ಜಿಯೋಗೆ ಮತ್ತೊಂದು ಹೊಡೆತ..! ಬ್ರಾಡ್‌ಬ್ಯಾಂಡ್ ಕ್ಷೇತ್ರಕ್ಕೆ ಟಾಟಾ ಎಂಟ್ರೀ..!
ರಿಲಾಯನ್ಸ್ ಜಿಯೋದ ಗಿಗಾಫೈಬರ್ ನೊಂದಣಿ ಪ್ರಾರಂಭವಾದ ಬೆನ್ನಲ್ಲೇ, ಭಾರತೀಯ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿದೆ. ಹೀಗಾಗಲೇ ಏರ್‌ಟೆಲ್ ತನ್ನ ವಿಫೈಬರ್ ದರಗಳನ್ನು ಇಳಿಸಿ ಗ್ರಾಹಕರನ್ನು ಉಳಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಆದರೆ, ಬ್ರಾಡ್‌ಬ್ಯಾಂಡ್ ಕ್ಷೇತ್ರಕ್ಕೆ ಟಾಟಾ ಒಡೆತನದ ಕಂಪನಿ ಪ್ರವೇಶ ನೀಡುತ್ತಿದ್ದು, ಜಿಯೋಗೆ ನುಂಗಲಾರದ ತುತ್ತಾಗಿದೆ.

ಹೀಗಾಗಲೇ ಭಾರತದ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಟಾಟಾ ಬ್ರಾಡ್‌ಬ್ಯಾಂಡ್ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಅಚ್ಚರಿ ತಂದಿದೆ. ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಎಂಬುದರ ಮೂಲಕ ಗ್ರಾಹಕರಿಗೆ 100Mbps ವೇಗದಲ್ಲಿ ಇಂಟರ್‌ನೆಟ್ ನೀಡಲು ಮುಂದಾಗಿದೆ. ಭಾರತದ 12 ನಗರಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭ ಮಾಡಲು ನಿರ್ಧರಿಸಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಪ್ರಕಟಿಸಿದೆ.

12 ನಗರಗಳಲ್ಲಿ ಪ್ರಾರಂಭ
ಟಾಟಾ ಸ್ಕೈ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಭಾರತದ ಪ್ರಮುಖ 12 ನಗರಗಳಲ್ಲಿ ಪ್ರಾರಂಭ ಮಾಡಲು ಮುಂದಾಗಿದ್ದು, ಮುಂಬೈ, ದೆಹಲಿ, ಥಾಣೆ, ಗಾಜಿಯಾಬಾದ್, ಗುರ್‌ಗಾಂವ್, ನೋಯ್ಡಾ, ಪುಣೆ, ಭೋಪಾಲ್, ಚೆನ್ನೈ, ಬೆಂಗಳೂರು, ಅಹಮಾದಾಬಾದ್ ಮತ್ತು ಮೀರಾ ಭೈಯಾಂದರ್‌ನಲ್ಲಿ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಾರಂಭ ಮಾಡುತ್ತಿದೆ.

ಎಲ್ಲೆಲ್ಲಿ ಲಭ್ಯ
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಸೇವೆ ದೇಶದ ಪ್ರಮುಖ 12 ನಗರಗಳಲ್ಲಿ ಲಭ್ಯವಿದ್ದು, ನಗರಗಳಲ್ಲಿ ಎಲ್ಲೆಲ್ಲಿ ಬ್ರಾಡ್‌ಬ್ಯಾಂಡ್ ಸಿಗುತ್ತೆ ಎಂಬುದನ್ನು ತಿಳಿಯಲು www.tataskybroadband.com ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ ನೋಡಬಹುದಾಗಿದೆ. ಇಲ್ಲಿ ನಿಮಗೆ ಆಫರ್‌ಗಳು, ಬ್ರಾಡ್‌ಬ್ಯಾಂಡ್ ಸಿಗುವ ಲೊಕೇಷನ್ ಮತ್ತಿತರ ಮಾಹಿತಿಗಳು ದೊರೆಯುತ್ತವೆ.

ತಿಂಗಳ ಪ್ಯಾಕೇಜ್
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಒಂದು ತಿಂಗಳ ಪ್ಯಾಕೇಜ್‌ನಲ್ಲಿ 5Mbps, 10Mbps, 30Mbps, 50Mbps ಮತ್ತು 100Mbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ದೊರೆಯುತ್ತದೆ. ಈ ಪ್ಲಾನ್‌ಗಳ ದರ ವೇಗದ ಕ್ರಮಕ್ಕನುಗುಣವಾಗಿ ₹ 999, ₹ 1,150, ₹ 1,500, ₹ 1,800 ಮತ್ತು ₹ 2,500 ಆಗಿದೆ. ಇವೆಲ್ಲಾ ಅನ್‌ಲಿಮಿಟೆಡ್ ಪ್ಲಾನ್‌ಗಳಾಗಿವೆ. ಇದಲ್ಲದೇ ಹೆಚ್ಚುವರಿಯಾಗಿ 60GB ಡೇಟಾವನ್ನು ₹ 999ಕ್ಕೆ, 125GB ಡೇಟಾವನ್ನು ₹ 1,250ಗೆ ನೀಡಲಿದೆ.

ಮೂರು ತಿಂಗಳ ಪ್ಯಾಕೇಜ್
ಟಾಟಾ ತನ್ನ ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ನ ಮೂರು ತಿಂಗಳ ಆಫರ್‌ನಲ್ಲಿ 5Mbps - ₹ 2,297 , 10Mbps - ₹ 3,450, 30Mbps - ₹ 4,500, 50Mbps - ₹ 5,400 ಮತ್ತು 100Mbps - ₹ 7,500 ಪ್ಲಾನ್‌ಗಳು ಲಭ್ಯವಿದ್ದು, ಅಗತ್ಯವಿರುವ ವೇಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ 60GB ಡೇಟಾವನ್ನು ₹ 2,997ಕ್ಕೆ, 125GB ಡೇಟಾವನ್ನು ₹ 3,750ಗೆ ನೀಡಲಿದೆ.

5 ತಿಂಗಳ ಪ್ಯಾಕೇಜ್
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಒಂದು ತಿಂಗಳ ಪ್ಯಾಕೇಜ್‌ನಲ್ಲಿ 5Mbps, 10Mbps, 30Mbps, 50Mbps ಮತ್ತು 100Mbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ದೊರೆಯುತ್ತದೆ. ಈ ಪ್ಲಾನ್‌ಗಳ ದರ ವೇಗಕ್ಕನುಗುಣವಾಗಿ ಕ್ರಮವಾಗಿ ₹ 4,995, ₹ 5,750, ₹ 7,500, ₹ 9,000 ಮತ್ತು ₹ 12,500 ಆಗಿದೆ. ಅದಲ್ಲದೇ ಹೆಚ್ಚುವರಿಯಾಗಿ 60GB ಡೇಟಾವನ್ನು ₹ 4,995ಕ್ಕೆ, 125GB ಡೇಟಾವನ್ನು ₹ 6,250ಗೆ ನೀಡಲಿದೆ.

ಒಂಭತ್ತು ತಿಂಗಳ ಪ್ಯಾಕೇಜ್
ಟಾಟಾ ತನ್ನ ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ನ ಒಂಭತ್ತು ತಿಂಗಳ ಆಫರ್‌ನಲ್ಲಿ 5Mbps - ₹ 8,991 , 10Mbps - ₹ 10,350, 30Mbps - ₹ 13,500, 50Mbps - ₹ 16,200 ಮತ್ತು 100Mbps - ₹ 22,500 ಪ್ಲಾನ್‌ಗಳು ಲಭ್ಯವಿದ್ದು, ಅಗತ್ಯವಿರುವ ವೇಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ 60GB ಡೇಟಾವನ್ನು ₹ 8,991ಕ್ಕೆ, 125GB ಡೇಟಾವನ್ನು ₹ 11,250ಗೆ ನೀಡಲಿದೆ.

ವರ್ಷದ ಪ್ಯಾಕೇಜ್
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಒಂದು ತಿಂಗಳ ಪ್ಯಾಕೇಜ್‌ನಲ್ಲಿ 5Mbps, 10Mbps, 30Mbps, 50Mbps ಮತ್ತು 100Mbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ದೊರೆಯುತ್ತದೆ. ಈ ಪ್ಲಾನ್‌ಗಳ ದರ ವೇಗಕ್ಕನುಗುಣವಾಗಿ ಕ್ರಮವಾಗಿ ₹ 11,988, ₹ 13,800, ₹ 18,000, ₹ 21,600, ಮತ್ತು ₹ 30,000 ಆಗಿದೆ. ಹೆಚ್ಚುವರಿಯಾಗಿ 60GB ಡೇಟಾವನ್ನು ₹ 11,998ಕ್ಕೆ, 125GB ಡೇಟಾವನ್ನು ₹ 15,000ಗೆ ನೀಡಲಿದೆ.

ಇನ್‌ಸ್ಟಾಲೆಷನ್
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪಡೆಯಲು ₹ 1,200 ಇನ್‌ಸ್ಟಾಲೆಷನ್ ಚಾರ್ಜ್ ನೀಡಬೇಕು. ಇನ್‌ಸ್ಟಾಲೆಷನೊಂದಿಗೆ ವೈ-ಫೈ ರೂಟರ್ ಸಹ ಉಚಿತವಾಗಿಯೇ ನೀಡುತ್ತದೆ.

ಜಿಯೋದ ಗಿಗಾಫೈಬರ್
ಆಗಸ್ಟ್ 15ರಂದು ನೊಂದಣಿ ಪ್ರಾರಂಭವಾಗಿರುವ ಜಿಯೋ ಗಿಗಾಫೈಬರ್ ಪ್ರಿವೀವ್ ಆಫರ್ ಎಂದು ಮೊದಲ ಮೂರು ತಿಂಗಳು 100Mbps ವೇಗದಲ್ಲಿ ಉಚಿತ 100GB ಆಫರ್ ನೀಡುತ್ತಿದೆ. ಗ್ರಾಹಕರು ಪ್ರಿವೀವ್ ಆಫರ್‌ನಲ್ಲಿ ₹ 4,500 ಪಾವತಿಸಬೇಕಾದ ಸಾಧ್ಯತೆ ಇದೆ.


Click it and Unblock the Notifications








