Just In
Don't Miss
- News
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ವ್ಯವಸ್ಥೆ ಹೇಗಿದೆ?
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Movies
ಕುಂಚ ಕೈಗೆತ್ತಿಕೊಂಡ ನಟಿ ಪ್ರಿಯಾಂಕಾ ಉಪೇಂದ್ರ
- Finance
BSNL ಆಫರ್: ರೀಚಾರ್ಜ್ನಲ್ಲಿ 10,000 ರೂ. ಗೂಗಲ್ ಸ್ಮಾರ್ಟ್ ಸ್ಪೀಕರ್ ಕೊಡುಗೆ
- Automobiles
ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್ಯುವಿ
- Lifestyle
ನಿಮ್ಮ ರಾಶಿಚಕ್ರದ ಪ್ರಕಾರ, ನಿಮ್ಮ ಸಂಗಾತಿಯ ರಹಸ್ಯ ಆಸೆಗಳಿವು
- Education
Karnataka SSCL Exams 2021 Postponed ?: ಎಸ್ಎಸ್ಎಲ್ಸಿ ಹಾಗೆಯೇ ಪಾಸ್ ಮಾಡಿದರೆ ಮುಂದೇನು ?; ಸಚಿವ ಸುರೇಶ್ ಕುಮಾರ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
TCL 20 5G ಸ್ಮಾರ್ಟ್‌ಫೋನ್ ಫೀಚರ್ಸ್ ಬಹಿರಂಗ!
ಟೆಕ್ ವಲಯದಲ್ಲಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಟಿಸಿಎಲ್ ಸಂಸ್ಥೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸಂಚಲನ ಸೃಷ್ಟಿಸಿದ್ದ ಟಿಸಿಎಲ್ ಕಂಪೆನಿ ಇದೀಗ ತನ್ನ ಹೊಸ ಟಿಸಿಎಲ್ 20 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್ TCL 105G ಸ್ಮಾರ್ಟ್‌ಫೋನ್‌ನ ಮುಂದುವರೆದ ಉತ್ತಾರಾಧಿಕಾರಿಯಾಗಿದೆ. ಸದ್ಯ ಈ ಸ್ಮಾರ್ಟ್‌ಫೊನ್ ಫೀಚರ್ಸ್ ಹಾಗೂ ವಿಶೇಷತೆ ಏನು ಅನ್ನೊದು ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ.

ಹೌದು, ಟಿಸಿಎಲ್ ಸಂಸ್ಥೆ ಟಿಸಿಎಲ್ 20 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ವೇದಿಕೆ ಸಿದ್ದ ಪಡಿಸಿಕೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಮಾಡೆಲ್ ನಂಬರ್ T781 ನೊಂದಿಗೆ ಅಭಿವೃದ್ಧಿಯಲ್ಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ ಎಂದು ಅಮದಾಜಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ
TCL 20 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್
ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 690 SoC ಪ್ರೊಸೆಸರ್ ಬಲವನ್ನು ಹೊಂದಿರಲಿದೆ ಎನ್ನಲಾಗಿದ್ದು, ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 6GB RAM ಮತ್ತು 128GB, 256GB ಇಂಟರ್ ಸ್ಟೋರೇಜ್ ಶೇಖರಣಾ ಆಯ್ಕೆಗಳಲ್ಲಿ ಬರಲಿದೆ ಎನ್ನಲಾಗಿದೆ.

ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದ್ದು, ಇದರಲ್ಲಿ ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಟಿಸಿಎಲ್ 20 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ನೀವು ಮೀಸಲಾದ ಗೂಗಲ್ ಅಸಿಸ್ಟೆಂಟ್ ಬಟನ್ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ನಿರೀಕ್ಷಿಸಲಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999