Home
ಸುದ್ದಿಜಾಲ

ಒಂದು ತಿಂಗಳ ಉಚಿತ ಚಂದಾದಾರಿಕೆಯೊಂದಿಗೆ ಹೊಸದಾಗಿ ಫ್ಲೆಕ್ಸಿ ವಾರ್ಷಿಕ ಪ್ಲಾನ್ ಬಿಡುಗಡೆಗೊಳಿಸಿದ ಟಾಟಾ ಸ್ಕೈ

By Gizbot Bureau

ಟಾಟಾ ಸ್ಕೈ ಫ್ಲೆಕ್ಸಿ ವಾರ್ಷಿಕ ಯೋಜನೆಯ ನಿಯಮಗಳನ್ನು ಬದಲಾಯಿಸಿದೆ ಮತ್ತು ಅದರ ಚಂದಾದಾರರನ್ನು ಹೆಚ್ಚು ಆಕರ್ಷಿಸುವಂತೆ ಮಾಡಲು ಹೊಸ ಫ್ರೀಬಿಗಳನ್ನು ಸೇರಿಸಿದೆ ಮತ್ತು ಅದನ್ನು ಹೊಸ ಫ್ಲೆಕ್ಸಿ ವಾರ್ಷಿಕ ಯೋಜನೆ ಎಂದು ಮರುಪ್ರಾರಂಭಿಸಿದೆ. ನೀವು ರೀಚಾರ್ಜ್ ಮಾಡಿದ 48 ಘಂಟೆಗಳ ಒಳಗಾಗಿ ನಿಮಗೆ ಡಿಟಿಹೆಚ್ ಪ್ರೊವೈಡರ್ ಉಚಿತವಾಗಿ ಒಂದು ತಿಂಗಳ ಸೇವೆಯ ಆಕ್ಸಿಸ್ ನ್ನು ಬೋನಸ್ ನಂತೆ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಿದ್ದಾರೆ.

48 ಘಂಟೆಗಳ ಒಳಗೆ ಖಾತೆಗೆ ಕ್ರೆಡಿಟ್:

48 ಘಂಟೆಗಳ ಒಳಗೆ ಖಾತೆಗೆ ಕ್ರೆಡಿಟ್:

ಈ ಹಿಂದೆ,ಗ್ರಾಹಕರು ತಮ್ಮ ರೆಗ್ಯುಲರ್ ಪ್ಲಾನಿನ ಅವಧಿ ಮುಗಿದ ನಂತರ ಅವರಿಗೆ ಬೋನಸ್ ಅವಧಿಯನ್ನು ಅವರ ಖಾತೆಗೆ ಕ್ರೆಡಿಟ್ ಮಾಡಲಾಗುತ್ತಿತ್ತು. ಈ ವರ್ಷದ ಎಪ್ರಿಲ್ ನಲ್ಲಿ ಒರಿಜಿನಲ್ ಫ್ಲೆಕ್ಸಿ ವಾರ್ಷಿಕ ಪ್ಲಾನ್ ನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಇದೀಗ ಈ ವಾರದಲ್ಲಿ ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ನ್ನು ನೇರಪ್ರಸಾರಗೊಳಿಸಲಾಗಿದೆ.

12 ತಿಂಗಳ ಅವಧಿಗೆ ರೀಚಾರ್ಜ್ ಮಾಡಿ :

12 ತಿಂಗಳ ಅವಧಿಗೆ ರೀಚಾರ್ಜ್ ಮಾಡಿ :

ಆಪರೇಟರ್ ವೆಬ್ ಸೈಟ್ ನಲ್ಲಿರುವ ಅಧಿಕೃತ ಲಿಸ್ಟಿಂಗ್ ನ ಪ್ರಕಾರವೇ ಹೇಳುವುದಾದರೆ ಟಾಟಾ ಸ್ಕ್ರೈ ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ಟಾಟಾ ಸ್ಕೈ ಚಂದಾದಾರರು ತಮ್ಮ ಇಚ್ಛೆಯ ಪ್ಲಾಕ್ ನ್ನು 12 ತಿಂಗಳ ಅವಧಿಗೆ ರೀಚಾರ್ಜ್ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು 13 ತಿಂಗಳ ಚಂದಾದಾರಿಕೆಯು ಅವರಿಗೆ ರೀಚಾರ್ಜ್ ಮಾಡಿದ 48 ಘಂಟೆಗಳ ಒಳಗೆ ಅವರ ಖಾತೆಗೆ ಕ್ರೆಡಿಟ್ ಆಗುತ್ತದೆ.

ಯಾವುದಕ್ಕೆ ಅವಕಾಶವಿದೆ:

ಯಾವುದಕ್ಕೆ ಅವಕಾಶವಿದೆ:

ಬೋನಸ್ ಆಕ್ಸಿಸ್ ನ ಜೊತೆಗೆ ಹೆಚ್ಚುವರಿಯಾಗಿ ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ನಲ್ಲಿ ಚಾನಲ್ ಗಳನ್ನು ಸೇರಿಸುವುದಕ್ಕೆ ಮತ್ತು ತೆಗೆದು ಹಾಕುವುದಕ್ಕೆ ಅವಕಾಶವಿರುತ್ತದೆ ಜೊತೆಗೆ ಅಗತ್ಯಬಿದ್ದರೆ ತಾತ್ಕಾಲಿಕವಾಗಿ ಅಕೌಂಟ್ ನ್ನು ಸಸ್ಪೆಂಡ್ ಮಾಡುವುದಕ್ಕೂ ಇದರಲ್ಲಿ ಅವಕಾಶವಿದೆ. ನಂತರ ಚಂದಾದಾರರಿಗೆ ಉಚಿತ ಕೂಪಲ್ ಗಳು ಟಾಟಾ ಸ್ಕ್ರೈ ರೀಚಾರ್ಜ್ ಪೋರ್ಟಲ್ ನಲ್ಲಿ ಲಭ್ಯವಾಗುತ್ತೆದ ಮತ್ತು ಡಿಜಿಟಲ್ ವ್ಯಾಲೆಟ್ ಆಫರ್ ಗಳು ಕೂಡ ಸಿಗುತ್ತದೆ.

 12 ಪಟ್ಟು ಹೆಚ್ಚು ಮೊತ್ತ ಒಟ್ಟಿಗೆ ಪಾವತಿಸಬೇಕು:

12 ಪಟ್ಟು ಹೆಚ್ಚು ಮೊತ್ತ ಒಟ್ಟಿಗೆ ಪಾವತಿಸಬೇಕು:

ತಿಂಗಳ ರೀಚಾರ್ಜ್ ಮೊತ್ತಕ್ಕಿಂತ 12 ಪಟ್ಟು ಹೆಚ್ಚು ಮೊತ್ತವನ್ನು ರೀಚಾರ್ಜ್ ಮಾಡುವ ಮೂಲಕ ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ನ್ನು ಟಾಟಾ ಸ್ಕೈ ಚಂದಾದಾರರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ಪಡೆಯುವುದಕ್ಕಾಗಿ ಅವರು ಟಾಟಾ ಸ್ಕೈ ವೆಬ್ ಸೈಟ್ ಅಥವಾ ಆಪ್ಸ್ ರೀಚಾರ್ಜ್ ಫಂಕ್ಷನ್ ಗೆ ತೆರಳಬಹುದು. ಹೊಸ ಫ್ಲೆಕ್ಸಿ ವಾರ್ಷಿಕ ಪ್ಲಾನ್ ಮೊದಲಿಗೆ DreamDTH.com ನಲ್ಲಿ ಕಾಣಿಸಿತ್ತು.

ಟಾಟಾ ಸ್ಕೈ ಹೊರತು ಪಡಿಸಿ ಡಿಶ್ ಟಿವಿ ಮತ್ತು ಡಿ2ಹೆಚ್ ಗಳು ಕೂಡ ದೀರ್ಘಾವಧಿ ಪ್ಲಾನ್ ಗಳು ತಮ್ಮ ಚಂದಾದಾರರಿಗೆ ನೀಡುತ್ತಿವೆ.

ಡಿ2ಹೆಚ್ ಪ್ಲಾನ್ ಗಳು:

ಡಿ2ಹೆಚ್ ಪ್ಲಾನ್ ಗಳು:

ಡಿ2ಹೆಚ್ ನಲ್ಲಿ 3 ತಿಂಗಳ ಪ್ಲಾನ್ ಗೆ 7 ದಿನಗಳ ಉಚಿತ ಹೆಚ್ಚುವರಿ ಚಂದಾದಾರಿಕೆ ಸಿಗುತ್ತದೆ. 6 ತಿಂಗಳ ಪ್ಲಾನಿಗೆ 15 ದಿನಗಳ ಹೆಚ್ಚುವರಿ ಉಚಿತ ಚಂದಾದಾರಿಕೆ, 11 ತಿಂಗಳ ಪ್ಲಾನಿಗೆ 30 ದಿನಗಳ ಹೆಚ್ಚುವರಿ ಉಚಿತ ಚಂದಾದಾರಿಕೆ, 22 ತಿಂಗಳ ಪ್ಲಾನಿಗೆ 60 ದಿನಗಳ ಉಚಿತ ಹೆಚ್ಚುವರಿ ಚಂದಾದಾರಿಕೆ,33 ತಿಂಗಳ ಪ್ಲಾನಿಗೆ 90 ದಿನಗಳ ಹೆಚ್ಚುವರಿ ಉಚಿತ ಚಂದಾದಾರಿಕೆ, 44 ತಿಂಗಳ ಪ್ಲಾನಿಗೆ120 ದಿನಗಳ ಹೆಚ್ಚುವರಿ ಉಚಿತ ಚಂದಾದಾರಿಕೆ ಮತ್ತು 55 ತಿಂಗಳ ಪ್ಲಾನಿಗೆ 150 ದಿನಗಳ ಉಚಿತ ಚಂದಾದಾರಿಕೆ ಸಿಗುತ್ತದೆ.

ಡಿಶ್ ಟಿವಿ ಪ್ಲಾನ್ ಗಳು:

ಡಿಶ್ ಟಿವಿ ಪ್ಲಾನ್ ಗಳು:

ಅದೇ ರೀತಿ ಡಿಶ್ ಟಿವಿಯಲ್ಲಿ 3 ತಿಂಗಳ ಪ್ಲಾನಿಗೆ 7 ದಿನಗಳ ಹೆಚ್ಚುವರಿ ಚಂದಾದಾರಿಕೆ,6 ತಿಂಗಳ ಪ್ಲಾನಿಗೆ 15 ದಿನಗಳ ಉಚಿತ ಚಂದಾದಾರಿಕೆ ಮತ್ತು 11 ತಿಂಗಳ ಪ್ಲಾನಿಗೆ 30 ದಿನಗಳ ಹೆಚ್ಚುವರಿ ಚಂದಾದಾರಿಕೆ ಲಭ್ಯವಾಗುತ್ತದೆ.

Best Mobiles in India

English summary
Tata Sky Launches New FlexiAnnual Plan With One Month Free Subscription
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+