ಟಾಟಾ ಡೊಕೊಮೊ : 2ಜಿ, 3ಜಿ ಡೇಟಾ ಮೇಲೆ ಭಾರೀ ಆಫರ್‌

Written By:

ಇತ್ತೀಚಿಗಷ್ಟೇ ವೊಡಾಫೋನ್‌,ಏರ್‌ಟೆ‌ಲ್‌,ಏರ್‌ಸೆಲ್ ಇಂಟರ್‌ನೆಟ್‌ ಡೇಟಾ ಪ್ಲ್ಯಾನ್‌ ದರವನ್ನು ಇಳಿಕೆ ಮಾಡಿದ್ದೆ ತಡ ಈಗ ಟಾಟಾ ಡೊಕೊಮೊ ಸಹ ತನ್ನ2ಜಿ, 3ಜಿ ಡೇಟಾ ಪ್ಲ್ಯಾನ್‌ನಲ್ಲಿ ದರವನ್ನು ಕಡಿತ ಮಾಡಿದೆ.

ಟಾಟಾ ಡೊಕೊಮೊ ತನ್ನ ಡೇಟಾ ಮೇಲೆ ಶೇ.90 ಆಫರ್‌ ಪ್ರಕಟಿಸಿದೆ.ಈ ಹೊಸ ದರದ ಪ್ಲ್ಯಾನ್‌ಗಳು ಜುಲೈ ತಿಂಗಳಿನಿಂದ ಬರಲಿದ್ದು ದೇಶದ 19 ಸರ್ಕ‌ಲ್‌ನಲ್ಲಿರುವ ಎಲ್ಲಾ ಜಿಎಸ್‌ಎಂ ಗ್ರಾಹಕರಿಗೆ ಈ ಪ್ಲ್ಯಾನ್‌ ಅನ್ವಯವಾಗಲಿದೆ.

ಟಾಟಾ ಡೊಕೊಮೊ : 2ಜಿ, 3ಜಿ ಡೇಟಾ ಮೇಲೆ ಭಾರೀ ಆಫರ್‌

ಎಷ್ಟು ರೂಪಾಯಿಗೆ ಎಷ್ಟು ಡೇಟಾ ?
2ಜಿ ಇಂಟರ್‌ನೆಟ್‌ ಗ್ರಾಹಕರಿಗಾಗಿ 30 ದಿನಗಳವರೆಗೆ ಎರಡು ಪ್ಲ್ಯಾನ್‌ ಡೊಕೊಮೊ ಪ್ರಕಟಿಸಿದೆ. 126 ರೂಪಾಯಿ ರಿಚಾರ್ಜ್‌ ಮಾಡಿದ್ದಲ್ಲಿ 2GB ಡೇಟಾ,149 ರೂಪಾಯಿ ರಿಚಾರ್ಜ್‌ ಮಾಡಿದ್ರೆ 2.5GB ಡೇಟಾ ಪಡೆಯಬಹುದಾಗಿದೆ. 249 ರೂಪಾಯಿ ರಿಚಾರ್ಜ್ ಮಾಡಿದ್ದಲ್ಲಿ 60 ದಿನಗಳ ಕಾಲ 3GB ಡೇಟಾ ಸಿಗಲಿದೆ.

3ಜಿ ಗ್ರಾಹಕರಿಗೆ ಒಂದು ಪ್ಲ್ಯಾನ್‌ ಬಿಡುಗಡೆ ಮಾಡಿದ್ದು 255 ರೂಪಾಯಿ ರಿಚಾರ್ಜ್ ಮಾಡಿದ್ದಲ್ಲಿ 30ದಿನಗಳ ಕಾಲ 2GB ಡೇಟಾ ಬಳಕೆ ಮಾಡಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot