Home
ಸುದ್ದಿಜಾಲ

ಟಾಟ್ ಸ್ಕೈನಿಂದ ಉಚಿತ ಅಮೇಜಾನ್ ಫೈಯರ್ ಟಿವಿ ಕೇವಲ 249 ರುಪಾಯಿ/ತಿಂಗಳಿಗೆ

By Gizbot Bureau

ಟಾಟಾ ಸ್ಕೈ ಅಧಿಕೃತವಾಗಿ ಮುಂದಿನ ಜನರೇಷನ್ನಿನ ಟಾಟಾ ಸ್ಕೈ ಬಿಂಗ್ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ. ಇದು ಮುಂದಿನ ಜನರೇಷನ್ ಇಚ್ಛಿಸುವ ಡಿಜಿಟಲ್ ಕಟೆಂಟ್ ಗೆ ಹೆಚ್ಚಿನ ಅಭಿವೃದ್ಧಿಯನ್ನು ನೀಡುತ್ತದೆ.

ಟಾಟ್ ಸ್ಕೈನಿಂದ ಉಚಿತ ಅಮೇಜಾನ್ ಫೈಯರ್ ಟಿವಿ ಕೇವಲ 249 ರುಪಾಯಿ/ತಿಂಗಳಿಗೆ

ನಿಮಗೆ ಈ ವಿಚಾರ ಕೇಳಿದರೆ ಆಶ್ಚರ್ಯವೆನ್ನಿಸಬಹುದು ಆದರೂ ನಾವು ಹೇಳುತ್ತಿರುವುದು ನಿಜ ಸಂಗತಿ. ಕೇವಲ 249 ರುಪಾಯಿಯನ್ನು ಪ್ರತಿ ತಿಂಗಳಿಗೆ ಪಾವತಿ ಮಾಡುವ ಮೂಲಕ 3,999 ರುಪಾಯಿ ಬೆಲೆಬಾಳುವ ಅಮೇಜಾನ್ ಟಿವಿ ಸ್ಟಿಕ್ ನ್ನು ಮತ್ತು ಅಲೆಕ್ಸಾ ವಾಯ್ಸ್ ರಿಮೋಟ್ ನ್ನು ಉಚಿತವಾಗಿ ಪಡೆದುಕೊಳ್ಳುವ ಅವಕಾಶವಿರುತ್ತದೆ.

ಟಾಟಾ ಸ್ಕೈ ಬಿಂಗ್ ಸರ್ವೀಸ್:ಅಮೇಜಾನ್ ಫೈಯರ್ ಟಿವಿ ಸ್ಟಿಕ್ ನ್ನು ಉಚಿತವಾಗಿ ಪಡೆಯಿರಿ!

ಟಾಟಾ ಸ್ಕೈ ಬಿಂಗ್ ಸರ್ವೀಸ್:ಅಮೇಜಾನ್ ಫೈಯರ್ ಟಿವಿ ಸ್ಟಿಕ್ ನ್ನು ಉಚಿತವಾಗಿ ಪಡೆಯಿರಿ!

ಟಾಟಾ ಸ್ಕೈ ಬಿಂಗ್ ಸೇವೆಯು ಆನ್ ಲೈನ್ ಸ್ಟ್ರೀಮಿಂಗ್ ಆಪ್ಸ್ ಮತ್ತು ಕಟೆಂಟ್ ಗಳ ಜೊತೆಗೆ ಕನೆಕ್ಟ್ ಆಗುವ ಅಭಿಮಾನಿಗಳಿಗಾಗಿ ನಿರ್ಮಾಣವಾಗುತ್ತಿರುವ ಒಂದು ಸೇವೆಯಾಗಿದೆ. ಈ ಪ್ಲಾನಿನ ಅಡಿಯಲ್ಲಿ ಬಳಕೆದಾರರು ಅಮೇಜಾನ್ ಫೈಯರ್ ಟಿವಿ ಸ್ಟಿಕ್ ನ್ನು ಉಚಿತವಾಗಿ ಅಂದರೆ ಕೇವಲ 249 ರುಪಾಯಿ ಪಾವತಿ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಟಾಟಾ ಸ್ಕೈನ ಮುಖ್ಯ ಕಮರ್ಷಿಯಲ್ ಆಫೀಸರ್ ಆಗಿರುವ ಪಲ್ಲವಿ ಪೂರಿ ಅವರು " ಲೈವ್, ಬ್ರಾಡ್ ಕಾಸ್ಟ್ ಕಂಟೆಂಟ್ ಗಳಿಗೆ ಸಾಮಾನ್ಯ ಇಂಟರ್ಫೇಸ್ ನಿರ್ಮಿಸುವ ಉದ್ದೇಶ ಇದಾಗಿದೆ. ಓವರ್ ದಿ ಟಾಪ್(ಓಟಿಟಿ) ಗೆ ಇಂಟಿಗ್ರೇಟೆಡ್ ಫ್ಲ್ಯಾಟ್ ಫಾರ್ಮ್ ಆಗಿರುತ್ತದೆ ಇದು" ಎಂದು ತಿಳಿಸಿದ್ದಾರೆ.

ಅಮೇಜಾನ್ ಫೈಯರ್ ಟಿವಿ ಸ್ಟಿಕ್: ಟಾಟಾ ಸ್ಕೈನಲ್ಲಿ ಎಕ್ಸ್ ಕ್ಲೂಸೀವ್

ಅಮೇಜಾನ್ ಫೈಯರ್ ಟಿವಿ ಸ್ಟಿಕ್: ಟಾಟಾ ಸ್ಕೈನಲ್ಲಿ ಎಕ್ಸ್ ಕ್ಲೂಸೀವ್

ಅಮೇಜಾನ್ ಫೈಯರ್ ಟಿವಿ ಸ್ಟಿಕ್ ನ ಬೆಲೆ ರುಪಾಯಿ 3999 ಮತ್ತು ಇದೀಗ ಈ ಮೀಡಿಯಾ ಡಿವೈಸ್ ನ್ನು ಪ್ಲಗ್ ಇನ್ ಮಾಡುವ ಮೂಲಕ ಹೆಚ್ ಡಿ ಟಿವಿ, ಅಮೇಜಾನ್ ಪ್ರೈಮ್ ಹಾಟ್ ಸ್ಟಾರ್ ಮೂಲಕ ಡಿಜಿಟಲ್ ಕಂಟೆಂಟ್, ಯೂರೋಸ್ ನೌ, ಹಂಗಾಮಾ ಪ್ಲೇ ಮತ್ತು ಸನ್ ನೆಕ್ಸ್ಟ್ ನ್ನು ಆಕ್ಸಿಸ್ ಮಾಡಬಹುದು.

ಈ ಹೊಸ ಸೇವೆಯಲ್ಲಿ ಉಚಿತವಾಗಿ ಮೂರು ತಿಂಗಳ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಕೂಡ ಆಫರ್ ಮಾಡಲಾಗುತ್ತದೆ.

ಇದರಲ್ಲಿ ಸಾಕಷ್ಟು ಪ್ರೀ ಲೊಡೆಡ್ ಕಂಟೆಂಟ್ ಗಳಿರುತ್ತದೆ. 5000 ಟೈಟಲ್ಸ್ ಗಳು ಟಾಟಾ ಸ್ಕೈ ವೀಡಿಯೋ ಆನ್ ಡಿಮಾಂಟ್ ಲೈಬ್ರರಿಯಲ್ಲಿ ಲಭ್ಯವಾಗುತ್ತದೆ.

7 ದಿನಗಳ ಟಿವಿ ಶೋಗಳನ್ನು ಸೇವ್ ಮಾಡಿಕೊಳ್ಳಬಹುದು ಮತ್ತು ತಮಗೆ ಅನುಕೂಲವಾದ ಸಮಯಕ್ಕೆ ಅದನ್ನು ನೋಡುವ ಅವಕಾಶವಿರುತ್ತದೆ. ಇದು ಕೂಡ ಟಾಟಾ ಸ್ಕೈ ಬಿಂಗ್ ಸೇವೆಯ ಒಂದು ಭಾಗವಾಗಿರುತ್ತದೆ.

ಸೂಚನೆ:

ಸೂಚನೆ:

ಒಂದು ವೇಳೆ ಬಳಕೆದಾರರ ಬಳಿ ಈಗಾಗಲೇ ಅಮೇಜಾನ್ ಫೈಯರ್ ಟಿವಿ ಸ್ಟಿಕ್ ಲಭ್ಯವಿದ್ದರೆ ಅವರು ಮತ್ತೊಂದು ಸ್ಟಿಕ್ ನ್ನು ಪಡೆಯಬೇಕಾಗುತ್ತದೆ ಮತ್ತು ಅದನ್ನು ಕಸ್ಟಮೈಸ್ ಮಾಡಬೇಕಾಗುತ್ತದೆ ಜೊತೆಗೆ ರಿಫೈನ್ ಮಾಡಬೇಕಾಗುತ್ತದೆ.

ನೆಟ್ ಫ್ಲಿಕ್ಸ್ ಅನುಪಸ್ಥಿತಿ ಅತಿದೊಡ್ಡದು ಆದರೆ ಅದು 249 ರುಪಾಯಿ ಸಿಗುವುದು ಒಳ್ಳೆಯ ಆಫರ್ ಆಗಿದೆ. ಒಂದು ವೇಳೆ ಬಳಕೆದಾರರು ಟಾಟಾ ಸ್ಕೈ ಬಿಂಗ್ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೆ ನಿರ್ಧರಿಸಿದರೆ ಅವರ ಬಳಿ ಡಿವೈಸ್ ನ್ನು ಮರುನೀಡುವಂತೆ ಹೇಳಲಾಗುತ್ತದೆ.

ಅಮೇಜಾನ್ ಫೈಯರ್ ಟಿವಿ ಸುಮಾರು 34 ಮಿಲಿಯನ್ ಬಳಕೆದಾರರಿಗಿಂತೂ ಅಧಿಕ ಮಂದಿಯನ್ನು ಹೊಂದಿದೆ.

ಇದಕ್ಕೆ ಸಂಬಂಧಿಸಿದ ಸುದ್ದಿಯೊಂದರಲ್ಲಿ ಅಮೇಜಾನ್ ಫೈಯರ್ ಟಿವಿಯು ಈಗಾಗಲೇ 39 ಮಿಲಿಯನ್ ಬಳಕೆದಾರರಿಗಿಂತಲೂ ಅಧಿಕ ಮಂದಿಯನ್ನು ಜಾಗತಿಕವಾಗಿ ಹೊಂದಿದೆ. ಜನವರಿಯಲ್ಲಿ 30 ಮಿಲಿಯನ್ ಮಂದಿ ಬಳಕೆದಾರರನ್ನು ಇದು ಹೊಂದಿತ್ತು ಮತ್ತು ಅದು ಕೇವಲ 4 ತಿಂಗಳಲ್ಲಿ ಸಾಧ್ಯವಾದದ್ದು. ಅಮೇಜಾನ್ 9 ಮಿಲಿಯನ್ ಹೊಸ ಬಳಕೆದಾರರನ್ನು ಪಡೆಯುವ ಸಾಮರ್ಥ್ಯ ಹೊಂದಿದೆ.

ಈ ವಿವರವನ್ನು ಅಮೇಜಾನಿನ ಫೈಯರ್ ಟಿವಿ ಜನರಲ್ ಮ್ಯಾನೇಜರ್ ಆಗಿರುವ ಜೆನ್ ಪ್ರೀಮಿಯರ್ ಅವರು ಹಂಚಿಕೊಂಡಿದ್ದಾರೆ. ಯುಸ್, ಯುಕೆ, ಜರ್ಮನಿ, ಜಪಾನ್ ಮತ್ತು ಭಾರತದಲ್ಲಿ ಅಮೇಜಾನ್ ಅತೀ ಹೆಚ್ಚು ಯಶಸ್ಸು ಗಳಿಸಿದೆ.

Best Mobiles in India

English summary
Tata Sky Offers Free Amazon Fire TV At Rs 249/Month; Watch Hotstar, Prime Free For 30 Days Under Tata Sky Binge
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+