ಸ್ವಿಗ್ಗಿಯಿಂದ ಕ್ಲೌಡ್ ಕಿಚನ್‌ಗಾಗಿ 175 ಕೋಟಿ ಹೂಡಿಕೆ..!
ಪ್ರಮುಖ ಆಹಾರ ವಿತರಣಾ ಕಂಪನಿ ಸ್ವಿಗ್ಗಿ ಕ್ಲೌಡ್ ಕಿಚನ್‌ಗಳಿಗಾಗಿ ಎರಡು ವರ್ಷದಲ್ಲಿ 175 ಕೋಟಿ ರೂ. ಹೂಡಿಕೆ ಮಾಡಿದೆ. ಸ್ವಿಗ್ಗಿ ಅಕ್ಸೆಸ್ ಉಪಕ್ರಮದಡಿಯಲ್ಲಿ ಭಾರತದ ವಿವಿಧ 14 ನಗರಗಳಲ್ಲಿ ರೆಸ್ಟೋರೆಂಟ್ ಪಾಲುದಾರರ ಜೊತೆ ಸೇರಿ ಸುಮಾರು 1000 ಕ್ಲೌಡ್ ಕಿಚನ್‌ಗಳನ್ನು ನಿರ್ಮಿಸುತ್ತಿದೆ. ಇದಲ್ಲದೇ, ಮಾರ್ಚ್ 2020ರ ಹೊತ್ತಿಗೆ ಹೊಸ 12 ನಗರಗಳಲ್ಲಿ ಕ್ಲೌಡ್ ಕಿಚನ್‌ಗಳಿಗೆ ಹೆಚ್ಚಿನ ಪಾಲುದಾರರನ್ನು ಸೆಳೆಯಲು ಹೆಚ್ಚುವರಿಯಾಗಿ 75 ಕೋಟಿ ರೂ. ಹೂಡಿಕೆ ಮಾಡುವುದಾಗಿ ಸ್ವಿಗ್ಗಿ ಹೇಳಿದೆ.

ಮಾರುಕಟ್ಟೆ ವಿಸ್ತರಣೆ
ಕ್ಲೌಡ್ ಕಿಚನ್‌ಗಳ ಮೂಲಕ ರೆಸ್ಟೋರೆಂಟ್ ಪಾಲುದಾರರು ತಮ್ಮ ಮಾರುಕಟ್ಟೆಯನ್ನು ನಗರದೊಳಗಿನ ಹೆಚ್ಚಿನ ಸ್ಥಳಗಳಿಗೆ ಮತ್ತು ಹೊಸ ನಗರಗಳಿಗೆ ಸ್ವಿಗ್ಗಿ ಅಕ್ಸೆಸ್ ಉಪಕ್ರಮದ ಮೂಲಕ ವಿಸ್ತರಿಸಬಹುದು. 14 ನಗರಗಳಲ್ಲಿ ಸುಮಾರು ಮಿಲಿಯನ್ ಚದರ ಅಡಿ ಜಾಗದ ಮೇಲೆ ಸ್ವಿಗ್ಗಿ ಹೂಡಿಕೆ ಮಾಡಿದ್ದು, ಬೃಹತ್, ಮಧ್ಯಮ ಮತ್ತು ಸಣ್ಣ ರೆಸ್ಟೋರೆಂಟ್ ಪಾಲುದಾರರು ತಮ್ಮ ಮಾರುಕಟ್ಟೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಲು ಸಹಾಯ ಮಾಡಿದೆ.

ವೇಗದ ಬೆಳವಣಿಗೆ
ಕಳೆದ 2-3 ವರ್ಷಗಳಲ್ಲಿ ಆನ್‌ಲೈನ್ ಫುಡ್ ಆರ್ಡರಿಂಗ್ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬೆಳವಣಿಗೆಯಾಗಿದ್ದು, ಭಾರತದಲ್ಲಿ ರೆಸ್ಟೋರೆಂಟ್‌ಗೆ ಬಂದು ಆಹಾರ ಸೇವಿಸುವ ಸಂಸ್ಕೃತಿ ಬದಲಾಗಿದ್ದು, ಬಹಳಷ್ಟು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಸ್ಪರ್ಧೆ ನೀಡುತ್ತಿದೆ. ಆಹಾರ ವಿತರಣೆಯ ಭವಿಷ್ಯದ ಭಾಗವಾಗಿ ಸ್ವಿಗ್ಗಿ ಯಾವಾಗಲೂ ಕ್ಲೌಡ್ ಕಿಚನ್‌ಗಳನ್ನು ಉಲ್ಲೇಖಿಸುತ್ತದೆ ಎಂದು ಸ್ವಿಗ್ಗಿಯ ಹೊಸ ಪೂರೈಕೆದಾರ ಸಿಇಒ ವಿಶಾಲ್ ಭಾಟೀಯಾ ಹೇಳಿದ್ದಾರೆ.

ಭಾರತ ದ್ವಿತೀಯ
ಅತಿ ಶೀಘ್ರದಲ್ಲಿಯೇ ಚೀನಾ ನಂತರದಲ್ಲಿ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಕ್ಲೌಡ್ ಕಿಚನ್‌ಗಳನ್ನು ಹೊಂದಿದ ಎರಡನೇ ರಾಷ್ಟ್ರವಾಗಲಿದೆ ಎಂದು ಭಾಟೀಯಾ ಹೇಳಿದರು. ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇಟಿಯು ಪೋಡ್‌ಗಳ ಮೇಲೆ ಕಂಪನಿಯು ಹೂಡಿಕೆ ಮಾಡುತ್ತಿದ್ದು, ದೇಶದಲ್ಲಿನ ಪೂರೈಕೆಯ ಅಂತರವನ್ನು ಇಳಿಸುತ್ತೇವೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಈ ಯೋಜನೆಯ ಘೋಷಣೆಯಾಗಿದೆ.

ಉದ್ಯೋಗವಕಾಶ ಸೃಷ್ಟಿ
ಸ್ವಿಗ್ಗಿ ಅಕ್ಸೆಸ್ ಮೂಲಕ ಮೆಟ್ರೋ ಸಿಟಿ, ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ರೆಸ್ಟೋರೆಂಟ್ ವ್ಯವಹಾರವನ್ನು ವೃದ್ಧಿಸುವುದು, ಗ್ರಾಹಕರಿಗೆ ಅದ್ಭುತ ಅನುಭವ ನೀಡುವುದು ಮತ್ತು ಉದ್ಯೋಗವಕಾಶಗಳನ್ನು ಸೃಷ್ಟಿಸುವುದು ಸ್ವಿಗ್ಗಿ ಉದ್ದೇಶವಾಗಿದೆ ಎಂದು ಭಾಟೀಯಾ ಹೇಳಿದರು. ಕಳೆದ 2 ವರ್ಷಗಳಲ್ಲಿ ಸ್ವಿಗ್ಗಿ 8,000 ಪ್ರತ್ಯಕ್ಷ ಹಾಗೂ ಪರೋಕ್ಷಷ ಉದ್ಯೋಗಗಳನ್ನು ಕ್ಲೌಡ್ ಕಿಚನ್ ಉಪಕ್ರಮದ ಮೂಲಕ ಸೃಷ್ಟಿಸಿದೆ. ಇನ್ನು, ಕ್ಲೌಡ್ ಕಿಚನ್‌ನಲ್ಲಿ ಸಾವಿರ ಪಾಲುದಾರರನ್ನು ಹೊಂದಿದರೆ ಮುಂದಿನ 6 ತಿಂಗಳಲ್ಲಿ 7,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿಶಾಲ್ ಭಾಟೀಯಾ ಹೇಳಿದ್ದಾರೆ.


Click it and Unblock the Notifications








