'ಸ್ವಿಗ್ಗಿ ಗೋ' ಸೇವೆಗೆ ಬೆಂಗಳೂರಿಗರು ಫಿದಾ ಆಗೋದು ಗ್ಯಾರಂಟಿ!

|

ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾಗಿರುವ ಸ್ವಿಗ್ಗಿ ಸಂಸ್ಥೆಯು ಇದೀಗ 'ಸ್ವಿಗ್ಗಿ ಗೋ' ಎಂಬ ಹೊಸ ಸೇವೆಯೊಂದನ್ನು ಪ್ರಾರಂಭಿಸಿದೆ. ಇದೇ ಬುಧವಾರದಿಂದ ನಗರದಾದ್ಯಂತ ಎಲ್ಲಿಯಾದರೂ ಪ್ಯಾಕೇಜ್‌ಗಳನ್ನು ಕಳುಹಿಸಲು ತ್ವರಿತ ಪಿಕ್ ಅಪ್ ಮತ್ತು ಡ್ರಾಪ್ ಸೇವೆಯನ್ನು ಈ 'ಸ್ವಿಗ್ಗಿ ಗೋ' ಒದಗಿಸಲಿದೆ. ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ಭರವಸೆಯ ಮೂಲಕ ಹೊಸ ಸೇವೆಯನ್ನು ಆರಂಭಿಸಲಾಗಿದೆ ಎಂದು ಸ್ವಿಗ್ಗಿ ಸಂಸ್ಥೆ ತಿಳಿಸಿದೆ.

ಸೂಕ್ತ ಮಾಲೀಕನಿಗೆ ತಲುಪಿಸಲು

ಈ ಸ್ವಿಗ್ಗಿ ಗೋ ಸೇವೆಯನ್ನು ಲಾಂಡ್ರಿಯನ್ನು ಒಯ್ಯಲು, ರವಾನಿಸಲು, ಮರೆತುಹೋಗಿರುವ ಕೀಲಿಕೈಗಳನ್ನು ಸೂಕ್ತ ಮಾಲೀಕನಿಗೆ ತಲುಪಿಸಲು, ಮನೆಯಿಂದ ಕಚೇರಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಲು ಅಥವಾ ಕ್ಲೈಂಟ್‍ಗಳಿಗೆ ಕಡತಗಳು ಅಥವಾ ಪಾರ್ಸೆಲ್‍ಗಳನ್ನು ತಲುಪಿಸಲು ಹೀಗೆ ನಾನಾ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದ್ದು, ಗ್ರಾಹಕರು ಸುಲಭವಾಗಿ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

ಒಂದು ಗಂಟೆಯೊಳಗೆ

ಸ್ವಿಗ್ಗಿ ಗೋ ಕೂಡ ಬಳಕೆದಾರರ ಮನೆ ಬಾಗಿಲಿಗೆ ದಿನಸಿ ವಸ್ತುಗಳು, ಹೂಗಳು ಮತ್ತು ಔಷಧಿಗಳಂತಹ ಇತರ ವಸ್ತುಗಳನ್ನು ಒಂದು ಗಂಟೆಯೊಳಗೆ ತಲುಪಿಸುವ ಭರವಸೆ ನೀಡುತ್ತದೆ. ಗ್ರಾಹಕರಿಗೆ ಆರಾಮದಾಯಕತೆ ಒದಗಿಸಲು ಮತ್ತು ಅವರ ಸಮಯವನ್ನು ಉಳಿಸುವತ್ತ ಗಮನ ನೆಟ್ಟಿರುವ ಸ್ವಿಗ್ಗಿ, ಸಹಜವಾಗಿಯೇ ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ನೀವು ನಿಮ್ಮ ಸಮಯವನ್ನು ಉಳಿಸಬೇಕು ಅಥವಾ ತುರ್ತಾಗಿ ಸಹಾಯಬೇಕು ಎಂದಾಗ ಸ್ವಿಗ್ಗಿ ಗೋ ನಿಮ್ಮ ಜೊತೆಯಲ್ಲಿರುತ್ತದೆ.

ಸ್ವಿಗ್ಗಿಯ ದೃಷ್ಟಿ.

ಸರಿಸಾಟಿಯಿಲ್ಲದ ಅನುಕೂಲತೆಯನ್ನು ನೀಡುವ ಮೂಲಕ ನಗರ ಗ್ರಾಹಕರ ಜೀವನ ಮಟ್ಟವನ್ನು ಹೆಚ್ಚಿಸುವುದು ಸ್ವಿಗ್ಗಿಯ ದೃಷ್ಟಿ. ಐದು ವರ್ಷಗಳ ಕಾಲ ಆಹಾರ ವಿತರಣೆಯೊಂದಿಗೆ ಇದನ್ನು ಸಕ್ರಿಯಗೊಳಿಸಿದ ನಂತರ ಮತ್ತು ಸ್ವಿಗ್ಗಿ ಸ್ಟೋರ್‌ಗಳೊಂದಿಗೆ ನಗರದಾದ್ಯಂತ ಮಳಿಗೆಗಳನ್ನು ಸ್ಥಾಪಿಸಿದೆ. ಇದೀಗ ಸ್ವಿಗ್ಗಿ ಗೋ ನಗರದ ಎಲ್ಲ ಗ್ರಾಹಕರಿಗೆ ಸ್ವಿಗ್ಗಿ ವಿತರಣಾ ಸೂಪರ್ ಪವರ್ ಅನ್ನು ತೆರೆಯುತ್ತದೆ ಎಂದು ಸ್ವಿಗ್ಗಿ ಸಿಇಒ ಶ್ರೀಹರ್ಷ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಸ್ವಿಗ್ಗಿ ಸ್ಟೋರ್‌

ಸ್ವಿಗ್ಗಿಯಿಂದ ಆಹಾರ ಮಾತ್ರವಲ್ಲದೆ ಎಲ್ಲದಕ್ಕೂ ವಿತರಣೆಯನ್ನು ಪಡೆದ ದೇಶದ ಮೊದಲ ನಗರವಾಗಿ ಬೆಂಗಳೂರು ಕಾಣಿಸಿಕೊಂಡಿರುವುದು ಸಂತೋಷದ ವಿಷಯ. 2020ರ ಹೊತ್ತಿಗೆ ನಾವು ಸ್ವಿಗ್ಗಿ ಗೋವನ್ನು 300 ಕ್ಕೂ ಹೆಚ್ಚು ನಗರಗಳಿಗೆ ಮತ್ತು ಸ್ವಿಗ್ಗಿ ಸ್ಟೋರ್‌ಗಳನ್ನು ಎಲ್ಲಾ ಪ್ರಮುಖ ಮಹಾನಗರಗಳಿಗೆ ವಿಸ್ತರಿಸುತ್ತೇವೆ. ತನ್ನ ಬೇಡಿಕೆಯ ವಿತರಣಾ ಸೇವೆಯಾದ ಸ್ವಿಗ್ಗಿ ಸ್ಟೋರ್‌ಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಸ್ತರಿಸುವುದಾಗಿ ಶ್ರೀಹರ್ಷ ಅವರು ಹೇಳಿದ್ದಾರೆ.

Best Mobiles in India

English summary
In Bengaluru, Swiggy Go platform will deliver from any store, including more than 300 merchant-partners. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X