Home
ಸುದ್ದಿಜಾಲ

ಸ್ಮಾರ್ಟ್‌ಟಿವಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ TCL! ವಿನ್ಯಾಸ ನೋಡಿದ್ರೆ ಬೆರಗಾಗ್ತೀರಾ!

ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ಕಂಪೆನಿ TCL ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇವುಗಳನ್ನು TCL C755 QD Mini LED 4K ಟಿವಿಗಳು ಮತ್ತು TCL P745 4K UHD ಟಿವಿಗಳ ಶ್ರೇಣಿಯೆಂದು ಗುರತಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ವಿಷನ್‌, ಡಾಲ್ಬಿ ಅಟ್ಮೋಸ್‌ ಮತ್ತು 144Hz ವರೆಗಿನ ರಿಫ್ರೆಶ್ ರೇಟ್‌ ಅನ್ನು ಹೊಂದಿವೆ.

ಹೌದು, TCL ಕಂಪೆನಿ ಹೊಸ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ TCL C755 QD Mini LED TV IMAX-ವರ್ಧಿತ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಆದರೆ TCL P745 ಸ್ಮಾರ್ಟ್‌ಟಿವಿಯು ಲೋಹೀಯ ಅಂಚಿನ-ಕಡಿಮೆ ವಿನ್ಯಾಸ ಮತ್ತು HDR 10 ಬೆಂಬಲದೊಂದಿಗೆ ಬರುತ್ತದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳು ಏನೆಲ್ಲಾ ಫೀಚರ್ಸ್‌ ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟಿವಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ TCL! ನೋಡಿದ್ರೆ ಬೆರಗಾಗ್ತೀರಾ!

TCL P745 4K ಫೀಚರ್ಸ್‌ ಹೇಗಿದೆ?
TCL P745 4K ಸ್ಮಾರ್ಟ್‌ಟಿವಿ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವಕ್ಕಾಗಿ ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಬರಲಿದೆ. ಈ ಸ್ಮಾರ್ಟ್‌ಟಿವಿಯು 98-ಇಂಚಿನ ಸ್ಕ್ರೀನ್‌ ಹೊಂದಿದ್ದು, 144Hz ವೇರಿಯಬಲ್ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಟಿವಿಯು 16:9 ರಚನೆಯ ಅನುಪಾತ, 550 nits ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯು ಡಾಲ್ಬಿ ವಿಷನ್ ಐಕ್ಯೂ ಮತ್ತು ಸಿನಿಮೀಯ ವೀಕ್ಷಣೆಯ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರುತ್ತದೆ.

ಇನ್ನು ಈ ಸ್ಮಾರ್ಟ್‌ಟಿವಿಯು AiPQ ಪ್ರೊಸೆಸರ್ 3.0 ವೇಗವನ್ನು ಹೊಂದಿದ್ದು, ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಜೊತೆಗೆ ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ v5, ವೈ-ಫೈ 5 ಅನ್ನು ಹೊಂದಿದೆ. ಅಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI1.4, HDMI2.0, HDMI2.1, HDCP1.4 ಮತ್ತು HDCP2.2 ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಗೇಮ್ ಮಾಸ್ಟರ್ 2.0, ಮಿರಾಕಾಸ್ಟ್, ವೀಡಿಯೊ ಚಾಟ್ ಮತ್ತು ತ್ವರಿತ ಸೆಟ್ಟಿಂಗ್‌ಗಳನ್ನು ಸಹ ಒಳಗೊಂಡಿದೆ.

ಸ್ಮಾರ್ಟ್‌ಟಿವಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ TCL! ನೋಡಿದ್ರೆ ಬೆರಗಾಗ್ತೀರಾ!

TCL C755 ಫೀಚರ್ಸ್‌ ಹೇಗಿದೆ?
TCL C755 ಸರಣಿಯು 50-ಇಂಚು, 55-ಇಂಚು, 65-ಇಂಚು, 75-ಇಂಚು, 85-ಇಂಚು ಮತ್ತು 98-ಇಂಚಿನ ಗಾತ್ರದ ಡಿಸ್‌ಪ್ಲೇ ಆಯ್ಕೆಗಳಲ್ಲಿ ಬರಲಿದೆ. ಇದು AMD ಫ್ರೀಸಿಂಕ್ ಪ್ರೀಮಿಯಂ ಪ್ರೊ, ಡಾಲ್ಬಿ ವಿಷನ್ IQ, HLG ಮತ್ತು HDR10+ ನಂತಹ ವಿವಿಧ ಫೀಚರ್ಸ್‌ಗಳೊಂದಿಗೆ ಬರಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿ ಕೂಡ ಗೂಗಲ್‌ ಟಿವಿ ಮೂಲಕ ರನ್‌ ಆಗಲಿದೆ. ಇದಲ್ಲದೆ ಟಿವಿಯು Dolby Atmos ಮತ್ತು DTS-HD+DTS ವರ್ಚುವಲ್ X ಜೊತೆಗೆ 2.1 ಚಾನೆಲ್ ಸಿಸ್ಟಂ ಜೊತೆಗೆ ಪವರ್‌ಫುಲ್‌ ಆಡಿಯೋವನ್ನು ಸಹ ನೀಡಲಿದೆ.

ಸ್ಮಾರ್ಟ್‌ಟಿವಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ TCL! ನೋಡಿದ್ರೆ ಬೆರಗಾಗ್ತೀರಾ!

ಭಾರತದಲ್ಲಿ TCL P745 4K ಮತ್ತು TCL C755 QD-Mini LED ಬೆಲೆ ಮತ್ತು ಲಭ್ಯತೆ
TCL ಕಂಪೆನಿ ಹೇಳಿಕೊಂಡಿರುವಂತೆ 98-ಇಂಚಿನ P745 ಮಾದರಿಯು ಭಾರತದಲ್ಲಿ ಅಂದಾಜು 3,09,990ರೂ.ಬೆಲೆಯನ್ನು ಹೊಂದಿದೆ. ಆದರೆ C755 QD-Mini LED ಸರಣಿಯು 89,990ರೂ ಗಳಿಂದ ಪ್ರಾರಂಭವಾಗಲಿದೆ. 4,99,990ರೂ ವರೆಗಿನ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳು ಲಭ್ಯವಾಗಲಿವೆ.

ಇದಲ್ಲದೆ TCL ಕಂಪೆನಿ ಇದೇ ವರ್ಷ TCL S5400 ಸ್ಮಾರ್ಟ್‌ಟಿವಿ 32-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, HDR 10 ಅನ್ನು ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ಟಿವಿ ಇತ್ತೀಚಿನ ಗೂಗಲ್‌ ಟಿವಿ ಇಂಟರ್‌ಫೇಸ್‌ನೊಂದಿಗೆ ಬರಲಿದೆ ಎಂದು ಟಿಸಿಎಲ್‌ ಕಂಪೆನಿ ಹೇಳಿದೆ. ಇದರಿಂದ ಸ್ಮಾರ್ಟ್‌ಟಿವಿಗಳಿಗೆ ಸೆಟ್‌ ಆಗುವ ಎಲ್ಲಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಗೂಗಲ್‌ ವಾಚ್‌ಲಿಸ್ಟ್‌ಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಒಟಿಟಿ ಅಪ್ಲಿಕೇಶನ್‌ಗಳ ಮೂಲಕ ವೀಡಿಯೋ ಸ್ರೀಮಿಂಗ್‌ ಮಾಡುವುದಕ್ಕೆ ಕೂಡ ಸಾಧ್ಯವಾಗಲಿದೆ.

Best Mobiles in India

English summary
TCL P745 and TCL C755 QD-Mini LED 4K Google TVs Launched in India: Price, Specs deatils in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+