Home
ಸುದ್ದಿಜಾಲ

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ TCL! ಅತಿ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿ!

ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ TCL ಕಂಪೆನಿ ಹೊಸ ಅಲೆಯನ್ನು ಸೃಷ್ಟಿಸುವ ಸೂಚನೆ ನೀಡಿದೆ. ತನ್ನ ಬಜೆಟ್‌ ಶ್ರೇಣಿಯಲ್ಲಿ ಹೊಸದಾಗಿ ಮೂರು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇವುಗಳನ್ನು TCL S5400, TCL S5400A ಮತ್ತು TCL S5403A ಸ್ಮಾರ್ಟ್‌ಟಿವಿಗಳು ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಟಿವಿಗಳು ಬೆಜೆಲ್‌ ಲೆಸ್‌ ಡಿಸೈನ್‌, ಡಾಲ್ಬಿ ಆಡಿಯೋ ಬೆಂಬಲಿಸುವ 24W ಸ್ಪೀಕರ್‌ಗಳನ್ನು ಒಳಗೊಂಡಿವೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಗಳು 4K ರೆಸಲ್ಯೂಶನ್, ಕ್ವಾಂಟಮ್ ಡಾಟ್ ಮ್ಯಾಟ್ರಿಕ್ಸ್ ಟೆಕ್ನಾಲಜಿಯನ್ನು ಹೊಂದಿವೆ.

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ TCL!

ಹೌದು, TCLಕಂಪೆನಿ ಭಾರತದಲ್ಲಿ ಮೂರು ಹೊಸ ಸ್ಮಾರ್ಟ್‌ಟಿವಿಗಳು ಬಿಡುಗಡೆ ಮಾಡಿದೆ. ಇನ್ನು ಸ್ಮಾರ್ಟ್‌ಟಿವಿ 144Hz ನ ಸೂಪರ್ ಹೈ ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಇದು ಗೇಮಿಂಗ್‌ಗೆ ಸೂಕ್ತವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV ಇಂಟರ್‌ಫೇಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ಟಿವಿ ಇನ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್‌ಟಿವಿ ಮ್ಯೂಸಿಕ್‌ ಮ್ತು ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

TCL S5400 ಸ್ಮಾರ್ಟ್‌ಟಿವಿ ಫೀಚರ್ಸ್‌ ಹೇಗಿದೆ?
TCL S5400 ಸ್ಮಾರ್ಟ್ ಟಿವಿ 32 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ HDR 10 ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಇತ್ತೀಚಿನ ಗೂಗಲ್‌ ಟಿವಿ ಇಂಟರ್‌ಫೇಸ್‌ನೊಂದಿಗೆ ಬರಲಿದೆ ಎಂದು ಟಿಸಿಎಲ್‌ ಕಂಪೆನಿ ಹೇಳಿದೆ. ಇದರಿಂದ ಸ್ಮಾರ್ಟ್‌ಟಿವಿಗಳಿಗೆ ಸೆಟ್‌ ಆಗುವ ಎಲ್ಲಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಗೂಗಲ್‌ ವಾಚ್‌ಲಿಸ್ಟ್‌ಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಒಟಿಟಿ ಅಪ್ಲಿಕೇಶನ್‌ಗಳ ಮೂಲಕ ವೀಡಿಯೋ ಸ್ರೀಮಿಂಗ್‌ ಮಾಡುವುದಕ್ಕೆ ಕೂಡ ಸಾಧ್ಯವಾಗಲಿದೆ.

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ TCL!

ಇನ್ನು ಈ ಸ್ಮಾರ್ಟ್‌ಟಿವಿ ಒಳಗೊಂಡಿರುವ ಮತ್ತೊಂದು ಉಪಯುಕ್ತ ಫೀಚರ್ಸ್‌ ಎಂದರೆ ಇನ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌. ಇದರಿಂದ ಬಳಕೆದಾರರು ಯಾವುದೇ ಡಿವೈಸ್‌ನಿಂದ ಸ್ಮಾರ್ಟ್‌ಟಿವಿಯಲ್ಲಿ ಮ್ಯೂಸಿಕ್‌ ಹಾಗೂ ಅಪ್ಲಿಕೇಶನ್‌ಗಳನ್ನು ಪ್ಲೇ ಮಾಡಲು ಅವಕಾಶ ಸಿಗಲಿದೆ. ಜೊತೆಗೆ ಈ ಗೂಗಲ್‌ ಕಿಡ್ಸ್‌ ಮೋಡ್‌ಗೆ ಪ್ರವೇಶವನ್ನು ಸಹ ನೀಡಲಿದೆ. ಇದರಿಂದ ಮಕ್ಕಳು ಬಳಸುವುದಕ್ಕೆ ಸೂಕ್ತ ಎನಿಸುವ ಫಿಲ್ಟರ್ ಮಾಡಿದ ವಿಷಯಕ್ಕೆ ಮಾತ್ರ ಪ್ರವೇಶ ನೀಡಲಿದೆ.

TCL S5400A ಮತ್ತು S5403A ವಿನ್ಯಾಸ ಹೇಗಿದೆ?
ಸ್ಮಾರ್ಟ್‌ಟಿವಿಗಳು 32 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿವೆ. ಈ ಸ್ಮಾರ್ಟ್‌ಟಿವಿ ಕೂಡ ಆಂಡ್ರಾಯ್ಡ್‌ TV 11 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 7,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಆಯ್ಕೆಯನ್ನು ನೀಡಲಿದೆ. ಅಂದರೆ ಸ್ಮಾರ್ಟ್‌ಟಿವಿಯಲ್ಲಿ ನೀವು 7,00,000ಕ್ಕೂ ಹೆಚ್ಚಿನ ಚಲನಚಿತ್ರಗಳು ಮತ್ತು ಶೋಗಳನ್ನು ಒಂದೇ ಸ್ಥಳದಲ್ಲಿ ದೊರಕುವಂತೆ ಮಾಡಲಿದೆ. ಇನ್ನು ಈ ಎರಡೂ ಸ್ಮಾರ್ಟ್‌ಟಿವಿಗಳು ಕೂಡ ಮೈಕ್ರೋ-ಡಿಮ್ಮಿಂಗ್ ಟೆಕ್ನಾಲಜಿಯನ್ನ ಹೊಂದಿದ್ದು, ಟಿವಿ ವಿಷಯ ವಿಶ್ಲೇಷಣೆಯ ಆಧಾರದ ಮೇಲೆ ಸ್ಕ್ರೀನ್‌ ಬ್ರೈಟ್‌ನೆಸ್‌ ಮತ್ತು ಡಾರ್ಕ್‌ನೆಸ್‌ ಅನ್ನು ಸೆಟ್‌ ಮಾಡಲಿದೆ.

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ TCL!

TCLನ ಹೊಸ ಸ್ಮಾರ್ಟ್‌ಟಿವಿಗಳ ಬೆಲೆ ಎಷ್ಟಿದೆ?
TCL S5400 ಸ್ಮಾರ್ಟ್ ಟಿವಿ ಭಾರತದಲ್ಲಿ 15,990ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು TCL S5400A ಸ್ಮಾರ್ಟ್‌ಟಿವಿ 13,490ರೂ. ಬೆಲೆಯಲ್ಲಿ ದೊರೆಯಲಿದೆ. ಇದಲ್ಲದೆ S5403A HD TV 13,990ರೂ. ಬೆಲೆಯಲ್ಲಿ ಬರಲಿದೆ. ಇದರಲ್ಲಿ ಟಿಸಿಎಲ್‌ S5400 ಮತ್ತು S5403A ಸ್ಮಾರ್ಟ್‌ಟಿವಿ ಖರೀದಿಸುವವರಿಗೆ 10% ಇನ್ಸ್‌ಟಂಟ್‌ ಕ್ಯಾಶ್‌ಬ್ಯಾಕ್ ಅನ್ನು ನೀಡಲಿದೆ. ಈ ಸ್ಮಾರ್ಟ್‌ಟಿವಿಗಳು ಆಫ್‌ಲೈನ್ ರಿಟೇಲ್‌ ಸ್ಟೋರ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಟಿಸಿಎಲ್‌ ಬ್ರ್ಯಾಂಡ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
The latest high end launch from the brand is the C11G smart TV which has 4K resolution, Quantum Dot Matrix technology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+