ಮೊಬೈಲ್ ಬಗ್ಗೆ ಸಾರ್ವಜನಿಕ ಅರ್ಜಿ!..ಜನರ ತಲೆಕೆಡಿಸಿದ ಕೋರ್ಟ್ ನಿರ್ದೇಶನ!!

  |

  5G ವಿಕಿರಣಗಳು ಮಾನವನ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ವರದಿಯಾದ ನಂತರ ಮೊಬೈಲ್ ಫೋನುಗಳು ಹೊರಸೂಸುವ ಅಪಾಯಕಾರಿ ವಿಕರಣದತ್ತ ನ್ಯಾಯಾಲಯದ ಗಮನ ಸೆಳೆಯಲು ಸಾರ್ವಜನಿಕ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಆದರೆ, ಇದಕ್ಕೆ ನ್ಯಾಯಪೀಟ ಕುತೋಹಲಕಾರಿ ನಿರ್ದೇಶನ ನೀಡಿ ಗಮನ ಸೆಳೆದಿದೆ.

  ಹೌದು, ಮೊಬೈಲ್‌ ಅಪಾಯಕಾರಿ ವಿಕರಣಗಳ ಬಗ್ಗೆ ಗಮನ ಸೆಳೆಯುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರಿಗೆ ಮಧ್ಯಪ್ರದೆಶ ಹೈಕೊರ್ಟ್ ಕುತೋಹಲಕಾರಿ ನಿರ್ದೇಶನ ನೀಡಿದೆ. ಅಪಾಯಕಾರಿ ವಿಕರಣದತ್ತ ನ್ಯಾಯಾಲಯದ ಗಮನ ಸೆಳೆಯಲು ಅರ್ಜಿ ಸಲ್ಲಿಸಿದ್ದವರು ಅವರ ಮೊಬೈಲ್‌ಗಳನ್ನು ತನ್ನ ವಶಕ್ಕೆ ನೀಡುವಂತೆ ಹೇಳಿರುವುದು ಇದೀಗ ಚರ್ಜೆಗೆ ಗ್ರಾಸವಾಗಿದೆ.

  ಮೊಬೈಲ್ ಬಗ್ಗೆ ಸಾರ್ವಜನಿಕ ಅರ್ಜಿ!..ಜನರ ತಲೆಕೆಡಿಸಿದ ಕೋರ್ಟ್ ನಿರ್ದೇಶನ!!

  ಮುಖ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲ ಅವರನ್ನು ಒಳಗೊಂಡಿದ್ದ ನ್ಯಾಯಪೀಟ ಇಂತಹ ನಿರ್ದೇಶನ ನೀಡಿ ಗಮನಸೆಳೆದಿದ್ದು, ಹಾಗಾದರೆ, ಏನಿದು ವರದಿ? ಅರ್ಜಿ ಸಲ್ಲಿಸಿದವರ ಮೊಬೈಲ್‌ಗಳನ್ನು ವಶಕ್ಕೆ ನೀಡುವಂತೆ ಕೇಳಿರುವುದು ಏಕೆ? 5G ವಿಕಿರಣಳ ಅಪಾಯಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೊಬೈಲ್ ವಿಕಿರಣಗಳ ಸಮಸ್ಯೆ!

  ಮೊಬೈಲ್ ವಿಕಿರಣಗಳಿಂದಾಗಿ ಈಗಾಗಲೇ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ಗಳು ಅಪಾಯಕಾರಿಯೇ ಆಗಿವೆ. ನೆಟ್‌ವರ್ಕ್‌ಗಳು ರೇಡಿಯೇಶನ್‌ನಿಂದ ನಮ್ಮ ತಲೆಯೇ ತಿರುಗುತ್ತದೆ.ತರಂಗಾಂತರಗಳಿಂದಾಗಿ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.

  ಗಮನ ಸೆಳೆಯಲು ಸಾರ್ವಜನಿಕ ಅರ್ಜಿ!

  ಮೊಬೈಲ್ ಅಪಾಯಕಾರಿ ವಿಕಿರಣಗಳಿಂದಾಗಿ ಮಾನವ ಮತ್ತು ಇತರೆ ಜೀವ ಸಂಕುಲದ ಮೇಲೆ ದೀರ್ಘ‌ಕಾಲೀನ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲು ಸಾರ್ವಜನಿಕ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಇದು ಕೋರ್ಟ್ ಅನ್ನು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿರುವುದು ಕೋರ್ಟ್ ನೀಡಿರುವ ವಿಚಿತ್ರ ನಿರ್ದೇಶನದಿಂದ ತಿಳಿದುಬಂದಿದೆ.

  ಕೋರ್ಟ್ ಹೇಳಿರುವುದೇನು?

  ಈ ಬಗ್ಗೆ ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆ, ನ್ಯಾಯಪೀಟ ಈ ಅರ್ಜಿಯನ್ನು ತಿರಸ್ಕರಿಸುವ ಬದಲು ಅರ್ಜಿ ಸಲ್ಲಿಸಿದ್ದವರು ಅವರ ಮೊಬೈಲ್‌ಗಳನ್ನು ತನ್ನ ವಶಕ್ಕೆ ನೀಡುವಂತೆ ಹೇಳಿದೆ. ನ್ಯಾಯಾಲಯದ ಆದೇಶವನ್ನು ನಿರೀಕ್ಷಿಸುವ ಮೊದಲು ಅರ್ಜಿದಾರನು ಅಪಾಯಕಾರಿ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ಅವರ ಮೊಬೈಲ್ ಅವರು ಸಿದ್ದರಾದ್ದಾರೆಯೇ ಎಂದು ಪ್ರಶ್ನಿಸಿದೆ.

  ತೀರ್ಮಾನ ಅರ್ಜಿದಾರರ ಮೇಲಿದೆ!

  ಮೊಬೈಲ್ ಅಪಾಯಕಾರಿ ವಿಕಿರಣಗಳ ಬಗ್ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಇದೀಗ ತಮ್ಮ ಮೊಬೈಲ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣ ಮುಂದಿನ ವಿಚಾರಣೆ ನಡೆಯುವ ಮೊದಲು ಅವರು ತಮ್ಮ ಮೊಬೈಲ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವ ತೀರ್ಮಾನವನ್ನು ಕೈಗೊಳ್ಳಬೇಕಿದೆ.

  ಕುತೋಹಲ ಮೂಡಿಸಿದೆ ಪ್ರಕರಣ!

  ಅರ್ಜಿ ಸಲ್ಲಿಸಿರುವ ಅರ್ಜಿದಾರರು ಇದೀಗ ತಮ್ಮ ಮೊಬೈಲ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವ ಅನಿವಾರ್ಯತೆ ಇರುವ ಪ್ರಕರಣ ಈಗ ಕುತೋಹಲ ಕೆರಳಿಸಿದೆ. ಅರ್ಜಿದಾರರನು ಮೊಬೈಲ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವರೇ? ಒಂದು ಒಪ್ಪಿಸಿದರೆ ನ್ಯಾಯಪೀಟ ತೆಗೆದುಕೊಳ್ಳಬಹುದಾದ ಕ್ರಮಗಳು ಯಾವುವು ಎಂಬ ಹಲವು ಪ್ರಶ್ನೆಗಳು ಈಗ ಎಲ್ಲರ ತಲೆಯಲ್ಲಿ ಕೊರೆಯುತ್ತಿವೆ.

  2020ರ ವೇಳೆಗೆ 5G!

  ಇಡೀ ವಿಶ್ವವೇ 5G ತಂತ್ರಜ್ಞಾನಕ್ಕಾಗಿ ಎದುರುನೋಡುತ್ತಿದೆ. ಭಾರತವೂ ಸೇರಿದಂತೆ ಬಹುತೇಕ ದೇಶಗಳು 5ಜಿ ನೆಟ್‌ವರ್ಕ್‌ ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿವೆ. 2020ರ ವೇಳೆಗೆ ಬಹುತೇಕ ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಲ್ಲಿ 5ಜಿ ಜನಸಾಮಾನ್ಯರ ಬಳಕೆಗೆ ಲಭ್ಯವಿರುತ್ತದೆ ಎನ್ನುತ್ತಿವೆ ವರದಿಗಳು.

  ಏನಿದು 5G ನೆಟ್‌ವರ್ಕ್?

  ಸಾಮಾನ್ಯವಾಗಿ ಪ್ರತಿ ಜನರೇಶನ್ ಟೆಕ್ನಾಲಜಿಗೂ ಒಂದೊಂದು ಫ್ರೀಕ್ವೆನ್ಸಿಯನ್ನು ನಿಗದಿಸಲಾಗಿದೆ. ಈಗಾಗಲೇ 4ಜಿಗೆ 300 ಮೆಗಾಹರ್ಟ್ಸ್ನಿಂದ 3 ಗಿಗಾಹರ್ಟ್ಸ್ ತನಕದ ಫ್ರೀಕ್ವೆನ್ಸಿ ನಿಗದಿಪಡಿಸಲಾಗಿದೆ. ಇದೇ ರೀತಿ 5ಜಿಗೆ 30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ತರಂಗಾಂತರ ನಿಗದಿಸಲಾಗಿದೆ. ಇದರ ಮೇಲೆ ಸಂಶೋಧನೆಗಳು ನಡೆಯುತ್ತಿವೆ.

  5G ಬಂದರೆ ಹೇಗಿರಲಿದೆ?

  5G ತಂತ್ರಜ್ಞಾನ ಈಗಿರುವ 4ಜಿ ನೆಟ್‌ವರ್ಕ್‌ಗಿಂತ ಸ್ವಲ್ಪ ಭಿನ್ನ. 10 ರಿಂದ 100 ಪಟ್ಟು ಹೆಚ್ಚು ವೇಗದಲ್ಲಿ ಡೇಟಾ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ಹೆಚ್‌ಡಿ ಪ್ಲಸ್ ವಿಡಿಯೋಗಳನ್ನು 4ಜಿ ನೆಟ್‌ವರ್ಕ್‌ಗಿಂತ 100 ಪಟ್ಟು ವೇಗವಾಗಿ ಪ್ಲೇ ಮಾಡುತ್ತದೆ. ಇದು 4ಜಿ ನೆಟ್‌ವರ್ಕ್‌ನ ಮುಂದುವರೆದ ತಂತ್ರಜ್ಞಾನವೇ ಆಗಿದೆ.

  3G, 4G ಗಿಂತ 5G ಅಪಾಯಕಾರಿ.!

  ಎಲ್ಲಾ ಮೊಬೈಲ್‌ ನೆಟ್‌ವರ್ಕ್‌ಗಳು ಅಪಾಯಕಾರಿಯೇ ಆಗಿವೆ. ನೆಟ್‌ವರ್ಕ್‌ಗಳು ರೇಡಿಯೇಶನ್‌ನಿಂದ ನಮ್ಮ ತಲೆಯೇ ತಿರುಗುತ್ತದೆ.ತರಂಗಾಂತರಗಳಿಂದಾಗಿ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಈಗಾಗಲೇ ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ಸಿಲುಕಿರುವ ಜನರಿಗೆ 5G ಎಂಬ ಪೆಡಂಭೂತ ಎದುರಾಗುತ್ತಿದೆ.

  ವೈಜ್ಞಾನಿಕವಾಗಿ ಸಾಬೀತು!

  ರೇಡಿಯೇಶನ್‌ನಿಂದಾಗಿ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಇಷ್ಟು ದಿನ 4ಜಿ ಟವರ್‌ಗಳಿಂದ ತಲೆ ತಪ್ಪಿಸಿಕೊಂಡಿದ್ದಿರಿ. ಆದರೆ ಇನ್ನು ಹಾಗಾಗಲು ಸಾಧ್ಯವಿಲ್ಲ. ಏಕೆಂದರೆ, 5G ರೇಡಿಯೇಶನ್‌ನಿಂದ ನಾವು ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದ್ದಾರೆ.

  ಹೆಚ್ಚು ಅಪಾಯಕಾರಿ ಏಕೆ?

  ಪ್ರತಿ ಜನರೇಶನ್ ಟೆಕ್ನಾಲಜಿಗೂ ನಿಗದಿಸಲಾಗಿರುವ ತರಂಗಾಂತರಗಳನ್ನು ಮಿಲಿಮೀಟರ್‌ ಅಲೆಗಳು ಎಂದು ಕರೆಯಲಾಗುತ್ತದೆ. ಇದರ ದೊಡ್ಡ ಸಮಸ್ಯೆಯೆಂದರೆ ಅಲೆಗಳ ಫ್ರೀಕ್ವೆನ್ಸಿ ಹೆಚ್ಚಿದಷ್ಟೂ ಅವು ಸಾಗುವ ದೂರ ಕಡಿಮೆಯಾಗುತ್ತದೆ. 5G ತಂತ್ರಜ್ಞಾನ ಅಭಿವೃದ್ದಿಯಾದರೆ, ಈಗಿರುವ ನೆಟ್‌ವರ್ಕ್‌ಗಳಿಗಿಂತ ಹೆಚ್ಚು ಗೋಪುರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

  ಚರ್ಮ ಕೂಡ ಫ್ರೀಕ್ವೆನ್ಸಿ ಗ್ರಹಿಸುತ್ತದೆ!

  30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ಮಿಲಿಮೀಟರ್‌ ಅಲೆಗಳು 5ಜಿಗಾಗಿ ಇರಲಿವೆ. ಈ ಮಿಲಿಮೀಟರ್‌ ಅಲೆಗಳು ಎಷ್ಟು ಶಕ್ತಿಶಾಲಿ ಎಂದರೆ, ನಮ್ಮ ಮೈ ಮೇಲಿನ ಚರ್ಮ ಕೂಡ ಈ ಫ್ರೀಕ್ವೆನ್ಸಿಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದರಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಗಳು ಬೀರುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  A group of public-spirited citizens who filed a PIL in the Madhya Pradesh High Court to control ‘harms’ caused by mobile phone usage has been asked by the Court to demonstrate the weight of their concern by surrendering their own mobile phones.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more