ಶೀಘ್ರದಲ್ಲೇ ಸ್ವಿಗ್ಗಿಯಿಂದ ಡ್ರೋನ್‌ ಮೂಲಕ ಫುಡ್‌ ಡೆಲಿವರಿ ಸೇವೆ ಪ್ರಾರಂಭ!

|

ಸ್ವಿಗ್ಗಿ ಸಂಸ್ಥೆ ಪ್ರಸ್ತುತ ಫುಡ್‌ ಡೆಲಿವರಿ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ತನ್ನ ಗುಣಮಟ್ಟದ ಸೇವೆ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಸ್ವಿಗ್ಗಿ ಶೀಘ್ರದಲ್ಲೇ ಡ್ರೋನ್‌ ಬಳಸಿಕೊಂಡು ಫುಡ್‌‌ ಆರ್ಡರ್‌ ಮಾಡುವುದಕ್ಕೆ ಮುಂದಾಗಿದೆ. ಇನ್ಮುಂದೆ ನೀವು ಫುಡ್‌ ಆರ್ಡರ್‌ ಮಾಡಿದ್ರೆ ನಿಮ್ಮ ಮನೆ ಬಾಗಿಲಿಗೆ ಡ್ರೋನ್‌ ಮೂಲಕ ಫುಡ್‌ ಬರಲಿದೆ. ಇದಕ್ಕಾಗಿ ಸ್ವಿಗ್ಗಿಯ ಡ್ರೋನ್ ವಿತರಣಾ ಪಾಲುದಾರ, ANRA ಟೆಕ್ನಾಲಜೀಸ್, ರಕ್ಷಣಾ ಸಚಿವಾಲಯ (MoD), ಡೈರೆಕ್ಟರೇಟ್ ಜನರಲ್ ಆಫ್ ಏವಿಯೇಷನ್ ​​(DGCA) ಮತ್ತು ನಾಗರಿಕ ವಿಮಾನಯಾನ ಸಚಿವಾಲಯ (MOCA)ದಿಂದ ಅಂತಿಮ ಅನುಮತಿಯನ್ನು ಪಡೆದುಕೊಂಡಿದೆ.

ಸ್ವಿಗ್ಗಿ

ಹೌದು, ಸ್ವಿಗ್ಗಿ ಸಂಸ್ಥೆ ಡ್ರೋನ್‌ ಮೂಲಕ ಫುಡ್‌ ಡೆಲಿವರಿ ಮಾಡುವ ಕಾಲ ಸನ್ನಿಹಿತವಾಗಿದೆ. ಈ ಮೂಲಕ ಭಾರತದಲ್ಲಿ ಕೆಲವು ದಿನಗಳಲ್ಲಿ ಡ್ರೋನ್‌ ಮೂಲಕ್‌ ಫುಡ್‌ ಡೆಲಿವರಿ ಮಾಡುವ ಪ್ರಯೋಗಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಶೀಘ್ರದಲ್ಲೇ ಅಧಿಕೃತ ಡ್ರೋನ್ ಆಹಾರ ವಿತರಣೆಯು ನಿಮ್ಮ ಮನೆ ಬಾಗಿಲಲ್ಲಿಯೇ ಪ್ರಾರಂಭವಾಗುತ್ತದೆ. ಹಾಗಾದ್ರೆ ಸ್ವಿಗ್ಗಿ ಸಂಸ್ಥೆ ಡ್ರೋನ್‌ ಮೂಲಕ ಫುಡ್‌ ಡೆಲಿವರಿ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ವಿಗ್ಗಿ

ಸ್ವಿಗ್ಗಿ ಸಂಸ್ಥೆ ಸದಾ ಹೊಸತನದ ಸೇವೆ ನೀಡುವುದಕ್ಕೆ ಮುಂದಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಡ್ರೋನ್‌ ಮೂಲಕ ಫುಡ್‌ ಆರ್ಡರ್‌ ತಪುಪಿಸುವ ಕೆಲಸಕ್ಕೆ ಮುಂದಾಗಿರೋದು. ಇದಕ್ಕಾಗಿ ಬಿಯಾಂಡ್ ವಿಷುಯಲ್ ಲೈನ್ ಆಫ್ ಸೈಟ್ (ಬಿವಿಎಲ್ಒಎಸ್) ಕಾರ್ಯಾಚರಣೆಗಳಿಗೆ ANRA ಟೆಕ್ನಾಲಜೀಸ್ ಅನುಮತಿ ಪಡೆದಿದೆ ಎಂದು ವರದಿಗಳು ಸೂಚಿಸುತ್ತವೆ. ಜೂನ್ 16 ರಂದು ANRA ಮೊದಲ ಸೋರ್ಟಿಯನ್ನು ಪ್ರಾರಂಭಿಸಿತು. ಅಲ್ಲದೆ ಮುಂದಿನ ಕೆಲವು ವಾರಗಳವರೆಗೆ, ANRA ತಂಡವು BVLOS ಆಹಾರ ಮತ್ತು ವೈದ್ಯಕೀಯ ಪ್ಯಾಕೇಜ್ ವಿತರಣಾ ಪ್ರಯೋಗಗಳನ್ನು ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಕ್ರಮವಾಗಿ ಎಟಾ ಮತ್ತು ರುಪ್‌ನಗರ ಜಿಲ್ಲೆಗಳು ಸೇರಿದಂತೆ ಕೆಲವು ಪ್ರದೇಶಗಳನ್ನು ನಡೆಸಲಿದೆ.

ಸ್ವಿಗ್ಗಿಯೊಂದಿಗೆ

ಅಲ್ಲದೆ ಸ್ವಿಗ್ಗಿಯೊಂದಿಗೆ ಪಾಲುದಾರಿಕೆ ಮಾಡುವುದರ ಜೊತೆಗೆ, ಸಮಗ್ರ ವಾಯುಪ್ರದೇಶ ನಿರ್ವಹಣಾ ಸಂಸ್ಥೆ ವೈದ್ಯಕೀಯ ವಿತರಣೆಗಳಿಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ, ರೋಪರ್‌ನೊಂದಿಗೆ ಸಹಕರಿಸಿದೆ. ಸ್ವಿಗ್ಗಿಯ ಪ್ರಧಾನ ಕಾರ್ಯಕ್ರಮ ವ್ಯವಸ್ಥಾಪಕ ಶಿಲ್ಪಾ ಜ್ಞಾನೇಶ್ವರ ಪ್ರಕಾರ ಈ ಯೋಜನೆಯೊಂದಿಗೆ ಕಂಪನಿಯು "ಡ್ರೋನ್ ತಂತ್ರಜ್ಞಾನದ ದೀರ್ಘ-ಶ್ರೇಣಿಯ ಪ್ರಾವೀಣ್ಯತೆಯನ್ನು ಉತ್ತಮ ಬಳಕೆಗೆ ತರಲು" ಉದ್ದೇಶಿಸಿದೆ. ಅಲ್ಲದೆ ನಮ್ಮ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಪಡೆಯಲು ಲಭ್ಯವಿರುವ ಇತ್ತೀಚಿನ ಮಾರ್ಗಗಳನ್ನು ಅನ್ವೇಷಿಸುವುದು ಸಹಜವಾಗಿದೆ" ಎಂದು ಹೇಳಿದ್ದಾರೆ.

ಟೆಸ್ಟ್

ANRA ಇತ್ತೀಚೆಗೆ ಡ್ರೋನ್‌ ಮೂಲಕ ಪುಡ್‌ ಡೆಲಿವರಿ ಮಾಡುವುದು ಹೇಗೆ ಅನ್ನೊದನ್ನ ಟೆಸ್ಟ್ ಫ್ಲೈಟ್ ವೀಡಿಯೊದಲ್ಲಿ ತೋರಿಸಿದೆ. ಈ ವೀಡಿಯೊದಲ್ಲಿ, ಡ್ರೋನ್ ಒಂದು ಸಣ್ಣ ಆಹಾರ ಪ್ಯಾಕೇಜ್ ಅನ್ನು ಆರಿಸುವುದು, ನಿರ್ದಿಷ್ಟ ದೂರಕ್ಕೆ ಹಾರುವುದು ಮತ್ತು ಪ್ಯಾಕೇಜ್ ತಲುಪಿಸಲು ನೆಲಕ್ಕೆ ಮರಳುವುದು ಕಂಡುಬರುತ್ತದೆ. ಈಗಾಗಲೇ ಕೆಲವು ಕಡ ಡ್ರೋನ್‌ ಮೂಲಕ ಔಷದಿಗಳನ್ನು ತಲುಪಿಸುವ ಕಾರ್ಯ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಫುಡ್‌ ಡೆಲಿವರಿ ಕೂಡ ಸಾಧ್ಯವಾದರೆ ಸ್ವಿಗ್ಗಿ ಹೊಸ ಕ್ರಾಂತಿ ಸೃಷ್ಟಿಸುವುದು ಖಂಡಿತ.

Best Mobiles in India

English summary
Swiggy could soon deliver your food order using drones in India. That’s exciting, isn’t it? Know here when and how the drone food deliveries will begin in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X