Home
ಸುದ್ದಿಜಾಲ

ವಾರಕ್ಕೆ ಒಮ್ಮೆಯಾದರೂ ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ: ಯಾಕೆ ಗೊತ್ತಾ?

ಇಂದು ಮೊಬೈಲ್‌ (Smartphone) ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಕೆಲಸದಿಂದ ಮನರಂಜನೆಯವರೆಗೆ, ಎಲ್ಲದಕ್ಕೂ ನಮಗೆ ಮೊಬೈಲ್ ಬೇಕೇ ಬೇಕು! ಫೋನ್ ಸಹಾಯದಿಂದ ನಮ್ಮ ಅನೇಕ ಕೆಲಸಗಳನ್ನು ಮನೆಯಲ್ಲಿ ಕುಳಿತೇ ಮಾಡಿ ಬಿಡಬಹುದು. ಇದೇ ಟೈಮ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸೈಬರ್ ದಾಳಿಗಳು ಹೆಚ್ಚುತ್ತಿವೆ. ಈ ಬಗ್ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (US NSA) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮೊಬೈಲ್ ರಕ್ಷಣೆಗಾಗಿ (Smartphone Security Tips) ಕೆಲವು ಪ್ರಮುಖ ಟಿಪ್ಸ್‌ಗಳನ್ನು ನೀಡಿದೆ. ಈ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ವೈಯಕ್ತಿಕ ಕೆಲಸಗಳಿಂದಿಡಿದು ಬ್ಯಾಂಕಿಂಗ್ ಕೆಲಸಗಳವರೆಗೆ ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸಿದ್ದೇವೆ. ನಿಮ್ಮ ಮೊಬೈಲ್‌ನಲ್ಲಿ ವೈಯಕ್ತಿಕ ಡೇಟಾ ಕಳ್ಳತನ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಅನಧಿಕೃತ ಎಂಟ್ರಿ ಬಗ್ಗೆ ಅನುಮಾನಗಳಿದ್ದರೆ, ನೀವು ರಾಷ್ಟ್ರೀಯ ಭದ್ರತಾ ಏಜೆನ್ಸಿಯ (NSA) ಸಲಹೆಯನ್ನು ಪಾಲಿಸುವುದು ಅವಶ್ಯಕವಾಗಿದೆ. ಹಾಗಿದ್ರೆ, NSA ವರದಿಯಲ್ಲಿ ಏನೆಲ್ಲಾ ಸಲಹೆಗಳಿವೆ? ಮುಂದೆ ಓದಿ.

ವಾರಕ್ಕೊಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕು ಯಾಕೆ?

ವಾರಕ್ಕೊಮ್ಮೆ ಸ್ವಿಚ್ ಆಫ್ ಮಾಡಿ, ರೀಸ್ಟಾರ್ಟ್ ಮಾಡಿ

NSA ವರದಿಯ ಪ್ರಕಾರ, ವಾರಕ್ಕೊಮ್ಮೆಯಾದರೂ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕು ಮತ್ತು ರೀಸ್ಟಾರ್ಟ್ ಮಾಡಬೇಕು. ಹೀಗೆ ಮಾಡುವುದರಿಂದ ಸೈಬರ್ ದಾಳಿಯಿಂದ ಪಾರಾಗಲು ಅವಕಾಶವಿದೆ. ಸೈಬರ್ ವಂಚಕರು ಮತ್ತು ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ ಬಳಕೆದಾರರ ಮೇಲೆ ಹಲವಾರು ರೀತಿಯಲ್ಲಿ ದಾಳಿ ಮಾಡಲು ಪ್ರಯತ್ನಿಸುತ್ತಾರೆ. ಮಾಲ್‌ವೇರ್‌ ಅನ್ನು ಸ್ಥಾಪಿಸುವುದು ಸೇರಿದಂತೆ ಅವರು ಇತರ ರೀತಿಯಲ್ಲಿ ದಾಳಿ ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ, NSA ಶಿಫಾರಸನ್ನು ಪಾಲಿಸುವುದು ಒಳ್ಳೆಯದು.

ಫೋನ್‌ ಸುರಕ್ಷತೆಗೆ NSA ಮಾಡಿರುವ ಟಿಪ್ಸ್‌ಗಳು

  • Keep Software Updated: NSA ವರದಿಯ ಪ್ರಕಾರ ನೀವು ಮಾಡಬೇಕಾದ ಮೊದಲ ಕೆಲಸ ಸಾಫ್ಟ್‌ವೇರ್ ಅಪ್ಡೇಟ್. ನಿಮ್ಮ ಅಪ್ಲಿಕೇಶನ್‌ಗಳು ಮತ್ತು ಆಪರೇಟಿಂಗ್ ಸಿಸ್ಟಂ ಇತ್ತೀಚಿನ ಭದ್ರತಾ ಪ್ಯಾಚ್‌ಗಳನ್ನು (security patches) ಹೊಂದಿದೆಯೆ? ಎಂದು ಖಚಿತಪಡಿಸಿಕೊಳ್ಳಲು ಆಗಾಗ್ಗೆ ಅಪ್‌ಡೇಟ್ ಮಾಡಬೇಕು.
  • Use Official App Stores: ಅಧಿಕೃತ ಆಪ್ ಸ್ಟೋರ್‌ಗಳನ್ನು ಮಾತ್ರ ಬಳಸಬೇಕು. ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ತಪ್ಪಿಸಲು Appleನ ಆಪ್ ಸ್ಟೋರ್ ಅಥವಾ Google Play Storeನಲ್ಲಿ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  • Be Cautious with Links: ನಿಮ್ಮ ಮೊಬೈಲ್‌ಗೆ ಬರುವ ಲಿಂಕ್‌ಗಳ ಬಗ್ಗೆ ಎಚ್ಚರದಿಂದಿರಿ. ಇಮೇಲ್‌ಗಳು ಮತ್ತು ಟೆಕ್ಸ್ಟ್ ಮೆಸೇಜ್‌ಗಳಲ್ಲಿ ಬರುವ ಲಿಂಕ್‌ಗಳು ಅಥವಾ attachments ಮೇಲೆ ಕ್ಲಿಕ್ ಮಾಡುವುದನ್ನು ಕೂಡಲೇ ನಿಲ್ಲಿಸಿ. ಯಾಕಂದ್ರೆ, ಇವು ಮಾಲ್‌ವೇರ್ ಅನ್ನು ಹರಡಲು ಬಳಸುವ ಸಾಮಾನ್ಯ ಮಾರ್ಗಗಳಾಗಿವೆ.
  • Avoid Public Wi-Fi: ಉಚಿತವಾಗಿ ಸಿಗುವ ಸಾರ್ವಜನಿಕ WiFi ಬಳಸಬೇಡಿ. ಸಾರ್ವಜನಿಕ ನೆಟ್‌ವರ್ಕ್‌ಗಳು ಸೈಬರ್ ದಾಳಿಗೆ ಗುರಿಯಾಗುತ್ತವೆ. ಆದಾಗ್ಯೂ, ನೀವು WiFi ಬಳಸಬೇಕೆಂದರೆ, ಸುರಕ್ಷತೆಗಾಗಿ VPN ಅನ್ನು ಬಳಸುವುದು ಸೂಕ್ತ.
  • Disable Bluetooth: ಯಾವಾಗಲೂ ಬ್ಲೂಟೂತ್ ಆನ್‌ನಲ್ಲಿ ಇಡಬೇಡಿ. ನಿಮ್ಮ ಮೊಬೈಲ್‌ಗೆ ಅನಧಿಕೃತ ವೈರಸ್‌ ಅಥವಾ ಮಾಲ್‌ವೇರ್‌ ಅಟ್ಯಾಕ್ ಮಾಡುವುದನ್ನು ತಡೆಯಲು ಬ್ಲೂಟೂತ್ (ಬ್ಲೂಟೂತ್ ಬಳಕೆಯಲ್ಲಿಲ್ಲದಿದ್ದಾಗ) ಅನ್ನು ಆಫ್ ಮಾಡಿ.
  • Secure Your Device: ಮೊದಲು ನಿಮ್ಮ ಮೊಬೈಲ್‌ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ಮೊಬೈಲ್‌ನಲ್ಲಿ ಸ್ಟ್ರಾಂಗ್ ಪಾಸ್‌ಕೋಡ್ ಅನ್ನು ಬಳಸಿ. ಕನಿಷ್ಠ ಆರು ಅಂಕಿಗಳೊಂದಿಗೆ ಮತ್ತು ಹೆಚ್ಚು ಸೇಫ್ಟಿಗಾಗಿ ಬಯೋಮೆಟ್ರಿಕ್ ಫೀಚರ್‌ಗಳಾದ ಫೇಸ್ (ಮುಖ) ಅಥವಾ ಬೆರಳಚ್ಚು (fingerprint) ಬಳಕೆ ಮಾಡಿ.
  • Use Trusted Accessories: ನಿಮಗೆ ವಿಶ್ವಾಸಾರ್ಹ ಎನಿಸಿದ Accessoriesಗಳನ್ನು ಮಾತ್ರ ಬಳಸಬೇಕು. ಉದಾಹರಣಗೆ, ಸ್ಮಾರ್ಟ್‌ಫೋನ್ ಕಂಪನಿಗಳು ಒದಗಿಸಿದ ಚಾರ್ಜರ್‌ಗಳನ್ನು ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ USB ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಚಾರ್ಜ್ ಮಾಡಬೇಡಿ.
  • Turn Off Location Services: ನಿಮ್ಮ ಮೊಬೈಲ್‌ನಲ್ಲಿ Location Services ಆಫ್ ಮಾಡಬೇಕು. ನಿಮ್ಮ ಗೌಪ್ಯತೆಯನ್ನು Location Services ಸೇವೆಗಳು ನಿಷ್ಕ್ರಿಯಗೊಳಿಸಿ.

ಪ್ರತಿದಿನ, ಪ್ರತಿಕ್ಷಣ ಮೊಬೈಲ್ ಬಳಸುತ್ತಲೇ ಇರುವುದರಿಂದ ಸಾಕಷ್ಟು ಅಪಾಯಗಳು ಎದುರಾಗಬಹುದು. ಕೆಲವೊಮ್ಮೆ ನಿಮ್ಮ ಫೋನ್ ಹ್ಯಾಂಗ್ ಆಗಬಹುದು. NSAಯ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ವೈಯಕ್ತಿಕ (ಖಾಸಗಿ) ಡೇಟಾಗಳನ್ನು ರಕ್ಷಿಸಬಹುದು ಮತ್ತು ಯಾವುದೇ ಭೀತಿಯಿಲ್ಲದೆ ಮೊಬೈಲ್‌ ಅನ್ನು ಬಳಸಬಹುದು. ಹೀಗಾಗಿ, ವಾರಕ್ಕೊಮ್ಮೆಯಾದರೂ ಹೀಗೆ ಮಾಡಿದರೆ ನಿಮ್ಮ ಮೊಬೈಲ್‌ನ ಸುರಕ್ಷತೆಗೆ ಒಳ್ಳೆಯದು.

Best Mobiles in India

English summary
Smartphones are prime targets for cyberattacks. The NSA’s Mobile Device Best Practices report offers a range of tips to keep hackers at bay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+