ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

By Ashwath
|

ಕೈ ಮುರಿತಗೊಂಡ ಬಳಿಕ ಮೂಳೆಗಳನ್ನು ಸರಿಪಡಿಸಲು ವೈದ್ಯರು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ ಬ್ಯಾಂಡೇಜ್‌ ಹಾಕುವುದು ನಿಮಗೆಲ್ಲ ಗೊತ್ತಿರುವ ವಿಷಯವೇ. ಈ ಬ್ಯಾಂಡೇಜ್‌ ಹಾಕಿದ ನಂತರ ಇದರ ಕೆಲವು ವಾರಗಳ ಕಾಲ ಕೊರಳಿಗೆ ಕೈಯನ್ನು ನೇತು ಹಾಕಿ ಒಂದೇ ಕೈಯಲ್ಲಿ ಕೆಲಸ ಮಾಡಬೇಕಾಗುವ ಕಷ್ಟ ಅನುಭವಿಸಿದವರಿಗೆ ಗೊತ್ತಿರುತ್ತದೆ. ಅದಕ್ಕಿಂತಲೂ ಈ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಒಳಗಡೆ ಅಪ್ಪಿ ತಪ್ಪಿ ನೀರು ಹೋದರಂತೂ ಕೇಳುವುದೇ ಬೇಡ. ಅದರ ಒಳಗಡೆ ಗಾಳಿಯಾಡದ ಕಾರಣ ತುರಿಕೆ ಉಂಟಾಗಿ ಯಮಯಾತನೆ ಅನುಭವಿಸಬೇಕಾಗುತ್ತದೆ.

ಈ ಬ್ಯಾಂಡೇಜ್‌ ಸಮಸ್ಯೆಯನ್ನು ಪರಿಹರಿಸಲು ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ವಿಕ್ಟೋರಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ‌ಯಾಗಿರುವ ಜ್ಯಾಕ್‌ ಇವಿಲ್‌ ಎಂಬವರು ಹೊಸ ರೀತಿಯ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌ನ್ನು ಆವಿಷ್ಕಾರಿಸಿದ್ದಾರೆ. ಬ್ಯಾಂಡೇಜ್‌ ಹಾಕುವ ಮುನ್ನ ಮೊದಲು ಮುರಿತಕ್ಕೊಳಗಾದ ಭಾಗದ ಮೂಳೆಯ ಸಂಪೂರ್ಣ ಎಕ್ಸ್‌ರೇ ತೆಗೆದು 3ಡಿ ಸ್ಕ್ಯಾನ್‌ ಮಾಡಲಾಗುತ್ತದೆ. ನಂತರ ಅದಕ್ಕೆ ತಕ್ಕಂತೆ 3ಡಿ ಪ್ರಿಂಟ್‌ ತೆಗೆದು ಫೈಬರ್‌ ಗ್ಲಾಸ್‌ನ ಬ್ಯಾಂಡೇಜ್‌ ರೂಪಿಸಲಾಗುತ್ತದೆ.

3ಡಿ ಪ್ರಿಂಟ್‌ ತೆಗೆಯಲು ಸ್ಪಲ್ಪ ಹೆಚ್ಚು ಸಮಯ ಬೇಕಾಗುತ್ತದೆ ವಿನಾ: ಬ್ಯಾಂಡೇಜ್‌ನ್ನು ಕೇವಲ 10 ನಿಮಿಷದಲ್ಲೇ ಹಾಕಬಹುದು. ಗಾಳಿಯಾಡುವಂತೆ, ಹಗುರವಾಗಿರುವ ಈ ಬ್ಯಾಂಡೇಜ್‌ನ್ನು ವೈದ್ಯರು ಪರೀಕ್ಷಿಸಿದ್ದು,ಪ್ಲಾಸ್ಟರ್‌ ಆಫ್‌ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ ಬ್ಯಾಂಡೇಜ್‌ ಬದಲಾಗಿ ಈ ಬ್ಯಾಂಡೇಜ್‌ನ್ನು ಬಳಸಬಹುದು ಎಂದು ಸೂಚಿಸಿದ್ದಾರೆ.

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಪ್ಲಾಸ್ಟರ್‍ ಆಫ್ ಬ್ಯಾಂಡೇಜ್‌ ಬದಲಿಗೆ ಹೊಸ 3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌  ಬ್ಯಾಂಡೇಜ್‌

3ಡಿ ಫೈಬರ್‌ ಗ್ಲಾಸ್‌ ಬ್ಯಾಂಡೇಜ್‌

ಹೊಸ ರೀತಿಯ ಬ್ಯಾಂಡೇಜ್‌ನ್ನು ಆವಿಷ್ಕಾರಿಸಿದ ಜ್ಯಾಕ್‌ ಇವಿಲ್‌ ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ : ಜ್ಯಾಕ್‌ ಇವಿಲ್‌ ವೆಬ್‌ಸೈಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X