ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಸೇವೆ ಪರಿಚಯಿಸಿದ ಟಾಟಾ ಸ್ಕೈ!

|

ಜನಪ್ರಿಯ ಡಿಟಿಎಚ್‌ ಸೇವಾ ಸಂಸ್ಥೆ ಟಾಟಾ ಸ್ಕೈ ತನ್ನ ಎಲ್ಲಾ ಚಂದಾದಾರರಿಗೆ ಹೊಸ ಕ್ಲಾಸ್‌ ರೂಮ್‌ ಸೇವೆಯನ್ನು ಪರಿಚಯಿಸಿದೆ. ಈ ಸೇವೆ ಚಾನಲ್ ಸಂಖ್ಯೆ 653 ನಲ್ಲಿ ಉಚಿತವಾಗಿ ಲಭ್ಯವಿದೆ. ಈ ಸೇವೆಯು ಟಿವಿಯಲ್ಲಿ ಶೈಕ್ಷಣಿಕ ವಿಷಯಕ್ಕೆ ಎಂಟ್ರಿ ನೀಡುವುದಕ್ಕೆ ಅವಕಾಶವನ್ನು ನೀಡಲಿದೆ. ಇನ್ನು ಟಾಟಾ ಸ್ಕೈ ಕ್ಲಾಸ್‌ ಸೇವೆಯು ಗಣಿತ ಮತ್ತು ವಿಜ್ಞಾನಕ್ಕಾಗಿ 700 ಕ್ಕೂ ಹೆಚ್ಚು ಆನಿಮೇಟೆಡ್ ಕಾನ್ಸೆಪ್ಟ್ ಲರ್ನಿಂಗ್ ವೀಡಿಯೊಗಳೊಂದಿಗೆ ಬರಲಿದೆ.

ಟಾಟಾ ಸ್ಕೈ

ಹೌದು, ಟಾಟಾ ಸ್ಕೈ ಸಂಸ್ಥೆ ತನ್ನ ಎಲ್ಲಾ ಚಂದಾದಾರರಿಗೆ ಹೊಸ ಕ್ಲಾಸ್‌ ರೂಮ್‌ ಎಜುಕೇಶನ್‌ ಸೇವೆಯನ್ನು ಪರಿಚಯಿಸಿದೆ. ಇನ್ನು ಈ ಹೊಸ ಸೇವೆಯು ಉಚಿತವಾಗಿ ದೊರೆಯಲಿದ್ದು, ಜಾಹೀರಾತುಗಳಿಂದ ಮುಕ್ತವಾಗಿದೆ. ಸದ್ಯ ಈ ಸೇವೆಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಇದರೊಂದಿಗೆ, ಟಾಟಾ ಸ್ಕೈ ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ ಟಿವಿಯಲ್ಲಿ ಕಲಿಕೆಯ ವಿಷಯವನ್ನು ನೀಡಲು ಉದ್ದೇಶಿಸಿದೆ. ಇನ್ನುಳಿದಂತೆ ಈ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಾಟಾ ಸ್ಕೈ

ಟಾಟಾ ಸ್ಕೈ ಪರಿಚಯಿಸಿರುವ ಕ್ಲಾಸ್‌ ರೂಮ್‌ ಎಜುಕೇಶನ್‌ ಸೇವೆ ಅಸ್ತಿತ್ವದಲ್ಲಿರುವ ಮತ್ತು ಹೊಸ ಚಂದಾದಾರರಿಗೆ ಉಚಿತವಾಗಿ ಲಭ್ಯವಿದೆ. ಸದ್ಯ ದೇಶಾದ್ಯಂತ 22 ದಶಲಕ್ಷಕ್ಕೂ ಹೆಚ್ಚಿನ ಸಂಪರ್ಕಗಳನ್ನು ಹೊಂದಿದೆ ಎಂದು ಟಾಟಾ ಸ್ಕೈ ಕಂಪನಿ ಹೇಳಿಕೊಂಡಿದೆ. ಇನ್ನು ಈ ಎಲ್ಲಾ ಸಂಪರ್ಕಗಳು ಚಾನೆಲ್ ಸಂಖ್ಯೆ 653 ಮೂಲಕ ಶೈಕ್ಷಣಿಕ ವಿಷಯವನ್ನು ಪ್ರವೇಶಿಸಬಹುದಾಗಿದೆ. ಈ ಚಾನೆಲ್‌ನಲ್ಲಿ ತರಗತಿಯ ಸೇವೆಯು ಟಿವಿಯಲ್ಲಿ ಆಕರ್ಷಕವಾಗಿ ಮತ್ತು ಸಂವಾದಾತ್ಮಕ ಕಲಿಕೆಯ ವಿಷಯವನ್ನು ನೀಡಲಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿ

ಇನ್ನು ಸದ್ಯ ಕೊರೊನಾ ವೈರಸ್‌ ಕಾರಣದಿಂದಾಗಿ ಶಾಲಾ ಕಾಲೇಜುಗಳು ಇನ್ನು ಆರಂಭವಾಗಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲು ಈ ಸೇವೆಯನ್ನು ಪರಿಚಯಿಸಲಾಗಿದೆ. ಇದರಿಂದ ವಿಧ್ಯಾರ್ಥಿಗಳು ಯಾವುದೇ ಅನುಕೂಲಕರ ಸಮಯದಲ್ಲಿ ಶೈಕ್ಷಣಿಕ ವಿಷಯವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಗಣಿತ ಮತ್ತು ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಸುವಾಗ ವಿಷಯಗಳನ್ನು ಇನ್ನಷ್ಟು ಸುಲಭವಾಗಿ ಕಲಿಯಲು ಈ ಪ್ಲಾಟ್‌ಫಾರ್ಮ್‌ನಲ್ಲಿ ಅನಿಮೇಟೆಡ್ ಪರಿಕಲ್ಪನೆ-ಕಲಿಕೆಯ ವೀಡಿಯೊಗಳನ್ನು ತೊಡಗಿಸಿಕೊಂಡಿದೆ.

ಟಾಟಾ ಸ್ಕೈ

ಸದ್ಯ ಟಾಟಾ ಸ್ಕೈ ತರಗತಿ ಸೇವೆಯನ್ನು 5 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಿದ್ದು, ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ವೀಡಿಯೊ ಪಾಠಗಳ ಹೊರತಾಗಿ, ಶೈಕ್ಷಣಿಕ ಆಟಗಳೂ ಇವೆ, ಅದು ಆಕರ್ಷಕವಾಗಿ ಮಾತ್ರವಲ್ಲದೆ ಮಕ್ಕಳ ಜ್ಞಾನವನ್ನೂ ನೀಡುತ್ತದೆ. ಈ ಚಾನಲ್‌ನಲ್ಲಿ, ಟಾಟಾ ಸ್ಕೈ ಶೈಕ್ಷಣಿಕ ಪಠ್ಯಕ್ರಮವನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಮತ್ತು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಎರಡು ಭಾಗಗಳಾಗಿ ವಿಂಗಡಿಸಿದೆ. ಪ್ರತಿ ಭಾಗದ ಮೊದಲ ಮೂರು ತಿಂಗಳಲ್ಲಿ, ಟಾಟಾ ಸ್ಕೈ ಪಾಠದ ವೀಡಿಯೊಗಳನ್ನು ನಡೆಸುತ್ತದೆ ಮತ್ತು ಕಳೆದ ಎರಡು ತಿಂಗಳುಗಳಲ್ಲಿ, ಆಪರೇಟರ್ ಅಧ್ಯಾಯವಾರು ಪರಿಷ್ಕರಣೆ ವೀಡಿಯೊಗಳು, ಅಭ್ಯಾಸ ಪರೀಕ್ಷೆಗಳು ಮತ್ತು ಮಾದರಿ ಪತ್ರಿಕೆಗಳನ್ನು ನೀಡಲಿದೆ.

Best Mobiles in India

English summary
Tata Sky Classroom service is catered towards students from the 5th to 8th standard.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X