Subscribe to Gizbot

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ: ನಿಮ್ಮಂದಲೇ ಪರಿಸರ ಹಾಳಾಗುತ್ತಿದೆ..! ಹೇಗೆ..?

Written By:

ವಿಶ್ವದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ದಿನದಿಂದ ದಿನಕ್ಕೇ ಭಾರೀ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ವಾಹನಗಳಿಗಿಂತಲೂ ಹೆಚ್ಚಿನ ಹಾನಿಯೂ ಸ್ಮಾರ್ಟ್‌ಫೋನ್ ಗಳಿಂದ ಉಂಟಾಗಲಿದ ಎನ್ನುವ ಸತ್ಯ ಸಂಗತಿಯನ್ನು ವರದಿಯೊಂದು ಬಿಚ್ಚಿಟಿದೆ.

ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ: ನಿಮ್ಮಂದಲೇ ಪರಿಸರ ಹಾಳಾಗುತ್ತಿದೆ..! ಹೇಗೆ..?

ಇನ್ನು ಇಪ್ಪತ್ತು ವರ್ಷಗಳಲ್ಲಿ ಅಂದರೆ 2040 ರ ವೇಳೆಗೆ ಸ್ಮಾರ್ಟ್ ಫೋನ್ ಗಳು ಹಾಗೂ ಡಾಟಾ ಕೇಂದ್ರಗಳಿಂದಲೇ ಪರಿಸರಕ್ಕೆ ಅತ್ಯಂತ ಹೆಚ್ಚಿನ ಹಾನಿ ಉಂಟಾಗಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ನಮ್ಮ ಸ್ಮಾರ್ಟ್‌ಫೋನ್ ಬಳಕೆಯ ಹವ್ಯಾಸ ವಾತಾವರಣಕ್ಕೆ ಹೆಚ್ಚಿನ ತೊಂದರೆಯನ್ನು ಉಂಟು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ ಸೇವೆಗಳು:

ಸ್ಮಾರ್ಟ್‌ ಸೇವೆಗಳು:

ಸ್ಮಾರ್ಟ್‌ಫೋನ್ ಮೂಲಕ ನಡೆಸುವ ಪ್ರತಿಯೊಂದು ಕಾರ್ಯವೂ ಪರಿಸರಕ್ಕೆ ಹೆಚ್ಚಿನ ಹಾನಿಯನ್ನು ಮಾಡುತ್ತಿದೆ. ವಾಟ್ಸ್‌ಆಪ್ ಸಂದೇಶ, ಫೋನ್ ಕರೆ, ವಿಡಿಯೋ, ಇಂಟರ್ನೆಟ್ ಡೌನ್ ಲೋಡ್ ಬೇರೆ ಬೇರೆ ಮಾದರಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮಾಡಲಿದೆ.

2020 ರಿಂದಲೇ ಜಾಸ್ತಿ:

2020 ರಿಂದಲೇ ಜಾಸ್ತಿ:

ಇನ್ನು ಎರಡು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳೆಕೆ ಹೆಚ್ಚಾಗಿದ್ದು, 2020 ರ ವೇಳೆಗೆ ಸ್ಮಾರ್ಟ್ ಫೋನ್ ಗಳಿಂದ ಹೆಚ್ಚು ಪರಿಸರಕ್ಕೆ ಹಾನಿ ಉಂಟಾಗಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಪರಿಸರಕ್ಕೆ ಹೆಚ್ಚಿನ ಹಾನಿ

ಪರಿಸರಕ್ಕೆ ಹೆಚ್ಚಿನ ಹಾನಿ

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್, ಡೆಸ್ಕ್‌ಟಾಪ್ ಗಳ ಕಾರ್ಬನ್ ಫೂಟ್ ಪ್ರಿಂಟ್ ಬಗ್ಗೆ ಅಧ್ಯಯನವನ್ನು ನಡೆಸಿರುವ ಜರ್ನಲ್ ಆಫ್ ಕ್ಲೀನರ್ ಪ್ರೊಡಕ್ಷನ್ ಸಂಶೋದಕರು, ಸ್ಮಾರ್ಟ್ ಫೋನ್ ಗಳು ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತಿವೆ ಎನ್ನುವ ಆತಂಕಕಾರಿ ವಿಷಯವನ್ನು ಹೊರಗಿಟ್ಟಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಶೇ.14ಕ್ಕೆ ಏರಿಕೆ:

ಶೇ.14ಕ್ಕೆ ಏರಿಕೆ:

ಸದ್ಯ ಸ್ಮಾರ್ಟ್ ಫೋನ್ ಗಳು, ಗ್ಯಾಡ್ಜೆಟ್ ಗಳಿಂದ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಶೇ.1.5 ರಷ್ಟಿದೆ. ಇದೇ ಮಾದರಿಯಲ್ಲಿ ಪರಿಸ್ಥಿತಿ ಮುಂದುವರೆದಿದ್ದರೆ 2040 ವೇಳೆಗೆ ಶೇ.14 ರಷ್ಟಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Study shows smartphones harm the environment. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot