ಬಿಟ್‌ಕಾಯಿನ್ ಖರೀದಿಸಿದವರಿಗೆ ತೆರಿಗೆ ಇಲಾಖೆ ನೋಟಿಸ್!!..ಖರೀದಿಸಿದವರು ಎಷ್ಟು ಜನ ಗೊತ್ತಾ!?

ಮಾನ್ಯತೆ ಇಲ್ಲದ ಡಿಜಿಟಲ್‌ ಕರೆನ್ಸಿಗಳ ವಹಿವಾಟು ನಡೆಸಿರುವ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.!!

|

ಬಿಟ್‌ಕಾಯಿನ್‌ಗಳು ಸೇರಿ ಕಾನೂನು ಮಾನ್ಯತೆ ಇಲ್ಲದ ಡಿಜಿಟಲ್‌ ಕರೆನ್ಸಿಗಳ ಮೇಲೆ ಹಣ ಹೂಡಿಕೆ ಮಾಡಿರುವ ವಿರುದ್ಧ ಐ. ಟಿ ಇಲಾಖೆ ತನಿಖೆ ಆರಂಭಿಸಿದೆ.! ಮಾನ್ಯತೆ ಇಲ್ಲದ ಡಿಜಿಟಲ್‌ ಕರೆನ್ಸಿಗಳ ವಹಿವಾಟು ನಡೆಸಿರುವ ಹೂಡಿಕೆದಾರರಿಗೆ ನೋಟಿಸ್ ಜಾರಿ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.!!

ತೆರಿಗೆ ಅಧಿಕಾರಿಗಳು ಕಳೆದ ವಾರವಷ್ಟೆ ದೇಶದಲ್ಲಿನ ಒಂಬತ್ತು ಡಿಜಿಟಲ್‌ ಕರೆನ್ಸಿ ವಿನಿಮಯ ಕೇಂದ್ರಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದು, ಡಿಜಿಟಲ್‌ ಕರೆನ್ಸಿಗಳ ವಿನಿಮಯ ಕೇಂದ್ರಗಳಲ್ಲಿ ಲಕ್ಷಾಂತರ ಜನರು ನೋಂದಾಯಿಸಿರುವುದು ಬೆಳಕಿಗೆ ಬಂದಿದ್ದು, ನಿಯಮಿತ ವಹಿವಾಟಿನಲ್ಲಿ ಹಲವರು ತೊಡಗಿಕೊಂಡಿದ್ದಾರೆ.!!

ಬಿಟ್‌ಕಾಯಿನ್ ಖರೀದಿಸಿದವರಿಗೆ ತೆರಿಗೆ ಇಲಾಖೆ ನೋಟಿಸ್!!..ಖರೀದಿಸಿದವರು ಎಷ್ಟು ಜನ?

ಗಿಜ್‌ಬಾಟ್ ಕನ್ನಡ ತಂಡ ಮೊದಲೇ ಎಚ್ಚರಿಸಿದಂತೆ ಭಾರತದಲ್ಲಿ ಆನ್‌ಲೈನ್ ವರ್ಚುವಲ್ ಕರೆನ್ಸಿಯ ವಹಿವಾಟಿನ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದು, ಹಾಗಾದರೆ, ಭಾರತದಲ್ಲಿ ಬಿಟ್‌ಕಾಯಿನ್ ವ್ಯವಹಾರ ನಡೆಸುತ್ತಿರುವ ಜನರೆಷ್ಟು? ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಿದ್ದರೆ ಏನಾದಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 20 ಲಕ್ಷ ಜನರು ನೋಂದಾಯಿಸಿಕೊಂಡಿದ್ದಾರೆ.!!

20 ಲಕ್ಷ ಜನರು ನೋಂದಾಯಿಸಿಕೊಂಡಿದ್ದಾರೆ.!!

ಡಿಜಿಟಲ್‌ ಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ 20 ಲಕ್ಷ ಜನರು ನೋಂದಾಯಿಸಿರುವುದು ಬೆಳಕಿಗೆ ಬಂದಿದೆ. ಅವರಲ್ಲಿ 4 ರಿಂದ 5 ಲಕ್ಷದಷ್ಟು ಜನರು ನಿಯಮಿತವಾಗಿ ಬಿಟ್‌ಕಾಯಿನ್ ಮೇಲೆ ಹೂಡಿಕೆ ಮತ್ತು ವಹಿವಾಟಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂದು ಆದಾಯತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.!!

ಡಿಜಿಟಲ್‌ ಕರೆನ್ಸಿಗಳು ಕಾನೂನುಬಾಹಿರ!!

ಡಿಜಿಟಲ್‌ ಕರೆನ್ಸಿಗಳು ಕಾನೂನುಬಾಹಿರ!!

ಬಿಟ್‌ಕಾಯಿನ್ ಅಥವಾ ಇತರ ಯಾವುದೇ ಡಿಜಿಟಲ್‌ ಕರೆನ್ಸಿಗಳು ಕಾನೂನುಬಾಹಿರವಾಗಿದ್ದು, ಸದ್ಯಕ್ಕೆ ಅಸ್ತಿತ್ವದಲ್ಲಿ ಇರುವ ತೆರಿಗೆ ಕಾಯ್ದೆ ಸೆಕ್ಷನ್‌ ‘133 ಎ' ನಿಯಮ ಅನ್ವಯ ವಹಿವಾಟಿನಲ್ಲಿ ತೊಡಗಿರುವ ಹೂಡಿಕೆದಾರರ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಹೂಡಿಕೆದಾರರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ.!!

ಬಂಡವಾಳ ಗಳಿಕೆ ಲಾಭ ಪಾವತಿಸಬೇಕು!!

ಬಂಡವಾಳ ಗಳಿಕೆ ಲಾಭ ಪಾವತಿಸಬೇಕು!!

ತೆರಿಗೆ ಇಲಾಖೆ ವಶಪಡಿಸಿಕೊಂಡ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ತೆರಿಗೆ ತಪ್ಪಿಸಿದ ಆರೋಪಗಳ ಕುರಿತು ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ನೋಟಿಸ್‌ ಪಡೆದವರು ಬಿಟ್‌ಕಾಯಿನ್‌ನಲ್ಲಿನ ಹೂಡಿಕೆ ಮತ್ತು ವಹಿವಾಟಿಗಾಗಿ ಬಂಡವಾಳ ಗಳಿಕೆ ಲಾಭ ಪಾವತಿಸಬೇಕಾಗುತ್ತದೆ ಎಂದು ತೆರಿಗೆ ಇಲಾಖೆ ಅಧಿಕಾರಿಯೋರ್ವರು ತಿಳಿಸಿದ್ದಾರೆ.!!

ಬಿಟ್‌ಕಾಯಿನ್‌ಗಳ ಬಗ್ಗೆ ನಿಲುವು!!

ಬಿಟ್‌ಕಾಯಿನ್‌ಗಳ ಬಗ್ಗೆ ನಿಲುವು!!

ಕೇವಲ ಒಂದು ತಿಂಗಳೀನಲ್ಲಿ ಒಂದು ಬಿಟ್‌ಕಾಯಿನ್‌ ಬೆಲೆ ದಿಢೀರನೆ 10 ಸಾವಿರ ಡಾಲರ್‌ನಿಂದ 20 ಸಾವಿರ ಡಾಲರ್‌ವರೆಗೆ ಏರಿಕೆ ಕಂಡು ನಂತರ ಶೇ 20ರಷ್ಟು ಕುಸಿತ ದಾಖಲಿದೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವಾಲಯ ಸಮಿತಿ ಸಲ್ಲಿಸಿರುವ ವರದಿಯನ್ನು ಇದೀಗ ಪರಿಶೀಲಿಸಲಾಗುತ್ತಿದೆ.!!

ಶಿಯೋಮಿ 'ನಂ.1 ಮೈ ಫ್ಯಾನ್ ಸೇಲ್' ಆರಂಭ!..ಭಾರಿ ಡಿಸ್ಕೌಂಟ್ಸ್ ಜೊತೆ ಗೆಲ್ಲಿರಿ ಉಚಿತ ಮೊಬೈಲ್!!ಶಿಯೋಮಿ 'ನಂ.1 ಮೈ ಫ್ಯಾನ್ ಸೇಲ್' ಆರಂಭ!..ಭಾರಿ ಡಿಸ್ಕೌಂಟ್ಸ್ ಜೊತೆ ಗೆಲ್ಲಿರಿ ಉಚಿತ ಮೊಬೈಲ್!!

Best Mobiles in India

English summary
Tax department is set to issue notices to 4 to 5 lakh high networth individuals across the country who trade on the exchanges of this unregulated virtual currency.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X