'TCS' 50ನೇ ವಾರ್ಷಿಕೋತ್ಸವದ ಪ್ರಯುಕ್ತ ಸಿಬ್ಬಂದಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್!

By Gizbot Bureau
|

ಟಿಸಿಎಸ್ ಕಂಪೆನಿಗೆ 50 ವರ್ಷದ ಸಂಭ್ರಮ. ಈ ಸಂಭ್ರಮಕ್ಕಾಗಿ ತನ್ನ ಕೆಲಸಗಾರರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ರಿಸ್ಟ್ ವಾಚ್ ನ್ನು ಉಡುಗೊರೆಯಾಗಿ ನೀಡಿದೆ. ಆದರೆ ಕಂಪೆನಿಯ ಕೆಲಸಗಾರರು ಇದರಿಂದ ತೃಪ್ತರಾಗಿಲ್ಲ. ಹಿರಿಯ ಕೆಲಸಗಾರರು ವಾಚ್ ಗಿಫ್ಟ್ ಕೊಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರೀಕ್ಷೆಯೇ ಬೇರೆ ಇತ್ತು:

ನಿರೀಕ್ಷೆಯೇ ಬೇರೆ ಇತ್ತು:

ಹೆಚ್ಚಿನ ಕೆಲಸಗಾರರು ಹಣದ ಬೋನಸ್ ಅಥವಾ ಟಾಟಾ ಪ್ರೊಡಕ್ಟ್ ಗಳಿರುವ ಆಭರಣಗಳು, ಮನೆಗಳು ಮತ್ತು ಕಾರು ಇತ್ಯಾದಿಗಳ ನಿರೀಕ್ಷೆಯಲ್ಲಿದ್ದರು. ಆದರೆ ಇದೆಲ್ಲದರ ಬದಲಾಗಿ ವಾಚ್ ನ್ನು ಉಡುಗೊರೆಯಾಗಿ ಕೊಟ್ಟಿರುವುದು ಅವರಿಗೆ ಅಷ್ಟೇನು ಮನಸ್ಸಿಗೆ ಹಿತವೆನಿಸಿಲ್ಲ.

ಬಹಳ ಹಿಂದೆಯೇ ಗಿಫ್ಟ್ ಬಗ್ಗೆ ಘೋಷಣೆ:

ಬಹಳ ಹಿಂದೆಯೇ ಗಿಫ್ಟ್ ಬಗ್ಗೆ ಘೋಷಣೆ:

ಜಗತ್ತಿನಾದ್ಯಂತ ತನ್ನ 50 ವಾರ್ಷಿಕೋತ್ಸವಕ್ಕೆ ಎಲ್ಲಾ ಕಾರ್ಮಿಕರಿಗೆ ಗಿಫ್ಟ್ ನೀಡುವುದಾಗಿ ಟಾಟಾ ಕನ್ಸಲ್ಟೆಂಟ್ ಸರ್ವೀಸ್ ಬಹಳ ಹಿಂದೆಯೇ ಘೋಷಣೆ ಮಾಡಿತ್ತು.

ಕಾರ್ಮಿಕರ ಮನದಾಳ:

ಕಾರ್ಮಿಕರ ಮನದಾಳ:

"ಎಲ್ಲಾ ಕಡೆಯೂ ಬೇಸರವಿದೆ.ನಮ್ಮಲ್ಲಿ ಹೆಚ್ಚಿನವರು ಏನು ಗಿಫ್ಟ್ ಇರಬಹುದು ಎಂದು ಕಳೆದ ಒಂದು ವರ್ಷದಿಂದಲೂ ಊಹಿಸುತ್ತಲಿದ್ದೆವು. ಟಾಟಾ ಮೋಟರ್ ನಿಂದ ಕಾರು ಗಿಫ್ಟ್ ಸಿಗಬಹುದು, ಮನೆ, ಆಭರಣಗಳು ಅಥವಾ ಇತ್ಯಾದಿಗಳ ಬಗ್ಗೆ ಟಾಟಾ ಗ್ರೂಪ್ ನಲ್ಲಿ ಊಹೆ ಇತ್ತು. ಇನ್ನು ಕೆಲವರು ದೊಡ್ಡ ಕ್ಯಾಷ್ ಬೋನಸ್ ಸಿಗಬಹುದು ಎಂದು ಅಂದುಕೊಳ್ಳುತ್ತಿದ್ದರು. ಎಪ್ರಿಲ್ 12 ರ ವರೆಗೂ ಎಲ್ಲರೂ ಕಾಯುತ್ತಲಿದ್ದೆವು. ಕಳೆದ ಒಂದು ವರ್ಷದಿಂದ Q4 ನಲ್ಲಿ ಪ್ರಕಟವಾಗುವ ಈ ವಿಚಾರಕ್ಕಾಗಿ ಕಾತುರದಿಂದ ಇದ್ದೆವು" ಎನ್ನುತ್ತಾರೆ ಪ್ರಮುಖ ಅಧಿಕಾರಿಯೊಬ್ಬರು.

ಸಿಇಓ ಹೇಳಿಕೆ:

ಸಿಇಓ ಹೇಳಿಕೆ:

ಟಿಸಿಎಸ್ ನ ಸಿಇಓ ಮತ್ತು ಎಂಡಿ ಆಗಿರುವ ರಾಜೇಶ್ ಗೋಪಿನಾಥಮ್ ಸೋಮವಾರ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ " ನಮ್ಮ ಸಂಸ್ಥೆ 50 ನೇ ವರ್ಷವನ್ನು ಪೂರ್ಣಗೊಳಿಸುತ್ತಿರುವ ಈ ಸುಸಂದರ್ಬದಲ್ಲಿ ನಮ್ಮ ವೈವಿದ್ಯತೆ ಮತ್ತು ಜಾಗತಿಕವಾಗಿ ಕಾರ್ಮಿಕವರ್ಗದ ಚುರುಕುತನವನ್ನು ಆಚರಿಸಲು ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಪಾಲುದಾರಿಕೆಯಲ್ಲಿ ಜೊತೆಗೆ ಕಂಪೆನಿಯ ಸರ್ವತೋಮುಖ ಬೆಳವಣಿಗೆ ಸೇರಿದಂತೆ ಯಶಸ್ಸಿನ ಪ್ರಯಾಣಕ್ಕೆ ಕಾರಣೀಭೂತರಾಗುವ ಎಲ್ಲಾ ಗ್ರಾಹಕರಿಗೆ ಧನ್ಯವಾದಗಳು.ಇದು ಟಿಸಿಎಸ್ ಈ ಮಟ್ಟದಲ್ಲಿ ಅಭಿವೃದ್ಧಿ ಹೊಂದಿ ಐಟಿ ಕಂಪೆನಿಗಳಲ್ಲೇ ವಿಶ್ವದಲ್ಲಿ ಗೌರವಾನ್ವಿತವಾಗಿರಲು ಕಾರಣವಾಗಿರುವ ಪ್ರತಿಯೊಬ್ಬರಿಗೂ ಕೂಡ ನಮ್ಮ ಗೌರವ ಸಮರ್ಪಣೆ ಇದೆ" ಎಂದು ಅವರು ತಿಳಿಸಿದ್ದಾರೆ.

ಟಿಸಿಎಸ್

ಟಿಸಿಎಸ್

ಗೋಪಿನಾಥನ್ ಅವರು ಇದೇ ಸಂದರ್ಬದಲ್ಲಿ ನಾವು 50 ನೇ ವಾರ್ಷಿಕೋತ್ಸವದ ಆಚರಣೆಗಾಗಿ ಪ್ರತಿಯೊಬ್ಬ ಸಹದ್ಯೋಗಿಗಳಿಗೆ ವಿಶೇಷ ಸ್ಮರಣಾರ್ಥವನ್ನು ರಚಿಸಿದ್ದೇವೆ ಮತ್ತು ಇದು ಟಿಸಿಎಸ್ ನ ಸಮಯದ ಸಂಕೇತವಾಗಿದ್ದು ನಮ್ಮ ಮಿತಿಯಿಲ್ಲದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಮುಂದೆ ಇನ್ನಷ್ಟು ಹೆಜ್ಜೆ ಇಡಲು ಸ್ಪೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಆದರೆ ವಾಚ್ ಕೊಡೊ ಬದಲು ಬೇರೆ ಏನಾದ್ರು ಕೊಟ್ಟಿದ್ರೆ ನಮ್ಮ ಉಪಯೋಗಕ್ಕಾದ್ರೂ ಆಗ್ತಿತ್ತು ಅನ್ನುವುದು ಸಹದ್ಯೋಗಿಗಳ ಅಭಿಪ್ರಾಯವಾಗಿದೆ.

Best Mobiles in India

Read more about:
English summary
TCS gifts wristwatches to its workers, they don’t like it. Want jewellery, home instead

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X