Subscribe to Gizbot

ಮೊಬೈಲ್ ಫೋನೆಂಬ ಪೊಲೀಸ್ ನಾಯಿಗೆ ಜೈ

Posted By:
ಮೊಬೈಲ್ ಫೋನೆಂಬ ಪೊಲೀಸ್ ನಾಯಿಗೆ ಜೈ

ಇದು ಟೆಕ್ ಯುಗ. ಸಾವಿರಾರು ಅಪರಾಧಗಳು ತಂತ್ರಜ್ಞಾನ ಸಾಧನಗಳ ಮೂಲಕವೇ ನಡೆಯುತ್ತದೆ. ಮೊಬೈಲಿನಲ್ಲಿರುವ ಒಂದು ಪೊರ್ನ್ ವಿಡಿಯೋ ಜಾಡು ಹಿಡಿದು ಹೊರಟರೆ ಒಂದು ಅತ್ಯಾಚಾರಾದ ಕಥೆಯೇ ಹೊರಬೀಳಬಹುದು. ಮೊಬೈಲಿನಲ್ಲಿ ಮಾಡಿದ ಕೊನೆಯ ಕರೆ ಕೊಲೆಗಾರರನ್ನು ಹಿಡಿಯಲು ಸಹಾಯ ಮಾಡಬಹುದು.

ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಜಗತ್ತಿನಲ್ಲಿಂದು ಲೆಕ್ಕವಿಲ್ಲದಷ್ಟು ಅಪರಾಧಗಳು ನಡೆಯುತ್ತವೆ. ಹಾಗಂತ ತಂತ್ರಜ್ಞಾನವು ಅಪರಾಧ ಹೆಚ್ಚಲು ಕಾರಣವಾಗಿದೆ ಎಂದು ನಿರಾಶರಾಗಬೇಕಿಲ್ಲ. ಸಾವಿರಾರೂ ಅಪರಾಧಿಗಳನ್ನು ಹಿಡಿಯಲು ಕೂಡ ಇದೇ ತಂತ್ರಜ್ಞಾನ ನೆರವಾಗಿದೆ.

2005ರಲ್ಲಿ ಲಂಡನ್ ಸ್ಪೋಟ ನಡೆಸಿದ ಆರೋಪಿಗಳನ್ನು ಬಂಧಿಸಲು ಮೊಬೈಲ್ ತಂತ್ರಜ್ಞಾನವೇ ಕಾರಣವಾಯಿತು. ಭಾವಿ ಪತಿಯನ್ನು ಹತ್ಯೆ ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬೆಂಗಳೂರಿನ ವಕೀಲೆ ಶುಭಾಳನ್ನು ಹಿಡಿದುಕೊಟ್ಟದ್ದು ಕೂಡ ಮೊಬೈಲ್ ಕರೆಯ ಜಾಡು.

ಅಪರಾಧ ಪತ್ತೆ ಹಚ್ಚಲು ಪೊಲೀಸ್ ನಾಯಿಗಿಂತ ಮೊಬೈಲ್ ಫೋನ್ ಹೆಚ್ಚು ಪರಿಣಾಮಕಾರಿ. ಅಪರಾಧಿಗಳನ್ನು ಹಿಡಿಯಲು ನೆರವಾಗುವ ಹತ್ತು ಹಲವು ತಂತ್ರಜ್ಞಾನಗಳು ಇಂದು ಲಭ್ಯವಿದೆ. ಅದರಲ್ಲಿ ಜಿಪಿಎಸ್ ಸಿಸ್ಟಮ್ ಕೂಡ ಪ್ರಮುಖ. ಇದನ್ನು ಹೆಚ್ಚಾಗಿ ವಾಹನಗಳಲ್ಲಿ ಬಳಸಲಾಗುತ್ತಿದೆ. ಅಪರಾಧ ತಡೆಗೂ ಸಹಕರಿಸುವ ಜಿಪಿಎಸ್ ಸಿಸ್ಟಮ್ ಗಳಿವೆ.

ಸ್ಪೈ ಪೆನ್, ಸಿಸಿ ಟಿವಿ ಕೂಡ ಅಪರಾಧಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿವೆ. ಪೊಲೀಸ್ ನಾಯಿಗೆ ಸಿಗದ ಅಪರಾಧಿಗಳು ಇಂತಹ ಅತ್ಯಾಧುನಿಕ ತಂತ್ರಜ್ಞಾನ ಸಾಧನಗಳ ನೋಟದಿಂದ ಪಾರಾಗುವುದು ಕಷ್ಟ. ಅಪರಾಧ ಪತ್ತೆ ಹೆಚ್ಚಲು ನೆರವಾಗುವ ಇಂತಹ ತಂತ್ರಜ್ಞಾನಗಳು ಇಂದು ಅಪರಾಧ ಹೆಚ್ಚಾಗಲು ಕೂಡ ಕಾರಣವಾಗಿದೆ ಎನ್ನುವುದು ವಾಸ್ತವ.

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot