Home
ಸುದ್ದಿಜಾಲ

ಭಾರತದಲ್ಲಿ ಅತಿ ದೊಡ್ಡ ಐಫೋನ್‌ ಅಸೆಂಬ್ಲಿ ಪ್ಲಾಂಟ್‌ ನಿರ್ಮಿಸಲು ಟಾಟಾ ಗ್ರೂಪ್‌ ಪ್ಲಾನ್‌!

ಭಾರತದಲ್ಲಿ ಐಫೋನ್‌ಗಳ ತಯಾರಿಕೆಯನ್ನು ಹೆಚ್ಚಿಸುವುದಕ್ಕಾಗಿ ಆಪಲ್‌ ಕಂಪೆನಿ ಟಾಟಾ ಗ್ರೂಪ್‌ ಜೊತೆಗೆ ಕೈ ಜೋಡಿಸಿದೆ. ಈ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಟಾಟಾ ಗ್ರೂಪ್ ವಿಸ್ಟ್ರಾನ್‌ನ ಐಫೋನ್ ಉತ್ಪಾದನಾ ಘಟಕವನ್ನು $125 ಮಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತ್ತು, ಇದು ಭಾರತದಲ್ಲಿ ಮೊದಲ ದೇಶೀಯ ಐಫೋನ್ ಉತ್ಪಾದಕ ಘಟಕವಾಗಿದೆ. ಇದೀಗ ಮತ್ತೊಂದು ಹೊಸ ಟಾಟಾ ಐಫೋನ್‌ ಕಾರ್ಖಾನೆಯನ್ನು ನಿರ್ಮಿಸುವುದಕ್ಕೆ ಮುಂದಾಗಿದೆ.

ಹೌದು, ಟಾಟಾ ಕಂಪೆನಿ ಇದೀಗ ತಮಿಳುನಾಡಿನ ಹೊಸೂರಿನಲ್ಲಿ ಹೊಸ ಐಫೋನ್‌ ಕಾರ್ಖಾನೆ ಸ್ಥಾಪನಗೆ ಮುಂದಾಗಿದೆ. ಟಾಟಾ ಈಗಾಗಲೇ ಕರ್ನಾಟಕದ ಬೆಂಗಳೂರಿನ ಬಳಿ ಇರುವ ವಿಸ್ಟ್ರಾನ್ ಅಸೆಂಬ್ಲಿ ಘಟಕವನ್ನು ಸ್ವಾಧೀನಪಡಿಸಿಕೊಂಡಿದೆ. ಇದೀಗ, ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಅತಿದೊಡ್ಡ ಐಫೋನ್ ಅಸೆಂಬ್ಲಿ ಸ್ಥಾವರಗಳಲ್ಲಿ ಒಂದನ್ನು ನಿರ್ಮಿಸಲು ಪ್ಲಾನ್‌ ಮಾಡಿದೆ. ಅಷ್ಟಕ್ಕೂ ಟಾಟಾ ಐಫೋನ್‌ ಕಾರ್ಖಾನೆ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಅತಿ ದೊಡ್ಡ ಐಫೋನ್‌ ಅಸೆಂಬ್ಲಿ ಪ್ಲಾಂಟ್‌ ನಿರ್ಮಿಸಲು ಟಾಟಾ ಪ್ಲಾನ್‌!

ವಿಶ್ವದೆಲ್ಲೆಡೆ ಪ್ರಭಾವ ಬೀರಿರುವ ಐಫೋನ್‌ ಬಳಕೆಯಲ್ಲಿ ಭಾರತ ಅಷ್ಟೇನ್ನೂ ಉತ್ಸಾಹವನ್ನು ತೋರಿಲ್ಲ. ಇದಕ್ಕೆ ದುಬಾರಿ ಬೆಲೆಯ ಕಾರಣ ಅಂತಾ ಹೇಳಲಾಗಿದೆ. ಆದರೆ ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ತನ್ನ ಐಫೋನ್‌ಗಳ ತಯಾರಿಕೆಯನ್ನು ಹೆಚ್ಚಿಸುವುದಕ್ಕಾಗಿ ಆಪಲ್‌ ಕಂಪೆನಿ ಮುಂದಡಿ ಇಟ್ಟಿದೆ. ಈಗಾಗಲೇ ಟಾಟಾ ಕಂಪೆನಿ ಕರ್ನಾಟಕದ ನರಸಾಪುರದಲ್ಲಿದ್ದ ಐಫೋನ್‌ ತಯಾರಕ ಕಂಪೆನಿ ವಿಸ್ಟ್ರಾನ್‌ ಕಾರ್ಪೋರೇಷನ್‌ ಅನ್ನು ಖರೀದಿಸಿದೆ. ಇದೀಗ ತಮಿಳುನಾಡಿನ ಹೊಸೂರಿನಲ್ಲಿ ತನ್ನ ಎರಡನೇ ಘಟಕವನ್ನು ಸ್ಥಾಪಿಸುವುದಕ್ಕೆ ಮುಂದಾಗಿದೆ.

ಆಪಲ್‌ ಕಂಪೆನಿಯ ಮಹತ್ವಾಕಾಂಕ್ಷೆಯ ಲಾಭವನ್ನು ಪಡೆದು ಐಫೋನ್‌ ಬಿಡಿಭಾಗಗಳನ್ನು ಜೋಡಿಸುವ ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಟಾಟಾ ಮುಂದಾಗಿದೆ. ತಮಿಳುನಾಡಿನ ಹೊಸೂರಿನಲ್ಲಿ ದೊಡ್ಡ ಸ್ಥಾವರ ಸ್ಥಾಪಿಸುವ ಗುರಿಯನ್ನು ಟಾಟಾ ಹೊಂದಿದ್ದು, ಇದರಲ್ಲಿ 20 ಅಸೆಂಬ್ಲಿ ಲೈನ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಿಂದ ಕಾರ್ಯಾಚರಣೆಯ ಮೊದಲ ಎರಡು ವರ್ಷಗಳಲ್ಲಿ ಸರಿಸುಮಾರು 50,000 ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ ಸಂಭವವಿದೆ.

ಭಾರತದಲ್ಲಿ ಅತಿ ದೊಡ್ಡ ಐಫೋನ್‌ ಅಸೆಂಬ್ಲಿ ಪ್ಲಾಂಟ್‌ ನಿರ್ಮಿಸಲು ಟಾಟಾ ಪ್ಲಾನ್‌!

ಇನ್ನು ಈ ಕಾರ್ಖಾನೆಯು ಮುಂದಿನ 12 ರಿಂದ 18 ತಿಂಗಳೊಳಗೆ ಕಾರ್ಯಾರಂಭ ಮಾಡುವ ಪ್ಲಾನ್‌ ಮಾಡಲಾಗಿದೆ ಎಂದು ಟಾಟಾ ಮೂಲಗಳು ತಿಳಿಸಿವೆ. ಇನ್ನು ಮುಂಬರುವ ಐಫೋನ್ ಕಾರ್ಖಾನೆಯು ಪ್ರಪಂಚದಾದ್ಯಂತದ ಇತರ ಕಾರ್ಖಾನೆಗಳಿಗೆ ಹೋಲಿಸಿದರೆ ಮಧ್ಯಮ ಗಾತ್ರದ್ದಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಈಗಾಗಲೇ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ವಿಸ್ಟ್ರಾನ್‌ನಿಂದ ಟಾಟಾ ಸ್ವಾಧೀನಪಡಿಸಿಕೊಂಡಿರುವ ಘಟಕಕಿಂತ ದೊಡ್ಡದಾಗಿರಲಿದೆ.

ಟಾಟಾ ಐಫೋನ್‌ ಎರಡನೇ ಕಾರ್ಖಾನೆಯನ್ನು ನಿರ್ಮಿಸುವುದರ ಹೊರತಾಗಿ, ಹೊಸೂರಿನಲ್ಲಿರುವ ಘಟಕದಲ್ಲಿ ನೇಮಕಾತಿಯನ್ನು ಹೆಚ್ಚಿಸುತ್ತಿದೆ. ಇದರಲ್ಲಿ ಲೋಹದ ಕವಚಗಳು ಅಥವಾ ಐಫೋನ್ ಆವರಣಗಳನ್ನು ತಯಾರಿಸಲಾಗುತ್ತಿದೆ. ಇನ್ನು ಆಪಲ್ ಉತ್ಪನ್ನಗಳಿಗೆ ಪ್ರತ್ಯೇಕವಾಗಿ ಮೀಸಲಾಗಿರುವ 100 ಚಿಲ್ಲರೆ ಮಳಿಗೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಟಾಟಾ ಪ್ರಕಟಿಸಿದೆ. ಸದ್ಯ ಆಪಲ್‌ ಕಂಪೆನಿ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ, ಸುಮಾರು 7 ಪ್ರತಿಶತದಷ್ಟು ಐಫೋನ್‌ಗಳನ್ನು ತಯಾರಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಪಲ್‌ ಐಫೋನ್‌ಗಳನ್ನು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಅತಿ ದೊಡ್ಡ ಐಫೋನ್‌ ಅಸೆಂಬ್ಲಿ ಪ್ಲಾಂಟ್‌ ನಿರ್ಮಿಸಲು ಟಾಟಾ ಪ್ಲಾನ್‌!

ಆಪಲ್‌ ಕಂಪೆನಿ ಈಗಾಗಲೇ ಚೀನಾದಲ್ಲಿ ಐಫೋನ್‌ ಉತ್ಪಾದನೆ ಪ್ರಕ್ರಿಯೆಯಿಂದ ದೂರ ಸರಿದಿದೆ. ಬದಲಾಗಿ ತನ್ನ ಕಾರ್ಯಚಾರಣೆಗಳನ್ನು ಭಾರತ, ಥಾಯ್ಲೆಂಡ್‌, ಮಲೇಷ್ಯಾ ಸೇರಿದಂತೆ ಇತರೆ ದೇಶಗಳಲ್ಲಿ ವಿಸ್ತರಿಸುವುದಕ್ಕೆ ಮುಂದಾಗಿದೆ. ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಎಲ್ಲಾ iPhone 15 ಘಟಕಗಳನ್ನು ದೇಶೀಯವಾಗಿ ತಯಾರಿಸಲಾಗುತ್ತದೆ. ಜೊತೆಗೆ ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ. ಸದ್ಯ ಗುತ್ತಿಗೆ ತಯಾರಕರು ಕರ್ನಾಟಕದಲ್ಲಿ ವಾರ್ಷಿಕವಾಗಿ 20 ಮಿಲಿಯನ್ ಐಫೋನ್‌ಗಳನ್ನು ಉತ್ಪಾದಿಸುವ ಹೊಸ ಘಟಕವನ್ನು ನಿರ್ಮಿಸುತ್ತಿದ್ದಾರೆ ಎಂದು ವರದಿಯಾಗಿದೆ.

Best Mobiles in India

English summary
Tata is now planning to build a largest iPhone assembly plant in Hosur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+