TCL ಸಂಸ್ಥೆಯಿಂದ ಹೊಸ ಸರಣಿಯ ಸ್ಮಾರ್ಟ್‌ಟಿವಿ ಅನಾವರಣ! ಬೆಲೆ ಎಷ್ಟು? ಫೀಚರ್ಸ್ ಹೇಗಿದೆ?
TCL ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ತನ್ನ ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದೀಗ ತನ್ನ ಹೊಸ T6G ಟಿವಿ ಸರಣಿಯ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಈ ಸರಣಿಯು ಗೂಗಲ್ ಟಿವಿ ಮತ್ತು ಡಾಲ್ಬಿ ಅಟ್ಮೋಸ್ ಬೆಂಬಲಿಸುವ 4K QLED ಟಿವಿಗಳನ್ನು ಒಳಗೊಂಡಿದೆ.
ಹೌದು, TCL T6G ಟಿವಿ ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸರಣಿಯಲ್ಲಿ 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಟಿವಿಗಳನ್ನು ಪರಿಚಯಿಸಲಾಗಿದೆ. ಇನ್ನು ಸ್ಮಾರ್ಟ್‌ಟಿವಿಗಳು ಬೆಜೆಲ್ ಲೆಸ್ ವಿನ್ಯಾಸದೊಂದಿಗೆ QLED ಡಿಸ್‌ಪ್ಲೇಯನ್ನು ಹೊಂದಿವೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳು ಒಳಗೊಂಡಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TCL T6G ಟಿವಿ ಸರಣಿಯ ವಿಶೇಷತೆ ಏನು?
TCL T6G ಟಿವಿ ಸರಣಿಯು 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಕೂಡ ಬೆಜೆಲ್-ಲೆಸ್ ವಿನ್ಯಾಸದೊಂದಿಗೆ QLED ಡಿಸ್‌ಪ್ಲೇಯನ್ನು ಹೊಂದಿವೆ. ಇದಲ್ಲದೆ ವರ್ಧಿತ ದೃಶ್ಯ ಅನುಭವಕ್ಕಾಗಿ AiPQ ಎಂಜಿನ್ 3.0 ಅನ್ನು ಒಳಗೊಂಡಿವೆ. ಸ್ಮಾರ್ಟ್‌ಟಿವಿಗಳು ಡಾಲ್ಬಿ ವಿಷನ್, HDR10+ ಮತ್ತು MEMCಗೆ ಬೆಂಬಲವನ್ನು ಹೊಂದಿವೆ. ಇದಲ್ಲದೆ ಕಡಿಮೆ ಮೋಷನ್ ಡಿಸ್‌ಪ್ಲೇ ಬ್ಲರ್ ಮತ್ತು ಸ್ಕ್ರೀನ್ ಟಿಯರಿಂಗ್‌ಗೆ ಅವಕಾಶ ಸಿಗಲಿದೆ.
ಈ ಸರಣಿಯ ಸ್ಮಾರ್ಟ್‌ಟಿವಿಯು 178 ಡಿಗ್ರಿ ವ್ಯೂ ಆಂಗಲ್ ಅನ್ನು ಹೊಂದಿದೆ. ಇದು 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 2GB RAM ಮತ್ತು 16GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ TCL T6G ಸರಣಿಯು 30W ಆಡಿಯೊ ಔಟ್‌ಪುಟ್ ಅನ್ನು ಒದಗಿಸುತ್ತದೆ. ಇದರ ಆಡಿಯೊ ಸಿಸ್ಟಮ್ ಡಾಲ್ಬಿ ಅಟ್ಮಾಸ್ ಮತ್ತು DTS ವರ್ಚುವಲ್:X ಅನ್ನು ವರ್ಚುವಲೈಸ್ಡ್ 3D ಸೌಂಡ್‌ಗಾಗಿ ಬೆಂಬಲಿಸುತ್ತದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 HDMI ಪೋರ್ಟ್‌ಗಳಿಗೆ , 2 USB ಪೋರ್ಟ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದು AMD ಫ್ರೀ ಸಿಂಕ್ ಟೆಕ್ನಾಲಜಿಯನ್ನು ಹೊಂದಿದ್ದು, ಗೇಮಿಂಗ್ ಮಾಡುವಾಗ ವಿವಿಧ ಆಡಿಯೋ ಮತ್ತು ವಿಶ್ಯುಯಲ್ ಸೆಟ್ಟಿಂಗ್‌ಗಳಿಗಾಗಿ ಗೇಮ್ ಬೂಸ್ಟರ್ ಫೀಚರ್ಸ್ ಒಳಗೊಂಡಿದೆ. ಇದಲ್ಲದೆ ಗೂಗಲ್ ಟಿವಿ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್‌ಗೆ ಪ್ರವೇಶವನ್ನು ಸಹ ನೀಡಲಿದೆ. ಇದರಲ್ಲಿ ನೀವು ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶವನ್ನು ಸಹ ಪಡೆದುಕೊಳ್ಳಬಹುದು.

ಬೆಲೆ ಮತ್ತು ಲಭ್ಯತೆ
TCL T6G ಸರಣಿಯ 43 ಇಂಚಿನ ಸ್ಮಾರ್ಟ್‌ಟಿವಿ ಬೆಲೆ 38,990ರೂ. ಆಗಿದೆ. ಇದರ 50 ಇಂಚಿನ ಆಯ್ಕೆಯ ಬೆಲೆ 46,990ರೂ. ಆಗಿದೆ. ಇದಲ್ಲದೆ 55 ಇಂಚಿನ ಆಯ್ಕೆಯು 54,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಟಿವಿಗಳು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.
ಇನ್ನು ಇದೇ ಸಮಯದಲ್ಲಿ ಟಿಸಿಎಲ್ ಕಂಪೆನಿಯು ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಘೋಷಿಸಿದೆ. ಇದರಲ್ಲಿ ಗೆದ್ದವರಿಗೆ ವಿಶೇಷ ರಿಯಾಯಿತಿಯನ್ನು ಸಹ ನೀಡುತ್ತಿದೆ. ಅದರಂತೆ ನೀವು 2,000ರೂ. ವರೆಗಿನ ಕೆಲವು ರಿಯಾಯಿತಿಗಳು ಮತ್ತು 6,000ರೂ. ವರೆಗಿನ ಬ್ಯಾಂಕ್ ಆಫರ್‌ಗಳನ್ನು ಪಡೆದುಕೊಳ್ಳಬಹುದಾಘಿದೆ. ಆದರೆ ಈ ರಿಯಾಯಿತಿಯು ಜೂನ್ 15 ರವರೆಗೆ ಮಾತ್ರ ಲಭ್ಯವಾಗಲಿದೆ.


Click it and Unblock the Notifications








