ಕೇವಲ ಡಿಸ್‌ಪ್ಲೇಗಾಗಿಯೇ ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ ಎಸ್8!! ಏಕೆ ಗೊತ್ತಾ?
ಭಾರತೀಯರನ್ನೆ ಗುರಿಯಾಗಿಸಿಕೊಂಡು ಗ್ಯಾಲಾಕ್ಸಿ ಡಿಸ್‌ಪ್ಲೇ ರೂಪಿಸಲಾಗಿದೆ.!!
ಸ್ಯಾಮ್‌ಸಂಗ್ ಸರಣಿ ಸ್ಮಾರ್ಟ್‌ಫೋನ್ ಒಂದು ಮಾರುಕಟ್ಟೆಗೆ ಬರುತ್ತಿದೆ ಎಂದಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುತೋಹಲ ಶುರುವಾಗುತ್ತದೆ. ಸ್ಯಾಮ್‌ಸಂಗ್ ಬಿಡುಗಡೆ ಮಾಡುವ ನೂತನ ಸ್ಮಾರ್ಟ್‌ಫೊನ್ ಯಾವೆಲ್ಲಾ ಫೀಚರ್ ಹೊಂದಿರಬಹುದು ಎನ್ನುವುದೇ ಎಲ್ಲೆಡೆ ದೊಡ್ಡ ಚರ್ಚಾ ವಿಷಯವಾಗಿಬಿಡುತ್ತದೆ.!!
ಹೌದು, ನಿಮ್ಮ ಊಹೆ ಸರಿಯಾಗಿದೆ. ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.! ಭಾರತವನ್ನೆ ತನ್ನ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿರುವ ಸ್ಯಾಮ್‌ಸಂಗ್ ಇದೀಗ ಭಾರತೀಯರಿಗೆ ಅತ್ಯುತ್ತಮ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ನೀಡಿದೆ.!!
ಇದೇ ಮೊದಲ ಬಾರಿಗೆ ಅತ್ಯಾಧುನಿಕ ಡಿಸ್‌ಪ್ಲೇಯನ್ನು ಸ್ಯಾಮ್‌ಸಂಗ್ ಹೊರತಂದಿದ್ದು, ಭಾರತೀಯರನ್ನೆ ಗುರಿಯಾಗಿಸಿಕೊಂಡು ಗ್ಯಾಲಾಕ್ಸಿ ಡಿಸ್‌ಪ್ಲೇ ರೂಪಿಸಲಾಗಿದೆ. ಹಾಗಾದರೆ, ಗ್ಯಾಲಾಕ್ಸಿ ಎಸ್8 ಡಿಸ್‌ಪ್ಲೇ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಬಿಗ್ ಡಿಸ್‌ಪ್ಲೇ ಹೊಂದಿದೆ ಗ್ಯಾಲಾಕ್ಸಿ ಎಸ್8!!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಂದಿನ ಟ್ರೆಂಡ್ ಎಂದರೆ ದೊಡ್ಡದಾದ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳು. 5.5 ಇಂಚ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದ್ದು, ಗ್ಯಾಲಾಕ್ಸಿ ಎಸ್8 5.8 ಇಂಚ್ ಡಿಸ್‌ಪ್ಲೇ ಹೊಂದಿದೆ.! ಇನ್ನು ಶೇಕಡ 83 ಪರ್ಸೆಂಟ್ ಸ್ಕ್ರೀನ್ ರೆಶ್ಯೂವನ್ನು ಹೊಂದಿದೆ.!!

ಮಲ್ಟಿಮೀಡಿಯಾಗೆ ಅತ್ಯುತ್ತಮ ಡಿಸ್‌ಪ್ಲೇ!!
ಶೇಕಡ 83 ಪರ್ಸೆಂಟ್ ಸ್ಕ್ರೀನ್ ರೆಶ್ಯೂವನ್ನು ಹೊಂದಿರುವ ಗ್ಯಾಲಾಕ್ಸಿ ಎಸ್8 ಡಿಸ್‌ಪ್ಲೇ ಮಲ್ಟಿಮೀಡಿಯಾ ಅಂದರೆ ಗೇಮಿಂಗ್, ಸಿನಿಮಾ ವೀಕ್ಷಣೆಗೆ ಹೆಚ್ಚು ಸೂಕ್ತವಾಗಿದೆ ಎನ್ನಬಹುದು. ಬೆಜೆಲ್ ಲೆಸ್ ವೈಬ್ರೆಂಟ್ AMOED ಡಿಸ್‌ಪ್ಲೇ ನಿಮ್ಮನ್ನು 3D ಗೇಮಿಂಗ್‌ನಲ್ಲಿ ಮಂತ್ರಮುಗ್ದಗೊಳಿಸುತ್ತದೆ.!!

ಹೆಚ್‌ಡಿಆರ್ ಪ್ರೀಮಿಯಂ ಪ್ರಮಾಣೀಕರಿಸಿದೆ.!!
ಗ್ಯಾಲಾಕ್ಸಿ ಎಸ್8 ಡಿಸ್‌ಪ್ಲೇಯನ್ನು ಮೊಬೈಲ್ ಹೆಚ್‌ಡಿಆರ್ ಪ್ರೀಮಿಯಂ ಪ್ರಮಾಣೀಕರಿಸಿದೆ.!! ಹಾಗಾಗಿ, ತ್ತೀಚಿನ ವರ್ಷಗಳಲ್ಲಿ ಟಿವಿ ತಂತ್ರಜ್ಞಾನದಲ್ಲಿನ ಅತಿದೊಡ್ಡ ಬೆಳವಣಿಗೆಯಾಗಿರುವ HDR ಕಂಟೆಂಟ್ ಅನ್ನು ಮೊಬೈಲ್ ಫೋನ್‌ನಲ್ಲಿಲ ಸ್ಟ್ರೀಮ್ ಮಾಡಬಹುದು.!!

ಫಿಟ್ ಟು ಸ್ಕ್ರೀನ್
ಯೂಟ್ಯೂಬ್ ನಲ್ಲಿನ ವೀಡಿಯೊಗಳು ಅಥವಾ ಯಾವುದೇ ವೀಡಿಯೊಗಳನ್ನು 'ಫಿಟ್ ಟು ಸ್ಕ್ರೀನ್' ಆಯ್ಕೆಯಲ್ಲಿ ನೊಡಬಹುದಾಗಿದೆ. ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ವೀಕ್ಣೆ ಮಾಡುತ್ತಿರುವ ಅನುಭವವನ್ನು ನೀಡಲು ಸ್ಯಾಮ್‌ಸಂಗ್ ಬಹಳಷ್ಟು ಪ್ರಯತ್ನಿಸುತ್ತಿದೆ.!!

ಹೊಸದಾಗಿದೆ ಹೋಮ್ ಬಟನ್!!
ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಇದೇ ಮದಲು ಹೊಸದಾಗಿ ವಿನ್ಯಾಸಗೊಳಿಸಲಾದ ಹೋಮ್ ಬಟನ್ ಗ್ಯಾಲಾಕ್ಸಿ ಎಸ್8 ನಲ್ಲಿ ರೂಪಿತವಾಗಿದೆ.!! ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಲು ಹೊಸ ಹೋಮ್ ಬಟನ್ ಆಯ್ಕೆಯನ್ನು ನೀಡಲಾಗಿದೆ. ಇನ್ನು ಗ್ಯಾಲಕ್ಸಿ S8 ಅತ್ಯಂತ ಮೃದುವಾದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.!!


Click it and Unblock the Notifications








