TCLನಿಂದ ಬರಲಿದೆಯಂತೆ ಮೂರು ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌!

|

ತಂತ್ರಜ್ಞಾನ ಮುಂದುವರೆದಂತೆ ಇಂದು ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಡಿಸ್‌ಪ್ಲೇ ವಿನ್ಯಾಸದಿಂದ ಹಿಡಿದು ಕ್ಯಾಮೆರಾ ಸೆಟ್‌ಅಪ್‌ ವರೆಗೂ ಕೂಡ ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಬದಲಾವಣೆಯಾಗಿದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹಂತ ಹಂತವಾಗಿ ಆಪ್ಡೇಟ್‌ ಆಗ್ತಾ ಇದ್ದು, ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನ ಚಕಿತಗೊಳ್ಳುವಂತೆ ಮಾಡುತ್ತಿವೆ. ಅದೇ ಹಾದಿಯಲ್ಲಿ ಇದೀಗ TCL ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇನ್ನು ಕಾಣಿಸಿಕೊಳ್ಳದ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಒಂದನ್ನ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಸದ್ಯ

ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಈಗಾಗ್ಲೆ ನವೀನ ಮಾದರಿಯ ಸ್ಮಾರ್ಟ್‌ಫೊನ್‌ಗಳು ಲಭ್ಯವಿವೆ. ಅಷ್ಟೇ ಯಾಕೆ ಹುವಾವೇ, ಸ್ಯಾಮ್‌ಸಂಗ್‌ನಂತಹ ದೈತ್ಯ ಕಂಪೆನಿಗಳು ಫೋಲ್ಡೇಬಲ್‌ ಸ್ಮಾರ್ಟ್‌ಫೊನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರನ್ನ ಅಚ್ಚರಿಗೆ ನೂಕಿದ್ದು ಇದೆ. ಆದರೆ ಇದೀಗ TCL ಸ್ಮಾರ್ಟ್‌ಫೋನ್‌ ಕಂಪೆನಿ ರೋಲೇಬಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ.

ರೋಲೇಬಲ್‌ ಸ್ಮಾರ್ಟ್‌ಫೋನ್‌

ರೋಲೇಬಲ್‌ ಸ್ಮಾರ್ಟ್‌ಫೋನ್‌

ಈಗಾಗ್ಲೆ ಡ್ಯುಯೆಲ್‌ ಸ್ಕ್ರೀನ್‌, ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಈ ರೋಲೇಬಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಇನ್ನು ಲಭ್ಯವಿಲ್ಲ. ಇಂತಹ ಮಾದರಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ ಎನ್ನುವುದೇ ಟೆಕ್‌ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ರೋಲೆಬಲ್‌ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್‌ ಸ್ಕ್ರೀನ್‌ ಇರಲಿದ್ದು, ಒಂದರ ಮೇಲೆ ಒಂದರಂತೆ ಮಡಚಬಹುದಾದ ವಿನ್ಯಾಸವನ್ನ ನೀಡಲಾಗಿರುತ್ತೆ ಎನ್ನಲಾಗಿದೆ.

ಕಾರ್ಯನಿರ್ವಹಣೆ ಹೇಗೆ

ಕಾರ್ಯನಿರ್ವಹಣೆ ಹೇಗೆ

ಈ ಮಾದರಿಯ ಸ್ಮಾರ್ಟ್‌ಫೋನ್‌ನಲ್ಲಿ ಒಂದು ಸ್ಕ್ರೀನ್‌ ಅನ್ನು ಮಾತ್ರ ತೆರೆದಿದ್ದರೆ ಅದು 6.75-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು ಅಮೇಲೆಡ್‌ ಡಿಸ್‌ಪ್ಲೇ ಆಗಿದೆ. ಅಲ್ಲದೆ ಇದನ್ನ ರೋಲೆಬಲ್‌ ಮಾಡಿದಾಗ ಈ ಡಿಸ್‌ಪ್ಲೇಯು 10 ಇಂಚಿಗೆ ಬದಲಾಗಲಿದ್ದು, ಟ್ಯಾಭ್ಲೆಟ್‌ ಮಾದರಿಯಲ್ಲಿ ಬಳಸಬಹುದಾಗಿದೆ. ಟ್ಯಾಬ್ಲೆಟ್‌ ಮಾದರಿಯಲ್ಲಿ ಬಳಸಲು ನಿಮಗೆ ಇಷ್ಟವಾಗದಿದ್ದಲ್ಲಿ ಇದರಲ್ಲಿರುವ ಯಾಂತ್ರಿಕೃತ ಮೋಟಾರ್‌ ಆಕ್ಟಿವೇಟ್‌ ಆಗಲಿದೆ. ಆಗ ಸ್ಕ್ರೀನ್‌ ಮಡಚಿಕೊಳ್ಳಲಿದ್ದು, ನಿಮ್ಮ ಡಿವೈಸ್‌ ಸಾಮಾನ್ಯ ಫೋನ್‌ ಆಗಿ ಪರಿವರ್ತನೆಯಾಗಲಿದೆ.

ವಿನ್ಯಾಸ

ವಿನ್ಯಾಸ

ರೋಲೇಬಲ್‌ ಸ್ಮಾರ್ಟ್‌ಫೋನ್‌ನಲ್ಲಿ ಡ್ರಾಗನ್‌ಹಿಂಜ್‌ ಸೆಟ್‌ಅಪ್‌ ಹಾಗೂ ಬಟರ್‌ಫ್ಲೈ ಹಿಂಜ್‌ ಸೆಟ್‌ಅಪ್‌ ಅನ್ನು ನೀಡಲಾಗಿರುತ್ತದೆ. ಡ್ರಾಗನ್‌ಹಿಂಜ್‌ ಸೆಟ್‌ಅಪ್‌ ಮೂಲಕ ಸ್ಕ್ರೀನ್‌ ಅನ್ನು ತೆರೆಯಬಹುದಾಗಿರುತ್ತದೆ. ಬಟರ್‌ಪ್ಲೇಹಿಂಜ್‌ ಸೆಟ್‌ಅಪ್‌ ಸ್ಕ್ರೀನ್‌ನಲ್ಲಿ ರೋಲೇಬಲ್‌ ಮಾಡುವುದಕ್ಕೆ ಸಹಾಯವಾಗಲಿದೆ. ಅಲ್ಲದೆ ಟ್ಯಾಭ್ಲೆಟ್‌ ಮಾದರಿಯಲ್ಲಿ ತೆರೆದಾಗ ಸ್ಮಾರ್ಟ್‌ಫೋನ್‌ ಅನ್ನು S ಆಕೃತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬಲ್ಲದು ಎಂದು ಟಿಸಿಎಲ್‌ ಕಂಪೆನಿ ಹೇಳಿಕೊಂಡಿದೆ.

ವಿಶೇಷತೆ

ವಿಶೇಷತೆ

ಇನ್ನು ಟಿಸಿಎಲ್‌ ಕಂಪೆನಿ ಹೇಳಿಕೊಂಡಿರುವ ರೋಲೇಬಲ್‌ ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷತೆ ಏನೆಂದರೆ ಮೂರು ಸ್ಕ್ರೀನ್‌ಗಳು ಕೂಡ ಮೂರು ಪ್ರತ್ಯೇಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ ಅನ್ನೊದು. ಅಂದರೆ ಒಂದೇ ಸ್ಮಾರ್ಟ್‌ಫೋನ್‌, ಮೂರು ಸ್ಕ್ರೀನ್‌ ಮೂರು ಬ್ಯಾಟರಿ ಪ್ಯಾಕ್ಅಪ್‌ ಇರಲಿದೆ. ಆದರೆ ಇಂತಹದೊಮದು ಪ್ರಯತ್ನ ಸಾರ್ಧಯವೆ ಅನ್ನೊ ಪ್ರಶ್ನೆ ಇದ್ದರೂ ಸಹ ಟಿಸಿಎಲ್‌ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಇಂತಹ ಪ್ರಯತ್ನಕ್ಕೆ ಕಾಐ ಹಾಕಿರೋದು ತುಂಬಾನೇ ವಿಶೇಷವಾಗಿದೆ.

ಇತರೆ

ಇತರೆ

ಸದ್ಯ ಈ ಮಾದರಿಯ ಸ್ಮಾರ್ಟ್‌ಫೊನ್‌ ಇನ್ನು ಮಾರುಕಟ್ಟೆಗೆ ಲಗ್ಗೆ ಹಾಕಿಲ್ಲ. ಟಿಸಿಎಲ್‌ ಕಂಪೆನಿಯ ಕಲ್ಪನೆ ಸಾಕಾರವಾಗಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ನಿಜಕ್ಕೂ ಇದೊಂದು ಸಧನೆಯೆ ಆಗಲಿದೆ. ಏಕೆಂದರೆ ಈಗಾಗ್ಲೆ ಹುವಾವೇ, ಸ್ಯಾಮ್‌ಸಂಗ್‌ ಕಂಪೆನಿಗಳು ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿವೆ. ಟಿಸಿಎಲ್‌ ಕಂಪೆನಿ ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದಿಟ್ಟಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರತಿಯೊಂದು ಸ್ಕ್ರೀನ್‌ ಪ್ರತ್ಯೇಕ್‌ ಮೊಡ್‌ ಹೊಂದಿರಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Both the devices are still concept phones for now and have their own set of pros and cons. It is still not for sure when these will hit the shelves.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X