Home
ಸುದ್ದಿಜಾಲ

ಮೊಬೈಲ್‌ ನಂಬರ್‌ ಬದಲಾಯಿಸುವವರ ಗಮನಕ್ಕೆ! ಸುಪ್ರೀಂಕೋರ್ಟ್‌ ನೀಡಿದ ಎಚ್ಚರಿಕೆ ಏನು?

ಮೊಬೈಲ್‌ ನಂಬರ್‌ಗಳನ್ನು ಬದಲಾಯಿಸುವವರಿಗೆ ಸುಪ್ರೀಂ ಕೋರ್ಟ್‌ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಮೊಬೈಲ್‌ ನಂಬರ್‌ ಬದಲಾಯಿಸುವ ಮುನ್ನ ವಾಟ್ಸಾಪ್‌ ಸಂಬಂಧಿಸಿದ ಡೇಟಾವನ್ನು ಡಿಲೀಟ್‌ ಮಾಡುವುದು ಬಳಕೆದಾರರಿಗೆ ಸೇರಿದ್ದು ಎಂದು ಹೇಳಿದೆ. ಅಲ್ಲದೆ ನಿಮ್ಮ ಸಿಮ್‌ನ ಅವಧಿ ಮುಗಿದ ನಂತರ ಅದೇ ನಂಬರ್‌ ಅನ್ನು ಬೇರೆಯವರಿಗೆ ಪೂರೈಕೆ ಮಾಡುವುದಕ್ಕೆ ಅವಕಾಶ ನೀಡಿದೆ.

ಹೌದು, ಮೊಬೈಲ್‌ ಸೇವಾ ಪೂರೈಕೆದಾರರಾದ ಏರ್‌ಟೆಲ್‌, ಜಿಯೋ ಮತ್ತು ವಿ ಟೆಲಿಕಾಂಗಳು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರಿಯವಾಗಿರುವ ಸಂಖ್ಯೆಗಳನ್ನು ಇತರ ಚಂದಾದಾರರಿಗೆ ಮರು ಹಂಚಿಕೆ ಮಾಡಬಹುದು ಎಂದು ಹೇಳಿದೆ. ಆದರಿಂದ ಒಂದು ವೇಳೆ ನಿಮ್ಮ ಹಳೆಯ ಮೊಬೈಲ್‌ ನಂಬರ್‌ ಬೇರೆಯವರ ಪಾಲಾಗುವುದು ಪಕ್ಕಾ. ಇದರಿಂದ ನೀವು ಹಳೆಯ ನಂಬರ್‌ನಲ್ಲಿ ವಾಟ್ಸಾಪ್‌ ಖಾತೆ ಬಳಸುತ್ತಿದ್ದರೆ ಅದರ ಡೇಟಾ ಡಿಲೀಟ್‌ ಮಾಡುವುದು ಬಳಕೆದಾರರಿಗೆ ಮುಖ್ಯವಾಗಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್‌ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ ನಂಬರ್‌ ಬದಲಾಯಿಸುವವರ ಗಮನಕ್ಕೆ! ಸುಪ್ರೀಂಕೋರ್ಟ್‌ ನೀಡಿದ ಎಚ್ಚರಿಕೆ ಏನು?

ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮೊಬೈಲ್ ಫೋನ್ ಸೇವಾ ಪೂರೈಕೆದಾರರು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರೀಯಗೊಂಡ ನಂಬರ್‌ಗಳನ್ನು ಹೊಸ ಚಂದಾದಾರರಿಗೆ ನೀಡಬಹುದು. ಇದರಿಂದ ನೀವು ಹಳೆಯ ನಂಬರ್‌ನಲ್ಲಿ ವಾಟ್ಸಾಪ್‌ ಬಳಸುತ್ತಿದ್ದು, ಹೊಸದಾಗಿ ಹಂಚಿಕೆಯಾದ ಗ್ರಾಹಕ ಕೂಡ ಅದೇ ನಂಬರ್‌ನಲ್ಲಿ ವಾಟ್ಸಾಪ್‌ ತೆರೆದರೆ ನಿಮ್ಮ ಡೇಟಾವನ್ನು ಡಿಲೀಟ್‌ ಮಾಡಬೇಕಾಗುವುದು ನಿಮ್ಮದೇ ಕರ್ತವ್ಯ ಎಂದು ಹೇಳಿದೆ. ಅಲ್ಲದೆ ಚಂದಾದಾರರು ವಾಟ್ಸಾಪ್‌ನಲ್ಲಿ ಹಂಚಿಕೊಂಡ ಡೇಟಾವನ್ನು ಅಳಿಸಲು ಅಥವಾ ಬೇರೆ ರೀತಿಯಲ್ಲಿ ಅಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಿಮ್ಮ ಡೇಟಾವನ್ನು ನೀವೇ ಡಿಲೀಟ್‌ ಮಾಡಿ
ಇನ್ನು ನಿಷ್ಕ್ರೀಯಗೊಂಡ ನಂಬರ್‌ಗಳನ್ನು ಹೊಸದಾಗಿ ಮರು ಹಂಚಿಕೆ ಮಾಡಿದರೆ ಹಳೆ ಬಳಕೆದಾರರ ಗೌಪ್ಯತೆ ಉಲ್ಲಂಘನೆ ಆಗಲಿದೆ ಎನ್ನುವ ಅರ್ಜಿ ಕುರಿತು ಅರ್ಜಿದಾರರ ಕಳವಳದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಮಾಹಿತಿ ನೀಡಿದೆ. ಅದೇನೆಂದರೆ ಚಂದಾದಾರರು ಹಿಂದಿನ ಫೋನ್ ಸಂಖ್ಯೆಯೊಂದಿಗೆ ಲಗತ್ತಿಸಲಾದ ವಾಟ್ಸಾಪ್ ಖಾತೆಯನ್ನು ಅಳಿಸುವ ಮೂಲಕ ಮತ್ತು ಸ್ಥಳೀಯ ಡಿವೈಸ್‌ ಮೆಮೊರಿ/ಕ್ಲೌಡ್/ಡ್ರೈವ್‌ನಲ್ಲಿ ಸಂಗ್ರಹವಾಗಿರುವ ವಾಟ್ಸಾಪ್ ಡೇಟಾವನ್ನು ಡಿಲೀಟ್‌ ಮಾಡುವ ಮೂಲಕ ವಾಟ್ಸಾಪ್‌ ದುರ್ಬಳಕೆಯನ್ನು ತಡೆಗಟ್ಟಬಹುದು ಎಂದು ಹೇಳಿದೆ. ಅಲ್ಲದೆ ಹೀಗೆ ಮಾಡುವುದು ಬಳಕೆದಾರರ ಮುಖ್ಯ ಕೆಲಸವಾಗಿದೆ ಎಂದಿದೆ.

ಮೊಬೈಲ್‌ ನಂಬರ್‌ ಬದಲಾಯಿಸುವವರ ಗಮನಕ್ಕೆ! ಸುಪ್ರೀಂಕೋರ್ಟ್‌ ನೀಡಿದ ಎಚ್ಚರಿಕೆ ಏನು?

ಏನು ಹೇಳುತ್ತದೆ ನಿಯಮಗಳು?
ಟ್ರಾಯ್ ಸುಪ್ರೀಂ ಕೋರ್ಟ್‌ಗೆ ಏಪ್ರಿಲ್ 2017 ರಲ್ಲಿ DoT ಎರಡು ಸೂಚನೆಗಳನ್ನು ನೀಡಿದೆ. ಅದರಲ್ಲೊ ಚಂದಾದಾರರ ಕೋರಿಕೆಯ ಮೇರೆಗೆ ಬಳಕೆ ಮಾಡದಿರುವುದು/ಕಡಿತಗೊಳಿಸುವಿಕೆಗಾಗಿ ನಿಷ್ಕ್ರಿಯಗೊಳಿಸಲಾದ ಚಂದಾದಾರರ ಸೆಲ್ಯುಲಾರ್ ಮೊಬೈಲ್ ದೂರವಾಣಿ ಸಂಪರ್ಕವನ್ನು ಯಾವುದೇ ಇತರ ಚಂದಾದಾರರಿಗೆ ಹಂಚಿಕೆ ಮಾಡಲಾಗುವುದಿಲ್ಲ ಎಂದು ತಿಳಿಸಿದೆ. ಅದರಂತೆ 90 ದಿನಗಳ ಕನಿಷ್ಠ ಅವಧಿಯ ಮುಕ್ತಾಯದ ನಂತರ ಈ ಸಂಖ್ಯೆಗಳನ್ನು ಮರು ಹಂಚಿಕೆ ಮಾಡುವುದಕ್ಕೆ ಅವಕಾಶವಿದೆ.

ಮೊಬೈಲ್‌ ನಂಬರ್‌ ಬದಲಾಯಿಸುವವರ ಗಮನಕ್ಕೆ! ಸುಪ್ರೀಂಕೋರ್ಟ್‌ ನೀಡಿದ ಎಚ್ಚರಿಕೆ ಏನು?

ನಿಷ್ಕ್ರಿಯಗೊಳಿಸಿದ ಸಂಖ್ಯೆಗಳ ಡೇಟಾದ ಬಗ್ಗೆ ವಾಟ್ಸಾಪ್‌ ಹೇಳೋದೇನು?
ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ವಾಟ್ಸಾಪ್‌ ಖಾತೆಗಳನ್ನು ಸಾಮಾನ್ಯವಾಗಿ 120 ದಿನಗಳ ನಿಷ್ಕ್ರಿಯತೆಯ ನಂತರ ಡಿಲೀಟ್‌ ಮಾಡಲಿದೆ. ಅಂದರೆ ಸತತ 120 ದಿನಗಳ ವರೆಗೆ ಬಳಕೆ ಮಾಡದೇ ಹೋದರೆ ಅದು ನಿಷ್ಕ್ರಿಯವಾಗಲಿದೆ. ಆದರೆ ವಾಟ್ಸಾಪ್‌ ಅಕೌಂಟ್‌ ಅನ್ನು ಡಿಲೀಟ್‌ ಮಾಡುವ ಮೊದಲು ಬಳಕೆದಾರರ ಸಾಧನದಲ್ಲಿ ಸ್ಥಳೀಯವಾಗಿ ಸಂಗ್ರಹಿಸಲಾದ ವಿಷಯವು ಸಾಧನದಿಂದ ವಾಟ್ಸಾಪ್‌ ಅನ್ನು ಡಿಲೀಟ್‌ ಮಾಡುವ ತನಕ ಉಳಿಸಿರುತ್ತದೆ. ಒಂದು ವೇಳೆ ಬಳಕೆದಾರರು ಅದೇ ಡಿವೈಸ್‌ನಲ್ಲಿ ವಾಟ್ಸಾಪ್‌ ಅಕೌಂಟ್‌ ಅದೇ ಸಂಖ್ಯೆಯಿಂದ ರಿಜಿಸ್ಟರ್‌ ಮಾಡಿಕೊಂಡರೆ ಲೋಕಲ್‌ ಡಿವೈಸ್‌ನಲ್ಲಿ ಸೇವ್‌ ಆದ ಕಂಟೆಂಟ್‌ ಕಾಣಿಸಿಕೊಳ್ಳುತ್ತದೆ.

Best Mobiles in India

English summary
Supreme Court has an important 'warning' related to WhatsApp for prepaid mobile users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+