ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಲ್ಯಾಪ್‌ಟಾಪ್‌ಗಳ ಮೇಲೆ 50% ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇಂದಿನಿಂದ(ಜ.17) ಲೈವ್ ಆಗಿದೆ. ಈ ಸೇಲ್ ಇದೇ ಜನವರಿ 20ರ ತನಕ ಮುಂದುವರೆಯಲಿದೆ. ಇನ್ನು ಈಗಾಗಲೇ ಅಮೆಜಾನ್ ಈ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಸದ್ಯ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಎಲೆಕ್ಟ್ರಾನ್ಸಿಕ್ಸ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಬಿಗ್ ಆಫರ್ ನೀಡುತ್ತಿದೆ.

ಹೌದು, ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡುತ್ತಿದೆ. ಅಲ್ಲದೆ, SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ ತ್ವರಿತ 10% ರಿಯಾಯಿತಿಯನ್ನು ನೀಡಲಾಗ್ತಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳ ಮೇಲೆ 50% ತನಕ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಆಪಲ್ ಮ್ಯಾಕ್‌ಬುಕ್ ಪ್ರೊ ಕೂಡ ರಿಯಾಯಿತಿ ಪಡೆದುಕೊಂಡಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಕ್ರೋಮ್‌ಬುಕ್ 14e
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲೆನೊವೊ ಕ್ರೋಮ್‌ಬುಕ್ 14e 50% ಡಿಸ್ಕೌಂಟ್ ಪಡೆದುಕೊಂಡಿದೆ. 39,990ರೂ ಮೂಲ ಬೆಲೆ ಹೊಂದಿರುವ ಲ್ಯಾಪ್‌ಟಾಪ್ ಇದೀಗ ನಿಮಗೆ 19,990 ರೂ.ಗಳಿಗೆ ಲಭ್ಯವಾಗಲಿದೆ. ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವ್ಯಾಪಾರ ವೃತ್ತಿಪರರಿಗೆ ಸೂಕ್ತವಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಆಂಟಿ-ಗ್ಲೇರ್ ಲೇಪನ ಹೊಂದಿರುವ 14 ಇಂಚಿನ ಫೂಲ್ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು AMD A-ಸರಣಿಯ ಚಿಪ್ ಅನ್ನು ಒಳಗೊಂಡಿದ್ದು, 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ನಲ್ಲಿ ವೀಡಿಯೊ ಕರೆಗಾಗಿ 720p ಸೆಲ್ಫಿ ಕ್ಯಾಮರಾವನ್ನು ಪಡೆದುಕೊಂಡಿದೆ. ಇದಲ್ಲದೆ USB ಪೋರ್ಟ್‌ಗಳು ಮತ್ತು ಮೈಕ್ರೊ SD ಕಾರ್ಡ್ ರೀಡರ್ ಮತ್ತು ಜಿ ಸ್ಯೂಟ್ ವೆಬ್ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ.

ಆಪಲ್ ಮ್ಯಾಕ್‌ಬುಕ್ ಪ್ರೊ 2020
ಆಪಲ್ ಮ್ಯಾಕ್‌ಬುಕ್ ಪ್ರೊ 2020 ಲ್ಯಾಪ್‌ಟಾಪ್ ಕೂಡ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 10% ಡಿಸ್ಕೌಂಟ್ ಪಡೆದುಕೊಂಡಿದೆ. 1,42,900ರೂ. ಮೂಲಬೆಲೆಯ ಈ ಲ್ಯಾಪ್‌ಟಾಪ್ 1,27,990ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವೇಗವನ್ನು ಒಳಗೊಂಡಿದೆ. ಇದು 512GB ಸ್ಟೋರೇಜ್ ಬಲವನ್ನು ಹೊಂದಿದೆ. ಇನ್ನು ಈ ಮ್ಯಾಕ್‌ಬುಕ್ 13.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 8-ಕೋರ್ ಪ್ರೊಸೆಸರ್ ಒಳಗೊಂಡಿದೆ. ಇದರಲ್ಲಿ ವೀಡಿಯೊ ಕರೆಗಳು ಮತ್ತು ಮೀಟಿಂಗ್ ಉಪಯೋಗಕ್ಕಾಗಿ 720p ವೆಬ್‌ಕ್ಯಾಮ್ ಅನ್ನು ಸಹ ನೀಡಲಾಗಿದೆ.

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3
ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಲ್ಯಾಪ್‌ಟಾಪ್ ಅಮೆಜಾನ್ ಸೇಲ್‌ನಲ್ಲಿ 27% ಡಿಸ್ಕೌಂಟ್ ಪಡೆದಿದೆ. ಇದು 78,514ರೂ ಎಂ.ಆರ್.ಪಿ ಹೊಂದಿದ್ದು, ನಿಮಗೆ 56,990ರೂ.ಗಳಿಗೆ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i5 10th ತಲೆಮಾರಿನ ಪ್ರೊಸೆಸರ್ ಬಲವನ್ನು ಒಳಗೊಂಡಿದೆ. ಇದು 15.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 120Hz IPS ರೇಟ್ ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 720p ಕ್ಯಾಮೆರಾವನ್ನು ಹೊಂದಿದ್ದು, ಇಂಟಿಗ್ರೇಟೆಡ್ ಡ್ಯುಯಲ್ ಅರೇ ಮೈಕ್ರೊಫೋನ್ ಅನ್ನು ಕೂಡ ಹೊಂದಿದೆ.

ಏಸರ್ ನೈಟ್ರೋ 5
ಇನ್ನು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಏಸರ್ ಸಂಸ್ಥೆಯ ಲ್ಯಾಪ್‌ಟಾಪ್‌ಗಳು ಕೂಡ ಅತ್ಯುತ್ತಮವಾದ ಡಿಸ್ಕೌಂಟ್ ಪಡೆದುಕೊಂಡಿವೆ. ಇದರಲ್ಲಿ ಏಸರ್ ನಿಟ್ರೋ 5 28% ಡಿಸ್ಕೌಂಟ್ ಪಡೆದಿದೆ. ಈ ಲ್ಯಾಪ್‌ಟಾಪ್ ಮೂಲಬೆಲೆ 1,04,999ರೂ.ಆಗಿದ್ದು, ಡಿಸ್ಕೌಂಟ್‌ನಲ್ಲಿ ನಿಮಗೆ 75,990 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್ ಬಲವನ್ನು ಪಡೆದಿದೆ. ಇದು 16GB RAM ಹೊಂದಿರುವ ಹೈ-ಎಂಡ್ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಏಸರ್‌ನ ಕೂಲ್‌ಬೂಸ್ಟ್ ತಂತ್ರಜ್ಞಾನವು ಫ್ಯಾನ್ ವೇಗವನ್ನು 10% ಮತ್ತು CPU/GPU ತಂಪಾಗಿಸುವಿಕೆಯನ್ನು 9 ರಷ್ಟು ಹೆಚ್ಚಿಸುತ್ತದೆ.

ಹೆಚ್‌ಪಿ ವಿಕ್ಟಸ್ ಎಎಂಡಿ ರೈಜನ್ 5
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಹೆಚ್‌ಪಿ ವಿಕ್ಟಸ್ ಆರ್‌ಎಂಡಿ ರೈಜನ್ 5 ಲ್ಯಾಪ್‌ಟಾಪ್ 21% ಡಿಸ್ಕೌಂಟ್ ಪಡೆದಿದೆ. 73,682ರೂ ಮೂಲಬೆಲೆಯ ಈ ಲ್ಯಾಪ್‌ಟಾಪ್ ಅಮೆಜಾನ್ ಸೇಲ್‌ನಲ್ಲಿ ನಿಮಗೆ ಕೇವಲ 57,990ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್ 16.1 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 8GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದು 5 ನೇ ತಲೆಮಾರಿ AMD ರೈಜೆನ್ 5 ಪ್ರೊಸೆಸರ್ ಬಲವನ್ನು ಪಡೆದಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 10 ಹೋಮ್ ಪ್ರಿ ಲೋಡ್ ಹೊಂದಿದೆ. ಇದನ್ನು ವಿಂಡೋಸ್ 11 ಗೆ ಉಚಿತವಾಗಿ ಅಪ್‌ಗ್ರೇಡ್ ಮಾಡಬಹುದಾಗಿದೆ.

ಆಸುಸ್ ಟಫ್ ಗೇಮಿಂಗ್ ಲ್ಯಾಪ್‌ಟಾಪ್
ಅಮೆಜಾನ್ ಸೇಲ್‌ನಲ್ಲಿ ಆಸುಸ್ ಟಫ್ ಗೇಮಿಂಗ್ F15 ಲ್ಯಾಪ್‌ಟಾಪ್ 32% ಡಿಸ್ಕೌಂಟ್ ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 84,990ರೂ ಮೂಲಬೆಲೆಯನ್ನು ಹೊಂದಿದ್ದು, 57,990ರೂ.ಗಳಿಗೆ ಖರೀದಿಗೆ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 144Hz ರಿಫ್ರೇಶ್ ರೇಟ್ ಅನ್ನು ಪಡೆದುಕೊಂಡಿದೆ. ಇದು ಇಂಟೆಲ್ ಕೋರ್ i5 ಪ್ರೊಸೆಸರ್ ಹೊಂದಿದ್ದು, ಜಿಫೋರ್ಸ್ ಜಿಟಿಎಕ್ಸ್1650 4GB GDDR6 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಬ್ಲೂಟೂತ್ 5.1 ಅನ್ನು ಬೆಂಬಲಿಸಲಿದೆ. ಇದರಲ್ಲಿ 720p ಹೆಚ್‌ಡಿ ವೆಬ್ ಕ್ಯಾಮೆರಾವನ್ನು ಸಹ ನೀಡಲಾಗಿದೆ.


Click it and Unblock the Notifications








