Google Tangi App: ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯಲು ಗೂಗಲ್‌ನಿಂದ ಟ್ಯಾಂಗಿ ಆಪ್‌!

|

ತಂತ್ರಜ್ಞಾನ ಮುಂದುವರೆದಂತೆ ಇಂದು ಜೀವನ ಶೈಲಿ ಕೂಡ ಬದಲಾಗಿದೆ. ಪ್ರತಿಯೊಂದು ಕೂಡ ಇಂದು ಆಫ್‌ಗಳ ಮೂಲಕ ತಿಳಿಯುವಷ್ಟರ ಮಟ್ಟಿಗೆ ನಾವು ನೀವೆಲ್ಲಾ ಬದಲಾಗಿದ್ದೇವೆ. ಇಂದು ಸಂತೋಷ ಪಡಿಸುವುದಕ್ಕೂ ಆಪ್‌ ಇದೆ, ದುಃಖವಾದಾಗ ಸಮಾದಾನ ಪಡಿಸುವುದಕ್ಕೂ ಆಪ್‌ ಇದೆ. ಅದರಲ್ಲೂ ಕಿರು ವೀಡಿಯೋಗಳನ್ನ ಆಪ್‌ಲೋಡ್‌ ಮಾಡಬಲ್ಲ ಆಪ್‌ಗಳಿಗೆ ಬಾರಿ ಜನಪ್ರಿಯತೆ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ಇದೀಗ ಗೂಗಲ್‌ ಕಿರು ವಿಡಿಯೋ ಆಪ್‌ ಒಂದನ್ನ ಲಾಂಚ್‌ ಮಾಡಿದೆ.

ಹೌದು

ಹೌದು, ಇಂದು ಜಾಗತಿಕ ವಲಯದಲ್ಲಿ ಕಿರು ವಿಡಿಯೋಗಳನ್ನ ಆಪ್‌ಲೋಡ್‌ ಮಾಡಲು ಅವಕಾಶ ವಿರುವ ಆಪ್‌ಗಳು ಬಾರಿ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಟಿಕ್‌ಟಾಕ್‌ ಇಂದು ಇಡೀ ಜಗತ್ತಿನಲ್ಲಿಯೇ ಜನಪ್ರಿಯ ಆಪ್‌ ಆಗಿ ಗುರ್ತಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಟಿಕ್‌ಟಾಕ್‌ ತನ್ನ ಪ್ರಾಬಲ್ಯ ಸಾಧಿಸಿದೆ. ಇದೀಗ ಟಿಕ್‌ಟಾಕ್‌ ಅನ್ನೇ ಹೋಲುವ, ಟಿಕ್‌ಟಾಕ್‌ ನಂತೆಯೆ ಕಾರ್ಯನಿರ್ವಹಿಸುವ ಟ್ಯಾಂಗಿ(Tangi) ಆಪ್‌ ಅನ್ನು ಗೂಗಲ್‌ ಪರಿಚಯಿಸಿದೆ.

ಟ್ಯಾಂಗಿ

ಗೂಗಲ್‌ ಟ್ಯಾಂಗಿ ಆಪ್‌ ಇದನ್ನ ಏರಿಯಾ 120 ಇನ್-ಹೌಸ್ ಇನ್ಕ್ಯುಬೇಟರ್ ಲ್ಯಾಬ್‌ನಿಂದ ರಚಿಸಲಾಗಿದ್ದು, ಈ ಹೆಸರು ಕೇಳಿದರೆ ಏನಿದು ವಿಚಿತ್ರವಾಗಿದೆಯಲ್ಲ ಅಂತಾ ಅನಿಸಬಹುದು. ಆದರೆ ಈ ಆಪ್‌ ಥೇಟ್‌ ಟಿಕ್‌ಟಾಕ್‌ನಂತೆಯೆ ಕಾರ್ಯನಿರ್ವಹಿಸುತ್ತದೆ. ಈ ಆಪ್‌ನಲ್ಲಿ ಕೂಡ ನೀವು ಕಿರು ವಿಡಿಯೋಗಳನ್ನ ಆಪ್‌ಲೋಡ್‌ ಮಾಡಬಹುದು. ಆಪ್‌ಲೋಡ್‌ ಮಾಡಿದ ವಿಡಿಯೋಗಳಿಗೆ ಲೈಕ್ಸ್‌, ಕಾಮೆಂಟ್‌ ಎಲ್ಲವನ್ನೂ ಮಾಡಬಹುದು, ಅಷ್ಟೇ ಅಲ್ಲ ಇತರರನ್ನ ಫಾಲೊ ಮಾಡುವ ಹಾಗೂ ನಿಮಗಿಷ್ಟವಾದ ಗುಂಪಿನ ಜೊತೆ ಚಾಟ್‌ ಮಾಡುವ ಅವಕಾಶವನ್ನ ನೀಡಲಾಗಿದೆ.

ಆಪ್ಲಿಕೇಶನ್‌

ಟ್ಯಾಂಗಿ ಆಪ್ಲಿಕೇಶನ್‌ ಪ್ರಸ್ತುತ ಐಒಎಸ್ ಅಪ್ಲಿಕೇಶನ್‌ನೊಂದಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಹೊಸ ಪ್ಲಾಟ್‌ಫಾರ್ಮ್ ಡು ಇಟ್ ಯುವರ್‌ಸೆಲ್ಫ್ (DIY) ವಿಭಾಗ ಮತ್ತು ಕ್ರಿಯೆಟಿವಿಟಿಯ ಮೇಲೆ ಕೇಂದ್ರೀಕರಿಸಿದೆ ಎಂದು ಗೂಗಲ್ ಬಹಿರಂಗಪಡಿಸಿದೆ. ಕ್ರಾಫ್ಟಿಂಗ್, ಅಡುಗೆ, ಚಿತ್ರಕಲೆ, ಸೌಂದರ್ಯ, ಫ್ಯಾಷನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ DIY ವಿಷಯಗಳ ಕುರಿತು ವಿಡಿಯೊಗಳನ್ನು ಹಂಚಿಕೊಳ್ಳಲು ಕ್ರಿಯೆಟಿವಿಟಿಯುಳ್ಳವರಗೆ ಈ ವೇದಿಕೆ ಅನುಮತಿಸುತ್ತದೆ.

ಗೂಗಲ್

ಗೂಗಲ್ ಟ್ಯಾಂಗಿ ಟಿಕ್‌ಟಾಕ್, ಪಿನ್‌ಟಾರೆಸ್ಟ್ ಮತ್ತು ಬೈಟ್‌ ಆಪ್‌ಗಳಿಗೆ ಹೋಲುತ್ತದೆ. ಆದರೆ, ಇದು ಕಲಿಕೆಯ ಮೇಲೆ ಕೇಂದ್ರೀಕೃತವಾಗಿದ್ದು, ಟಿಕ್‌ಟಾಕ್‌ ಆಪ್‌ಗಿಂತ ತುಸು ಬಿನ್ನವಾಗಿದೆ. ಟಿಕ್‌ಟಾಕ್‌ ಕೇವಲ ಮನರಂಜನೆಯ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ಟ್ಯಾಂಗಿ ಮನರಂಜನೆ ಮಾತ್ರವಲ್ಲ ಎಲ್ಲಾ ಮಾದರಿಯ ವಿಚಾರಗಳಲ್ಲಿ ಗೈಡ್‌ ಮಾಡುವಂತಹ ವೇದಿಕೆಯಾಗಿದೆ ಎಂದು ಟ್ಯಾಂಗಿಯ ಸ್ಥಾಪಕ ಕೊಕೊ ಮಾವೊ ಹೇಳಿದ್ದಾರೆ.

ಪ್ಲಾಟ್‌ಫಾರ್ಮ್‌ನ

ನಮ್ಮ ಪ್ಲಾಟ್‌ಫಾರ್ಮ್‌ನ ಗುರಿ ಜನರಿಗೆ ಒಂದು ನಿಮಿಷದ ವೀಡಿಯೊಗಳನ್ನು ತ್ವರಿತವಾಗಿ ಅಡುಗೆ ತಯಾರಿಸಲು, ಕಲಿಯಲು ಸಹಾಯ ಮಾಡುವುದು. ಬಳಕೆದಾರರಿಗೆ ಉತ್ತಮ-ಗುಣಮಟ್ಟದ ಹೌ-ಟು ವೀಡಿಯೊಗಳನ್ನು ಸುಲಭವಾಗಿ ಹುಡುಕಲು ನಾವು ಟ್ಯಾಂಗಿಯನ್ನು ವಿನ್ಯಾಸಗೊಳಿಸಿದ್ದೇವೆ. ಅಲ್ಲದೆ ಟ್ಯಾಂಗಿ ಬಳಕೆದಾರರಿಗೆ 60 ಸೆಕೆಂಡ್ ಉದ್ದದ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿದ್ದು, ಹೆಚ್ಚಿನ ವೀಡಿಯೊಗಳು ಸುಮಾರು 45 ಸೆಕೆಂಡುಗಳಷ್ಟು ಉದ್ದವಿರುತ್ತವೆ ಎಂದು ಹೇಳಿದ್ದಾರೆ.

ಇದಲ್ಲದೆ

ಇದಲ್ಲದೆ, ಈ ಪ್ಲಾಟ್‌ಫಾರ್ಮ್ "ಟ್ರೈ ಇಟ್" ಬಟನ್ ಅನ್ನು ಒಳಗೊಂಡಿದ್ದು, ಈ ಬಟನ್ ಬಳಕೆದಾರರು ಹೌಟು ಟು ವಿಡಿಯೋಗಳನ್ನ, ಹಾಗೂ ಮನರಂಜನೆಯ ವಿಡಿಯೋಗಳನ್ನ ಹೇಗೆ ಅಪ್‌ಲೋಡ್ ಮಾಡುವುದು ಅನ್ನೊದನ್ನ ತಿಳಸಿಕೊಡುತ್ತದೆ. ಸದ್ಯ ಟ್ಯಾಂಗಿ ಆಪ್ಲಿಕೇಶನ್‌ ಅನ್ನ ಇನ್ನಷ್ಟು ವಿಶೇಷವಾಗಿ ಹೊರತರಲು ಹಲವಾರು ಕ್ರಿಯೆಟಿವ್‌ ಹೆಡ್‌ಗಳು ಕೆಲಸ ಮಾಡುತ್ತಿದ್ದು ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ಟ್ಯಾಗಿ ಹೊರಬರಲಿದೆ ಅನ್ನೊ ಮಾತು ಕೇಳಿ ಬರುತ್ತಿದೆ.

Best Mobiles in India

English summary
Though Google Tangi looks somewhat similar to TikTok, Pinterest, and Byte.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X