ಟಾಟಾಪ್ಲೇ ಕಂಪೆನಿಯಿಂದ ಡಿಟಿಎಚ್‌ ಗ್ರಾಹಕರಿಗೆ ಸಿಗಲಿದೆ ಧಮಾಕಾ ಆಫರ್‌!

|

ಜನಪ್ರಿಯ ಡಿಟಿಎಚ್‌ ಸೇವೆ ಪೂರೈಕೆದಾರ ಕಂಪೆನಿಗಳಲ್ಲಿ ಟಾಟಾ ಪ್ಲೇ ಕೂಡ ಒಂದಾಗಿದೆ. ಟಾಟಾ ಪ್ಲೇ ಕಂಪೆನಿ ತನ್ನ ವಿಶೇಷ ಪ್ಲಾನ್‌ಗಳು ಹಾಗೂ ಸೇವೆಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಟಾಟಾ ಪ್ಲೇ ಕಂಪೆನಿ HD ಮತ್ತು Binge+ ಸಂಪರ್ಕಗಳಿಗಾಗಿ ಹೊಸ ಧಮಾಕಾ ಆಫರ್‌ ಅನ್ನು ಅನಾವರಣಗೊಳಿಸಿದೆ. ಅದರಂತೆ ಡೈರೆಕ್ಟ್-ಟು-ಹೋಮ್ (DTH) ಆಪರೇಟರ್ ಗ್ರಾಹಕರಿಗೆ ಟಾಟಾ ಪ್ಲೇ HD ಸೆಟ್-ಟಾಪ್ ಬಾಕ್ಸ್ ಮತ್ತು ಟಾಟಾ ಪ್ಲೇ ಬಿಂಜ್ + ಸೆಟ್-ಟಾಪ್ ಬಾಕ್ಸ್ ಅನ್ನು ಉಚಿತವಾಗಿ ನೀಡುತ್ತಿದೆ.

 ಟಾಟಾ ಪ್ಲೇ

ಹೌದು, ಟಾಟಾ ಪ್ಲೇ ಕಂಪೆನಿ ತನ್ನ ಡಿಟಿಎಚ್‌ ಗ್ರಾಹಕರಿಗೆ ಹೊಸ ಧಮಾಕಾ ಆಫರ್‌ ನೀಡುತ್ತಿದೆ. ಇದರಿಂದ ಗ್ರಾಹಕರು ಒಂದು ಬಾರಿ 4,000ರೂ.ರೀಚಾರ್ಜ್ ಮಾಡುವ ಮೂಲಕ HD ಸೆಟ್-ಟಾಪ್ ಬಾಕ್ಸ್ ಅನ್ನು, 6,000ರೂ. ರೀಚಾರ್ಜ್‌ ಮಾಡುವ ಮೂಲಕ Binge+ ಸೆಟ್-ಟಾಪ್ ಬಾಕ್ಸ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಟಾಟಾ ಪ್ಲೇ ಬಿಂಜ್‌ ಪ್ಲಸ್‌ ಪ್ಲಸ್‌ ಧಮಾಕಾ ಪ್ಯಾಕೇಜ್ ಹೊಂದಾಣಿಕೆಯ ಡಿವೈಸ್‌ಗಳಲ್ಲಿ ಆಯ್ದ ಒಟಿಟಿ ಸೇವೆಗಳಿಗೆ ಪ್ರವೇಶವನ್ನು ಸಹ ನೀಡಲಿದೆ. ಹಾಗಾದ್ರೆ ಟಾಟಾ ಪ್ಲೇ ಹೊಸ ಧಮಾಕಾ ಆಫರ್‌ನಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟಾಟಾ ಪ್ಲೇ

ಟಾಟಾ ಪ್ಲೇ ತನ್ನ ಗ್ರಾಹಕರಿಗೆ ಧಮಾಕಾ ಆಫರ್‌ ಘೋಷಣೆ ಮಾಡಿದೆ. ಈ ಧಮಾಕಾ ಆಫರ್‌ ಮೂಲಕ ಗ್ರಾಹಕರು 6,000ರೂ. ಟಾಟಾ ಸ್ಕೈ ಬಿಂಜ್ + ಸೆಟ್-ಟಾಪ್ ಬಾಕ್ಸ್ ಸಂಪರ್ಕವನ್ನು ಆನಂದಿಸಬಹುದು. ಅಲ್ಲದೆ 4,000ರೂ.ಗಳ ರೀಚಾರ್ಜ್‌ ಅನ್ನು ಒಂದು ಬಾರಿ ಮಾಡಿದರೆ ಬಳಕೆದಾರರು ಟಾಟಾ ಪ್ಲೇ HD ಸೆಟ್-ಟಾಪ್ ಬಾಕ್ಸ್ ಸಂಪರ್ಕವನ್ನು ಉಚಿತವಾಗಿ ಪಡೆಯಬಹುದಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ HD ಗ್ರಾಹಕರು ಮತ್ತು SD ಸಂಪರ್ಕ ಹೊಂದಿರುವ ವೀಕ್ಷಕರು 6,000ರೂ. ಗಳ ಒಂದು ರೀಚಾರ್ಜ್ ಮಾಡುವ ಮೂಲಕ Binge+ ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಟಾಟಾಪ್ಲೇ

ಇನ್ನು ಟಾಟಾಪ್ಲೇ ಗ್ರಾಹಕರಿಗೆ ಧಮಾಕಾ ಆಫರ್‌ನೊಂದಿಗೆ ಒಂದು ವರ್ಷದ ವಾರಂಟಿಯನ್ನು ನೀಡುತ್ತಿದೆ. ಪ್ರಸ್ತುತ, ಟಾಟಾ ಪ್ಲೇ HD ಸೆಟ್-ಟಾಪ್ ಬಾಕ್ಸ್ ಬೆಲೆ 1,699ರೂ. ಆಗಿದೆ. ಹಾಗೆಯೇ ಬಿಂಜ್‌+ ಸೆಟ್-ಟಾಪ್ ಬಾಕ್ಸ್ ಪ್ಲಾನ್‌ 2,199ರೂ.ಬೆಲೆ ಹೊಂದಿದೆ. ಇದು ಸ್ಯಾಟ್‌ಲೈಟ್‌ ಟಿವಿ ಕಂಟೆಂಟ್‌ ಅನ್ನು ನೀಡುತ್ತದೆ. ಅಲ್ಲದೆ ಇರೋಸ್‌ನೌ, ಹಂಗಾಮಾ, ಡಿಸ್ನಿ ಪ್ಲಸ್‌, ಶೆಮಾರೋಮಿ, ಮತ್ತು Zee5 ಸೇರಿದಂತೆ ಆಯ್ದ OTT ಪ್ಲಾಟ್‌ಫಾರ್ಮ್‌ಗಳ ಸ್ಟ್ರೀಮಿಂಗ್ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಟಾಟಾ ಪ್ಲೇ

ಟಾಟಾ ಪ್ಲೇ ಕಂಪೆನಿ ಇತ್ತೀಚೆಗಷ್ಟೇ, ಮೊಬೈಲ್ ಡಿವೈಸ್‌ಗಳಲ್ಲಿಯೂ ಒಟಿಟಿ ಕಂಟೆಂಟ್‌ ಅನ್ನು ಪ್ರವೇಶಿಸುವುದಕ್ಕೆ ಅವಕಾಶ ನೀಡುವ ಬಿಂಜ್ ಸ್ಟಾರ್ಟರ್ ಪ್ಯಾಕ್ ಅನ್ನು ಪ್ರಾರಂಭಿಸಿದೆ. ಈ ಟಾಟಾ ಪ್ಲೇ ಬಿಂಜ್ ಸ್ಟಾರ್ಟರ್ ಬೆಲೆ 49ರೂ ಆಗಿದ್ದು, 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದಲ್ಲದೆ ಈ ಪ್ಲಾನ್‌ ಏಳು ದಿನಗಳ ಉಚಿತ ಪ್ರಯೋಗವನ್ನು ಒಳಗೊಂಡಿದೆ. ಉಚಿತ ಪ್ರಯೋಗದ ಅವಧಿ ಮುಗಿದ ನಂತರ ನೀವು ಪ್ಲಾನ್‌ ಬೇಕಿದ್ದರೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಸಹ ನೀಡಲಾಗಿದೆ. ಹಾಗೆಯೇ ಬಳಕೆದಾರರು ಟಾಟಾ ಪ್ಲೇ ಬಿಂಜ್‌ ಅಪ್ಲಿಕೇಶನ್ ಮೂಲಕ ಏಕಕಾಲದಲ್ಲಿ ಮೂರು ಮೊಬೈಲ್ ಡಿವೈಸ್‌ಗಳಲ್ಲಿ OTT ವಿಷಯಕ್ಕೆ ಪ್ರವೇಶವನ್ನು ಪಡೆಯಬಹುದಾಗಿದೆ. ಟಾಟಾ ಪ್ಲೇಯ ಬೇಸಿಕ್ ಮತ್ತು ಪ್ರೀಮಿಯಂ ಪ್ಯಾಕ್‌ಗಳು ಕ್ರಮವಾಗಿ 149ರೂ. ಮತ್ತು 299ರೂ.ಬೆಲೆಯಲ್ಲಿ ಬರಲಿವೆ.

Most Read Articles
Best Mobiles in India

Read more about:
English summary
Tata Play has unveiled the Dhamaka offer for HD and Binge+ connections

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X