Home
ಸುದ್ದಿಜಾಲ

ಟಾಟಾ ಸ್ಕೈ ಹೊಸದಾಗಿ 13 HD ಪ್ರಾದೇಶಿಕ ಆಡ್-ಆನ್ ಪ್ಯಾಕ್ ಗಳನ್ನು ಪರಿಚಯಿಸಿದೆ

By Gizbot Bureau

ಟ್ರಾಯ್ ಹೊಸ ರೀತಿಯ ಬೆಲೆಯನ್ನು ಪರಿಚಯಿಸಿದ ನಂತರ ಪ್ರತಿದಿನ ಟಾಟಾ ಸ್ಕೈ ಹೆಡ್ ಲೈನ್ ಸುದ್ದಿಯನ್ನು ಮಾಡುತ್ತಿದೆ. ಇತ್ತೀಚೆಗೆ ಡಿಟಿಹೆಚ್ ಸರ್ವೀಸ್ ಪ್ರೊವೈಡರ್ ಕೆಲವು ಪ್ರಾದೇಶಿಕ ಭಾಷೆಗಳಿಗಾಗಿ ಕೆಲವು ಆಡ್-ಆನ್ ಪ್ಯಾಕ್ ಗಳನ್ನು ಪರಿಚಯಿಸಿದೆ.ನೆಟ್ ವರ್ಕ್ ಕೆಪಾಸಿಟಿ ಫೀಚ್ ನ್ನು ಕಡಿಮೆಗೊಳಿಸಿ ಪ್ಯಾಕ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದಕ್ಕೆ ಮುಂದಾಗಿದ್ದು ಬೇಸ್ ಪ್ಯಾಕ್ ಗಳಲ್ಲಿ ಇದು ಅಪ್ಲೈ ಆಗುತ್ತದೆ.

ಟಾಟಾ ಸ್ಕೈ ಹೊಸದಾಗಿ 13 HD ಪ್ರಾದೇಶಿಕ ಆಡ್-ಆನ್ ಪ್ಯಾಕ್ ಗಳನ್ನು ಪರಿಚಯಿಸಿದೆ

ಇದೀಗ ಕಂಪೆನಿಯು ಹೊಸದಾಗಿ 13 ಆಡ್-ಆನ್ HD ಪ್ಯಾಕ್ ಗಳನ್ನು ಪ್ರಾದೇಶಿಕ ಭಾಷೆಗಳಾದ ತಮಿಳು, ತೆಲುಗು, ಮಳಯಾಳಂ, ಕನ್ನಡ, ಮರಾಠಿ, ಮತ್ತು ಬೆಂಗಾಲಿ ಭಾಷೆಗಳಿಗಾಗಿ ಪರಿಚಯಿಸಿದೆ. ಆಡ್ ಆನ್ ಪ್ಯಾಕ್ ಗಳನ್ನು ವೆಬ್ ಸೈಟ್ ನಲ್ಲಿ ಲಿಸ್ಟ್ ಮಾಡಲಾಗಿದ್ದು ಅತೀ ಕಡಿಮೆ ಅಂದರೆ ಈ ಪ್ಯಾಕ್ ಗಳು 5 ರುಪಾಯಿ ಬೆಲೆಯಿಂದ ಆರಂಭವಾಗುತ್ತಿದೆ.ಈ ಅತೀ ಕಡಿಮೆ ಬೆಲೆಯ ಪ್ಯಾಕ್ ಗಳನ್ನು ಮಿನಿ ಪ್ಯಾಕ್ ಗಳು ಎಂದು ಕರೆಯಲಾಗುತ್ತದೆ. ಆದರೆ ಈ ಆಡ್-ಆನ್ ಪ್ಯಾಕ್ ಗಳು ಮತ್ತು SD,HD ಪ್ಯಾಕ್ ಗಳ ನಡುವಿನ ವ್ಯತ್ಯಾಸವು ಕೆಲವು ಚಂದಾದಾರರಿಗೆ ಗೊಂದಲದಾಯಕವಾಗಿದೆ. ಹಾಗಾಗಿ ಬಳಕೆದಾರರು ತಮಗೆ ಅಗತ್ಯವಿರುವ ಚಾನಲ್ ಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯ.

ಟಾಟಾ ಸ್ಕೈನಿಂದ ಹೊಸ HD ಪ್ರಾದೇಶಿಕ ಆಡ್-ಆನ್ ಪ್ಯಾಕ್ ಗಳು

ಟಾಟಾ ಸ್ಕೈನಿಂದ ಹೊಸ HD ಪ್ರಾದೇಶಿಕ ಆಡ್-ಆನ್ ಪ್ಯಾಕ್ ಗಳು

ಟೆಲಿಕಾಂ ಟಾಕ್ ಹೇಳುವ ಪ್ರಕಾರ ಮೊದಲು HD ಮತ್ತು SD ಎರಡೂ ಚಾನಲ್ ಗಳ ಮಿಶ್ರಣದ ಮಿನಿ ಪ್ಯಾಕ್ ಗಳನ್ನು ಪರಿಚಯಿಸಿದ್ದ ಕಂಪೆನಿ ಇದೀಗ ಕೇವಲ HD ಪ್ಯಾಕ್ ಗಳನ್ನು ಮಾತ್ರವೇ ನೀಡುತ್ತಿದೆ.ಕಡಿಮೆ ಬೆಲೆಯ ಆಡ್ ಆನ್ ಪ್ಯಾಕ್ ಗಳಲ್ಲಿ ಯಾವುದೇ ಹೊಸ ಚಾನಲ್ ಗಳನ್ನು ಸೇರಿಸಲಾಗಿಲ್ಲ. ಈ ಪ್ಯಾಕ್ ಗಳು ರುಪಾಯಿ 60 ರಿಂದ ರುಪಾಯಿ 200 ರ ಬೆಲೆಯದ್ದೂ ಕೂಡ ಲಭ್ಯವಿದೆ.

ಹೊಸದಾಗಿ ಪರಿಚಯಿಸಲಾಗಿರುವ ಪ್ಯಾಕ್ ಗಳಲ್ಲಿ

ಹೊಸದಾಗಿ ಪರಿಚಯಿಸಲಾಗಿರುವ ಪ್ಯಾಕ್ ಗಳಲ್ಲಿ

  • ತಮಿಳು ಪ್ರಾದೇಶಿಕ HD ಪ್ಯಾಕ್ ನ ಬೆಲೆ Rs. 164,
  • ತಮಿಳು ಮಿನಿ HD ಪ್ಯಾಕ್ ನ ಬೆಲೆ Rs. 81,
  • ತೆಲುಗು ಪ್ರಾದೇಶಿಕ ಪ್ಯಾಕ್ ನ ಬೆಲೆ Rs.216,
  • ತೆಲುಗು ಮಿನಿ HD ಪ್ಯಾಕ್ ನ ಬೆಲೆ Rs. 90.
  • ಇದೇ ರೀತಿ ಕನ್ನಡ, ಮಳಯಾಳಂ,ಬೆಂಗಾಲಿ ಮತ್ತು ಮರಾಠಿ ಭಾಷೆಗಳಿಗೂ ಕೂಡ ಅನ್ವಯಿಸುತ್ತದೆ. ಇದೇ ರೀತಿ ಕೆಲವು ಇಂಗ್ಲೀಷ್ ಮೂವಿ HD ಮಿನಿ ಪ್ಯಾಕ್ ಕೂಡ ಲಭ್ಯವಿದ್ದು ಅದರ ಬೆಲೆ 162 ರುಪಾಯಿಗಳು ಮತ್ತು ಇದರಲ್ಲಿ 12 ಚಾನಲ್ ಗಳು ಲಭ್ಯವಾಗುತ್ತದೆ.

    ಚಾನಲ್ ಗಳನ್ನು ಆಯ್ಕೆ ಮಾಡುವುದಕ್ಕೆ ಡೆಡ್ ಲೈನ್ ನ್ನು ಮುಂದುವರಿಸಲಾಗಿದೆ.

    ಚಾನಲ್ ಗಳನ್ನು ಆಯ್ಕೆ ಮಾಡುವುದಕ್ಕೆ ಡೆಡ್ ಲೈನ್ ನ್ನು ಮುಂದುವರಿಸಲಾಗಿದೆ.

    ಇತ್ತೀಚೆಗೆ ಟ್ರಾಯ್ ಚಂದಾದಾರರು ಚಾನಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇರುವ ಡೆಡ್ ಲೈನ್ ನ್ನು ಮುಂದುವರಿಸಿದೆ. ಕಳೆದ ಡೆಡ್ ಲೈನ್ ಜನವರಿ 31 ಕ್ಕೆ ಇತ್ತು ಆದರೆ ಇದೀಗ ಮಾರ್ಚ್ 31 ರ ವರೆಗೆ ಚಾನಲ್ ಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಇದು ಚಂದಾದಾರರಿಗೆ ತಮಗೆ ಅಗತ್ಯವಿರುವ ಚಾನಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚು ಸಮಯವನ್ನು ನೀಡಿದಂತಾಗಿದೆ. ಹೊಸದಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಕೇಬಲ್ ಆಪರೇಟರ್ ಮತ್ತು ಡಿಟಿಹೆಚ್ ಆಪರೇಟರ್ ಗಳು ಚಂದಾದಾರರಿಗೆ ಸಹಾಯ ಮಾಡುವುದಕ್ಕೂ ಕೂಡ ಇದು ಅವಕಾಶವನ್ನು ನೀಡಿದಂತಾಗಿದೆ.

Best Mobiles in India

English summary
Tata Sky introduces 13 new HD regional add-on packs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+