Home
ಸುದ್ದಿಜಾಲ

ಈ ಮೂರು ತಿಂಗಳು ಮೊಬೈಲ್ ಸ್ಪಿಚ್ ಆಫ್ ಮಾಡಿ..!

By Srinidhi

ಶಾಲಾ ಮಕ್ಕಳಿಗೆ ರಜೆ ಶುರುವಾಯಿತು ಈ ಹಿನ್ನಲೆಯಲ್ಲಿ ಅವರನ್ನು ಮೈದಾನಗಳಲ್ಲಿ ಆಟವಾಡಲು ಕಳುಹಿಸಿ. ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯೂ ಸಾಧ್ಯವಾಗಲಿದೆ. ಆದರೆ ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಮಾಡಿ. ದಿನೇ ದಿನೇ ಮಕ್ಕಳು ಮೊಬೈಲ್‌ ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದು, ರಜೆಯಲ್ಲಿ ಹೆಚ್ಚು ಮೊಬೈಲ್‌ಗೆ ಅಂಟಿಕೊಂಡರೆ ಮುಂದೆ ಶಾಲೆ ಆರಂಭವಾದಾಗಲು ಗೇಮ್‌ ಆಡುವುದರಲ್ಲೇ ಸಮಯ ಕಳೆಯುತ್ತಾರೆ. ಇದು ಅವರ ಶೈಕ್ಷಣಿಕ ಪ್ರಗತಿಯ ಮೇಲೆ ಗಾಢ ಪರಿಣಾಮವನ್ನು ಬೀರಲಿದೆ.

ಈ ಮೂರು ತಿಂಗಳು ಮೊಬೈಲ್ ಸ್ಪಿಚ್ ಆಫ್ ಮಾಡಿ..!

ನೀವು ಸಹ ಅವರ ಮುಂದೆ ಮೊಬೈಲ್ ಬಳಕೆ ಮಾಡುವ ಬದಲು ಅವರೊಂದಿಗೆ ಸೇರಿಕೊಂಡು ಆಟವಾಡಿ, ಇಲ್ಲವೇ ಯಾವುದಾರು ಪ್ರವಾಸಿತಾಣಗಳಿಗೆ ಭೇಟಿ ನೀಡಿ. ಇಲ್ಲವೇ ಮನೆಯಲ್ಲಿಯೇ ಹೊಸದೇನಾದರು ಮಾಡುವುದನ್ನು ಮಕ್ಕಳಿಗೆ ಕಲಿಸಿ, ಅವರನ್ನು ಎಂಗೇಜ್ ಮಾಡಿರಿ. ಅವರಿಗೆ ಮೊಬೈಲ್ ಬಳಸಬೇಡಿ ಎಂದು ನೀವೇ ಅದರಲ್ಲಿ ಸಮಯ ಕಳೆಯುತ್ತಿದ್ದರೇ ಅವರು ಸಹ ಮೊಬೈಲ್ ಬೇಕು ಎಂದ ಹಠ ಹಿಡಿಯುವ ಸಾಧ್ಯತೆ ಇದೆ.

ಮಾದಕ ದ್ರವ್ಯ ವ್ಯಸನಕ್ಕಿಂತ ಕೆಟ್ಟದು

ಮಾದಕ ದ್ರವ್ಯ ವ್ಯಸನಕ್ಕಿಂತ ಕೆಟ್ಟದು

ಮಾದಕ ದ್ರವ್ಯ ವ್ಯಸನಕ್ಕಿಂತ ಮಕ್ಕಳಲ್ಲಿ ಅಧಿಕವಾಗಿ ಮೊಬೈಲ್‌ ಗೇಮ್‌ ವ್ಯಸನವೂ ಕಂಡುಬರುತ್ತಿದೆ ಎನ್ನಲಾಗಿದ್ದು, ಸ್ಮಾರ್ಟ್‌ಫೋನಿನಲ್ಲಿರುವ ಬಗೆ ಬಗೆಯ ಗೇಮ್‌ಗಳು ಮಕ್ಕಳನ್ನು ನಿಧಾನವಾಗಿ ಅವರಿಸಿಕೊಳ್ಳುತ್ತಿವೆ. ಸ್ಮಾರ್ಟ್‌ಫೋನ್‌ ಗೇಮ್‌ ವ್ಯಸನಕ್ಕೆ ಒಳಗಾದವರಲ್ಲಿ ಅನೇಕರು ಮನೋ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಉದಾಹರಣೆಗಳನ್ನು ನೋಡಬಹುದಾಗಿದ್ದು, ಈ ಹಿನ್ನಲೆಯಲ್ಲಿ ರಜೆಯಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವ ಅಥವಾ ಕೊಡಿಸುವ ಬದಲು ಬೇರೆ ಯಾವುದಾರರು ವಿಷಯದಲ್ಲಿ ಗಮನಹರಿಸುವಂತೆ ಮಾಡಿ.

ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ

ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ

ಮಕ್ಕಳು ಉತ್ತಮವಾಗಿ ಓದುತ್ತಿದ್ದಾರೆ ಎಂಬ ಕಾರಣಕ್ಕೆ ನೀವು ರಜೆಯಲ್ಲಾರೂ ಮೊಬೈಲ್ ಬಳಸಿಕೊಳ್ಳಲಿ ಎಂದು ಸ್ಮಾರ್ಟ್‌ಫೋನ್ ಕೊಡಿಸಿದರೆ ಮುಂದೆ ಅವರು ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ ಮನೆಯಲ್ಲಿಯೇ ಮೊಬೈಲ್ ಹಿಡಿದು ಕುಳಿತುಕೊಂಡು ಹೊರಗೆ ಹೋಗಿ ಆಟವಾಡುವ ಆಸಕ್ತಿಯನ್ನು ಕಳೆದುಕೊಂಡು ದೈಹಿಕವಾಗಿ ಸದೃಢರಾಗುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಸಮಾಜದ ಪರಿಚಯವೂ ಅವರಿಗೆ ಸಿಗುವುದಿಲ್ಲ.

ಇಂಟರ್ನೆಟ್ ಸೇವೆಯನ್ನು ಹಾಕಿಸಬೇಡಿ

ಇಂಟರ್ನೆಟ್ ಸೇವೆಯನ್ನು ಹಾಕಿಸಬೇಡಿ

ಕಾರಣಾಂತರಗಳಿಂದ ಮಕ್ಕಳ ಕೈಗೆ ಮೊಬೈಲ್ ನೀಡಿದರೂ ಸಹ ಅದಕ್ಕೆ ಇಂಟರ್ನೆಟ್ ಸೇವೆಯನ್ನು ಹಾಕಿಸಬೇಡಿ. ಇಂದಿನ ದಿನದಲ್ಲಿ ಆನ್‌ಲೈನಿನಲ್ಲಿ ಆಡುವ ಗೇಮ್‌ಗಳು ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದೆ ಆನ್‌ಲೈನ್‌ ಮೂಲಕ ಗುಂಪಾಗಿ ಆಡುವ ಆಟಗಳು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದಲ್ಲದೇ ಇಂಟರ್ನೆಟ್ ನಲ್ಲಿರುವ ಬೇಡದಿರುವ ವಿಚಾರಗಳು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆ ಎನ್ನಲಾಗಿದೆ.

ಆಕ್ರಮಣಕಾರಿ ಹಾಗೂ ದ್ವೇಷ ಮನೋಭಾವ

ಆಕ್ರಮಣಕಾರಿ ಹಾಗೂ ದ್ವೇಷ ಮನೋಭಾವ

ಯುದ್ಧ, ದಾಳಿ ಮಾಡುವುದು, ಎದುರಾಳಿಯನ್ನು ಹೇಗಾದರೂ ಮಾಡಿ ಕೆಡವಬೇಕು ಎನ್ನುವುದು ಗೇಮ್‌ಗಳು ಮಕ್ಕಳಲ್ಲಿ ಆಕ್ರಮಣಕಾರಿ ಹಾಗೂ ದ್ವೇಷ ಮನೋಭಾವವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ತಡರಾತ್ರಿಯವರೆಗೂ ಗೇಮ್‌ ಆಡುವುದರಿಂದ ಮಕ್ಕಳು ನಿದ್ರಾವಿಹೀನರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡಿದರುವುದೇ ಉತ್ತಮ.

Best Mobiles in India

English summary
switch off the phone for three months. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+