Home
ಸುದ್ದಿಜಾಲ

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ಪವರ್‌ ಬ್ಯಾಂಕ್‌! ಇದರ ಕ್ಯಾಪಾಸಿಟಿ ಎಷ್ಟಿದೆ ಗೊತ್ತಾ?

ಜನಪ್ರಿಯ ಪವರ್‌ ಬ್ಯಾಂಕ್‌ ತಯಾರಕ ಕಂಪೆನಿಗಳಲ್ಲಿ ಸ್ಟಫ್‌ಕೂಲ್ ಕೂಡ ಒಂದಾಗಿದೆ. ವಿಭಿನ್ನ ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದೀಗ ಹೊಸ ಸ್ಟಫ್‌ಕೂಲ್ ಹೊಸ ಪೋರ್ಟಬಲ್ ಚಾರ್ಜರ್ ಮೇಜರ್ ಮ್ಯಾಕ್ಸ್ ಅನ್ನು ಪರಿಚಯಿಸಿದೆ. ಇದು ಮೇಡ್ ಇನ್ ಇಂಡಿಯಾ ಪವರ್‌ಬ್ಯಾಂಕ್ ಎನಿಸಿಕೊಂಡಿದೆ.

ಹೌದು, ಸ್ಟಫ್‌ಕೂಲ್ ಕಂಪೆನಿ 20000mAh ಸಾಮರ್ಥ್ಯದ ಹೊಸ ಪವರ್‌ಬ್ಯಾಂಕ್‌ ಅನ್ನು ಬಿಡುಗಡೆ ಮಾಡಿದೆ. ಈ ಪವರ್‌ಬ್ಯಾಂಕ್‌ ಅನ್ನು ಕಾಂಪ್ಯಾಕ್ಟ್ 400g ವಿನ್ಯಾಸದಲ್ಲಿ ಪ್ಯಾಕ್ ಮಾಡಲಾಗಿದೆ. ಇದು ಟೈಪ್-ಸಿ ಪೋರ್ಟ್ 35W PD PPS ಎನರ್ಜಿಯನ್ನು ಬೆಂಬಲಿಸಲಿದ್ದು, ಸ್ಯಾಮ್‌ಸಂಗ್‌, ಪಿಕ್ಸೆಲ್‌, ಐಫೋನ್‌ ಡಿವೈಸ್‌ಗಳಿಗೆ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನು ಅನುಮತಿಸಲಿದೆ. ಹಾಗಾದ್ರೆ ಈ ಹೊಸ ಪವರ್‌ ಬ್ಯಾಂಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ಪವರ್‌ ಬ್ಯಾಂಕ್‌! ಇದರ ಕ್ಯಾಪಾಸಿಟಿ ಎಷ್ಟಿದೆ

ಸ್ಟಫ್‌ಕೂಲ್ ಮೇಜರ್ ಮ್ಯಾಕ್ಸ್ ಪವರ್‌ಬ್ಯಾಂಕ್ ಕಾಂಪ್ಯಾಕ್ಟ್‌ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ಇದು 20000mAh ಸಾಮರ್ಥ್ಯವನ್ನು ಹೊಂದಿದ್ದು, 35W PD PPS ಔಟ್‌ಪುಟ್‌ ನೀಡಲಿದೆ. ಇನ್ನು ಈ ಪವರ್‌ ಬ್ಯಾಂಕ್‌ ಟೈಪ್-ಸಿ ಪೋರ್ಟ್‌ ಅನ್ನು ಹೊಂದಿದ್ದು, ಸ್ಯಾಮ್‌ಸಂಗ್‌ಗೆ ಸೂಪರ್ ಫಾಸ್ಟ್ ಚಾರ್ಜ್ ಬೆಂಬಲಿಸಲಿದೆ. ಜೊತೆಗೆ 30 ನಿಮಿಷಗಳಲ್ಲಿ ಪಿಕ್ಸೆಲ್‌ ಫೋನ್‌ಗಳಿಗೆ 50% ಚಾರ್ಜ್ ಹಾಗೂ ಐಫೋನ್‌ಗೆ 30 ನಿಮಿಷಗಳಲ್ಲಿ 50% ಚಾರ್ಜ್ ಅನ್ನು ಮಾಡುವುದಕ್ಕೆ ಸಾಧ್ಯವಾಗಲಿದೆ.

ಇನ್ನು ಈ ಪವರ್‌ ಬ್ಯಾಂಕ್‌ ಮ್ಯಾಕ್‌ಬುಕ್ ಏರ್ M1/M2, ನಥಿಂಗ್ ಫೋನ್ 2 ಅನ್ನು ಸಹ ಚಾರ್ಜ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಲ್ಲದೆ ಈ ಪವರ್‌ಬ್ಯಾಂಕ್‌ ಅನ್ನು ಪರಿಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದ್ದು, ಮೇಡ್‌ ಇನ್‌ ಇಂಡಿಯಾ ಪವರ್‌ಬ್ಯಾಂಕ್‌ ಎನಿಸಿದೆ. ಪವರ್‌ಬ್ಯಾಂಕ್‌ 5V/3A, 9V/3A, 12V/2.9A, 15V/2.28A, 20V/1.75A ಇನ್‌ಪುಟ್ ಟೈಪ್‌ ಸಿ ಅನ್ನು ಹೊಂದಿದೆ. ಆದರೆ ಇನ್‌ಪುಟ್ (ಮೈಕ್ರೋ) ದಲ್ಲಿ 5V/2A, 9V/2A, 12V/1.5A (18W ಗರಿಷ್ಠ) ಬೆಂಬಲಿಸಲಿದೆ.

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ಪವರ್‌ ಬ್ಯಾಂಕ್‌! ಇದರ ಕ್ಯಾಪಾಸಿಟಿ ಎಷ್ಟಿದೆ

ಇದು ಮ್ಯಾಕ್‌ಬುಕ್ ಏರ್ M1/M2 ಅನ್ನು ಒಂದೇ ಬಾರಿಗೆ 0% ರಿಂದ 85% ವರೆಗೆ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ನಥಿಂಗ್ ಫೋನ್ 2 ಅನ್ನು 33W ಚಾರ್ಜಿಂಗ್ ಮೂಲಕ ವೇಗವಾಗಿ ಚಾರ್ಜ್‌ ಮಾಡಲಿದೆ. 30W PD ಚಾರ್ಜರ್‌ನೊಂದಿಗೆ ಪವರ್‌ಬ್ಯಾಂಕ್ ಅನ್ನು ಸುಮಾರು 3 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಅಲ್ಲದೆ ಇದು ವೇಗದ ಚಾರ್ಜಿಂಗ್‌ಗಾಗಿ ಟೈಪ್-ಸಿ ಟು ಸಿ ಕೇಬಲ್‌ನೊಂದಿಗೆ ಬರುತ್ತದೆ.

ಲಾಂಚ್‌ ಆಯ್ತು ಮೇಡ್‌ ಇನ್‌ ಇಂಡಿಯಾ ಪವರ್‌ ಬ್ಯಾಂಕ್‌! ಇದರ ಕ್ಯಾಪಾಸಿಟಿ ಎಷ್ಟಿದೆ

ಬೆಲೆ ಮತ್ತು ಲಭ್ಯತೆ
ಸ್ಟಫ್‌ಕೂಲ್ ಮೇಜರ್ ಮ್ಯಾಕ್ಸ್ ಭಾರತದಲ್ಲಿ ಲಾಂಚ್‌ ಆಫರ್‌ನಲ್ಲಿ ಕೇವಲ 2,299ರೂ ಬೆಲೆಗೆ ಲಭ್ಯವಾಗುತ್ತಿದೆ. ಇದರ ನೈಜ ಬೆಲೆ 3,999ರೂ.ಆಗಿದೆ. ಇದನ್ನು ನೋವು ಸ್ಟಫ್‌ಕೂಲ್‌.ಕಾಮ್‌ ಮತ್ತು ಅಮೆಜಾನ್‌.ಇನ್‌ ಮೂಲಕ ಖರೀದಿಸಬಹುದಾಗಿದೆ.

ಇದಲ್ಲದೆ ಸ್ಟಫ್‌ಕೂಲ್‌ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಬಿಡುಗಡೆ ಮಾಡಿತ್ತು. ಇದು ಕೆಬಲ್‌ ಕನೆಕ್ಟ್‌ ಇಲ್ಲದೆಯೆ ನಿಮ್ಮ ಡಿವೈಸ್‌ ಅನ್ನು ಚಾರ್ಜ್‌ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಟಫ್‌ಕೂಲ್‌ PB9063W 5,000mAh ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಪ್ರಾರಂಭಿಕವಾಗಿ ಮ್ಯಾಗ್‌ಸೇಫ್ ಮತ್ತು ಆಪಲ್ ವಾಚ್ ಮಾನದಂಡಗಳಿಗೆ ಬೆಂಬಲಿಸುವ ರೀತಿಯ ವಿನ್ಯಾಸವನ್ನು ಪಡೆದಿದೆ. ಈ ಪವರ್‌ ಬ್ಯಾಂಕ್‌ ಜನಪ್ರಿಯ Qi ವೈರ್‌ಲೆಸ್ ಚಾರ್ಜಿಂಗ್ ಮಾನದಂಡವನ್ನು ಬೆಂಬಲಿಸುತ್ತದೆ. ಇದರಲ್ಲಿ ವಿವಿಧ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು ಸೇರಿದಂತೆ ವಾಯರ್‌ಲೆಸ್‌ ಚಾರ್ಜ್‌ ಬೆಂಬಲಿಸುವ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದು.

Best Mobiles in India

English summary
Stuffcool Major Max 35W 20000mAh Power Bank launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+