4K ರೆಸಲ್ಯೂಶನ್ ಸ್ಕ್ರೀನ್ ಬೆಂಬಲಿಸುವ TCL P715 ಸ್ಮಾರ್ಟ್‌ಟಿವಿ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಟೆಕ್‌ ವಲಯ ಸಾಕಷ್ಟು ಮುಂದುವರೆದಿದೆ. ತಂತ್ರಜ್ಞಾನವೂ ಮುಂದುವರೆದಂತೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ವಲಯವೂ ಕುಡ ಸಾಕಷ್ಟು ಅಭಿವೃದ್ದಿ ಸಾಧಿಸಿದೆ. ಇದರ ಫಲವಾಗಿ ಈಗಾಗಲೇ ಹಲವು ಕಂಪೆನಿಗಳು ವೈವಿದ್ಯಮಯವಾದ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಹಲವು ರೆಸಲ್ಯೂಶನ್‌ ಮಾದರಿಯ ಸ್ಮಾರ್ಟ್‌ಟಿವಿಗಳು ಲಭ್ಯವಿದ್ದು, ಇದೀಗ TCL ಕಂಪೆನಿ ಕೂಡ ತನ್ನ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಟಿವಿಯನ್ನ ಬಿಡುಗಡೆ ಮಾಡಿದೆ.

TCL

ಹೌದು, TCL ಕಂಪೆನಿ ತನ್ನ ಹೊಸ P715 ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಮಧ್ಯಮ ಶ್ರೇಣಿಯ ಟಿವಿ ಆಗಿರಲಿದ್ದು ಸದ್ಯ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಈ ಶ್ರೇಣಿಯಲ್ಲಿನ ಎಲ್ಲಾ ಮಾದರಿಗಳು 4K ರೆಸಲ್ಯೂಶನ್ ಸ್ಕ್ರೀನ್‌ ಮತ್ತು ಆಂಡ್ರಾಯ್ಡ್ ಟಿವಿ ಸಾಫ್ಟ್‌ವೇರ್ ಅನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟಿಸಿಎಲ್‌

ಸದ್ಯ ಬಿಡುಗಡೆ ಆಗಿರುವ ಟಿಸಿಎಲ್‌ ಕಂಪೆನಿಯ 4K ರೆಸಲ್ಯೂಶನ್‌ TCL P715 ಸ್ಮಾರ್ಟ್‌ಟಿವಿ ಕೃತಕ ಬುದ್ಧಿಮತ್ತೆ ಮತ್ತು ದೂರದ ಕ್ಷೇತ್ರ ಧ್ವನಿ ಗುರುತಿಸುವಿಕೆಯನ್ನ ಹೊಂದಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ಕೋಣೆಯಾದ್ಯಂತ ಧ್ವನಿ ಆಜ್ಞೆಗಳನ್ನು ತೆಗೆದುಕೊಳ್ಳಲು ನಾಲ್ಕು ಮೈಕ್ರೊಫೋನ್‌ಗಳನ್ನು ಅಳವಡಿಲಸಾಗಿದೆ. ಅಲ್ಲದೆ ರಿಮೋಟ್‌ನಲ್ಲಿ ಯಾವುದೇ ಮಾದರಿಯ ಬಟನ್‌ಗಳನ್ನ ನೀಡಿಲ್ಲ, ಆದರೂ ಸಹ ಇದರ ಮೂಲಕ ವಾಯ್ಸ್‌ ಅನ್ನು ಬಳಸಬಹುದಾಗಿದೆ.

ಸ್ಮಾರ್ಟ್‌ಟಿವಿ

ಇನ್ನು TCLನ ಈ ಸ್ಮಾರ್ಟ್‌ಟಿವಿ ಸಂಪೂರ್ಣ ಶ್ರೇಣಿ 4K ಆಗಿರುತ್ತದೆ ಮತ್ತು ಆಂಡ್ರಾಯ್ಡ್ ಟಿವಿಯ ಆವೃತ್ತಿ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಎಚ್‌ಡಿಆರ್ ಅನ್ನು ಸಹ ಇದು ಬೆಂಬಲಿಸಲಿದೆ ಎಂದು ಸಹ ಹೇಳಲಾಗಿದೆ. ಸದ್ಯ ಲಬ್ಯ ಮಾಹಿತಿಯ ಪ್ರಕಾರ ಡಿಸಿಬಿ ವಿಷನ್ ಎಚ್‌ಡಿಆರ್ ಅನ್ನು ಟಿಸಿಎಲ್ P715 ಸ್ಮಾರ್ಟ್‌ಟಿವಿ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನ ಇನ್‌ಸ್ಟಾಲ್‌ ಮಾಡಲು ಆಂಡ್ರಾಯ್ಡ್‌ ಟಿವಿಗಾಗಿ ಗೂಗಲ್‌ ಪ್ಲೇ ಸ್ಟೋರ್‌ ಅನ್ನು ಬೆಂಬಲಿಸಲಾಗುತ್ತದೆ.

ಸ್ಮಾರ್ಟ್‌ಟಿವಿ

ಇದಲ್ಲದೆ ಈ ಸ್ಮಾರ್ಟ್‌ಟಿವಿಯ ಕೆಲವು ಮಾದರಿಗಳು ವೀಡಿಯೊ ಕರೆಗಳಿಗಾಗಿ ಪಾಪ್-ಅಪ್ ಕ್ಯಾಮೆರಾದೊಂದಿಗೆ ಬರಲಿವೆ. ಜೊತೆಗೆ ಟಿಸಿಎಲ್ P715 ಟಿವಿ ಸರಣಿಯಲ್ಲಿ ಡಾಲ್ಬಿ ಅಟ್ಮೋಸ್ ಆಡಿಯೋ ಬೆಂಬಲವೂ ಸಹ ಇದೆ ಎಂದು ಹೇಳಲಾಗುತ್ತದೆ. ಇನ್ನು ಟಿಸಿಎಲ್ ಕಂಪೆನಿಯ ಈ ಸ್ಮಾರ್ಟ್‌ಟಿವಿ ಸರಣಿಯ ಬೆಲೆ 39,990 ರೂ.ಗಳಿಂದ ರೂ. ಪ್ರಾರಂಭವಾಗಲಿದ್ದು, ಟಿವಿ ಗಾತ್ರವನ್ನು ಅವಲಂಬಿಸಿ 99,990 ರೂ,ಗಳ ವರೆಗೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
TCL has launched the new P715 mid-range television series in India. All models in the range feature 4K resolution screens and Android TV software.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X