Home
ಸುದ್ದಿಜಾಲ

ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನು ಆಳಲಿದೆ 'TCL' ಕಂಪೆನಿಯ 'X4 QLED TV'!!

ಭಾರತದ ಟಿವಿ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ದಿಗ್ಗಜನಾಗಿ ಮೆರೆದಿದ್ದ 'ಟಿಸಿಎಲ್' ಕಂಪೆನಿ ಮತ್ತೆ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಿದೆ. ದೇಶದಲ್ಲೇ ಮೊದಲ ಬಾರಿಗೆ 65 ಇಂಚಿನ ಯುಹೆಚ್‌ಡಿ ಡಿಸ್‌ಪ್ಲೇ ಕ್ಯುಎಲ್‌ಇಡಿ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿ 'ಟಿಸಿಎಲ್' ಕಂಪೆನಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನು ಆಳಲು ಮತ್ತೆ ತಯಾರಾಗಿದೆ. ಇದು ಇತರೆ ಟಿವಿ ಕಂಪೆನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹೌದು, ಪ್ರೀಮಿಯಮ್ ಟಿವಿಗಳ ತಯಾರಕ ಎಲೆಕ್ಟ್ರಾನಿಕ್ ಕಂಪೆನಿ ಎಂದೇ ಹೆಸರಾಗಿರುವ ಟಿಸಿಎಲ್ ಈಗ ಮತ್ತೊಮ್ಮೆ ಟಿವಿ ಮಾರುಕಟ್ಟೆಯಲ್ಲಿ ಮಿಂಚಲು ರೆಡಿಯಾಗಿದೆ. ದೇಶದಲ್ಲಿರುವ ಎಲ್ಲಾ ಪ್ರೀಮಿಯಮ್ ಮಾದರಿಯ ಟಿವಿಗಳಿಗೂ ಸೆಡ್ಡು ಹೊಡೆಯುವ ಸಲುವಾಗಿ ತಮ್ಮ ಮೊದಲ ಹೈ ಎಂಡ್ ಪ್ರೀಮಿಯಮ್ ಸ್ಮಾರ್ಟ್‌ಟಿವಿ 'TCL X4 QLED TV'ಯನ್ನು ಭಾರತದ ಟಿವಿ ಮಾರುಕಟ್ಟೆಗೆ ಪರಿಚಯಿಸಿ ಗಮನಸೆಳೆದಿದೆ.

ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನು ಆಳಲಿದೆ 'TCL' ಕಂಪೆನಿಯ 'X4 QLED TV'!!

3840 x 2160 ಪಿಕ್ಸೆಲ್ ರೆಸಲ್ಯೂಶನ್ ಕ್ವಾಂಟಮ್ ಡಾಟ್ (QLED) ಡಿಸ್‌ಪ್ಲೇ, 40 ವ್ಯಾಟ್ ಸೌಂಡ್ ಔಟ್‌ಪುಟ್ ಸೇರಿದಂತೆ ಹತ್ತಾರು ಫೀಚರ್ಸ್ ಹೊತ್ತುಬಂದಿರುವ ಸ್ಮಾರ್ಟ್‌ಟಿವಿ 'TCL X4 QLED TV' ಈಗ ಮಾರುಕಟ್ಟೆಯ ಟ್ರೆಂಡ್ ಟಿವಿಗಳಲ್ಲಿ ಒಂದಾಗಿದೆ ಹಾಗಾದರೆ, 'TCL X4 QLED TV' ಟಿವಿ ಹೊಂದಿರುವ ವಿಶೇಷ ಫೀಚರ್ಸ್ ಯಾವುವು ಮತ್ತು ಅದರ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಕ್ವಾಂಟಮ್ ಡಾಟ್ (QLED) ಡಿಸ್‌ಪ್ಲೇ!

ಕ್ವಾಂಟಮ್ ಡಾಟ್ (QLED) ಡಿಸ್‌ಪ್ಲೇ!

ಮೊದಲೇ ಹೇಳಿದಂತೆ 'TCL X4 QLED TV' 3840 x 2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಕ್ವಾಂಟಮ್ ಡಾಟ್ (QLED) ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೆಚ್‌ಡಿಆರ್ 800 ಐಪಿಎಸ್ ಎಲ್‌ಸಿಡಿ ಪ್ಯಾನಲ್‌ಗಿಂತಲೂ ಅತ್ಯಂತ ಸಣ್ಣ ಸೆಮಿಕಂಡಕ್ಟರ್‌ಗಳನ್ನು ಹೊಂದಿದೆ. ಇದರಿಂದ ಗಾಢವಾದ ಬಣ್ಣಗಳೊಂದಿಗೆ ವ್ಯಾಪಕವಾದ ಬಣ್ಣದ ಗ್ಯಾಮಟ್ ಸಕ್ರಿಯವಾಗುತ್ತದೆ. ನೀವು ಬ್ಲ್ಯೂರೇಸ್ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಹೈ ರೆಸಲ್ಯೂಶನ್ ಸಿನೆಮಾಗಳನ್ನು ವೀಕ್ಷಿಸಿದರೆ, ವಿಡಿಯೋ ಗುಣಮಟ್ಟದಲ್ಲಿ ಸ್ವಲ್ಪವೂ ಮಸುಕಾಗುವುದಿಲ್ಲ. ನೀವು 60fps ರಿಫ್ರೆಶ್ ರೇಟ್‌ನೊಂದಿಗೆ ಆಟವಾಡುತ್ತಿದ್ದರೆ MEMC ಪ್ರತಿ ಫ್ರೇಮ್ ಅನ್ನು ನಕಲು ಮಾಡುತ್ತದೆ, ಇದು 120fps ವಿಷಯವನ್ನು ಸುಗಮ ಪ್ಲೇಬ್ಯಾಕ್ ನೀಡುತ್ತದೆ.

ಅತ್ಯುತ್ತಮ ಸ್ಪೀಕರ್ಸ್!

ಅತ್ಯುತ್ತಮ ಸ್ಪೀಕರ್ಸ್!

ಸಿನಿಮೀಯ ಅನುಭವವನ್ನು ಒದಗಿಸುವ ಸರಿಸಾಟಿಯಿಲ್ಲದ 40 ವ್ಯಾಟ್ ಸೌಂಡ್ ಔಟ್‌ಪುಟ್ ಹೊಂದಿರುವುದು 'TCL X4 QLED TV' ಪ್ರೀಮಿಯಮ್ ಸ್ಮಾರ್ಟ್‌ಟಿವಿಯ ಮತ್ತೊಂದು ಪ್ರಮುಖ ವಿಶೇಷತೆಗಳಲ್ಲಿ ಒಂದು ಎನ್ನಬಹುದು. ಒಟ್ಟು ಆರು ಸ್ಪೀಕರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಹೈ ವಾಲ್ಯೂಮ್‌ನಲ್ಲಿಯೂ ಗುಣಮಟ್ಟಸ ಧ್ವನಿಯನ್ನು ನೀಡುವುದನ್ನು ನೋಡಬಹುದು. ಡಿಜಿಟಲ್ ಡಿಸ್‌ಪ್ಲೇ ಮತ್ತು ಡಿಜಿಟಲ್ ನಾಯ್ಸ್ ರೆಡ್ಯೂಸ್ ತಂತ್ರಜ್ಞಾನದಿಂದ ಒಂದು ಸಣ್ಣ ಶಬ್ದ ಕೂಡ ನಿಮ್ಮ ಕಿವಿಯನ್ನು ದಾಟಿ ಹಾರಿ ಹೋಗುವುದಿಲ್ಲ.

ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ!

ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ!

ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡುವ ಬಹುತೇಕ ಟಿವಿ ಕಂಪೆನಿಗಳು ಆಂಡ್ರಾಯ್ಡ್ ಓಎಸ್ ಇರುವುದಾಗಿ ಹೇಳಿಕೊಳ್ಳುತ್ತವೆ. ಆದರೆ, 'TCL X4 QLED TV' ಪ್ರೀಮಿಯಮ್ ಸ್ಮಾರ್ಟ್‌ಟಿವಿಯಲ್ಲಿ ಗೂಗಲ್-ಸರ್ಟಿಫೈಡ್ ಆಧಾರಿತ ಆಂಡ್ರಾಯ್ಡ್ 8 ಓರಿಯೊ ಓಎಸ್ ಅನ್ನು ಅಳಡಿಸಲಾಗಿದೆ. ಗೂಗಲ್‌ನ ಇತ್ತೀಚಿನ ಟಿವಿ ಓಎಸ್ 64-ಬಿಟ್ ಕ್ವಾಡ್-ಕೋರ್ ಚಿಪ್‌ಸೆಟ್‌ನೊಂದಿಗೆ 2.5 ಜಿಬಿ RAM ಮತ್ತು 16 ಜಿಬಿ ಆಂತರಿಕ ಶೇಖರಣೆಯನ್ನು ಹೊಂದಿದೆ. ಶಕ್ತಿಶಾಲಿ ಕ್ವಾಡ್-ಕೋರ್ ಚಿಪ್‌ಸೆಟ್ ಮುಕ್ತ ಗೇಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ..

ಪ್ರೀಮಿಯಮ್ ಡಿಸೈನ್!

ಪ್ರೀಮಿಯಮ್ ಡಿಸೈನ್!

ವಿ 7.9 ಎಂಎಂ ದಪ್ಪದೊಂದಿಗೆ ಬೆಜೆಲ್‌ಲೆಸ್ ವಿನ್ಯಾಸದಲ್ಲಿ TCL X4 QLED TV' ಪ್ರೀಮಿಯಮ್ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಸಂಪೂರ್ಣ ಲೋಹದ ಫ್ರೇಮ್ ವಿನ್ಯಾಸವನ್ನು ಹೊಂದಿದ್ದರೂ ಸಹ ಈ ಸ್ಮಾರ್ಟ್‌ಟಿವಿ ಒಂದು ನಾಣ್ಯದಷ್ಟು ತೆಳುವಾಗಿರುವುದು ಇದರ ಪ್ರಮುಖ ವಿಶೇಷತೆ ಎನ್ನಬಹುದು. ಮುಂಭಾಗದಲ್ಲಿ ಸ್ಪೀಕರ್ ಆಗಿರುವುದರಿಂದ ಟಿವಿ ಬಳಕೆದಾರರಿಗೆ ನೇರವಾದ ಧ್ವನಿಯ ಅನುಭವ ಸಿಗಲಿದೆ. ಕಾರ್ಡಾನ್ ಲಾಂಛನವನ್ನು ಹೊಂದಿರುವ ಟಿವಿಯ ಲುಕ್ ಗ್ರಾಹಕರನ್ನು ಏಕನೋಟದಲ್ಲಿ ಸೆಳೆಯುವಂತಿದೆ.

ಇತರೆ ಫೀಚರ್ಸ್ ಯಾವುವು?

ಇತರೆ ಫೀಚರ್ಸ್ ಯಾವುವು?

ಪ್ರೀಮಿಯಮ್ ಸ್ಮಾರ್ಟ್‌ಟಿವಿ 'TCL X4 QLED TV' ಮೂರು ಹೆಚ್‌ಡಿಎಂಐ ಪೋರ್ಟ್ ಮತ್ತು ಡ್ಯೂಯಲ್ ಯುಎಸ್‌ಬಿ-ಎ ಪೋರ್ಟ್‌ಗಳನ್ನು ಹೊಂದಿದೆ. ಬಳಕೆದಾರರು ತಮ್ಮ ಸೆಟಪ್ ಬಾಕ್ಸ್ ಮತ್ತು ಗೇಮಿಂಗ್ ಕನ್ಸೋಲ್ ಮತ್ತು ಪಿಸಿಗಳನ್ನು ಒಂದೇ ಸಮಯದಲ್ಲಿ ಟಿವಿಗೆ ಸಂಪರ್ಕಿಸಬಹುದಾದ ಆಯ್ಕೆ ಇದೆ. ಯುಎಸ್‌ಬಿ ಪೋರ್ಟುಗಳಿಂದ ಕೀಬೋರ್ಡ್, ಮೌಸ್ ಅಥವಾ ಮಲ್ಟಿಮೀಡಿಯಾ ಬಳಕೆ ಮಾಡಬಹುದು. ಇದು ಹೈ ಎಂಡ್ ಅನುಭವನ್ನು ನೀಡಲಿದೆ.

ಟಿವಿ ಬೆಲೆ ಮತ್ತು ಒಟ್ಟಾರೆ ವಿಮರ್ಶೆ

ಟಿವಿ ಬೆಲೆ ಮತ್ತು ಒಟ್ಟಾರೆ ವಿಮರ್ಶೆ

3840 x 2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಪ್ರೀಮಿಯಂ ಹೈ-ಕ್ವಾಲಿಟಿ ಕ್ವಾಂಟಮ್ ಡಾಟ್ (QLED) ಡಿಸ್‌ಪ್ಲೇ , ಗೂಗಲ್-ಸರ್ಟಿಫೈಡ್ ಆಧಾರಿತ ಆಂಡ್ರಾಯ್ಡ್ 8 ಓರಿಯೊ, ನಾಣ್ಯದಷ್ಟು ತೆಳು ವಿನ್ಯಾಸದಂತಹ ಅತ್ಯುತ್ತಮ ವಿಶೇಷತೆಗ ಹಾಗೂ ಗುಣಮಟ್ಟವನ್ನು ಹೊತ್ತು ಬಂದಿರುವ ಈ ಸ್ಮಾರ್ಟ್‌ಟಿವಿಯ ಬೆಲೆ 1,09,990 ರೂಪಾಯಿಗಳಾಗಿವೆ. ಸ್ಮಾರ್ಟ್ QLED ಟೆಲಿವಿಷನ್ ವೈಶಿಷ್ಟ್ಯವನ್ನು ಹೊತ್ತು ಅನನ್ಯ ಪ್ರೀಮಿಯಂ ಸ್ಮಾರ್ಟ್‌ಟಿವಿ ಈ ಬೆಲೆಯಲ್ಲಿ ನಿಮಗೆ ಬೇರೆಡೆ ಸಿಗುವುದು ಕಷ್ಟದ ಮಾತು ಎನ್ನಬಹುದು.

Best Mobiles in India

English summary
TCL has set a new benchmark in the premium smart-television segment by launching the TCL X4 QLED TV with 65-inch UHD display, the first QLED television from the company with superior imaging and audio capabilities. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+