ಡೊಕೊಮೊದಿಂದ ವಾಟ್ಸ್ ಆಪ್‌ಗಾಗಿ ಎರಡು ವಿಶೇಷ ಡೇಟಾ ಪ್ಯಾಕ್‌

Posted By:

ವಾಟ್ಸ್‌ ಆಪ್‌ ಬಳಸುವ ಟಾಟಾ ಡೊಕೊಮೊ ಜಿಎಸ್‌ಎಂ ಬಳಕೆದಾರರಿಗೆ ಗುಡ್‌ ನ್ಯೂಸ್‌. ಟಾಟಾ ಡೊಕೊಮೊ ವಾಟ್ಸ್‌ ಆಪ್‌ನ ಜೊತೆಗೆ ಕೈ ಜೋಡಿಸಿದ್ದು ಬಳಕೆದಾರರಿಗೆ ಎರಡು ಹೊಸ ಅನ್‌ಲಿಮಿಟೆಡ್‌ ಡೇಟಾ ಪ್ಯಾಕ್‌ನ್ನು ಬಿಡುಗಡೆ ಮಾಡಿದೆ.

15 ಮತ್ತು 30ದಿನದ ಹೊಸ ಡೇಟಾಪ್ಯಾಕ್‌ ಪ್ರತಿ ದಿನ ಒಂದು ರೂಪಾಯಿಯಲ್ಲಿ ವಾಟ್ಸ್‌ ಆಪ್‌ನ್ನು ಬಳಸಬಹುದಾಗಿದೆ. 15 ದಿನ ಆಫರ್‌ಗೆ 15 ರೂಪಾಯಿ,30ದಿನದ ಆಫರ್‌ಗೆ 30 ರೂಪಾಯಿ ರಿಚಾರ್ಜ್‌ ಮಾಡಿ ವಾಟ್ಸ್‌ ಆಪ್‌ನ್ನು ಬಳಸಬಹುದು ಎಂದು ಡೊಕೊಮೊ ಹೇಳಿದೆ.

ಡೊಕೊಮೊದಿಂದ ವಾಟ್ಸ್ ಆಪ್‌ಗಾಗಿ ಎರಡು ವಿಶೇಷ ಡೇಟಾ ಪ್ಯಾಕ್‌

ವಾಟ್ಸ್‌ ಆಪ್‌ ಆರಂಭಗೊಂಡದ್ದು 2009ರಲ್ಲಿ,ಯಾಹೂ ಕಂಪೆನಿಯ ಮಾಜಿ ಉದ್ಯೋಗಿಗಳಾದ ಅಮೆರಿಕದ ಬ್ರಿಯಾನ್ ಆಕ್ಟನ್(Brian Acton)ಉಕ್ರೈನಿನ ಜನ್‌ ಕೌಮ್‌(Jan Koum) ಅಮೆರಿಕದಲ್ಲಿ ಆರಂಭಿಸಿದರು.2013ರ ನವೆಂಬರ್‌ನಲ್ಲಿ ವಾಟ್ಸ್‌ ಆಪ್‌ ಹೇಳಿಕೆಯಂತೆ ಪ್ರತಿ ತಿಂಗಳು 35 ಕೋಟಿ ಜನರು ಬಳಸುತ್ತಿದ್ದಾರೆ.ಪ್ರತಿ ದಿನ 40 ಕೋಟಿಗೂ ಅಧಿಕ ಫೋಟೋಗಳು ಶೇರ್‌ ಅಗುತ್ತಿದೆ.

ಇದನ್ನೂ ಓದಿ: ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot