ಸಿಸ್ಕಾ ಕಂಪೆನಿಯಿಂದ 5000 mAh ಸಾಮರ್ಥ್ಯದ ಹೊಸ ಪವರ್ ಬ್ಯಾಂಕ್ ಬಿಡುಗಡೆ!

|

ಈಗಾಗ್ಲೆ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಪವರ್‌ ಬ್ಯಾಂಕ್‌ ಮಾರುಕಟ್ಟೆ ಕೂಡ ಉತ್ತಮ ಪ್ರಗತಿಯನ್ನ ಸಾಧಿಸಿದೆ. ಇದಲ್ಲದೆ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಪವರ್‌ಬ್ಯಾಂಕ್‌ಗಳು ಲಭ್ಯವಿದ್ದರೂ ಗ್ರಾಹಕರು ಉತ್ತಮ ಬ್ರ್ಯಾಂಡ್‌ನ ಪವರ್‌ ಬ್ಯಾಂಕ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿರೋ ಸಿಸ್ಕಾ ಕಂಪೆನಿ ವೈವಿಧ್ಯ ಮಾದರಿಯ ಪವರ್‌ ಬ್ಯಾಂಕ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಹೊಸ ಆವೃತ್ತಿಯ ಪವರ್‌ಬ್ಯಾಂಕ್‌ ಅನ್ನ ಲಾಂಚ್‌ ಮಾಡಿದೆ.

ಎಲೆಕ್ಟ್ರಾನಿಕ್ಸ್‌

ಹೌದು, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿರುವ ಸಿಸ್ಕಾ ಕಂಪೆನಿ ತನ್ನ ಹೊಸ P0511J ಪವರ್ ಬ್ಯಾಂಕ್ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಪವರ್‌ ಬ್ಯಾಂಕ್‌ 5,000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಇಂಟೆಲಿಜೆಂಟ್‌ ಮಲ್ಟಿ-ಪ್ರೊಟೆಕ್ಷನ್ ಸರ್ಕ್ಯೂಟ್‌ ಅನ್ನು ಹೊಂದಿದೆ. ಅಲ್ಲದೆ ಇದು ಮೆಟಲ್-ಬಾಡಿಡ್ ಪವರ್ ಬ್ಯಾಂಕ್ ಆಗಿದ್ದು ಮೈಕ್ರೋ-ಯುಎಸ್ಬಿ ಇನ್ಪುಟ್ ಮತ್ತು ಯುಎಸ್ಬಿ ಔಟ್‌ಫೂಟ್‌ ಪೋರ್ಟ್ ಅನ್ನು ಬೆಂಬಲಿಸಲಿದ್ದು, ಇದರ ಬೆಲೆ 1,199 ರೂ. ಆಗಿದೆ. ಅಷ್ಟಕ್ಕೂ ಸಿಸ್ಕಾ P0511J ಪವರ್ ಬ್ಯಾಂಕ್‌ ಹೊಂದಿರುವ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ

P0511J ಪವರ್ ಬ್ಯಾಂಕ್ ಸಾಮರ್ಥ್ಯ

P0511J ಪವರ್ ಬ್ಯಾಂಕ್ ಸಾಮರ್ಥ್ಯ

ಇನ್ನು ಸಿಸ್ಕಾ P0511J ಪವರ್ ಬ್ಯಾಂಕ್ 5000mAh ನ ಸ್ಥಿರ ಸಾಮರ್ಥ್ಯ ವನ್ನು ಹೊಂದಿದ್ದು, ಹೆಚ್ಚಿನ ಶಕ್ತಿಯ ಸಾಂದ್ರತೆಯ ಪಾಲಿಮರ್ ಕೋಶವನ್ನು ಒಳಗೊಂಡಿದೆ. ಸದ್ಯ ಸಿಸ್ಕಾ ಈ ಪವರ್‌ ಬ್ಯಾಂಕ್‌ ಮೂಲಕ ನ್ಯೂ ಟೆಕ್ನಾಲಜಿಯನ್ನ ಪರಿಚಯಿಸಿದ್ದು, ಬ್ಯಾಟರಿ ಮಟ್ಟವನ್ನು ತೋರಿಸಲು ಇದು ಲೆಡ್ ಸೂಚಕವನ್ನು ಹೊಂದಿದೆ. ಮಲ್ಟಿ-ಪ್ರೊಟೆಕ್ಷನ್ ಸರ್ಕ್ಯೂಟ್‌ ವ್ಯವಸ್ಥೆ ಹೊಂದಿರುವುದರಿಂದ ಪವರ್ ಬ್ಯಾಂಕ್ ಸುರಕ್ಷಿತ ಚಾರ್ಜಿಂಗ್ ಅನ್ನು ನೀಡುತ್ತದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

P0511J ಪವರ್‌ ಬ್ಯಾಂಕ್‌ನ ವಿಶೇಷತೆ

P0511J ಪವರ್‌ ಬ್ಯಾಂಕ್‌ನ ವಿಶೇಷತೆ

ಸಿಸ್ಕಾ P0511J ಪವರ್ ಬ್ಯಾಂಕ್ ಕೇವಲ 110 ಗ್ರಾಂ ತೂಕವಿದ್ದು, ಗಾತ್ರದಲ್ಲಿ ಬಹಳ ಹಗುರವಾಗಿದೆ. ಟ್ರಾವೆಲ್‌ನಲ್ಲಿ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಜೊತೆಗೆ ವಿದ್ಯುತ್ ಪ್ರವಾಹವನ್ನು ಸ್ವಯಂ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಅತಿಯಾದ ತಾಪನ ಅಥವಾ ಕಡಿಮೆ ಬ್ಯಾಟರಿ ಬ್ಯಾಕ್‌ಆಪ್‌ಗಳಂತಹ ನಿರ್ಣಾಯಕ ಹಾನಿಯಿಂದ ನಿಮ್ಮ ಬ್ಯಾಟರಿಯನ್ನು ರಕ್ಷಿಸುತ್ತದೆ. ಜೊತೆಗೆ ಈ ಪವರ್ ಬ್ಯಾಂಕ್ ದೀರ್ಘಕಾಲದ ಬ್ಯಾಟರಿ ಅವಧಿಯನ್ನು ಹೊಂದಿದೆ.

ಪ್ರೊಟೆಕ್ಷನ್ ಸರ್ಕ್ಯೂಟ್

ಪ್ರೊಟೆಕ್ಷನ್ ಸರ್ಕ್ಯೂಟ್

ಇನ್ನು ಈ ಪವರ್‌ ಬ್ಯಾಂಕ್‌ನಲ್ಲಿ ಸುರಕ್ಷಿತ ಚಾರ್ಜಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಇಂಟೆಲಿಜೆಂಟ್ ಮಲ್ಟಿ-ಪ್ರೊಟೆಕ್ಷನ್ ಸರ್ಕ್ಯೂಟ್ ಅನ್ನು ಒದಗಿಸಲಾಗಿದ್ದು. ಇದರಿಂದ ಸಿಸ್ಕಾ ಪವರ್ ಬ್ಯಾಂಕ್ ಸ್ಥಿರವಾದ ಪ್ರವಾಹನೀಡಲು ಅವಕಾಶ ಕಲ್ಪಿಸಿದೆ. ಜೊತೆಗೆ ವೇಗದ ಚಾರ್ಜಿಂಗ್‌ನೊಂದಿಗೆ ಸುಧಾರಿತ ಕರೆಂಟ್ ಪ್ರವಾಹವನ್ನು ತಡೆಯಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಅಥವಾ ಡಿವೈಸ್‌ ಫುಲ್‌ ಚಾರ್ಜ್ ಆದ ನಂತರ ವಿದ್ಯುತ್ ಸ್ವಿಚ್ ಆಫ್ ಆಗದಿದ್ದಲ್ಲಿ ಇದರ ಓವರ್‌ಚಾರ್ಜ್ ಮತ್ತು ಡಿಸ್ಚಾರ್ಜ್ ಪ್ರೊಟೆಕ್ಷನ್ ತಕ್ಷಣ ಔಟ್‌ಪುಟ್‌ ಪವರ್‌ ಅನ್ನು ನಿಷ್ಕ್ರಿಯಗೊಳಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳು

ಕನೆಕ್ಟಿವಿಟಿ ಆಯ್ಕೆಗಳು

ಇದು ಬಹು ಹೊಂದಾಣಿಕೆಯ ಮತ್ತು ಪ್ರಯಾಣ ಸ್ನೇಹಿ ಪವರ್ ಬ್ಯಾಂಕ್ ಆಗಿದ್ದು. ಇದು ಇನ್ಪುಟ್ ಮತ್ತು ಔಟ್‌ಪುಟ್‌ (dc5v / 2a) ಗಾಗಿ ಒನ್ ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿಯನ್ನ ಹೊಂದಿದೆ. ಇದಲ್ಲದೆ ಈ ಪವರ್‌ ಬ್ಯಾಂಕ್‌ ಡಿಜಿಟಲ್ ಕ್ಯಾಮೆರಾಗಳು, ಗೇಮಿಂಗ್ ಕನ್ಸೋಲ್‌ಗಳು, ಐಪಾಡ್‌ಗಳು, ಎಂಪಿ 3 / ಎಂಪಿ 4 ಪ್ಲೇಯರ್‌ಗಳು, ಟ್ಯಾಬ್ಲೆಟ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಆಂಡ್ರಾಯ್ಡ್ ಅಥವಾ ಐಫೋನ್‌ಗಳು ಸೇರಿದಂತೆ ಹಲವು ಮಾದರಿಯ ಡಿವೈಸ್‌ಗಳ ಜೊತೆಗೆ ಹೊಂದಿಕೊಳ್ಳುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸಿಸ್ಕಾ P0511J ಪವರ್ ಬ್ಯಾಂಕ್ 5000 mAh 1,199 ರೂಗಳಲ್ಲಿ ಲಭ್ಯವಿದ್ದು, 6 ತಿಂಗಳ ವಾರೆಂಟಿಯನ್ನ ನೀಡಿದೆ. ಸದ್ಯ ಈ ಪವರ್‌ ಬ್ಯಾಂಕ್‌ ಬಹುಕ್ರಿಯಾತ್ಮಕ, ಪಾಕೆಟ್ ಫಿಟ್ ಆಗಿದ್ದು ಕೆಂಪು, ನೀಲಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದ್ದು, ಇ-ಕಾಮರ್ಸ್‌ ತಾಣಗಳು ಸೇರಿದಂತೆ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಈ ಪವರ್‌ ಬ್ಯಾಂಕ್‌ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
The latest 5,000mAh power bank from Syska comes with an intelligent multi-protection circuit, and is priced at Rs 1,199.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X