TCL ಸಂಸ್ಥೆಯಿಂದ ಕ್ವಾಂಟಮ್‌ ಡಾಟ್‌ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಟಿವಿ ಲಾಂಚ್‌!

|

ಹೊಸ ಮಾದರಿಯ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾದ ಟಿಸಿಎಲ್‌ ಕಂಪೆನಿ ತನ್ನ 2021 ಮಿನಿ ಎಲ್ಇಡಿ, ಕ್ಯೂಎಲ್ಇಡಿ ಮತ್ತು 4K HDR ಟಿವಿಗಳನ್ನು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES) 2021 ರಲ್ಲಿ ಅನಾವರಣಗೊಳಿಸಿದೆ. ಇನ್ನು ಈ ಸರಣಿಯಲ್ಲಿ ಟಿಸಿಎಲ್ 4K ಮಿನಿ LED TV C 825, TCL 4K QLED TV C 725, ಮತ್ತು TCL 4K HDR TV P725 ಅನ್ನು ಒಳಗೊಂಡಿದೆ. ಟಿವಿ ಮಾದರಿಗಳು ಈ ವರ್ಷದ ಕೊನೆಯಲ್ಲಿ ಮಾರಾಟವಾಗಲಿವೆ. ಅಲ್ಲದೆ ಟಿಸಿಎಲ್ ತನ್ನ ಒಡಿಜೀರೋ ಮಿನಿ-ಎಲ್ಇಡಿ ತಂತ್ರಜ್ಞಾನವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಟಿಸಿಎಲ್‌

ಹೌದು, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ-2021 ರಲ್ಲಿ ಟಿಸಿಎಲ್‌ ಕಂಪೆನಿ ತನ್ನ ಹೊಸ ಮಾದರಿಯ ಟಿವಿಗಳನ್ನು ಅನಾವರಣಗೊಳಿಸಿದೆ. ಈ ಟಿವಿಗಳು ಒಡಿಜೀರೋ ಮಿನಿ ಎಲ್‌ಇಡಿ ಟೆಕ್ನಾಲಜಿಯನ್ನು ಹೊಂದಿರಲಿದ್ದು, ಇದು ಟಿಸಿಎಲ್‌ನ ಇತ್ತೀಚಿನ ಪೀಳಿಗೆಯ ಮಿನಿ-ಎಲ್ಇಡಿ ಬ್ಯಾಕ್‌ಲೈಟ್ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ. ಇದನ್ನು ಅಲ್ಟ್ರಾ-ಸ್ಲಿಮ್ ಎಲ್ಇಡಿ ಎಲ್ಸಿಡಿ ಟಿವಿಗಳನ್ನು ತಲುಪಿಸಲು ಅದರ ಲಂಬ ಏಕೀಕರಣದೊಂದಿಗೆ ನಿಯೋಜಿಸಲಾಗಿದೆ. ಇದಲ್ಲದೆ, ಟಿಸಿಎಲ್ CES 2021 ರಲ್ಲಿ ಟಿಸಿಎಲ್ ಗೂಗಲ್ ಟಿವಿಗಳ ಸರಣಿಯನ್ನು 2021 ರಲ್ಲಿ ಟಿಸಿಎಲ್ ಗ್ರಾಹಕರಿಗೆ ನೀಡುವುದಾಗಿ ಘೋಷಿಸಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಿಸಿಎಲ್ 4K ಮಿನಿ LED TV C 825

ಟಿಸಿಎಲ್ 4K ಮಿನಿ LED TV C 825

ಟಿಸಿಎಲ್ 4K ಮಿನಿ LED TV C 825 ಸ್ಮಾರ್ಟ್‌ಟಿವಿ ಕ್ವಾಂಟಮ್ ಡಾಟ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ. ಇದು ಡಾಲ್ಬಿ ವಿಷನ್ ಹೆಚ್‌ಡಿಆರ್ ಇಮೇಜಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಕೋಣೆಯಲ್ಲಿ ಬದಲಾಗುತ್ತಿರುವ ಬೆಳಕನ್ನು ಮತ್ತು ವಿಷಯದ ಪ್ರಕಾರಗಳನ್ನು ಮತ್ತೆ ಕ್ರಿಯಾತ್ಮಕವಾಗಿ ಹೊಂದಿಸಲಿದೆ. ಈ ಮೂಲಕ ಡಾಲ್ಬಿ ವಿಷನ್ ಐಕ್ಯೂ ಪರಿಪೂರ್ಣ ಚಿತ್ರವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 120Hz MEMC ಮತ್ತು 120Hz ಕಡಿಮೆ ರಿವರ್ಸ್ ಡಿಸ್‌ಪ್ಲೇಯನ್ನು ಬಳಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4-ವೇ ಎಚ್‌ಡಿಎಂಐ 2.1 ಪೋರ್ಟ್, ವಿಆರ್ಆರ್, ಎಎಲ್ಎಂ, ಇಎಆರ್‌ಸಿ ಮತ್ತು ವೈಫೈ 6 ಅನ್ನು ಬೆಂಬಲಿಸಲಿದೆ. ಮ್ಯಾಗ್ನೆಟಿಕ್ ಸ್ಪ್ಲಿಟ್-ಟೈಪ್ ಕ್ಯಾಮೆರಾ 4M ಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ. ಈ ಮೂಲಕ ಬಳಕೆದಾರರು ವೀಡಿಯೊ ಕರೆಗಳನ್ನು ಸಹ ಮಾಡಬಹುದು.

ಟಿಸಿಎಲ್ C 725 QLED 4K TV

ಟಿಸಿಎಲ್ C 725 QLED 4K TV

ಟಿಸಿಎಲ್ C 725 QLED 4K TVಯು ಕ್ವಾಂಟಮ್ ಡಾಟ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಹೊಂದಿದ್ದು, 100% ಅಲ್ಟ್ರಾ-ಹೈ ಕಲರ್ ಗ್ಯಾಮಟ್ (ಡಿಸಿಐ-ಪಿ 3) ಹೊಂದಿದೆ. ಇದು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೋಸ್ ಆಡಿಯೊ ಮತ್ತು ಒಂಕಿಯೋ ಫೀಚರ್ಸ್‌ಗಳನ್ನ ಹೊಂದಿದೆ. C725 ನ AiPQ ಎಂಜಿನ್ ವಿಭಿನ್ನ ವಿಷಯ ಪ್ರಕಾರಗಳಿಗೆ ನೈಜ-ಸಮಯದ ಆಪ್ಟಿಮೈಸೇಶನ್ ಅನ್ನು ಶಕ್ತಗೊಳಿಸುತ್ತದೆ. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಗೂಗಲ್ ಪ್ಲೇ & ಮೂವಿ, ಮತ್ತು ಡಿಸ್ನಿ + ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ವಿಷಯವನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ MEMC ಮತ್ತು HDMI 2.1 ಅನ್ನು ಬೆಂಬಲಿಸಲಿದೆ.

ಟಿಸಿಎಲ್ P 725 4K

ಟಿಸಿಎಲ್ P 725 4K

ಟಿಸಿಎಲ್ P 725 4K ಸ್ಮಾರ್ಟ್‌ಟಿವಿ HDR ಟಿವಿ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೋಸ್ ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ 2.0 ಮತ್ತು ಆಂಡ್ರಾಯ್ಡ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮಿಲಿಮೀಟರ್-ತೆಳುವಾದ ಲೋಹೀಯ ಟ್ರಿಮ್ ವಿನ್ಯಾಸವನ್ನು ಹೊಂದಿದೆ.

TCL's ODZero ಟೆಕ್ನಾಲಜಿ

TCL's ODZero ಟೆಕ್ನಾಲಜಿ

ಈ ತಂತ್ರಜ್ಞಾನವು ಮಿನಿ-ಎಲ್ಇಡಿ ಬ್ಯಾಕ್ಲೈಟ್ ಲೇಯರ್ ಮತ್ತು ಎಲ್ಸಿಡಿ ಡಿಸ್‌ಪ್ಲೇ ಲೇಯರ್ (ಡಿಫ್ಯೂಸರ್ ಪ್ಲೇಟ್) ನಡುವಿನ ಆಪ್ಟಿಕಲ್ ಅಂತರವನ್ನು 0 ಎಂಎಂಗೆ ಇಳಿಸಲಾಗಿದೆ. ಇದು ಕಂಪನಿಗೆ ಅಲ್ಟ್ರಾ-ತೆಳುವಾದ ಉನ್ನತ-ಕಾರ್ಯಕ್ಷಮತೆಯ ಬ್ಯಾಕ್ಲೈಟ್ ಮಾಡ್ಯೂಲ್ ಅನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಟಿಸಿಎಲ್ ಹೇಳಿದೆ. ಈ ತಂತ್ರಜ್ಞಾನದ ಬಳಕೆಯನ್ನು ಪ್ರವರ್ತಿಸುವ ಮೂಲಕ ನಾವು ಮತ್ತೊಮ್ಮೆ ಪ್ರದರ್ಶನದ ಗುಣಮಟ್ಟವನ್ನು ಹೆಚ್ಚಿಸುತ್ತೇವೆ" ಎಂದು ಟಿಸಿಎಲ್ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಮತ್ತು ಟಿಸಿಎಲ್ ಎಲೆಕ್ಟ್ರಾನಿಕ್ಸ್ ಸಿಇಒ ಕೆವಿನ್ ವಾಂಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ . 2021 ರಲ್ಲಿ ನಾವು ವಿಶ್ವದ ಮೊದಲ ಒಡಿಜೀರೋ ಮಿನಿ-ಎಲ್ಇಡಿ ಟಿವಿಯನ್ನು ವಿಶ್ವದಾದ್ಯಂತದ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

Most Read Articles
Best Mobiles in India

English summary
CES 2021: TCL has launched its 2021 Mini LED, QLED and 4K HDR TV lineup at CES 2021. It also announced its ODZero Mini-LED technology.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X