Subscribe to Gizbot

ಡೇಟಾ ವಾರ್ ಗೆ ಕಾಲಿಟ್ಟ ಡೊಕೊಮೊದಿಂದ ಆಚ್ಚರಿಯ ಡೇಟಾ ಆಫರ್..!!!

Written By:

ದೇಶಿಯಾ ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಡೇಟಾ ವಾರ್ ನಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಸ್ಪರ್ಧೆಯಲ್ಲಿ ನಿಂತು ಗ್ರಾಹಕರನ್ನು ಸೆಳೆಯಲು ಅನೇಕ ಆಫರ್ ಗಳನ್ನು ಘೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ಇಲ್ಲಿಯವರೆಗೂ ಸುಮ್ಮನೆ ಇದ್ದ ಟಾಟಾ ಡೊಕೊಮೊ ದರ ಸಮರಕ್ಕೆ ಧುಮುಕಿದ್ದು ಹೊಸ ಆಫರ್ ಗಳನ್ನು ಗ್ರಾಹಕರಿಗೆ ನೀಡಲು ಮುಂದೆ ಬಂದಿದೆ.

ಡೇಟಾ ವಾರ್ ಗೆ ಕಾಲಿಟ್ಟ ಡೊಕೊಮೊದಿಂದ ಆಚ್ಚರಿಯ ಡೇಟಾ ಆಫರ್..!!!

ಓದಿರಿ: ದೇಶದಲ್ಲಿ ಮೊದಲಿಗೆ BSNLನಿಂದ ಸ್ಯಾಟಿಲೈಟ್ ಫೋನ್ ಸೇವೆ: ಪ್ರತಿ ನಿಮಿಷಕ್ಕೆ ವಿಧಿಸುವ ದರ ಕೇಳಿದ್ರೆ ಶಾಕ್ ಆಗ್ತೀರ..!

ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಸಾಕಷ್ಟು ಕಂಪನಿಗಳು ದೊಡ್ಡ ಪ್ರಮಾಣದ ಗ್ರಾಹಕರನ್ನು ಮತ್ತು ಆದಾಯವನ್ನು ಕಳೆದುಕೊಂಡಿದ್ದವು. ಇಂತಹ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಹೊಸ ಆಫರ್ ಗಳನ್ನು ನೀಡಲು ಮುಂದೆ ಬಂದವು ಅದೇ ಹಾದಿಯಲ್ಲಿ ಸಾಗಿದೆ ಡೊಕೊಮೊ ಸಹ ಸಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.93ಕ್ಕೆ 3GB ಡೇಟಾ:

ರೂ.93ಕ್ಕೆ 3GB ಡೇಟಾ:

ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕಡಿಮೆ ಬೆಲೆಗೆ ಡೇಟಾವನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಡೊಕೊಮೊ ಸಹ ಅದೇ ಮಾದರಿಯಲ್ಲಿ ರೂ.93ಕ್ಕೆ ಮೂರು GB ಡೇಟಾವನ್ನು ನೀಡಲು ಮುಂದಾಗಿದೆ. ಗ್ರಾಹಕರು ಈ ಸೇವೆಯ ಲಾಭ ಪಡೆಯಬಹುದಾಗಿದೆ.

ಮೂರು ದಿನ ಆಫರ್ ಲಭ್ಯ:

ಮೂರು ದಿನ ಆಫರ್ ಲಭ್ಯ:

ಡೊಕೊಮೊ ನೀಡಿರುವ ಈ ಹೊಸ ಆಫರ್ ಕೇವಲ ಮೂರು ದಿನ ಮಾತ್ರವೇ ಲಭ್ಯವಿರಲಿದೆ. ಮೇ 25, 26 ಮತ್ತು 27 ರಂದು ಲಭ್ಯವಿರಲಿದೆ. ಗ್ರಾಹಕರು ಅದಷ್ಡು ಬೇಗ ಈ ಸೇವೆಯ ಲಾಭ ಪಡೆಯಬೇಕು.

ಡೊಕೊಮೊ ಆಪ್ ನಲ್ಲಿ ಆಫರ್ :

ಡೊಕೊಮೊ ಆಪ್ ನಲ್ಲಿ ಆಫರ್ :

ಡೊಕೊಮೊ ಗ್ರಾಹಕರು ಈ ಸೇವೆಯನ್ನು ಪಡೆಯಬೇಕಾದರೆ ಡೊಕೊಮೊ ಆಪ್ ಇಸ್ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಅಲ್ಲಿಂದ ರಿಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ನಿಮಗೆ ದೊರೆಯಲಿದೆ. ಇದು ಆಪ್ ಪ್ರಮೋಷನ್ ಗಾಗಿ ಮಾಡಿರುವ ಗಿಮಿಕ್ ಎಂದರು ತಪ್ಪಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Tata Docomo is finally stepping into the data war. After watching a plethora of new offers from the competition. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot