Home
ಸುದ್ದಿಜಾಲ

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೆಗಾ ಸೇಲ್: 10 ದಿನ ಭರ್ಜರಿ ಕೊಡುಗೆಗಳು!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ಮೊದಲ ವಾರ್ಷಿಕ ಮೆಗಾ ಸೇಲ್ 'ಕ್ವಿಕ್ ಇಂಡಿಯಾ ಮೂವ್‌ಮೆಂಟ್ 2025' ಅನ್ನು ಘೋಷಿಸಿದೆ. ಈ ಬೃಹತ್ ಮಾರಾಟವು ಸೆಪ್ಟೆಂಬರ್ 19 ರಿಂದ 28ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ದಶಕದಲ್ಲೇ ಅತ್ಯುತ್ತಮ ಶಾಪಿಂಗ್ ಅನುಭವ ನೀಡಲು ಸಜ್ಜಾಗಿದೆ. ಈ ಸೇಲ್‌ನ ವಿಶೇಷವೆಂದರೆ, ಪ್ರತಿ ದಿನ ಸಂಜೆ 4 ಗಂಟೆಗೆ ಇದು ಆರಂಭವಾಗಲಿದ್ದು, ಗ್ರಾಹಕರು ಇನ್‌ಸ್ಟಾಮಾರ್ಟ್ ಮತ್ತು ಸ್ವಿಗ್ಗಿ ಅಪ್ಲಿಕೇಶನ್‌ಗಳ ಮೂಲಕ ಆಕರ್ಷಕ ಆಫರ್‌ಗಳನ್ನು ಪಡೆಯಬಹುದು. ಅದೂ ಕೂಡ ಕೇವಲ 10 ನಿಮಿಷಗಳಲ್ಲಿ.!

'ಕ್ವಿಕ್ ಇಂಡಿಯಾ ಮೂವ್‌ಮೆಂಟ್ 2025' ಸೇಲ್: ಏನೆಲ್ಲಾ ಪ್ರಯೋಜನಗಳು
ಈ ಮೆಗಾ ಸೇಲ್‌ನಲ್ಲಿ 50,000ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿದ್ದು, 50% ರಿಂದ 90% ರಿಯಾಯಿತಿ ಸಿಗಲಿದೆ. ಎಲೆಕ್ಟ್ರಾನಿಕ್ಸ್, ಅಡುಗೆಮನೆ ಮತ್ತು ಗೃಹೋಪಯೋಗಿ ವಸ್ತುಗಳು, ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು, ಆಟಿಕೆಗಳು ಮತ್ತು ದೈನಂದಿನ ಅಗತ್ಯ ವಸ್ತುಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ರಿಯಾಯಿತಿಗಳು ಇರಲಿವೆ. ಇನ್‌ಸ್ಟಾಮಾರ್ಟ್‌ನ ವಿಶಿಷ್ಟ ವೈಶಿಷ್ಟ್ಯವೆಂದರೆ, ಆರ್ಡರ್ ಮಾಡಿದ ಉತ್ಪನ್ನಗಳು ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಲಿವೆ. ಇದು ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಪಡೆಯಲು ಗ್ರಾಹಕರಿಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಈ ಮಾರಾಟದ ಮತ್ತೊಂದು ಪ್ರಮುಖ ಆಕರ್ಷಣೆ ಸಮಯಯದ ಆಫರ್‌ಗಳು. ಪ್ರತಿದಿನ ಸಂಜೆ 5 ರಿಂದ 7 ಗಂಟೆಯವರೆಗೆ ಆಯ್ದ ಬ್ರ್ಯಾಂಡ್‌ಗಳು ವಿಶೇಷ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿವೆ. ಜೊತೆಗೆ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ 10% ರಿಯಾಯಿತಿ ದೊರೆಯಲಿದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ OnePlus, OPPO, Xiaomi, realme, boAt, JBL ಮತ್ತು Philips ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೆಗಾ ಸೇಲ್: 10 ದಿನ ಭರ್ಜರಿ ಕೊಡುಗೆಗಳು!

ಒನ್‌ಪ್ಲಸ್‌ ನೋರ್ಡ್ CE4 Lite ₹16,999 (MRP ₹18,999), ಒಪ್ಪೋ K13x 5G ₹12,499 (MRP ₹16,999) ಮತ್ತು ರಿಯಲ್‌ಮಿ Narzo 70 Turbo ₹13,999 (MRP ₹19,999)ಗೆ ಲಭ್ಯವಿದೆ. ಲ್ಯಾಪ್‌ಟಾಪ್‌ಗಳಲ್ಲಿ, ಲೆನೊವೊ IdeaPad Slim3 ₹48,999 (MRP ₹70,790) ಮತ್ತು ASUS Vivobook (Ryzen 3, 512 GB SSD) ₹29,999 (MRP ₹44,990)ಗೆ ದೊರೆಯಲಿದೆ. ವೈರ್‌ಲೆಸ್ ಇಯರ್‌ಬಡ್‌ಗಳಲ್ಲಿ boAt Airdopes 311 Pro ₹799 (MRP ₹4,990) ಮತ್ತು OnePlus Nord Buds 2r ₹1,499 (MRP ₹2,299)ಗೆ ಲಭ್ಯವಿದೆ.

ಗೃಹೋಪಯೋಗಿ ವಿಭಾಗದಲ್ಲಿ Prestige, Borosil, ಮತ್ತು Scotch Brite ನಂತಹ ಹೆಸರಾಂತ ಬ್ರ್ಯಾಂಡ್‌ಗಳ ಉತ್ಪನ್ನಗಳು ಸೇಲ್‌ನಲ್ಲಿ ಲಭ್ಯವಿವೆ. ವೈಯಕ್ತಿಕ ಆರೈಕೆಗೆ L'Oréal Paris, Pampers, ಮತ್ತು Philips ನ ಉತ್ಪನ್ನಗಳು ಸಿಗಲಿವೆ. ದೈನಂದಿನ ಅವಶ್ಯಕತೆಗಳಾದ Ariel, Aashirvaad, Haldirams ಮತ್ತು Kellogg's ನಂತಹ ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೂ ರಿಯಾಯಿತಿ ಘೋಷಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸಿಹಿತಿಂಡಿಗಳು ಮತ್ತು Ferrero Rocher ಚಾಕೊಲೇಟ್‌ಗಳನ್ನು ವಿಶೇಷ ಬೆಲೆಯಲ್ಲಿ ಪಡೆಯಬಹುದು.

ಇನ್‌ಸ್ಟಾಮಾರ್ಟ್‌ನ ಈ ಮೊದಲ ವಾರ್ಷಿಕ ಮೆಗಾ ಸೇಲ್ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿಸಲು ಒಂದು ಸುವರ್ಣಾವಕಾಶ. ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಅಥವಾ ದಿನಸಿ ಸಾಮಗ್ರಿಗಳು ಹೀಗೆ ಯಾವುದೇ ಉತ್ಪನ್ನವನ್ನು ಖರೀದಿಸಲು ಇದು ಸೂಕ್ತ ಸಮಯ. ವೇಗದ ವಿತರಣೆ ಮತ್ತು ಭಾರಿ ರಿಯಾಯಿತಿಗಳೊಂದಿಗೆ, ಇನ್‌ಸ್ಟಾಮಾರ್ಟ್ ಹಬ್ಬದ ಶಾಪಿಂಗ್ ಅನ್ನು ಸರಳ ಮತ್ತು ಲಾಭದಾಯಕವಾಗಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿಸಲಾಗಿದೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ ಗ್ರಾಹಕರಿಗೆ ದೊಡ್ಡ ಪ್ರಯೋಜನವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Best Mobiles in India

English summary
Big discounts on smartphones, laptops, and accessories as Swiggy Instamart launches its mega sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+