ಸ್ಟಫ್‌ಕೊಲ್‌ನಿಂದ 10,000mAh ಪವರ್ ಬ್ಯಾಂಕ್ ಲಾಂಚ್‌!

|

ಸ್ಮಾರ್ಟ್‌ಫೋನ್‌ಗಳ ಪವರ್‌ ದಾಹವನ್ನ ನಿವಾರಿಸೋಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಪವರ್‌ಬ್ಯಾಂಕ್‌ಗಳು ಸಿಗುತ್ತವೆ. ಸ್ಮಾರ್ಟ್‌ಫೊನ್‌ಗಳು ಸ್ಮಾರ್ಟ್‌ ಆದಷ್ಟು ಪವರ್‌ ಬ್ಯಾಂಕ್‌ಗಳ ಶೈಲಿಯೂ ಸಹ ಸಾಕಷ್ಟು ಸ್ಮಾರ್ಟ್‌ ಆಗುತ್ತಿದ್ದು ವೈರ್‌ಲೆಸ್‌ ಪವರ್‌ ಬ್ಯಾಂಕ್‌ಗಳು ಸಹ ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಸಧ್ಯ ಇದೀಗ ಎಲೆಕ್ಟ್ರಿಕ್‌ ಪ್ರಾಡಕ್ಟ್‌ಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿರೋ ಸ್ಟಫ್‌ಕೊಲ್‌(Stuffcool) ಕಂಪೆನಿಯು ಭಾರತದಲ್ಲಿ ಹೊಸ 10,000mAh ವೈರ್‌ಲೆಸ್ ಪವರ್ ಬ್ಯಾಂಕ್ ಲಾಂಚ್‌ ಮಾಡಿದೆ.

ಸ್ಟಫ್‌ಕೊಲ್‌

ಹೌದು, ಸ್ಟಫ್‌ಕೊಲ್‌ ಭಾರತದಲ್ಲಿ ಹೊಸ 10,000mAh ವೈರ್‌ಲೆಸ್ ಪವರ್ ಬ್ಯಾಂಕ್ ಲಾಂಚ್‌ ಮಾಡಿದ್ದು, ಸಂಪೂರ್ಣ ವೈರ್‌ಲೆಸ್‌ ಪವರ್‌ ಬ್ಯಾಂಕ್‌ ಇದಾಗಿದೆ. ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ದಾಹವನ್ನ ನೀಗಿಸೋ ಈ ಪವರ್‌ ಬ್ಯಾಂಕ್‌ 36W ಔಟ್‌ಪುಟ್‌ ಅನ್ನ ಹೊಂದಿದೆ. ಅಲ್ಲದೆ ಈ ಪವರ್‌ ಬ್ಯಾಂಕ್‌ಅನ್ನ ಎಲ್ಲಾ ರೀತಿಯಲ್ಲು ಪ್ರಮಾಣಿಕರಿಸಲಾಗಿದೆ. ಸಧ್ಯ ಮಾರುಕಟ್ಟೆಗೆ ಬಂದಿರೋ ಈ ಪವರ್‌ ಬ್ಯಾಂಕ್‌ WB110 ಸ್ಟಫ್‌ಕೂಲ್ ವೈರ್‌ಲೆಸ್ ಪವರ್ ಬ್ಯಾಂಕ್ ಎಂದು ಹೆಸರಿಸಲಾಗಿದೆ.

ಬ್ಯಾಂಕ್‌

ಇನ್ನು ಈ ವೈರ್‌ಲೆಸ್‌ ಪವರ್‌ ಬ್ಯಾಂಕ್‌ QI ಸರ್ಟಿಫೈಡ್ 5W / 7.5W / 10W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಪ್ರೊಟೊಕಾಲ್ ಜೊತೆಗೆ ಪಿಡಿ 18 ಡಬ್ಲ್ಯೂ ಟೈಪ್-ಸಿ ಪೋರ್ಟ್ ಮತ್ತು ಕ್ಯೂಸಿ 3 ಹೊಂದಾಣಿಕೆಯ ಯುಎಸ್‌ಬಿ-ಎ ಪೋರ್ಟ್ ಅನ್ನು ಹೊಂದಿದೆ. ಅಷ್ಟೇ ಅಲ್ಲ ಈ ಹೊಸ ಪವರ್ ಬ್ಯಾಂಕ್ 36W ಗೆ ಔಟ್‌ಪುಟ್‌ ಬೆಂಬಲವನ್ನು ನೀಡುತ್ತದೆ. ಅಲ್ಲದೆ ಇದು WB110 ವೈರ್‌ಲೆಸ್ ಪವರ್ ಬ್ಯಾಂಕ್ ಆಗಿದ್ದು Qi ಪ್ರಮಾಣೀಕರಿಸಲಾಗಿದ್ದು ಇದು ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ವೈರ್‌ಲೆಸ್ ಚಾರ್ಜಿಂಗ್ ಆಗಿದೆ ಎಂದು ಸ್ಟಫ್‌ಕೂಲ್ ಹೇಳಿಕೊಂಡಿದೆ.

ಆಟೋ

ಅಲ್ಲದೆ ಈ ಪವರ್ ಬ್ಯಾಂಕ್ ಆಟೋ ಕಟ್-ಆಫ್ ವೈಶಿಷ್ಟ್ಯ, ಓವರ್-ವೋಲ್ಟೇಜ್ ರಕ್ಷಣೆ ಮತ್ತು ಓವರ್-ಕರೆಂಟ್ ಪ್ರೊಟೆಕ್ಷನ್ ಒಳಗೊಂಡಿದ್ದು WB110 ಸ್ಟಫ್‌ಕೂಲ್ ವೈರ್‌ಲೆಸ್ ಪವರ್ ಬ್ಯಾಂಕ್ ಹಗುರ ಮತ್ತು ಸುಲಭ ಸಾಂದ್ರತೆಯನ್ನ ಹೊಂದಿದೆ. ಇದು ಟೆಕ್ಸ್ಚರ್ಡ್ ಬಾಡಿ ವಿನ್ಯಾಸವನ್ನ ಹೊಂದಿದ್ದು, ಬ್ಯಾಟರಿ ಮಟ್ಟ ಮತ್ತು ಪವರ್ ಬ್ಯಾಂಕಿನ ಕಾರ್ಯಕ್ಷಮತೆಯ ಬಗ್ಗೆ ಬಳಕೆದಾರರಿಗೆ ತಿಳಿಸಲು ಎಲ್ಇಡಿ ಸೂಚಕವನ್ನ ಸಹ ಹೊಂದಿದೆ.

ಚಾರ್ಜ್

ಇನ್ನು ಈ ಪವರ್ ಬ್ಯಾಂಕ್ ಅನ್ನು ರೀಚಾರ್ಜ್ ಮಾಡುವಾಗ, ನೀವು ಇತರ ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದ್ದು. WB110 ಸ್ಟಫ್‌ಕೂಲ್ ವೈರ್‌ಲೆಸ್ ಪವರ್ ಬ್ಯಾಂಕ್ ಭಾರತದಲ್ಲಿ 3,999 ರೂ ಬೆಲೆಯೊಂದಿಗೆ, 6 ತಿಂಗಳ ವಾರಂಟಿಯನ್ನ ಹೊಂದಿದೆ. ಸಧ್ಯ ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದ್ದು. ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕವೂ ಗ್ರಾಹಕರು ಪಡೆಯಬಹುದಾಗಿದೆ.

Most Read Articles
Best Mobiles in India

Read more about:
English summary
Stuffcool has launched a new 10,000mAh wireless power bank in India. The power bank is priced at Rs 3,999 in the country, and you can buy it via Amazon India and Flipkart. Customers can also get it via the company’s online store. As part of an introductory offer, the company is selling the power bank for Rs 3,799. The new product from Stuffcool also carries a 6 months warranty.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X