ಅಶ್ಲೀಲ ವೀಡಿಯೊ ನಿಷೇಧಕ್ಕೆ ದೇಶದೆಲ್ಲೆಡೆ ಅಸಮಾಧಾನ

By Shwetha
|

ಭಾರತದಲ್ಲಿ ಲಭ್ಯವಿರುವ ಆನ್‌ಲೈನ್ ವಿಷಯಗಳನ್ನು ಸ್ವಚ್ಛ ಮಾಡುವ ಮಹತ್ತರ ಕಾರ್ಯವನ್ನು ಮೋದಿ ಸರಕಾರವು ಕೈಗೆತ್ತಿಕೊಂಡಿದ್ದು ಸಂಪೂರ್ಣ ಅಶ್ಲೀಲ ವೀಡಿಯೊಗಳನ್ನು ತೊಡೆದು ಹಾಕುವ ಕೈಂಕರ್ಯಕ್ಕೆ ಸಜ್ಜಾಗಿದೆ. ಸರಕಾರವು ಅಶ್ಲೀಲ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿದ್ದು ಇಂಟರ್ನೆಟ್ ಒದಗಿಸುವವರಲ್ಲಿ ಅದನ್ನು ಬ್ಲಾಕ್ ಮಾಡುವಂತೆ ವಿನಂತಿಸಿಕೊಂಡಿದೆ.

ಓದಿರಿ: ಬೆಂಗಳೂರು ಪೋಲೀಸರು ಇನ್ನು ವಾಟ್ಸಾಪ್‌ನಲ್ಲಿ 24x7 ಡ್ಯೂಟಿ

ಇಂಟರ್ನೆಟ್ ವೇಗದಲ್ಲಿ ಕೊರತೆ ಸಂಭವಿಸುತ್ತಿರುವುದರಿಂದ ಸರಕಾರವು ಇಂಟರ್ನೆಟ್ ಮತ್ತು ಮೊಬೈಲ್ ಸಂಘಟನೆಗಳನ್ನು ಪಟ್ಟಿಯನ್ನು ತಯಾರಿಸುವಂತೆ ಕೇಳಿಕೊಂಡಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳಿ.

ರವಿ ಶಂಕರ್ ಪ್ರಸಾದ್

ರವಿ ಶಂಕರ್ ಪ್ರಸಾದ್

ಟೆಲಿಕಾಮ್ ಮತ್ತು ಐಟಿ ಸಚಿವರಾದ ರವಿ ಶಂಕರ್ ಪ್ರಸಾದ್ ಪ್ರಕಾರ ಅಶ್ಲೀಲ ವೀಡಿಯೊಗಳು ಇತರ ದೇಶಗಳಲ್ಲಿ ಕಾನೂನುಪೂರಕವಾಗಿದ್ದರೂ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಕಟ್ಟುಪಾಡುಗಳಿಗೆ ಅನುಗುಣವಾಗಿ ವೀಡಿಯೊಗಳ ವೀಕ್ಷಣೆಯನ್ನು ನಡೆಸಬೇಕಾಗಿದೆ.

ಫಿಲ್ಟರ್‌ಗಳ ಬಳಕೆ

ಫಿಲ್ಟರ್‌ಗಳ ಬಳಕೆ

ವೀಡಿಯೊ ವೀಕ್ಷಣೆಯ ಸಮಯದಲ್ಲಿ ಫಿಲ್ಟರ್‌ಗಳ ಬಳಕೆಯನ್ನು ಮಾಡುವುದರಿಂದ ಯುವ ಜನಾಂಗದ ಮೇಲೆ ಪರಿಣಾಮವನ್ನು ಬೀರುವುದಿಲ್ಲ.

ಚೀನಾದಲ್ಲಿ ನಿಷೇಧ

ಚೀನಾದಲ್ಲಿ ನಿಷೇಧ

ಚೀನಾದಲ್ಲಿ ಇಂತಹ ವೀಡಿಯೊಗಳ ಮೇಲೆ ಕಡ್ಡಾಯ ನಿಷೇಧವನ್ನು ಹೇರಲಾಗಿದೆ.

ಮೌಲ್ಯಗಳಿಗೆ  ಧಕ್ಕೆ

ಮೌಲ್ಯಗಳಿಗೆ ಧಕ್ಕೆ

ದೇಶದ ಮೌಲ್ಯಗಳಿಗೆ ಅಶ್ಲೀಲ ವೀಡಿಯೊಗಳು ಧಕ್ಕೆಯನ್ನುಂಟು ಮಾಡುವುದರಿಂದ ಆ ರೀತಿಯ ವಿಷಯಗಳನ್ನು ಬ್ಲಾಕ್ ಮಾಡುವುದು ಅಗತ್ಯವಾಗಿದೆ.

40 ಮಿಲಿಯನ್

40 ಮಿಲಿಯನ್

ಜಗತ್ತಿನಲ್ಲಿ 40 ಮಿಲಿಯನ್ ಪೋರ್ನ್ ವೆಬ್‌ಸೈಟ್‌ಗಳಿದ್ದು ಭಾರತದ ಹೊರಗೆ ಇದು ಹೆಚ್ಚು ಸಕ್ರಿಯವಾಗಿದೆ.

ಹೆಚ್ಚಿನ ಪರಿಣಾಮ

ಹೆಚ್ಚಿನ ಪರಿಣಾಮ

ಯುವ ಜನಾಂಗದ ಮೇಲೆ ಇಂತಹ ಅಶ್ಲೀಲ ವೆಬ್‌ಸೈಟ್‌ಗಳು ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತವೆ.

ವೀಡಿಯೊಗಳ ವೀಕ್ಷಣೆ

ವೀಡಿಯೊಗಳ ವೀಕ್ಷಣೆ

ಕೆಲವೊಂದು ನಿರ್ಬಂಧಗಳನ್ನು ಇಂತಹ ವೆಬ್‌ಸೈಟ್‌ಗಳು ಒಳಗೊಂಡಿದ್ದರೂ ಅದನ್ನು ಸುಲಭವಾಗಿ ಮುರಿದು ಇಂತಹ ವೀಡಿಯೊಗಳ ವೀಕ್ಷಣೆಯನ್ನು ಇದೀಗ ಮಾಡಲಾಗುತ್ತಿದೆ.

ಕಟ್ಟುಪಾಡುಗಳನ್ನು ವಿಧಿಸಿ

ಕಟ್ಟುಪಾಡುಗಳನ್ನು ವಿಧಿಸಿ

ಇಂತಹ ವೀಡಿಯೊಗಳ ಸಂಪೂರ್ಣ ನಿರ್ಬಂಧನೆಯನ್ನು ಮಾಡುವ ಬದಲಿಗೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಿ ಅವುಗಳ ವೀಕ್ಷಣೆಗೆ ಅನುವು ಮಾಡಿಕೊಡಬೇಕೆಂಬ ಮಾತು ಕೂಡ ಕೇಳಿ ಬರುತ್ತಿದೆ.

ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ

ಮುಂದಿನ ಬಾರಿಯ ಚುನಾವಣೆಯ ಸಮಯದಲ್ಲಿ ಸರಕಾರವು ಅತಿಕಡಿಮೆ ಮತವನ್ನು ಗಳಿಸುತ್ತದೆ ಎಂಬುದು ಸರಕಾರದ ನಿಷೇಧವನ್ನು ಕುರಿತು ಚಲನ ಚಿತ್ರ ನಿರ್ಮಾಪಕ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮಾತಾಗಿದೆ.

Best Mobiles in India

English summary
ಭಾರತದಲ್ಲಿ ಲಭ್ಯವಿರುವ ಆನ್‌ಲೈನ್ ವಿಷಯಗಳನ್ನು ಸ್ವಚ್ಛ ಮಾಡುವ ಮಹತ್ತರ ಕಾರ್ಯವನ್ನು ಮೋದಿ ಸರಕಾರವು ಕೈಗೆತ್ತಿಕೊಂಡಿದ್ದು ಸಂಪೂರ್ಣ ಅಶ್ಲೀಲ ವೀಡಿಯೊಗಳನ್ನು ತೊಡೆದು ಹಾಕುವ ಕೈಂಕರ್ಯಕ್ಕೆ ಸಜ್ಜಾಗಿದೆ. ಸರಕಾರವು ಅಶ್ಲೀಲ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿದ್ದು ಇಂಟರ್ನೆಟ್ ಒದಗಿಸುವವರಲ್ಲಿ ಅದನ್ನು ಬ್ಲಾಕ್ ಮಾಡುವಂತೆ ವಿನಂತಿಸಿಕೊಂಡಿದೆ.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X