿಷ್ಯದಲ್ಲಿ ಹೊಸ ಅವತಾರದಲ್ಲಿ ನಡೆಯಲಿದೆ. ಹೌದು ತಂತ್ರಜ್ಞಾನವು ಮುಂದುವರಿದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಪರೀಕ್ಷಾ ವಾತಾವರಣ ಸೃಷ್ಟಿಸುವ ಕೆಲಸವು ಆರಂಭವಾಗಬಹುದು.

ಭವಿಷ್ಯದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಮನೆಯಲ್ಲೇ ಕುಳಿತು ಬರೆಯಿರಿ!

ಮುಂದಿನ ವರ್ಷಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ತಾವು ಇಚ್ಛಿಸಿದ ಸ್ಥಳದಿಂದಲೇ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಅದಕ್ಕಾಗಿ ಅವರು ಪರೀಕ್ಷಾ ಸ್ಥಳಕ್ಕೆ ತೆರಳಬೇಕಾಗಿಲ್ಲ. ಬದಲಾಗಿ ಅವರು ಇಚ್ಛಿಸಿದ ಸ್ಥಳದಲ್ಲಿಯೇ ಕಂಪ್ಯೂಟರ್ ಮೂಲಕ ಲಾಗಿನ್ ಆಗಿ ಪರೀಕ್ಷೆ ಬರೆಯಬಹುದು. ಅದು ಮನೆಯಿಂದಲೂ ಕೂಡ ಆಗಿರಬಹುದು.

ಕೇವಲ ಮನೆ ಮಾತ್ರ ಯಾಕೆ? ಸಮುದ್ರ ದಡದಲ್ಲಿ ಕುಳಿತು, ಯಾವುದೇ ಬೆಟ್ಟದ ತುದಿಯಲ್ಲಿ ಕುಳಿತು ಕೂಡ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾದ ಐಐಟಿ-ಜೆಇಇ, ಸಿಎಟಿ ಅಥವಾ ಸರ್ಕಾರಿ ಸೇವಾ ಪರೀಕ್ಷೆಗಳನ್ನು ನಿಮ್ಮ ಮೊಬೈಲ್ ಮೂಲಕವೇ ಎದುರಿಸಬಹುದು. ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಇದಕ್ಕೆ ಸಹಕರಿಸುತ್ತದೆ. ಒಂದು ವೇಳೆ ಅದಕ್ಕೆ ಸಂಬಂಧಪಟ್ಟವರು ಒಪ್ಪಿಗೆ ಸೂಚಿಸಿದರೆ ನಾವು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬಹುದು ಎನ್ನುತ್ತಾರೆ ಟಿಸಿಎಸ್ ಐಓಎನ್ ನ ವೆಂಗುಸ್ವಾಮಿ ರಾಮಸ್ವಾಮಿ.

ಇದೀಗ ಸುಮಾರು 80% ದಷ್ಟು ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಇದರಲ್ಲಿ ಎಕಾಡಮಿಕ್ ಮತ್ತು ಸರ್ವೀಸ್ ಎಕ್ಸಾಂಗಳು ಕೂಡ ಸೇರಿವೆ. ಎಸ್ ಯಾರೂ ಕೂಡ ಒಂದು ಗಂಭೀರ ಪರೀಕ್ಷೆಯನ್ನು ಗೋವಾದ ಸಮುದ್ರ ದಡದಲ್ಲಿ ಕುಳಿತು ಬರೆಯಲು ಇಚ್ಛಿಸದೇ ಇರಬಹುದು. ಆದರೆ ತಾಂತ್ರಿಕವಾಗಿ ಅದನ್ನು ಸಾಧ್ಯಗೊಳಿಸುವುದಕ್ಕೆ ಭವಿಷ್ಯದಲ್ಲಿ ಅವಕಾಶವಿದೆ.

ಕಂಪ್ಯೂಟರ್ ಆಧಾರಿತ ಟೆಸ್ಟ್ ಗಳಲ್ಲಿ ಪರೀಕ್ಷಾ ಅಭ್ಯರ್ಥಿಗಳನ್ನು ಕಾಯುವವರು ಅಗತ್ಯವಿರುವುದಿಲ್ಲ. ಫಿಂಗರ್ ಪ್ರಿಂಟ್ ಸ್ಕ್ಯಾನರ್ , ಫ್ರಂಟ್ ಕ್ಯಾಮರಾಗಳು ಮತ್ತು ಮಿಕ್ಸ್ ಗಳು ಇದೀಗ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಕಸ್ಟಮೈಜ್ ಆಗಿರುವ ಎಕ್ಸಾಂ ಆಪ್ ಗಳನ್ನ ಸೃಷ್ಟಿಸಲು ಸಾಧ್ಯವಿದ್ದು ಯಾವುದೇ ಅಭ್ಯರ್ಥಿಗಳು ತಪ್ಪು ಚಟುವಟಿಕೆ ನಡೆಸಿ ಎಕ್ಸಾಂ ಬರೆಯದಂತೆ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಭವಿಷ್ಯದಲ್ಲಿ ಇದು ಯಾವ ರೂಪ ಪಡೆಯಲಿದೆ ಎಂಬುದನ್ನು ಈಗಲೇ ಊಹಿಸಿ ಹೇಳುವುದು ಕಷ್ಟ. ಆದರೆ ರಾಮಸ್ವಾಮಿ ಅವರು ಅಭಿಪ್ರಾಯ ಪಡುವಂತೆ ಯಾವುದೇ ಅಭ್ಯರ್ಥಿಯು ಕೂಡ ಈ ಸಿಸ್ಟಮ್ ನಿಂದ ಚೀಟಿಂಗ್ ಮಾಡಿ ಎಕ್ಸಾಂ ಬರೆಯಲು ಸಾಧ್ಯವಾಗುವುದಿಲ್ಲ. ಚೀಟಿಂಗ್ ಮಾಡುವವರನ್ನು ಖಂಡಿತ ಈ ವ್ಯವಸ್ಥೆಯಲ್ಲಿ ಕಂಡುಹಿಡಿಯುವುದಕ್ಕೆ ಸಾಧ್ಯವಿದೆ. ಹಾಗೆ ನೋಡಿದರೆ ಈಗಲೂ ಕೂಡ ಪರೀಕ್ಷಾ ಸಂದರ್ಬದಲ್ಲಿ ಸಾಕಷ್ಟು ಜಾಗೃತೆಯನ್ನು ವಹಿಸಲಾಗುತ್ತಿದೆ.

ಪರೀಕ್ಷೆಗಳನ್ನು ಯಾವುದೇ ಚೀಟಿಂಗ್ ರಹಿತವಾಗಿ ಕಂಡಕ್ಟ್ ಮಾಡುವುದಕ್ಕೆ ಸಾಧ್ಯವಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಎಲ್ಲಿ ಬೇಕಾದರೂ ಬರೆಯುವಂತಾಗುವುದು ಖಂಡಿತ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಖಂಡಿತ ಇಂತಹ ಭವಿಷ್ಯಕ್ಕಾಗಿ ಕಾಯೋಣ. ನೀವೇನಂತೀರಿ?

Best Mobiles in India

Read more about:
English summary
Students may give IIT-JEE, CAT and other computer-based exams from home in future

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X