ಸೂರ್ಯನಿಂದ ವಿನಾಶಕಾರಿ ಸ್ಫೋಟಕಗಳ ಸಂಭವ: ಭೂಮಿಗೆ ಕಾದಿದೆ ಕಂಟಕ

Written By:

ಭೂಮಿ ಮೇಲಿನ ಜೀವಿ ಸಂಕುಲಕ್ಕೆ ನಡುಕ ಹುಟ್ಟಿಸುವ ವಿಷಯವಿದು. ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಎಷ್ಟೇ ಅರಿವು ಮೂಡಿಸುವ ಆಂದೋಲನಗಳು ನಡೆದರು ಅದು ಕಡಿಮೆಯಂತು ಆಗುತ್ತಿಲ್ಲಾ. ಮಾಲಿನ್ಯ ಹೆಚ್ಚಾದಂತೆ ಸೂರ್ಯನಿಂದ ಬೀಳುವ ನೇರಳಾತೀತ ಕಿರಣಗಳನ್ನು ತಡೆಗಟ್ಟಿ ಜೀವಿ ಸಂಕುಲವನ್ನು ಕಾಪಾಡುವ ಓಜೋನ್‌ ಪದರವು ಸಹ ಈಗಾಗಲೇ ಸವಕಳಿ ಹೊಂದುತ್ತಿದೆ ಎಂಬುದನ್ನು ತಿಳಿದಿದ್ದೀರಿ ಅಲ್ಲವೇ.

ಆತಂಕ ಪಡುವಂತಹ ಸಂಗತಿ ಎಂದರೆ ಸೂರ್ಯನು ವಿನಾಶಕಾರಿ ಸ್ಫೋಟವನ್ನು ಉತ್ಪಾದಿಸುವ ಸಂಭವವಿದೆಯಂತೆ. ಸೂರ್ಯ ಒಮ್ಮೆ ಏನಾದರೂ ಸ್ಫೋಟವನ್ನು ಉತ್ಪಾದಿಸಿದರೆ ರೇಡಿಯೋ ಸಂವಹನ ಸ್ಥಗಿತಗೊಳ್ಳಲಿದೆಯಂತೆ. ಅಷ್ಟು ಮಾತ್ರವಲ್ಲದೇ ವಿದ್ಯುತ್‌ ಸರಬರಾಜು ಕಡಿತಗೊಳ್ಳಲಿದೆಯಂತೆ. ಅಲ್ಲದೇ ಭೂಮಿಯ ಮೇಲೆ ಜೀವಿಸಲು ಸಹಾಯವಾಗಿರುವ ಪತ್ರಿಯೊಂದು ಮೂಲಭೂತ ಅವಶ್ಯಕತೆಗಳ ಮೇಲೆ ದುಷ್ಪರಿಣಾಮ ಬೀರಲಿದೆ" ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಟೆಕ್ನಾಲಜಿ ಅಭಿವೃದ್ದಿಯಿಂದ ಸಂಶೋಧನೆ ಮಾಡಿ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಸೂರ್ಯನು ಉತ್ಪಾದಿಸುವ ಸಂಭವವಿರುವ ಸ್ಫೋಟವಾದರೂ ಏನು, ಇದರ ಪರಿಣಾಮಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಯಾನಕ ದೈತ್ಯಾಕಾರದ ಸ್ಫೋಟಗಳು (Devastating superflares)

ಭಯಾನಕ ದೈತ್ಯಾಕಾರದ ಸ್ಫೋಟಗಳು (Devastating superflares)

1

ಜಗತ್ತಿಗೆಲ್ಲಾ ಬೆಳಕು ನೀಡುವ ಸೂರ್ಯ ವಿನಾಶಕಾರಿ ಸ್ಫೋಟಕಗಳನ್ನು ಉತ್ಪಾದಿಸುವಂತಹ ಸಾಮರ್ಥ್ಯ ಮತ್ತು ಸಂಭವವನ್ನು ಹೊಂದಿದೆ ಎಂದು ವಿಜ್ಞಾನಿಗಳು ಟೆಕ್ನಾಲಜಿ ಬಳಕೆಯಿಂದ ಸಂಶೋಧನೆಯಲ್ಲಿ ತೊಡಗಿ ಈ ಮಾಹಿತಿ ತಿಳಿದು ಹೇಳಿದ್ದಾರೆ.
ಚಿತ್ರ ಕೃಪೆ:Reuters

 ಸೂರ್ಯನ ಸ್ಫೋಟಗಳಿಂದ ಆಗುವ ಪರಿಣಾಮವೇನು?

ಸೂರ್ಯನ ಸ್ಫೋಟಗಳಿಂದ ಆಗುವ ಪರಿಣಾಮವೇನು?

2

"ಸೂರ್ಯನು ಉತ್ಪಾದಿಸಬಹುದಾದ ಸ್ಫೋಟಕಗಳಿಂದ ರೇಡಿಯೋ ಸಂವಹನ ಸ್ಥಗಿತಗೊಳ್ಳಲಿದೆಯಂತೆ. ಅಷ್ಟು ಮಾತ್ರವಲ್ಲದೇ ವಿದ್ಯುತ್‌ ಸರಬರಾಜು ಕಡಿತಗೊಳ್ಳಲಿದೆಯಂತೆ. ಅಲ್ಲದೇ ಭೂಮಿಯ ಮೇಲೆ ಜೀವಿಸಲು ಸಹಾಯವಾಗಿರುವ ಪತ್ರಿಯೊಂದು ಮೂಲಭೂತ ಅವಶ್ಯಕತೆಗಳ ಮೇಲೆ ದುಷ್ಪರಿಣಾಮ ಬೀರಲಿದೆ" ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿ

ಭೂಮಿ

3

ಭೂಮಿಯು ಸೂರ್ಯನ ಸ್ಫೋಟಗಳಿಂದ ಹೊಡೆಯಲ್ಪಡುತ್ತದೆ. ಭೂಮಿಯ ಮೇಲಿನ ಎಲ್ಲಾ ಶಕ್ತಿಯ ಕಣಗಳು ಕುಂದುಹೋಗುತ್ತವೆ. ಅಲ್ಲದೇ ಭೂಮಿಯ ಮೇಲಿನ ಕಾಂತೀಯ ಕ್ಷೇತ್ರವನ್ನು ಎದರಿಸಬೇಕಾಗುತ್ತದೆ ಎನ್ನಲಾಗಿದೆ.

ಸ್ಫೋಟಗಳು

ಸ್ಫೋಟಗಳು

4

ಸೂರ್ಯನಿಂದ ಸಂಭವಿಸುವ ಸ್ಫೋಟಗಳು ಕಾಂತೀಯ ಕ್ಷೇತ್ರದೊಂದಿಗೆ ಪ್ರತಿಕ್ರಿಯಿಸಿದರೆ ಸುಂದರ ಅರುಣಶೋಭೆ ಪರಿಣಮಿಸಲಿದೆ(Beautiful Auroras)

ಸೂರ್ಯನ ಸ್ಫೋಟಗಳನ್ನು ಪತ್ತೆ ಮಾಡಿದ್ದು ಹೇಗೆ?

ಸೂರ್ಯನ ಸ್ಫೋಟಗಳನ್ನು ಪತ್ತೆ ಮಾಡಿದ್ದು ಹೇಗೆ?

5

ಸೂರ್ಯನಿಂದ ಉತ್ಪಾದನೆಯಾಗುವ ಸ್ಫೋಟಗಳು ಕೆಪ್ಲರ್‌ ಮಿಷನ್‌ ಪತ್ತೆ ಹಚ್ಚುವವರೆಗೆ ರಹಸ್ಯವಾಗಿ ಇತ್ತು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಸೂರ್ಯನು ಉತ್ಪಾದಿಸ ಬಹುದಾದ ಸ್ಫೋಟಗಳನ್ನು ಪತ್ತೆ ಹಚ್ಚಲಾಗಿದೆ.

1859 ರಲ್ಲಿ ಒಮ್ಮೆ ಸ್ಫೋಟ

1859 ರಲ್ಲಿ ಒಮ್ಮೆ ಸ್ಫೋಟ

6

ಸೂರ್ಯನು ಈ ಹಿಂದೆ ದೀರ್ಘವಾಗಿ 1859 ಸೆಪ್ಟೆಂಬರ್‌ನಲ್ಲಿ ಗಮನಾರ್ಹವಾಗಿ ಸ್ಫೋಟಕಗಳನ್ನು ಉತ್ಪಾದಿಸಿತ್ತು, ಕಾರಣ ನೆರೆಯ ನಕ್ಷತ್ರವಾದ ಬಿಸಿಯ ಪ್ಲಾಸ್ಮಾ ಭೂಮಿಯನ್ನು ಬಡಿದಿತ್ತು.

ಕಾಂತೀಯ ಕ್ಷೇತ್ರ

ಕಾಂತೀಯ ಕ್ಷೇತ್ರ

7

"ಕಾಂತೀಯ ಕ್ಷೇತ್ರ ಸ್ಫೋಟಗಳೊಂದಿಗೆ ಭೂಮಿಗಿಂತ ಒಂದು ಪಟ್ಟು ಅಧಿಕವಾಗಿ ಸೂರ್ಯನ ಮೇಲ್ಮೈನಲ್ಲಿದೆ" ಎಂದು ಆರ್‌ಹುಸ್‌ ವಿಶ್ವವಿದ್ಯಾಲಯದ ಕ್ರಿಸ್ಟಫರ್ ಕರೊಫ್ಫ್ ಹೇಳಿದ್ದಾರೆ.

ಸಂಶೋಧಕರು ಹೇಳಿದ್ದೇನು?

ಸಂಶೋಧಕರು ಹೇಳಿದ್ದೇನು?

8

ಇತರೆ ನಕ್ಷತ್ರಗಳನ್ನು ಸ್ಫೋಟಗಳೊಂದಿಗೆ (Superflares)‌ ವಿಶ್ಲೇಷಿಸಿದ ಸಂಶೋಧಕರು ಶೇಕಡ 10 ರಷ್ಟು ಕಾಂತೀಯ ಸಾಮರ್ಥ್ಯ ಸಮಪಾಲು ಅಥವಾ ಕಡಿಮೆ ಸೂರ್ಯನಿಗಿಂತ ಇದೆ ಎನ್ನಲಾಗಿದೆ.

ಸೂರ್ಯನ ಸ್ಫೋಟದ ಸಂಭವ ಮಾತ್ರ

ಸೂರ್ಯನ ಸ್ಫೋಟದ ಸಂಭವ ಮಾತ್ರ

9

ಸೂರ್ಯನು ವಿನಾಶಕಾರಿಯಾದ, ಭೂಮಿಯ ವಾತಾವರಣವನ್ನೇ ಬದಲಿಸಿ ಜೀವಿ ಸಂಕುಲಕ್ಕೆ ದುಷ್ಪರಿಣಾಮ ಬೀರುವಂತಹ ಸ್ಫೋಟವನ್ನು ಉತ್ಪಾದಿಸುವ ಸಂಭವವಿದೆ ಅಷ್ಟೇ. ಆದರೆ ಭೂಮಿಯು ಕಾಂತಕ್ಷೇತ್ರ ಸಾಮರ್ಥ್ಯ ಉತ್ತಮವಾಗಿ ಹೊಂದಿರುವುದರಿಂದ ಜೀವಿಸಂಕುಲದ ಉಳಿವಿಗೆ ಸಾಧ್ಯವಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಭೂವೈಜ್ಞಾನಿಕ ದಾಖಲೆಗಳು ಹೇಳಿವೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Sun may produce devastating superflares, affect the Earth’s ability to support life, scientists say. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot