Home
ಸುದ್ದಿಜಾಲ

T20 World Cup 2024: ಈ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ ಭಾರತ ಮತ್ತು ಪಾಕ್ ಪಂದ್ಯದ ಕ್ರೇಜ್ ಡಬಲ್: ಇಲ್ಲಿದೆ ಸಂಪೂರ್ಣ ಮಾಹಿತಿ

IND vs PAK: ಈಗಾಗಲೇ ಐಸಿಸಿ T20 ವಿಶ್ವಕಪ್‌ನ ಕ್ರೇಜ್‌ ಶುರುವಾಗಿದೆ. ಅನೇಕ ಪಂದ್ಯಗಳೂ ಸಹ ನಡೆದಿವೆ. ಆದರೆ, ಕ್ರಿಕೆಟ್ ಜಗತ್ತು ಹೆಚ್ಚು ಕಾಯುತ್ತಿರುವ ಪಂದ್ಯ ಅಂದ್ರೆ ಅದು, ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕಾಗಿ. ಎಲ್ಲರೂ ಎಷ್ಟೇ ಬ್ಯುಸಿ ಇದ್ದರೂ ಈ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಇದೀಗ ಆ ಸಮಯ ಬಂದೇ ಬಿಟ್ಟಿದೆ. ನಾಳೆ (ಜೂನ್ 9ರಂದು, ಭಾನುವಾರ) ನಡೆಯುವ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡುವುದರಿಂದ ಎಲ್ಲರ ಕಣ್ಣುಗಳು ಟಿವಿ ಮತ್ತು ಮೊಬೈಲ್‌ನತ್ತ ಅಂಟಿಕೊಂಡಿರುತ್ತವೆ.

ಹೌದು, ನಾಳೆ ನ್ಯೂಯಾರ್ಕ್‌ನಲ್ಲಿ ಈ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಎಲ್ಲಿ ಮತ್ತು ಹೇಗೆ ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಕುತೂಹಲ ನಿಮಲ್ಲಿರಬಹುದು. ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಿಸುವ ಕ್ರಿಕೆಟ್‌ ಪ್ರಿಯರಿಗಾಗಿ ನಾವು ಕೆಲವು ಬೆಸ್ಟ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತೇವೆ. ಈ ಪ್ಲ್ಯಾನ್‌ಗಳನ್ನು ಬಳಸಿಕೊಂಡು ನಿಮ್ಮ ನೆಚ್ಚಿನ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.

ಈ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ ಭಾರತ ಮತ್ತು ಪಾಕ್ ಪಂದ್ಯದ ಕ್ರೇಜ್ ಡಬಲ್

ಈ ರೀಚಾರ್ಜ್ ಯೋಜನೆಗಳಲ್ಲಿ Disney+Hotstarನ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ. ಈ ಪ್ಲ್ಯಾನ್ ಮೂಲಕ ನೀವು ಐಸಿಸಿ ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಫ್ರೀಯಾಗಿ ನೋಡಬಹುದು. ನಾವು ನಿಮಗಾಗಿ ಅಂತಹ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳನ್ನು ತಿಳಿಸುತ್ತೇವೆ. ಈ ಯೋಚನೆಗಳಲ್ಲಿ ನೀವು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಯಾವುದೇ ಪ್ರತ್ಯೇಕ ಶುಲ್ಕ ಪಾವತಿಸದೇ, ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಮನೆಯಲ್ಲೇ ಕುಳಿತು ಮತ್ತಷ್ಟು ಕ್ರೇಜ್‌ನೊಂದಿಗೆ ಕಣ್ತುಂಬಿಕೊಳ್ಳಬಹುದು.

ಜಿಯೋ 328 ರೂ. ಪ್ಲ್ಯಾನ್

ಇದು ಜಿಯೋದ ಬೇಸಿಕ್ ಪ್ಲ್ಯಾನ್ ಆಗಿದೆ. 328 ರೂ. ಯೋಜನೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲ್ಯಾನ್‌ನಲ್ಲಿ ನೀವು Jio TV, Jio ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು 1.5 GB ದೈನಂದಿನ ಡೇಟಾದೊಂದಿಗೆ ಪಡೆಯಬಹುದು. ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತೀರಿ. ಈ ಪ್ಲ್ಯಾನ್ ರೀಚಾರ್ಜ್‌ ಮಾಡಿಕೊಳ್ಳುವ ಮೂಲಕ ನೀವು 3 ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಜಿಯೋ 388 ರೂ. ಪ್ಲ್ಯಾನ್

ಮತ್ತೊಂದು ಆಯ್ಕೆಯು 388 ರೂ. ಪ್ಲ್ಯಾನ್ ಆಗಿದೆ. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ನೀವು Jio TV, Jio ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು 2 GB ಡೇಟಾದೊಂದಿಗೆ ಪಡೆಯಬಹುದು. ಇದರೊಂದಿಗೆ, ನೀವು ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಸಹ ಪಡೆಯುತ್ತೀರಿ. ಈ ಪ್ಲ್ಯಾನ್ ರೀಚಾರ್ಜ್‌ನೊಂದಿಗೆ ನಿಮಗೆ 3 ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ.

ಈ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ ಭಾರತ ಮತ್ತು ಪಾಕ್ ಪಂದ್ಯದ ಕ್ರೇಜ್ ಡಬಲ್

ಜಿಯೋ 598 ರೂ. ಪ್ಲ್ಯಾನ್

ರಿಲಯನ್ಸ್ ಜಿಯೋ ಇತ್ತೀಚೆಗೆ ಪರಿಚಯಿಸಿದ ಮತ್ತೊಂದು ಹೊಸ ಪ್ಲ್ಯಾನ್ ಪ್ರಿಪೇಯ್ಡ್ ಆಗಿದೆ. 598 ರೂ. ಯೋಚನೆ 12 ತಿಂಗಳ (ಒಂದು ವರ್ಷ) ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಪ್ರತಿದಿನ 2 ಜಿಬಿ ಹೈ-ಸ್ಪೀಡ್ ಡೇಟಾ ನೀಡುತ್ತದೆ. ಈ ಪ್ಲ್ಯಾನ್‌ ರೀಚಾರ್ಜ್‌ನೊಂದಿಗೆ ನೀವು Jio TV, Jio ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ಪಡೆಯಬಹುದು. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

ಪಂದ್ಯ ಎಲ್ಲಿ? ಟಿವಿ, ಲೈವ್-ಸ್ಟ್ರೀಮಿಂಗ್ ಹೇಗೆ ವೀಕ್ಷಿಸಬೇಕು?

2024ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ vs ಪಾಕಿಸ್ತಾನ ಪಂದ್ಯವು ನಾಳೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆ ಮತ್ತು ಸ್ಥಳೀಯ ಸಮಯ 10:30ಕ್ಕೆ ಪ್ರಾರಂಭವಾಗಲಿದೆ. ಭಾರತ vs ಪಾಕಿಸ್ತಾನ ಪಂದ್ಯವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಸಂಪೂರ್ಣ ಟಿ20 ವಿಶ್ವಕಪ್‌ನ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಮತ್ತೊಂದೆಡೆ, ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.

ಇತರ ದೇಶಗಳಲ್ಲಿ ಲೈವ್-ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?

  • ಪಾಕಿಸ್ತಾನ: PTV ಮತ್ತು ಟೆನ್ ಸ್ಪೋರ್ಟ್ಸ್ ಪ್ರಸಾರ ಹಕ್ಕುಗಳನ್ನು ಹೊಂದಿವೆ.
  • ಯುಎಸ್ಎ ಮತ್ತು ಕೆನಡಾ: WillowTV ದೊಡ್ಡ ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.
  • ಇಂಗ್ಲೆಂಡ್‌: ಸ್ಕೈ ಸ್ಪೋರ್ಟ್ಸ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
  • ಆಸ್ಟ್ರೇಲಿಯಾ: ಪಂದ್ಯವನ್ನು ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಮಾಡಲಾಗುತ್ತದೆ.
  • ನ್ಯೂಜಿಲೆಂಡ್: ಸ್ಕೈ ಸ್ಪೋರ್ಟ್ NZ ಪ್ರಸಾರದ ಹಕ್ಕುಗಳನ್ನು ಹೊಂದಿದೆ.

ಭಾರತ ಸಂಭಾವ್ಯ ತಂಡ : ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್.

ಪಾಕಿಸ್ತಾನ ಸಂಭಾವ್ಯ ತಂಡ : ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

Best Mobiles in India

English summary
jio Is Offering Free Disney+ Hotstar Across Its Plans for the T20 Cricket Tournament
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+